CTE ಕಲಬುರಗಿ ಕನ್ನಡ ಆಡಿಯೋ ಸಂಪನ್ಮೂಲ ನಿರ್ಮಾಣ ಕಾರ್ಯಾಗಾರ 2024-25
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಉದ್ದೇಶಗಳು:
- ಕಥನಶೈಲಿಯನ್ನು ಬೋಧನೋಪಾಯವಾಗಿ ಸದುಪಯೋಗಪಡಿಸಿಕೊಳ್ಳಲು ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು.
- ವಿಭಿನ್ನ ಸಂಪತ್ತುಗಳನ್ನು ಬಳಸಿ ಭಾಷಾ ಬೋಧನೆ-ಕಲಿಕೆಯ ಬಳಕೆಗೆ ಯೋಗ್ಯವಾದ ಮತ್ತು ಸಂಬಂಧಿತ ಸಂಪತ್ತನ್ನು ತಲುಪಲು, ವಿಶ್ಲೇಷಿಸಲು ಮತ್ತು ಮೌಲ್ಯಮಾಪನ ಮಾಡಲು ಶಿಕ್ಷಕರಿಗೆ ಸಾಮರ್ಥ್ಯವನ್ನು ಒದಗಿಸುವುದು.
- ಶಿಕ್ಷಕರು ಸಹಯೋಗದ ಆಧಾರದ ಮೇಲೆ ಶಿಕ್ಷಣ ಸಂಪತ್ತನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಮತ್ತು ಹಂಚಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದು.
- ಆಡಿಯೋ ಸಂಪತ್ತು ಸೃಷ್ಟಿಸಲು ಶಿಕ್ಷಕರಿಗೆ FOSS (ಉಚಿತ ಮತ್ತು ಮುಕ್ತ ಆಧಾರಿತ ಸಾಫ್ಟ್‌ವೇರ್) ಸಾಧನಗಳು ಮತ್ತು ನಾವೀನ್ಯತೆಯ ಡಿಜಿಟಲ್ ತಂತ್ರಗಳನ್ನು ಪರಿಚಯಿಸುವುದು.
- ಹಲವು ಮಟ್ಟಗಳ, ಬಹುರೂಪದ ಡಿಜಿಟಲ್ ಸಂಪತ್ತಿನ ಸಂದರ್ಭಾನ್ವಿತ ಸಂಗ್ರಹವನ್ನು ಹಲವಾರು ಭಾಷೆಗಳಲ್ಲೂ ನಿರ್ಮಿಸಲು ಶಿಕ್ಷಕರನ್ನು ಬೆಂಬಲಿಸುವುದು.