ಮಾಡ್ಯೂಲ್ ೧೩-ಸಮತೋಲನ ಆಹಾರ ಮತ್ತು ಪೌಷ್ಟಿಕತೆ ಬಗ್ಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೨೦, ೨೭ ಮಾರ್ಚ್ ೨೦೨೫ ರಂತೆ Chandani (ಚರ್ಚೆ | ಕಾಣಿಕೆಗಳು) ಇವರಿಂದ (Udated module 13)

ಉದ್ದೇಶ

  • ಪೌಷ್ಟಿಕ ಆಹಾರ ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳುವುದು
  • ಕಿಶೋರಿಯರ ಮನೆಗಳಲ್ಲಿ ಅವರು ತಿನ್ನುವ ಆಹಾರದಲ್ಲಿ ಏನೇನು ಪೌಷ್ಟಿಕಾಂಶಗಳಿವೆ ಎಂದು ತಿಳಿದುಕೊಳ್ಳುವುದು.

ಪ್ರಕ್ರಿಯೆ

  • ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
  • ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  
  1. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  2. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  3. ಎಲ್ಲಾರೂ ಭಾಗವಹಿಸಬೇಕು
  4. ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  5. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  6. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು. ನಂತರ ಪುರುಷ ಫೆಸಿಲಿಟೇಟರ್‌ಗಳು ತರಗತಿಯಿಂದ ಹೊರಗೆ ಹೋಗುವುದು

ಮುಟ್ಟಿನ ಬಗ್ಗೆ ಅವರಿಗಿರುವ ಕೆಲವು ಪ್ರಶ್ನೆಗಳನ್ನು ಉತ್ತರಿಸುವುದು (ಅನುಷಾ) 10 ನಿಮಿಷ

ನಂತರ ಪುರುಷ ಫೆಸಿಲಿಟೇಟರ್‌ಗಳು ವಾಪಾಸು ತರಗತಿಗೆ ಬರುವುದು. ಇವತ್ತು ನಾವು ಹೊಸ ವಿಷಯಗಳನ್ನ ನೋಡೋಣ, ತಿಳ್ಕೊಳ್ಳೋಣ, ಅದ್ರು ಬಗ್ಗೆ ಮಾತಾಡೋಣ ಎಂದು ಹೇಳುವುದು.

ಸಮತೋಲನ ಆಹಾರದ ವೀಡಿಯೋ ತೋರಿಸುವುದು.

ಈಗ ನೀವು ವೀಡಿಯೋ ನೋಡಿದ್ರಲ್ಲ. ಒಂದು ಪುಟ್ಟ ಚಟುವಟಿಕೆ ಮಾಡೋಣ? ಎಂದು ಹೇಳಿ ಅವರನ್ನು ಎಂಟು ಗುಂಪುಗಳಲ್ಲಿ ವಿಂಗಡಿಸುವುದು. ಇಡ್ಲಿ, ದೋಸೆ, ಪುಳೀಯೊಗರೆ, ಪೊಂಗಲ್, ಬಿರಿಯಾನಿ, ಚಿಕನ್ ಫ್ರೈ , ರಾಗಿ ಮುದ್ದೆ, ಆಮ್ಲೇಟ್‌ ಎಂದು ಗುಂಪುಗಳನ್ನು ಹೆಸರಿಸಬಹುದು.

ನಂತರ ಅವರವರ ಗುಂಪುಗಳಲ್ಲಿ ಅವರು ತಂತಮ್ಮ ಪ್ರಕಾರ ಸಮತೋಲನ ಆಹಾರ ಅಂದ್ರೆ ಏನು ಎಂದು ಚರ್ಚಿಸಿ ಒಂದು ಸಸ್ಯಹಾರಿ, ಒಂದು ಮಾಂಸಹಾರಿ ಊಟಗಳನ್ನು ಬರೆಯಬೇಕು.  ಅವರು ಬರೆದಿರೋದು ಸಮತೋಲನ ಆಹಾರವಾಗಿರಬೇಕು

ಉದಾ : ತಿಂಡಿಗೆ /ಊಟಕ್ಕಾಗಿ ____ ಯಾಕಂದ್ರೆ ಇದ್ರಲ್ಲಿ ಶಕ್ತಿಗಾಗಿ ____, ಬೆಳವಣಿಗೆಗಾಗಿ _____ ಇವೆಲ್ಲಾ ಇದೆ. 30 ನಿಮಿಷ

ನಂತರ ಪ್ರತೀ ಗುಂಪಿನವರು ದೊಡ್ಡ ಗುಂಪಿನೊಂದಿಗೆ ಅದನ್ನು ಹಂಚಿಕೊಳ್ಳಬೇಕು.

ಇವುಗಳಲ್ಲಿ ಎಲ್ಲಾದರೂ ಅವರು ಉಲ್ಟಾಪಲ್ಟಾ ಹೇಳಿದರೆ ಅದನ್ನು ಸರಿಪಡಿಸುವುದು. 20 ನಿಮಿಷ

ಅನೀಮಿಯ ವೀಡಿಯೋ ನೋಡುವುದು.

ಇವಾಗ ಈ ವೀಡಿಯೋ ನೋಡಿದ್ರಲ್ಲ. ಹೀಗೆ ಆಗಬಾರ್ದು ಅಂದ್ರೆ ಏನೇನು ಮಾಡಬೇಕು ಅಂತ ಹೇಳ್ತಿರ? ಎಂದು ಕೇಳಿ ಅವರು ಹೇಳುವ ಅಂಶಗಳನ್ನು ಬರೆದುಕೊಳ್ಳುವುದು.

ಸಮತೋಲನ ಆಹಾರದಿಂದ ಮಾತ್ರ ಅನೀಮಿಯಾ ‌‌/ರಕ್ತ ಹೀನತೆಯನ್ನು ತಡೆಯಬಹುದು ಎಂದು ಅರ್ಥಮಾಡಿಕೊಳ್ಳಬೇಕು.20 ನಿಮಿಷ

ನಿಮ್ಮ ಮನೆಗಳಲ್ಲಿ ನೀವು ತಿನ್ನುವ ಆಹಾರಲ್ಲೂ ಇನ್ನುಮುಂದೆ ಏನೇನು ಅಂಶಗಳಿವೆ ಅಂತ ಗಮನಿಸಿ ಎಂದು ಅವರನ್ನು ಉತ್ತೇಜನಗೊಳಿಸುವುದು. ನಂತರ ಮುಂದಿನ ವಾರದಲ್ಲಿ ಸಿಗುತ್ತೇವೆ ಎಂದು ಹೇಳಿ ಸೆಶನ್‌ ಅನ್ನು ಮುಗಿಸುವುದು.

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. Speaker
  3. Bedsheets to cover windows
  4. SRHR DSTs
  5. A4 sheets - one side empty

ಒಟ್ಟೂ ಫೆಸಿಲಿಟೇಟರ್‌ಗಳು - 1

ಇನ್‌ಪುಟ್‌ಗಳು

  1. Balanced DIET DST
  2. Anaemia DST

ಔಟ್‌ಪುಟ್‌ಗಳು

  • ಕಿಶೋರಿಯರು ಬರೆದ ಅಂಶಗಳು