ರಚನಾ ಸಮಾಜ ವಿಜ್ಞಾನ 9 ಸಮಾಜ ಶಾಸ್ತ್ರ ವಿಭಾಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೨೨:೦೯, ೧೦ ನವೆಂಬರ್ ೨೦೧೩ ರಂತೆ Hvvenkatesh (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: =12. (ಡಿ) ಸಮಾಜ ಶಾಸ್ತ್ರ ವಿಭಾಗ = # ಪಾಠದ ಹೆಸರು : ಸಾಮಾಜೀಕರಣ ಹಾಗೂ ಕುಟುಂಬದ ಸಂಬ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

12. (ಡಿ) ಸಮಾಜ ಶಾಸ್ತ್ರ ವಿಭಾಗ

  1. ಪಾಠದ ಹೆಸರು : ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು
  2. ಜ್ಞಾನ ರಚನೆಗೆ ಇರುವ ಅವಕಾಶಗಳು:
  • ಸಮಾಜ ಮತ್ತು ಕುಟುಂಬ ಪದಗಳ ಅರ್ಥ ವ್ಯತ್ಯಾಸ
  • ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಸಾಮಾಜೀಕರಣ
  • ಸಾಮಾಜಿಕರಣದ ಮಹತ್ವ ಕಾರ್ಯಗಳು
  • ಸಾಮಾಜಿಕರಣದಲ್ಲಿ ನಿಯೋಗಗಳ ಪಾತ್ರ. (ಕುಟುಂಬ, ಸಮವಯಸ್ಕರು, ಧರ್ಮ, ಶಾಲೆ, ಸಮೂಹ ಮಾಧ್ಯಮ, ನೆರೆಹೊರೆ ಕುರಿತಂತೆ).
  • ಕುಟುಂಬದ ವಿವಿಧ ರೂಪಗಳು
  • ಸಾಮಾಜೀಕರಣದಲ್ಲಿ ಲಿಂಗತಾರತಮ್ಯ.
  • ಆಧುನಿಕ ಸಂಕೀರ್ಣ ಸಮಾಜದಲ್ಲಿನ ಸ್ತ್ರೀಯರು.
  1. ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು
  • ಮಗುವಿನ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ನಿರ್ವಹಣೆಯ ಮಹತ್ವವನ್ನು ಕುರಿತು ಚರ್ಚಿಸುವರು.
  • ಮನುಷ್ಯನು ಹೇಗೆ ಪ್ರಾಣಿಗಳಿಗಿಂತ ಭಿನ್ನ ಎಂಬುದನ್ನು ಸಾಮಾಜೀಕರಣದ ಹಿನ್ನಲೆಯೊಂದಿಗೆ ವಿಶ್ಲೇಷಿಸುತ್ತಾ, ಸಾಮಾಜೀಕರಣದ ಪ್ರಾಮುಖ್ಯತೆಯನ್ನು ಅರಿಯುವರು.
  • ಮಾನವನಿಗೆ ಹುಟ್ಟಿನಿಂದಲೇ ಬರುವ ಕೆಲವು ಸಹಜ ಪ್ರವೃತ್ತಿಗಳು ಹಾಗೂ ಸಂಸ್ಕೃತಿಗಳ ಮೇಲೆ ಆತನ ಕಲಿಕಾ ಸಾಮಥ್ರ್ಯಗಳು ಹೇಗೆ ಹೊಂದಿಕೊಳ್ಳುತ್ತವೆ. ಇದರಿಂದ ವ್ಯಕ್ತಿಯ ವರ್ತನೆಯಲ್ಲಾಗುವ ಬದಲಾವಣೆಗಳಿಗೆ ಸಾಮಾಜಿಕರಣದ ಪಾತ್ರವನ್ನು ಅರ್ಥೈಸಿಕೊಳ್ಳುವರು.
  • ಮಗು ಬೆಳೆಯುತ್ತಾ, ತನ್ನ ಮನಸ್ಸು, ಚಲನೆ, ಆಸಕ್ತಿ ಹಾಗೂ ಸಂಬಂಧಗಳಲ್ಲಿ ಅಭಿವೃದ್ಧಿಪಡಿಸಿಕೊಳ್ಳಲು ಸಾಮಾಜೀಕರಣ ಯಾವ ರೀತಿಯಲ್ಲಿ ಪ್ರಚೋದನೆಯನ್ನು ನೀಡುತ್ತದೆ ಎಂಬುದನ್ನು ಚರ್ಚಿಸುವರು.
  • ಸುಭದ್ರ ಸಮಾಜದ ರಚನೆಯಲ್ಲಿ, ಸಾಮಾಜೀಕರಣವು ಮಗುವಿನ ಮೇಲೆ ಬೀರುವ ಪ್ರಭಾವದ ಹಿನ್ನಲೆಯಲ್ಲಿ ಮಗು ಪಡೆದುಕೊಳ್ಳುವ ಶಿಸ್ತು, ಕೌಶಲ್ಯ, ಕಲಿಕೆ, ಆಸೆ ಆಕಾಂಕ್ಷೆಗಳು, ತನ್ನ ಗುರಿ ಹಾಗೂ ಸಾಂಸ್ಕೃತಿಕ ಮುಂದುವರಿಕೆಯು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುವ ಸಂದರ್ಭವನ್ನು ಅವಲೋಕಿಸುವರು.
  • ಮಗುವಿನ ವಯಸ್ಸು, ಅನುಭವ ಹಾಗೂ ಸಮಾಜದ ಹಿರಿಯರ ಪ್ರಭಾವ ಅದರ ಸಾಮಾಜೀಕರಣದ ಮೇಲೆ ಬೀರುವ ಅಂಶಗಳು ಹಾಗೂ ತಂದೆ, ತಾಯಿ, ಅಧಿಕಾರಿಗಳು, ತನ್ನ ಸಹಪಾಟಿಗಳು ಬೀರುವ ಪ್ರಭಾವವನ್ನು ತುಲನಾತ್ಮಕವಾಗಿ ವಿಮರ್ಶಿಸುವುದು.
  • ಮಗುವು ಸಮಾಜದಲ್ಲಿ ಮಲ್ಲಿಗೆ ಮೊಗ್ಗಿನಂತೆ ಅರಳಲು ಕುಟುಂಬ ಅಲ್ಲಿನ ರಕ್ತ ಸಂಬಂಧಗಳು ಬೀರುವ ಪ್ರಭಾವವನ್ನು ಆಧರಿಸಿ ಸಾಮಾಜೀಕರಣದಲ್ಲಿ ಕುಟುಂಬದ ಪಾತ್ರವೇನು? ಇದರಿಂದ ಮಗುವಿನ ವ್ಯಕ್ತಿತ್ವದಲ್ಲಾಗುವ ಬದಲಾವಣೆಗಳು ಏನು ಎಂಬುದನ್ನು ಗ್ರಹಿಸಿಕೊಳ್ಳುವರು.
  • ಮಗು ತನ್ನ ಸಾಮಾಜೀಕರಣದಲ್ಲಿ ಸಹಕಾರ, ಹೊಂದಾಣಿಕೆ ಹಾಗೂ ನಾಯಕತ್ವದ ಗುಣಗಳನ್ನು ತನ್ನ ಸಹಪಾಟಿಗಳಿಂದ ಹೇಗೆ ತಿಳಿಯುತ್ತದೆ. ಅಂತಹ ಸಂದರ್ಭಗಳು ಕೂಡ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬುದರ ಹೋಲಿಕೆಯನ್ನು ತಿಳಿಯುವರು.
  • ಮಗುವಿನ ಸಾಮಾಜಿಕ ಜೀವನಕ್ಕೆ ಧರ್ಮ ಹೇಗೆ ಆದರ್ಶದ ತಳಹದಿಯಾಗುತ್ತದೆ ಎಂಬುದನ್ನು ವಿಮರ್ಶಿಸಿ ತೀರ್ಮಾನ ಕೈಗೊಳ್ಳುವರು.
  • ಮಗುವಿನ ವರ್ತನೆ, ಜ್ಞಾನ, ಶೀಲ ಗುಣಗಳು ವೃದ್ಧಿಯಾಗುವಲ್ಲಿ ಶಾಲೆ ಹಾಗೂ ಇಲ್ಲಿನ ಗುರುವೃಂದದ ಪಾತ್ರ ಮತ್ತು ವಿವಿಧ ವಿಷಯಗಳ ಶಿಕ್ಷಣ ಮತ್ತು ಗ್ರಹಿಕೆಯಿಂದ ಮಗು ಕಲಿತಿರುವುದೇನೆಂಬುದನ್ನು ಶಾಲೆ ಎಂಬ ಸಾಮಾಜೀಕರಣದ ನಿಯೋಗದ ಮೂಲಕ ಪರಾಮರ್ಶಿಸುವರು.
  • ಮಗು ತನ್ನ ಸಾಂಸ್ಕೃತಿಕ ಮೌಲ್ಯ ಹಾಗೂ ಸಂಸ್ಕಾರಯುಕ್ತ ಸ್ವಭಾವವನ್ನು ಸಮೂಹ ಮಾಧ್ಯಮಗಳಿಂದ ಗ್ರಹಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳುತ್ತದೆ ಎಂಬುದನ್ನು ವಿವೇಚಿಸುವರು.
  • ಮಗುವಿನ ಸಾಮಾಜೀಕರಣದಲ್ಲಿ ನೆರೆಹೊರೆಯವರು ಬೀರುವ ಪ್ರಭಾವವನ್ನು ಗ್ರಾಮೀಣ ಭಾಗದ ಮತ್ತು ನಗದೀಕರಣಗಳ ಸಂದರ್ಭದಲ್ಲಿ ಹೋಲಿಸಿ ಅರ್ಥೈಸಿಕೊಳ್ಳುವರು.
  • ಲಿಂಗ ತಾರತಮ್ಯದ ವಿಚಾರವಾಗಿ (ಹೆಣ್ಣು-ಗಂಡು) ಸಮಾಜ, ಕುಟುಂಬಗಳು, ಬೀರುವ ಪ್ರಭಾವ, ಪರಿಣಾಮವನ್ನು ಸಾಮಾಜೀಕರಣ ಹಿನ್ನಲೆಯಲ್ಲಿ ಚರ್ಚಿಸುವರು.
  • ಇತ್ತೀಚೆಗೆ ಮಹಿಳೆಯರು ಪುರಷರಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಇನ್ನಿಲ್ಲದಂತೆ ತೊಡಗಿಸಿಕೊಂಡಿರುವುದಕ್ಕೆ ಇಂದಿನ ಸಾಮಾಜೀಕರಣದ ವ್ಯವಸ್ಥೆಯನ್ನು ಕುರಿತು, ಶ್ಲಾಿಸುವರು.
  1. ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು
  • ಮಗು ಸಾಮಾಜೀಕರಣದಿಂದಾಗಿ ತಾನು ಪ್ರಾಣಿಗಳಿಗಿಂತ ಭಿನ್ನ ಎಂಬ ಜ್ಞಾನವನ್ನು ತಿಳಿದುಕೊಳ್ಳುವುದು.

ಉದಾ: ಮಾತನಾಡುವುದು, ಪ್ರಶ್ನಿಸುವುದು, ನಗು, ಅಳು ಇತ್ಯಾದಿ.

  • ಸಾಮಾಜೀಕರಣದಿಂದ ಮನುಷ್ಯನು ಹೊಂದಿಕೊಳ್ಳುವ ಸಂಸ್ಕೃತಿ ಆಚರಣೆಗಳನ್ನು ಅನುಸರಿಸುವ, ನೈತಿಕ ನಿಯಮಗಳನ್ನು ಅಳವಡಿಸಿಕೊಳ್ಳುವ ವಿಶಿಷ್ಟವಾದ ಮನಸ್ಥಿತಿಯನ್ನು ಪಡೆಯುತ್ತಾನೆ.

ಉದಾ : - ಕುಟುಂಬದಲ್ಲಿ ಒಟ್ಟಿಗೆ ವಾಸಿಸುವುದು.

  • ಹಬ್ಬ ಹರಿದಿನಗಳನ್ನು ಆಚರಿಸುವುದು.
  • ಸುಳ್ಳು ಹೇಳದಿರುವುದು
  • ಕಾನೂನನ್ನು ಪಾಲಿಸುವುದು
  • ಹಿರಿಯರನ್ನು, ಗುರುಗಳನ್ನು, ತಂದೆ ತಾಯಿಗಳನ್ನು ಗೌರವಿಸುವುದು.
  • ಮಗು ಸಾಮಾಜೀಕರಣದಿಂದ ಶಿಸ್ತು, ಸಮೂಹ ಜೀವನ ಕೌಶಲ್ಯಗಳ ವೃದ್ಧಿ, ಬಯಕೆ ಮತ್ತು ತನ್ನ ಜೀವನದ ಗುರಿಗಳನ್ನು ರೂಪಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತವೆ.

ಉದಾ : - ಗುಂಪುಗಳಲ್ಲಿ ಆಟವಾಡುವುದು

  • ಮಾತಗಾರಿಕೆ, ವಿನಯ, ಸ್ವಚ್ಛತೆ
  • ಹೆಸರು ಗಳಿಸುವುದು, ಬಹುಮಾನ, ಹೊಗಳಿಕೆ
  • ಅಧಿಕಾರಿ, ಸುಧಾರಕ, ತಾಯ್ತನ
  • ಸಮಯಪಾಲನೆ, ಸರಳತೆ, ಮಿತವ್ಯಯ
  • ರಕ್ತ ಸಂಬಂಧಗಳ ಬಗ್ಗೆ ಒಲವು, ವ್ಯವಹಾರಜ್ಞಾನ, ನೈತಿಕತೆ ಮತ್ತು ಭಾವನಾತ್ಮಕ ಬೆಳವಣಿಗೆ, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಸಹನೆ, ಸಹೃದಯತೆ, ಸಹಕಾರ ಮತ್ತು ಜೀವನ ಮೌಲ್ಯಗಳ ಜ್ಞಾನವನ್ನು ಸಾಮಾಜೀಕರಣದ ಕುಟುಂಬ ನಿಯೋಗದಿಂದ ಹಿನ್ನಲೆಯಿಂದ ತಿಳಿಯುವರು.

ಉದಾ : - ತಂದೆ, ತಾಯಿ, ಮಗುವಿನ ಸಂಬಂಧ

  • ಹಣ ನೀಡಿ ಅಗತ್ಯ ವಸ್ತುಗಳನ್ನು ತರುವುದು
  • ಕುಟುಂಬದ, ಸಮಾಜದ ಹಿರಿಯರಿಗೆ ಗೌರವ
  • ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಇತ್ಯಾದಿ
  • ತಪ್ಪಿಗೆ ಶಿಕ್ಷೆ ನಿಡುವುದು/ಪಡೆಯುವುದು.
  • ಆದರ್ಶ ವ್ಯಕ್ತಿತ್ವ, ಧಾರ್ಮಿಕ ಸ್ಥಳಗಳ ಬಗ್ಗೆ ಭಕ್ತಿ, ಸಮಾಜಸೇವೆ ಆಸಕ್ತಿ, ದಾನ, ಧರ್ಮ, ಮುಂತಾದ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವರು.

ಉದಾ : - ತಾಯಿಯೇ ದೇವರು

  • ದೇವಾಲಯಗಳಿಗೆ ಭೇಟಿ
  • ದಾನ ಗುಣ, ಸರ್ವಧರ್ಮ ಸಮನ್ವಯತೆ
  • ದಾನ, ದತ್ತಿ ನೀಡುವುದು.
  • ಶಾಲೆ ಎಂಬ ಸಾಮಾಜೀಕರಣದ ನಿಯೋಗವು ಮಗುವಿನಲ್ಲಿ ಸನ್ನಡತೆ, ಸದ್ಭಾವನೆ, ಸಮಾನತೆ, ಪ್ರೀತಿ ವಿಶ್ವಾಸ, ಸಹೃದಯತೆಯ ಜೊತೆಗೆ ಲೈಂಗಿಕತೆ, ಹಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣಗಳ ಅರಿವಿನ ಜ್ಞಾನದಿಂದಾಗಿ ಜೀವನ ಕೌಶಲ್ಯಗಳನ್ನು ತಮ್ಮದಾಗಿಸಿ ಕೊಳ್ಳುವರು.

ಉದಾ : - ಗುರು ಹಿರಿಯರನ್ನು ಗೌರವಿಸುವುದು

  • ಶಾಲಾ ನಿಯಮಗಳನ್ನು ಪಾಲಿಸುವುದು
  • ಸಹಪಾಟಿರೊಂದಿಗೆ ಸ್ನೇಹಭಾವ
  • ಹೆಣ್ಣು ಗಂಡು ಒಂದೇ ಎಂದು ಭಾವಿಸುವುದು
  • ಪರಸ್ಪರ ಅಭಿಪ್ರಾಯ ಗೌರವಿಸುವುದು
  • ತೀರ್ಮಾನ, ಒಪ್ಪಿತ ಮಾತುಗಳನ್ನು ಆಡುವುದು
  • ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ಮಗುವಿನಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಹೆಮ್ಮೆ ಅನ್ವೇಷಣಾ ಭಾವನೆ, ಮನಸ್ಸಿನಲ್ಲಿ ಉಲ್ಲಾಸ ಹಾಗೂ ಕ್ರಿಯಾಶೀಲತೆಯನ್ನು ಬೆಳಸಿಕೊಳ್ಳುವರು.
  • ನೆರೆಹೊರೆಯ ಮೂಲದಿಂದ ಮಗುವಿನ ಮೇಲಾಗುವ ಸಾಮಾಜೀಕರಣದಿಂದಾಗಿ, ಮಗುವಿನಲ್ಲಿ ಹಂಚಿಕೊಂಡು ಬಾಳುವುದು ಒಳ್ಳೆಯ ಅಭಿರುಚಿ, ಹಬ್ಬ ಹರಿದಿನಗಳು, ವಿವಾಹ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಪರಸ್ಪರ ಸ್ಪಂದಿಸುವುದು ಮುಂತಾದ ಸಮಾಜಮುಖಿ ಸದ್ಭಾವನೆಗಳು ರೂಪಗೊಳ್ಳುವುದು.

ಉದಾ : - ಪೂಜಾ ವಿಧಾನಗಳಲ್ಲಿ ಭಾಗಿಯಾಗುವುದು

  • ನೀರಿನ ಸಮಸ್ಯೆಗೆ ಸಹಾಯಹಸ್ತ ನೀಡುವುದು
  • ಒಟ್ಟಿಗೆ ಪ್ರವಾಸ ಕೈಗೊಳ್ಳುವುದು
  • ತಾವು ಬೆಳೆದ ಹಣ್ಣು ಹಂಪಲುಗಳನ್ನು ಹಂಚುವುದು.
  • ಲಿಂಗ ತಾರತಮ್ಯವನ್ನು ತಿರಸ್ಕರಿಸುವ ಗುಣವನ್ನು ಕಲಿತು ಹಾಗೆ ನಡೆದುಕೊಳ್ಳುವರು.
  • ಶ್ರಮ ವಿಭಜನೆಯ ಮಹತ್ವವನ್ನು ಅರಿತು ಮಹಿಳೆಯರ ಇಂದಿನ ಕಾರ್ಯ ಕ್ಷಮತೆಯನ್ನು ಧೈರ್ಯವನ್ನು ಮೆಚ್ಚಿಕೊಳ್ಳುವರು.

ಉದಾ : - ಸ್ತ್ರೀಯರು ವಕೀಲಿ ವೃತ್ತಿ, ವೈದ್ಯಕೀಯ, ಬಾಹ್ಯಾಕಾಶ, ಸಾಗರದಾಳಗಳಲ್ಲಿ ಕೆಲಸ ನಿರ್ವಹಿಸುವುದು.

  1. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಕೆಗೆ ಇರುವ ಅವಕಾಶಗಳು
  • ಸಾಮಾಜೀಕರಣ ಸಮಾಜಮುಖಿಯಾಗಿ ಬೆಳೆಯಲಿ

ಉದಾ : - ಪ್ರಚಲಿತ ಸಂಪ್ರದಾಯಗಳ ಆಚರಣೆ ಕುರಿತ ಗುಂಪು ಚರ್ಚೆ

  • ಆಚಾರ ವಿಚಾರಗಳ ವ್ಯತ್ಯಾಸ
  • ಮಗುವಿನ ವರ್ತನೆಗಳ ಪಟ್ಟಿ
  • ಸಾಂಸ್ಕೃತಿಕ ಹಿರಿಮೆಗಳ ಸಂಗ್ರಹ
  • ಉತ್ತಮ ಸಂಬಂಧಗಳನ್ನು ಪೋಷಿಸುವುದರ ಬಗ್ಗೆ ಅಭಿಪ್ರಾಯ ಸಂಗ್ರಹ
  • ಸ್ವತಂತ್ರ ವಿಚಾರಶಕ್ತಿ ಬೆಳವಣಿಗೆಗೆ ಒತ್ತು ಈ ಕುರಿತು ಪ್ರಬಂಧ ರಚನೆ.
  • ಮಾನವ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸ ಗುರುತಿಸುವುದು.
  • ಮಗು ತನ್ನ ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು.
  • ಶಾಲೆಯ ಕಲಿಕಾ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸುವುದು. (ಆಸಕ್ತಿ, ಮೆಚ್ಚುಗೆ, ಪ್ರೇರಣೆ, ಪ್ರೋತ್ಸಾಹಗಳ ಮೂಲಕ)
  • ರಾಷ್ಟ್ರ ನಾಯಕನ ಜೀವನ ಚರಿತ್ರೆ ಓದಿಸುವುದು.
  • ಶಿಕ್ಷಕರ ಆದರ್ಶ ವ್ಯಕ್ತಿತ್ವವನ್ನು ಅನುಕರಿಸುವಂತೆ ತಿಳಿಸುವುದು.
  • ಕಲ್ಪನಾ ಚಾವ್ಲಾ, ವಿವೇಕಾನಂದ, ಶಿವಾಜಿ, ಇವರ ವಿದ್ಯಾಜೀವನವನ್ನು ಗ್ರಹಿಸುವುದು.
  • ತಂದೆ ತಾಯಿಗಳನ್ನು ಹಿರಿಯರನ್ನು ಅನುಕರಿಸುವುದು.
  • ಎನ್.ಸಿ.ಸಿ. ಎನ್.ಎಸ್.ಎಸ್. ಸ್ಕೌಟ್ಸ್ ಗೈಡ್ಸ್ಗಳಲ್ಲಿ ಭಾಗವಹಿಸುವುದು
  • ತಮ್ಮ ಸುತ್ತಲಿನಲ್ಲಿ ಕಷ್ಟಪಟ್ಟು ಗುರಿಸಾಧಿಸಿದ ವ್ಯಕ್ತಿಯ ಸಂದರ್ಶನ
  • ಕೌಶಲ್ಯಗಳ ಬೆಳಣಿಗೆ
  • ಗ್ರಾಮೀಣ ಕಸುಬುಗಳ ಅವಲೋಕನ
  • ಉತ್ತಮಗೃಹ ಕಸುಬು ಹೊಂದಿರುವವರ ಸಂದರ್ಶನ
  • ಗಾಂಧೀಜಿಯವರ `ಚರಕತತ್ವದ ವಿಶ್ಲೇಷಣೆ'
  • ರೈತ ಕಸಬುಗಳ ಪರಿಚಯ
  • ಹೊಲಿಗೆ, ಚಿತ್ರಕಲೆ, ತೋಟಗಾರಿಕೆ, ಮುಂತಾದ ಕಸುಬುಗಳನ್ನು ಶಾಲಾ ಅವಧಿಯಲ್ಲಿ ಕಲಿಸುವುದು.
  • ಸಮಾಜದೊಂದಿಗೆ ಹೊಂದಿಕೆ, ಸಹಕಾರ, ಕೊಡುಕೊಳ್ಳುವಿಕೆಗಳ ಕುರಿತು ಚರ್ಚೆ
  • ಕೂಡಿ ಬಾಳುವುದು ಹೇಗೆ ಎಂದು ವಿಶ್ಲೇಷಣೆ
  • ಬದುಕಿ, ಬದುಕಲು ಬಿಡುವುದು ಯಾವ ರೀತಿ ಎಂಬುದಾಗಿ ಪರಾಮರ್ಶೆ.
  • ಕುಟುಂಬ ಜೀವನ
  • `ಮನೆಯೇ ಮೊದಲ ಪಾಠಶಾಲೆ' - ಚರ್ಚೆ
  • ತಾಯಿಯೇ ಮೊದಲ ಗುರು, ನಾಣ್ಣುಡಿ ಅರ್ಥೈಸುವುದು.
  • ಪ್ರೀತಿ, ವಾತ್ಸಲ್ಯ, ವಿಶ್ವಾಸ, ಸಹನೆ, ಸಹೃದಯತೆ ಸಹಕಾರ ಮುಂತಾದ ಜೀವನ ಮೌಲ್ಯಗಳ ಕಥೆ ಹೇಳುವುದು.
  • ಬದುಕಿನ ತಪ್ಪು ಮತ್ತು ಸರಿಗಳ ಪರಾಮರ್ಶೆ-ಉದಾಹರಣೆಗಳೊಂದಿಗೆ
  • ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳನ್ನು ಕುರಿತು ಅಭಿಪ್ರಾಯ ಸಂಗ್ರಹ.
  • ಅಂಬೇಡ್ಕರ್, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯ, ಶಾಂತವೇರಿ ಗೋಪಾಲಗೌಡರ ಕುಟುಂಬದ ಜೀವನ ಕುರಿತ ಪಿ.ಪಿ.ಟಿ. ತಯಾರಿಕೆ
  • ಸ್ನೇಹ ಸಂಬಂಧ ವೃದ್ಧಿಸುವುದು
  • ಉತ್ತಮ ಸಹಪಾಟಗಳ ವ್ಯಕ್ತಿತ್ವ ಕುರಿತು ಚರ್ಚೆ
  • ಆಟ ಕೂಟಗಳನ್ನು ಏರ್ಪಡಿಸುವುದು.
  • ಗ್ರಾಮ ಪಂಚಾಯಿತಿ ಸಭೆಗಳಿಗೆ ಭೇಟಿ
  • ವೈವಿಧ್ಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು
  • ಹಬ್ಬ ಹರಿದಿನಗಳ ಆಚರಣೆ
  • ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದು
  • ಸಾಮೂಹಿಕ ಕೃಷಿ ಚಟುವಟಿಕೆಗಳ ವೀಕ್ಷಣೆ
  • ಭೋಜನ ಕೂಟಗಳಲ್ಲಿ ಭಾಗಿಯಾಗುವುದು
  • ಪ್ರವಾಸಗಳನ್ನು ಏರ್ಪಡಿಸುವುದು.
  • ಸರ್ವಧರ್ಮ ಸಮನ್ವಯತೆ
  • ಧಾರ್ಮಿಕ ಸ್ಥಳಗಳಿಗೆ ಭೇಟಿ - ಉದಾ: ಧರ್ಮಸ್ಥಳ
  • ಪೂಜೆ, ಜಾತ್ರೆ, ಉತ್ಸವ, ಹಬ್ಬಗಳ ಸಾಮ್ಯತೆ ಕುರಿತು ಪ್ರಬಂಧ ರಚನೆ.
  • ಧಾರ್ಮಿಕ ಆಚರಣೆಗಳಿಗೆ ಪರಸ್ಪರ ಭೇಟಿ.
  • ಧಾರ್ಮಿಕ ಗುರುಗಳ ಸಂದರ್ಶನ.
  • ವಿವಿಧ ಧಾರ್ಮಿಕ ತತ್ವಗಳ ಪಟ್ಟಿ.
  • ಅಂತರ್ಜಾತಿ ವಿವಾಹಗಳನ್ನು ಕುರಿತು ಚರ್ಚೆ.
  • ಧಾರ್ಮಿಕ ಗೋಷ್ಠಿಗಳಲ್ಲಿ ಭಾವಹಿಸುವುದು.
  • ಸರ್ವಧರ್ಮ ಸಮನ್ವಯತೆ ಮತ್ತು ಸಂವಿಧಾನ ಕುರಿತು ಗುಂಪು ಚರ್ಚೆ.
  • ಸಮಾಜಕ್ಕೆ ವಿವಿಧ ಧರ್ಮ ಸುಧಾರಕರು ನೀಡಿರುವ ಕೊಡುಗೆಗಳ ವಿಚಾರವಾಗಿ ಮಾಹಿತಿ ಸಂಗ್ರಹ.
  • ಸಾಮಾಜೀಕರಣದ ನಿಯೋಗವಾಗಿ ಶಾಲೆ
  • ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ವಿಶ್ಲೇಷಣೆ.
  • ಶಾಲೆಯ ಶೈಕ್ಷಣಿಕ ಚಟುವಟಿಕೆ ಕುರಿತು ಚರ್ಚೆ.
  • ಆದರ್ಶ ಶಿಕ್ಷಕರಾಗಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ ಅವಲೋಕನ.
  • ಆದರ್ಶ ವಿದ್ಯಾಯಾಗಿ ಶಿವಾಜಿ ಜೀವನ ಚರಿತ್ರೆ ಓದುವುದು.
  • `ಶಾಂತಿನಿಕೇತನ' ಕುರಿತು ವಿಷಯ ಸಂಗ್ರಹ.
  • ನೀನು ಮೆಚ್ಚೊ ಸಹಪಾಠಿ ಯಾರು? ಏಕೆ? ಹೇಗೆ?
  • ಸಾಮಾಜೀಕರಣದಲ್ಲಿ ಪರಿಣಾಮಕಾರಿ ಸಮೂಹ ಮಾಧ್ಯಮಗಳು
  • ಸಮೂಹ ಮಾಧ್ಯಮಗಳ ಪಟ್ಟಿ
  • ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ದೂರದರ್ಶನದ ಪಾತ್ರ ವಿಶ್ಲೇಷಣೆ.
  • ಕಲಿಕೆಯಲ್ಲಿ ರೇಡಿಯೋ ಮಹತ್ವ ಕುರಿತ ಚರ್ಚೆ.
  • ಗಾಂಧೀಜಿಯವರ ಮೇಲೆ ಬೀರಿದ ಎರಡು ನಾಟಗಳ ಪರಿಚಯ.
  • ನನ್ನ ಮೇಲೆ ಪ್ರಭಾವ ಬೀರಿದ ಒಂದು ಪುಸ್ತಕ (ಪ್ರಬಂಧ ರಚನೆ).
  • ಸಮಾಜದ ಇಂದಿನ ಸ್ಥಿತಿಗೆ ಸಮೂಹ ಮಾಧ್ಯಮಗಳೇ ಕಾರಣ ಪರ, ವಿರೋಧದ ಚರ್ಚೆ.
  • ಜಾಹಿರಾತುಗಳು ಕುರಿತ ನಿಮ್ಮ ಅಭಿಪ್ರಾಯ.
  • ದಿನಪತ್ರಿಕೆ, ನಿಯತಕಾಲಿಕೆಗಳಿಂದ ಪ್ರಭಾವಿತರಾದ ಸಂದರ್ಭ, ಪರಿಣಾಮ.
  • ವಿವಿಧ ಸಂಸ್ಕೃತಿಗಳನ್ನು ಸುದ್ಧಿ ಮಾಧ್ಯಮಗಳಿಂದ ಸಂಗ್ರಹಿಸಿ ಪಟ್ಟಿ ಮಾಡುವುದು.
  • ನೆರೆಹೊರೆಯ ಮಹತ್ವ
  • `ಅರಮನೆಗಿಂತ ನೆರಮನೆಯೇ ಲೇಸು' ಹೇಗೆ?
  • `ಆಪತ್ತಿಗಾದವನೇ ನೆಂಟ'. ಸಮರ್ಥನೆ
  • `ಹಣದ ಗಂಟಿದ್ದರೆ ಊರೆಲ್ಲ ನೆಂಟರು'. ಅರ್ಥೈಸಿ.
  • ನಗರ ಮತ್ತು ಗ್ರಾಮೀಣ ನೆರೆಹೊರೆಗಳಿರುವ ವ್ಯತ್ಯಾಸ.
  • ಸುಖ ದುಃಖ, ಹಬ್ಬ ಹರಿದಿನ, ಜಾತ್ರೆಯ ಉತ್ಸವಗಳಲ್ಲಿ ನೆರೆ ಹೊರೆಯವರ ಪಾತ್ರ.
  • ಲಿಂಗ ತಾರತಮ್ಮ
  • ಹೆಣ್ಣು ಹುಟ್ಟುವುದಿಲ್ಲ. ರೂಪುಗೊಳ್ಳುತ್ತದೆ ಹೇಗೆ ವಿಶ್ಲೇಷಣೆ
  • ಆಧುನಿಕ ಸಮಾಜದಲ್ಲಿ ಹೆಣ್ಣಿಗಿರುವ ಸಮಾನತೆ ಕುರಿತು ಚರ್ಚೆ, ತೀರ್ಮಾನ.
  • ಹೆಣ್ಣು ಇಂದು ಅನುಭವಿಸುತ್ತಿರುವ ಎಲ್ಲಾ ಅವಗಡಗಳಿಗೂ ಸಮಾಜ ನೀಡಿರುವ ಸ್ವಾತಂತ್ರ್ಯವೇ ಕಾರಣ, ಒಪ್ಪಿಕೊಳ್ಳುವಿರಾ? ಚರ್ಚಿಸಿ ತೀರ್ಮಾನಕ್ಕೆ ಬನ್ನಿರಿ.
  • ಹೆಣ್ಣು ಭ್ರೂಣಹತ್ಯೆಯ ಬಗ್ಗೆ ನಿಮ್ಮ ತೀರ್ಮಾನ
  • ಹೆಣ್ಣು, ಗಂಡಿನ ನಡುವಿನ ಅನುಪಾತ, ಅಂತರದಲ್ಲಿನ ವ್ಯತ್ಯಾಸ. ಕಾರಣ, ಪರಿಣಾಮ.
  • ಮಹಿಳಾ ಮೀಸಲಾತಿ ಕುರಿತು ಅಭಿಪ್ರಾಯ.
  • ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಏಕೆ?
  • ತಾಯಿಯಾಗಿ ಹೆಣ್ಣು-ವಿವರಿಸಿ.
  1. ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
  • ಸಮಾಜದ ಉತ್ತಮ ವ್ಯಕ್ತಿಗಳ ಸಂದರ್ಶನ

ಉದಾ : - ಊರಿನ ಸಮಾಜ ಸೇವಕನೊಬ್ಬನ ಸಂದರ್ಶನ.

  • - ಅವಿಭಕ್ತ ಕುಟುಂಬ ವ್ಯವಸ್ಥೆಯಿರುವ ಕುಟುಂಬಕ್ಕೆ ಭೇಟಿ.
  • - ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಹೋಲಿಕೆ ಮತ್ತು ವ್ಯತ್ಯಾಸ ಸಂಗ್ರಹ ಗುಂಪು ಚರ್ಚೆ.
  • - ಮಗುವಿನ ಬೆಳವಣಿಗೆ ಕುರಿತ ಸಾಕ್ಷ್ಯ ಚಿತ್ರ.
  • - ಸಮಾಜದ ವಿವಿಧ ವರ್ಗದ ಜನರ ಜೀವನ ಕ್ರಮ ಕುರಿತು ವಿಷಯ ಸಂಗ್ರಹ (ಉದಾ: ನಗರ ಜೀವನ, ಗ್ರಾಮೀಣ ಜೀವನ, ಗುಡ್ಡಗಾಡು ಜನರ ಜೀವನ).
  • - ತಮ್ಮ ಕುಟುಂಬ ಜೀವನವನ್ನು ಕುರಿತು ಪ್ರಬಂಧ ರಚನೆ.
  • - ಸಮವಯಸ್ಕರಲ್ಲಾಗುವ ಮಾನಸಿಕ ಮತ್ತು ಹಿಕ ಬೆಳವಣಿಗೆ ಕುರಿತ ಟಪ್ಪಣಿ.
  • - ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಧರ್ಮದ ಪಾತ್ರ, ಚರ್ಚೆ.
  • - ಸಾಮಾಜೀಕರಣದಲ್ಲಿ ಶಾಲೆಯ ಮಹತ್ವ ಈ ವಿಷಯ ಕುರಿತಂತೆ ಅನುಭವದ ಹಂಚಿಕೆ.
  • - ಗಾಂಧೀ, ಅಂಬೇಡ್ಕರ್, ಅಬ್ದುಲ್ಕಲಾಂ, ನೇತಾಜಿ ಇಂತಹ ವ್ಯಕ್ತಿಗಳ ಶಾಲಾ ಜೀವನ ಕುರಿತು ಮಾಹಿತಿ ಸಂಗ್ರಹ.
  • - ರೇಡಿಯೋ ಮಕ್ಕಳ ನಾಟಕಗಳನ್ನು ಆಲಿಸುವುದು.
  • - ಮಕ್ಕಳ ಸಾಹಸಮಯ ಚಿತ್ರಗಳ ವೀಕ್ಷಣೆ.
  • - ಸಾಮಾಜೀಕರಣ ಕುರಿತು ಸಂವಾದ.
  • - ಇತ್ತೀಚಿನ ದಿನಗಳಲ್ಲಿ ನೆರೆ ಹೊರೆ ಸಂಬಂಧ ಉತ್ತಮಗೊಳ್ಳುತ್ತಿಲ್ಲ. ಈ ವಿಷಯ ಕುರಿತು ಚರ್ಚಾ ಸ್ಪರ್ಧೆ.
  • - ನಿಮ್ಮ ಸುತ್ತ ಮುತ್ತಲಿನ ಸ್ತ್ರೀ ಪುರುಷರ ಸಂಖ್ಯೆ ಪಟ್ಟಿಮಾಡಿ
  • - ನಿಮ್ಮ ಸುತ್ತ ಮುತ್ತಲಿನವರಲ್ಲಿ ಹೆಚ್ಚು ಉದ್ಯೋಗ (ಹೊರಗೆಹೋಗಿ) ಹೊಂದಿರುವ ಸ್ತ್ರೀ, ಪುರುಷರ ಪ್ರಮಾಣವನ್ನು ಹುಡುಕಿ ಸಂಗ್ರಹಿಸುವುದು.
  1. ಸಂಪನ್ಮೂಲಗಳ ಕ್ರೂಢೀಕರಣ
  • - 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕ.
  • - ಪಿ.ಯು. ಮತ್ತು ಪದವಿ ತರಗತಿಗಳ ಸಮಾಜ ಶಾಸ್ತ್ರ ಪಠ್ಯಪುಸ್ತಕ.
  • - ಗುಡ್ಡಗಾಡು ಜನರ ಜೀವನ ಶೈಲಿ ಕುರಿತು ಸಾಕ್ಷ್ಯಚಿತ್ರ.
  • - ದೂರದರ್ಶನದಲ್ಲಿ ಪ್ರಸಾರವಾಗುವ ಜನಜೀವನದ ಕುರಿತು ಕಾರ್ಯಕ್ರಮ ವೀಕ್ಷಣೆ.
  • - ಮಹಾತ್ಮರ ಅಮೃತವಾಣಿಗಳ ಸಂಗ್ರಹ.
  • - ಸತ್ಯಹರಿಶ್ಚಂದ್ರ, ಶ್ರವಣಕುಮಾರ, ಕುವೆಂಪು ಮಕ್ಕಳ ನಾಟಕಗಳ ಸಂಗ್ರಹ.
  • - ಅಂತರ್ಜಾಲದಲ್ಲಿ ವಿವಿಧ ವರ್ಗದ ಕುಟುಂಬ, ಜನಾಂಗಗಳ ಮಾಹಿತಿ ಸಂಗ್ರಹ.
  • - ಬೇಂದ್ರೆ, ಕಾರಂತ, ಮಾಸ್ತಿ, ಎ.ಎನ್. ಮೂರ್ತಿರಾವ್ ಇವರು ರಚಿಸಿದ ಮಕ್ಕಳ ನಾಟಕಗಳ ಸಂಗ್ರಹ.
  • - ಚಲನಚಿತ್ರಗಳು. ಉದಾ: ಸ್ಲಂಬಾಯ್.....
  • - ದೂರದರ್ಶನ ಚಂದನದ ರಸಪ್ರಶ್ನೆ ಕಾರ್ಯಕ್ರಮ.
  • - ಯು.ಜಿ.ಸಿ. ಕಾರ್ಯಕ್ರಮ, (ದೂರದರ್ಶನ)
  • - ಹಬ್ಬದ ಆಚರಣೆಯ ಬಗೆಗಿನ ಮಾಹಿತಿಗಳು.
  • - ಎನ್.ಸಿ.ಸಿ. ಎನ್.ಎಸ್.ಎಸ್. (ಸ್ಕೌಟ್, ಗೈಡ್ಸ್ ಗ್ರಾಮ ಸಭೆಗಳು ಖಆಒಅ ಸಭೆ) ಕುರಿತು ಮಾಹಿತಿ ಅಂಕಿ ಅಂಶಗಳು.
  • - ಸಮಾಜದಲ್ಲಿ ಸ್ತ್ರೀ ನಡೆದುಬಂದ ದಾರಿ ಕುರಿತ ಪ್ರಬಂಧಗಳ ಸಂಗ್ರಹ.
  • - ಮಹಿಳಾ ಉದ್ಯೋಗ ಕುರಿತ ಸಾಕ್ಷ್ಯ ಚಿತ್ರ ಸಂಗ್ರಹ.
  • - ಸಾಧನೆ ಮಾಡಿರುವ ಮಹಿಳೆಯರನ್ನು ಕುರಿತು ಮಾಹಿತ ಸಂಗ್ರಹ.
  1. ಬೋಧನೋಪಕರಗಳು
  • - ಶಾಲೆಯ ಚಿತ್ರಣ
  • - ವಿಭಕ್ತ, ಅವಿಭಕ್ತ ಕುಟುಂಬಗಳ ಚಿತ್ರಣ, ಮಕ್ಕಳು ಆಟವಾಡುತ್ತಿರುವ ಚಿತ್ರಗಳು.
  • - ಸಾಕ್ಷ್ಯ ಚಿತ್ರಗಳು, (ಹಬ್ಬ, ಜಾತ್ರೆ, ಮಹಿಳಾ ಉದ್ಯೋಗ ಇತ್ಯಾದಿ).
  • - ರೇಡಿಯೋ ಕಾರ್ಯಕ್ರಮಗಳ ಬಳಕೆ (ಮಕ್ಕಳ ನಾಟಕ)
  • - ಚಲನಚಿತ್ರಗಳು ತೊತ್ತೋಚಾನ್ ತುತ್ತೂರಿ, ಕೇರ್ಆಫ್ ಫುಟ್ಬಾತ್, ಬೂಟ್ ಪಾಲಿಶ್ (ಬೂಕರ್), ಸ್ಲಂಡಾಗ್ ಮಿಲೇಸಾರ್ಖ ಇತ್ಯಾದಿ) ಕೊಡುಗೆಗಳು.
  • - ಕುಟುಂಬದಲ್ಲಿ ಹೆಣ್ಣು ಮಗು ಮತ್ತು ಗಂಡು ಮಗುವನ್ನು ನಡೆಸಿಕೊಳ್ಳುವ ರೀತಿ ಕುರಿತ ರೂಪಕ ಪ್ರದರ್ಶನ.
  1. ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
  • - ಮನುಷ್ಯ ಸಂ ಜೀವಿ
  • - ಮಾನವ ಪ್ರಾಣಿಗಳಿಗಿಂತ ವಿಭಿನ್ನ
  • - ಹೊಂದಿಕೊಂಡು ಬಾಳುವುದು.
  • - ಸಾಮಾಜೀಕರಣ ಎಂದರೆ ಒಂದು ಸಂಸ್ಕೃತಿ
  • - ಧರ್ಮನಿರಾಪೇಕ್ಷತೆ
  • - ಜೀವನದಲ್ಲಿ ಶಿಸ್ತು
  • - ಕೌಶಲ್ಯಯುಕ್ತ ಜೀವನ
  • - ಮನೆಯೇ ಮೊದಲ ಪಾಠಶಾಲೆ
  • - ಪ್ರೀತಿ ಸ್ನೇಹ, ಸಹನೆ, ಸಹೃದಯತೆ
  • - ಗೆಳೆತನ
  • - ಆದರ್ಶ ಸಮಾಜ ಜೀವನಕ್ಕೆ ಧರ್ಮವೇ ತಳಹದಿ
  • - ಜೀವನದ ಗುರಿಗೆ ಗುರು ಅನಿವಾರ್ಯ
  • - ಹಣ ಗಂಟಿದ್ದರೆ ಊರೆಲ್ಲಾ ನೆಂಟರು.
  • - ಸಾಮಾಜೀಕರಣದಲ್ಲಿ ಪರಿಣಾಮಕಾರಿ ಸಮೂಹ ಮಾಧ್ಯಮಗಳು ಅಗತ್ಯ. (ಮಹಾತ್ಮರ) ಹಿರಿಯರ ದಾರಿ ನಮಗೆ ಹೆದ್ದಾರಿಯಾಗಬೇಕು.
  • - ಸರ್ವರಲ್ಲೂ ಸಮಾನತೆ ಕಾಣುವುದು.
  • - ಮಹಿಳೆಯರೂ ಪುರುಷರಂತೆ ಬದುಕಬಲ್ಲರು.
  • - ಉತ್ತಮ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ.
  • - ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
  • - ಉತ್ತಮ ಸಾಮಾಜಿಕ ಸಂಬಂಧದಿಂದ ಮಾತ್ರ ಆರೋಗ್ಯವಂತ ಮನಸ್ಸು ಸೃಷ್ಟಿ.