ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು 2013-14

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು 2013-14

ಈ ಕೆಳಕಂಡ ಜಿಲ್ಲೆಗಳ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಹಂತದ ಕಾರ್ಯಾಗಾರಗಳು ನವೆಂಬರ್ ಮಾಹಿಯಿಂದ ಪ್ರಾರಂಭವಾಗಿವೆ.

ಬೆಂಗಳೂರು ವಿಭಾಗ ಬೆಂಗಳೂರು

ಉತ್ತರ

ಬೆಂಗಳೂರು

ದಕ್ಷಿಣ

ಚಿಕ್ಕಬಳ್ಳಾಪುರ ಚಿತ್ರದುರ್ಗ ಶಿವಮೊಗ್ಗ
ಬೆಳಗಾವಿ ವಿಭಾಗ ಬಾಗಲಕೋಟೆ ಬೆಳಗಾವಿ ಚಿಕ್ಕೋಡಿ ಧಾರವಾಡ ಶಿರಸಿ ಉತ್ತರ ಕನ್ನಡ
ಗುಲಬರ್ಗಾ ವಿಭಾಗ ಕೊಪ್ಪಳ ರಾಯಚೂರು ಯಾದಗಿರಿ
ಮೈಸೂರು ವಿಭಾಗ ಚಿಕ್ಕಮಗಳೂರು ದಕ್ಷಿಣ ಕನ್ನಡ ಹಾಸನ ಮಂಡ್ಯ ಉಡುಪಿ

ಜಿಲ್ಲಾವಾರು ಶಾಲೆಗಳ ಮತ್ತು ಒಟ್ಟು ಕಾರ್ಯಾಗಾರಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಪಠ್ಯಕ್ರಮ ಮತ್ತು ಗಮನಕೇಂದ್ರಿತ ಕ್ಷೇತ್ರಗಳು

ಈ ಹಿಂದಿನ ಎರಡು ವರ್ಷಗಳಲ್ಲಿ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಐಸಿಟಿ ಒಳಗೊಳ್ಳಿಸುವಿಕೆಯನ್ನು ಪರಿಚಯಿಸಿಕೊಂಡಿದ್ದಾರೆ . ಈ ಕಾರ್ಯಕ್ರಮವು ಗಣಕಯಂತ್ರದ ಬಗೆಗಿನ ಮೂಲ ಕಲಿಕೆ, ಅಂತರ್ಜಾಲ ಬಳಕೆ ಮತ್ತು ಇಮೇಲ್ ಮೂಲಕ ಇತರರೊಡನೆ ಸಂವಹನ ಸಾದಿಸುವ ಬಗ್ಗೆ ತಿಳಿದುಕೊಂಡಿದ್ದಾರೆ. ಜೊತೆಗೆ ತಂತ್ರಾಂಶ ಆಧಾರಿತ ಶೈಕ್ಷಣಿಕ ಪರಿಕರಗಳಾದ ಪ್ರೀ ಮೈಂಡ್, ಜಿಯೋಜೀಬ್ರಾ, ಕೆಜಿಯೋಗ್ರಾಫಿ, ಕೆಸ್ಟಾರ್, ಕೆಟರ್ಟಲ್, ಮಾರ್ಬಲ್, ಮತ್ತು ಸ್ಟೆಲ್ಲಾರಿಯಮ್ ವಿಷಯಗಳನ್ನು ತರಗತಿಕೋಣೆಯಲ್ಲಿ ಬಳಸುವ ಬಗೆಗೂ ತರಬೇತಿ ಪಡೆದುಕೊಂಡಿದ್ದಾರೆ. ಬಹಳಷ್ಟು ಶಿಕ್ಷಕರು ಈ ಪರಿಕರಗಳನ್ನು ಬಳಸಿ ತಮ್ಮ ತರಗತಿ ಭೋದನೆಗೆ ಸಹಕಾರಿಯಾಉವ ಸಂಪನ್ಮೂಲಗಳನನ್ನು ತಯಾರಿಸಿಕೊಂಡಿದ್ದಾರೆ.

ಈ ವರ್ಷದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಗುವುದು :

  1. ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲವನ್ನು ಹೆಚ್ಚಿಸಸುವುದು
  2. ಅಂತರ್ಜಾಲ ಬಳಕೆಯ ಮೂಲಕ ಕಲಿಕಾ ಅವಕಾಶಗಳನ್ನು ಪರಿಸಯಿಸುವುದು
  3. ಇತರರೊಡನೆ ಸಂವಹನ ಸಾಧಿಸಲು ಇಮೇಲ್ ಮತ್ತು ಇಮೇಲ್ ವೇದಿಕೆಗಳನ್ನು ಬಳಸುವುದು
  4. ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು
  5. ಕೊಯರ್ ಪ್ರಕ್ರಿಯೆಲ್ಲಿ ಭಾಗವಹಿಸುವುದು ಮತ್ತು ಸಂಪನ್ಮೂಲಗಳ ನರೆವು ನೀಡುವುದು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ.

ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಲಿಂಕ್ ಗಳು

  1. ವಿಜ್ಞಾನ ಜಿಲ್ಲಾ ಅನುಕ್ರಮ ಕಾರ್ಯಾಗಾರ
  2. ಗಣಿತ ಜಿಲ್ಲಾ ಅನುಕ್ರಮ ಕಾರ್ಯಾಗಾರ
  3. ಸಮಾಜ ವಿಜ್ಞಾನ ಜಿಲ್ಲಾ ಅನುಕ್ರಮ ಕಾರ್ಯಾಗಾರ
  4. ಮುಖ್ಯಶಿಕ್ಷಕರ ಜಿಲ್ಲಾ ಅನುಕ್ರಮ ಕಾರ್ಯಾಗಾರ

ಎಲ್ಲಾ ವಿಷಯಗಳಿಗೂ ಅನ್ವಯವಾಗುವ ಪೂರ್ವ ಸಿದ್ದತಾ ಹಂತಗಳು

  1. ಕಂಪ್ಯೂಟರ್ ಗಳ ಲಭ್ಯತೆ ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ ತುಂಬಾ ಮುಖ್ಯವಾದದ್ದು . ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ 3mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು . ಜೊತೆಗೆ ಡಯಟ್ ಲ್ಯಾಬ್ ನಲ್ಲಿನ ಕಂಪ್ಯೂಟರ್ ಗಳಿಗೆ ಉಬುಂಟು ಅನುಸ್ಥಾಪಿಸಿರಬೇಕು.
  2. ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ ಮಿತಿಗೊಳಿಸಿಕೊಳ್ಳುವುದು ಉತ್ತಮ . ತರಭೇತಿ ಪಡೆಯಬೇಕಿರುವ ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿ .
  3. 2013-14 ನೇ ಸಾಲಿನ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಮಾಹಿತಿಯನ್ನು ದಾಖಲಿಸಲು DIET/CTE ಡಯಟ್ ನೋಡಲ್ ಅಧಿಕಾರಿಗಳು ಇಲ್ಲಿ ಕ್ಲಿಕ್ ಮಾಡಿ
  4. ಹೆಚ್ಚಿನ ಮಾಹಿತಿ ಹಾಗು ಸಹಾಯಕ್ಕಾಗಿ ಐಟಿ ಪಾರ್ ಚೇಂಜ್ ಸದಸ್ಯರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ