ರಚನಾ ಸಮಾಜ ವಿಜ್ಞಾನ 9 ಸಮಾಜ ವಿಜ್ಞಾನದಲ್ಲಿ ನಿ ಸ ಮೌ ಅಳವಡಿಸಿಕೊಳ್ಳಲು ಇರುವ ಅವಕಾಶಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೪೨, ೧೬ ನವೆಂಬರ್ ೨೦೧೩ ರಂತೆ Manjunathr (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: =14. ಸಮಾಜ ವಿಜ್ಞಾನದಲ್ಲಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಅಳವಡಿಸಿಕೊಳ್ಳಲು ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

14. ಸಮಾಜ ವಿಜ್ಞಾನದಲ್ಲಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಅಳವಡಿಸಿಕೊಳ್ಳಲು ಇರುವ ಅವಕಾಶಗಳು

ಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾವು ಈಗಾಗಲೇ ಸಾಕಷ್ಟು ಅಧ್ಯಯನವನ್ನು ಮಾಡಿದ್ದೇವೆ. ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ರಚಿಸಲ್ಪಟ್ಟಿರುವ ಸಾಹಿತ್ಯಗಳು ಸಹ ನಮ್ಮೊಂದಿಗಿದ್ದು ಸೂಕ್ತ ತಿಳುವಳಿಕೆಯನ್ನು ಶಿಕ್ಷಕರಿಗೆ ನೀಡುತ್ತಲೇ ಬಂದಿವೆ.

ನಾವು ಈಗಾಗಲೇ ಮಾಡುತ್ತಿರುವ ನಂದಿನ ಮೌಲ್ಯಮಾಪನಗಳು ಬದಲಾದ ಪಠ್ಯಪುಸ್ತಕದ ಹಿನ್ನಲೆಯಲ್ಲಿ ನಿರ್ದಿಷ್ಟತೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಆದ್ದರಿಂದ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನವನ್ನು ಅರ್ಥೈಸಿಕೊಂಡು ಮಗುವಿನ ಕಲಿಕೆಯನ್ನು ಮತ್ತಷ್ಟು ದೃಢಪಡಿಸಿಕೊಳ್ಳಲು ಪ್ರಯತ್ನಿಸೋಣ.

ಸಮಾಜ ವಿಜ್ಞಾನ ಕಲಿಸುವಾಗ, ಟನೆ, ಇಸವಿ, ವಂಶಾವಳಿ, ನಕ್ಷೆ, ಪರಿಸರ, ಖರ್ಚು, ಆದಾಯ, ಸರ್ಕಾರ, ಕೊಡುಕೊಳ್ಳುವಿಕೆ ಮುಂತಾದ ಅಂಶಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಸಮಾಜ ವಿಜ್ಞಾನವೆಂದರೆ ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ವ್ಯವಹಾರ ಅಧ್ಯಯನಕ್ಕೆ ಸಂಬಂಧಿಸಿದ ಜ್ಞಾನವನ್ನು ನೀಡುವುದಕ್ಕಾಗಿ ಕಲಿಸಲಾಗುತ್ತಿದೆಯೋ? ಎಂಬ ಪ್ರಶ್ನೆ ನಮ್ಮೊಳಗೆ ಅದೆಷ್ಟೋ ಬಾರಿ ಬಂದಿದೆಯಲ್ಲವೇ? ಅಲ್ಲದೆ ಅಂಕಗಳ ಆಧಾರದ ಮೇಲೆ ಮಕ್ಕಳ ಕಲಿವಿನ ಪ್ರಗತಿಯನ್ನು ಗುರುತಿಸಿ ನಾವು ಸಮಾಧಾನ ಪಟ್ಟುಕೊಳ್ಳುತ್ತಿಲ್ಲವೇ? ಆದರೆ ಈಗ ನಾವೆಲ್ಲರೂ ಹೊಸ ಮತ್ತು ಏಕರೂಪದ ಶಿಕ್ಷಣ ವ್ಯವಸ್ಥೆಯ ಸಂದರ್ಭದಲ್ಲಿನ ಆಶಯಗಳನ್ನು ಅರ್ಥೈಸಿಕೊಂಡಿರುವ ನಾವು, ಅಂಕಗಳ ಹಣೆಪಟ್ಟಿಯೊಂದಿಗೆ ಅವರ ಭವಿಷ್ಯ ರೂಪಿಸುವ ನಿರ್ಧಾರಕರೇ? ಎಂದು ಗಂಭೀರವಾಗಿ ಯೋಚಿಸಬೇಕಿದೆ.

ಆದ್ದರಿಂದ ಎನ್.ಸಿ.ಎಫ್-2005 ಮತ್ತು ನಿರಂತರ ವ್ಯಾಪಕ ಮೌಲ್ಯಮಾಪನದ ಪ್ರಕ್ರಿಯೆಯು ನಿರ್ದೇಶನದ ರಚನಾವಾದದ ಹಿನ್ನಲೆಯ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಕಲಿಕಾ ಮಾಪನಗಳು ಹೆಚ್ಚು ಅವಶ್ಯಕ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಾವು ಸಮಾಜ ವಿಜ್ಞಾನ ವಿಷಯವನ್ನು ಮಗುವಿನ ಬದುಕಿನೊಟ್ಟಿಗೆ ಸಮಗ್ರವಾಗಿ ಅರಿಯುತ್ತಾ ವಿಷಯವನ್ನು ಜ್ಞಾನಾತ್ಮಕ ಹಾಗೂ ತೊಡಗಿಸಿಕೊಳ್ಳುವಿಕೆಯ ಭಾಗವಾಗಿ ಅರ್ಥೈಸಿಕೊಳ್ಳೋಣ.

ಅದಕ್ಕಾಗಿ 9ನೇ ತರಗತಿ ಸಮಾಜ ವಿಜ್ಞಾನ ವಿಷಯದ ಕ್ಷೇತ್ರಗಳ ಉದ್ದೇಶಗಳನ್ನು ಜ್ಞಾನಾತ್ಮಕ ಮತ್ತು ತೊಡಗಿಸಿಕೊಳ್ಳುವಿಕೆಯ ವಲಯಗಳೊಂದಿಗೆ ಉದ್ದಿಷ್ಠಗಳ ಸ್ವರೂಪವನ್ನು ಮಾದರಿಯಾಗಿ ಈ ಪಟ್ಟಿಯಲ್ಲಿ ನೀಡಲಾಗಿದೆ. ಇದರಿಂದಾಗಿ ಜ್ಞಾನಾತ್ಮಕ ವಲಯದ ಉದ್ದಿಷ್ಯಗಳಾದ, ಜ್ಞಾನ ಮತ್ತು ಅರ್ಥೈಸಿಕೊಳ್ಳುವಿಕೆ ಅನ್ವಯ ಹಾಗೂ ತೊಡಗಿಸಿಕೊಳ್ಳುವಿಕೆಯ (ಭಾವಾನಾತ್ಮಕ) ಉದ್ದಿಷ್ಟಗಳಾದ ಕೌಶಲ, ಮೌಲ್ಯಗಳು, ಮನೋಧೋರಣೆ, ಆಸಕ್ತಿಯನ್ನು ಟಕವಾರು ಕಲಿಕಾ ಮಾನಕಗಳ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿಯೋಣ.

ವಿಷಯ: `ಸಮಾಜ ವಿಜ್ಞಾನ', ಭಾಗ: ಭೂಗೋಳ/ ಟಕ-ಸಾರಿಗೆ

ವಲಯಗಳು ಉದ್ದಿಷ್ಠಗಳು ಕಲಿಕಾ ಮಾನಕಗಳು (ನಿರ್ದಿಷ್ಟಗಳು)

ಜ್ಞಾನಾತ್ಮಕ ಜ್ಞಾನ ಮತ್ತು ಅರ್ಥೈಸಿಕೊಳ್ಳುವಿಕೆ ಸಾರಿಗೆಯ ಅರ್ಥ ಪ್ರಾಮುಖ್ಯತೆ, ವಿಧಗಳು

ಅನ್ವಯ (ತಾರ್ಕಿಕ ಚಿಂತನೆ) ಸಾರಿಗೆಯ ಅನುಕೂಲಗಳನ್ನು ಸೂಕ್ತ ಆಧಾರಗಳೊಂದಿಗೆ ನಿರೂಪಿಸುವುದು.

ಉದಾ:

  • ಅಮೇರಿಕಾದ ವಾಷಿಂಗ್ಟನ್ ಸಿಟಿಯನ್ನು ಬಾಂಬೆ ಅಂ.ರಾ. ವಿಮಾನ ನಿಲ್ದಾಣದಿಂದ

ಕೇವಲ 7 ಂಟೆಗೆ ತಲುಪಬಹುದು.

  • ಬೆಂಗಳೂರಿನಿಂದ ದೆಹಲಿಗೆ 2 ಗಂಟೆ ಪ್ರಯಾಣ ಸಾಕಾಗುತ್ತದೆ.

ತೊಡಿಗಿಕೊಳ್ಳುವಿಕೆ ಕೌಶಲ

  • ಕರ್ನಾಟಕ ಭೂಪಟದಲ್ಲಿ ಬಂದರು, ವಿಮಾನ ನಿಲ್ದಾಣ (ಭಾವನಾತ್ಮಕ ಗಳನ್ನು, ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ವಲಯ) ಗುರುತಿಸುವುದು.

ಮೌಲ್ಯಗಳು

  • ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು.
  • ಪರಿಸರ ಕಾಳಜಿ
  • ಪ್ರಯಾಣಕ್ಕಾಗಿ ಸಾರ್ವಜನಿಕ/ಖಾಸಗಿ ವಾಹನಗಳ ಬಳಕೆ
  • ಆಕ ಉಳಿತಾಯದ ಅರಿವು.
  • ಸಮಯಪಾಲನೆ
  • ವಿಶ್ವ ಪರ್ಯಾಟನೆ ಪರಿಕಲ್ಪನೆ ಮನೋಧೋರಣೆ
  • ಸಾರಿಗೆ ಸಾಧನಗಳಾದ ಬಸ್ಸು, ರೈಲು, ಹಡಗು, ವಿಮಾನ, ಇವುಗಳ ಸಾರಿಗೆಯ ವ್ಯತ್ಯಾಸ ಅರಿಯುವರು.
  • ವಿಮಾನಯಾನದ ಕೌತುಕದ ಬಗ್ಗೆ ಆಸಕ್ತಿ ಬೆಳಸಿಕೊಳ್ಳುವರು.
  • ಹಡಗಿನ ವಿಶಾಲತೆ, ಸಾಗಣೆಯ ರೋಮಾಂಚನದ ಅರಿವು ಪಡೆಯಲೆತ್ನಿಸುವರು.
  • ಬಸ್ ಹಾಗೂ ರೈಲು ಪ್ರಯಾಣದ ವ್ಯತ್ಯಾಸದೊಂದಿಗೆ ಇಲ್ಲಿನ ಅನುಭವಗಳನ್ನು ವಿಶ್ಲೇಷಿಸುವರು.

ಆಸಕ್ತಿ

  • ಎತ್ತಿನಗಾಡಿ ಕುದುರೆಗಾಡಿ, ಸೈಕಲ್, ಬಸ್, ರೈಲು, ಹಡಗು, ವಿಮಾನಗಳ ಚಿತ್ರ ಸಂಗ್ರಹ.
  • ಸಾರಿಗೆ ವ್ಯವಸ್ಥೆ ಪ್ರಯೋಜನಗಳ ಪಟ್ಟಿ
  • ರೈಲು ಸಾರಿಗೆಯ, ರಸ್ತೆ ಸಾರಿಗೆಯ ಅನುಭವಗಳ ಪಟ್ಟಿ ಮಾಡುವುದು.
  • ಮೆಟ್ರೋ ರೈಲು ವೀಕ್ಷಣೆಗೆ ಮುಂದಾಗುವರು.

ಭಾಗ: ವ್ಯವಹಾರ ಅಧ್ಯಯನ ಟಕ: ವ್ಯವಹಾರ ನಿರ್ವಹಣೆ ವಲಯಗಳು ಉದ್ದಿಷ್ಠಗಳು ಕಲಿಕಾ ಮಾನಕಗಳು (ನಿರ್ದಿಷ್ಟಗಳು) ಜ್ಞಾನಾತ್ಮಕ ಜ್ಞಾನ/

  • ವ್ಯವಹಾರದ ಅರ್ಥ ನಿರ್ವಹಣೆ, ಸಂಟನೆ ಅರ್ಥೈಸಿಕೊಳ್ಳುವಿಕೆ ಸಂಟನೆಗಳ ಬಗ್ಗೆ ಅರಿಯುವರು
  • ನಿರ್ಧಾರಗಳು, ಪ್ರಾಮುಖ್ಯತೆ, ಕ್ಷೇತ್ರವ್ಯಾಪ್ತಿ ತಿಳಿಯುವರು.

ಅನ್ವಯ/ತಾರ್ಕಿಕ

  • ಯಾವುದೇ ಕೆಲಸದ ಉದ್ದೇಶ ಹಾಗೂ ಚಿಂತನೆ ಈಡೇರಿಕೆಗಾಗಿ ಸಂಟನೆಯ ಮೂಲಕ ಕ್ರಿಯಾಶೀಲ ಯೋಜನೆಯೊಂದಿಗೆ ನಿರ್ವಹಿಸುವಲ್ಲಿ ನಿರ್ವಹಣೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವರು.

ಉದಾ : ಶಾಲೆಯ ಉತ್ತಮ ಫಲಿತಾಂಶ ನಿರ್ವಹಣೆ (ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾಗಳ ಪಾತ್ರ ಕುರಿತಂತೆ.

  • ನಿರ್ವಹಣೆಯ ಫಲಶೃತಿಯು ತೆಗೆದು ಕೊಳ್ಳುವ ಉತ್ತಮ ನಿರ್ಧಾರಗಳನ್ನು ಅವಲಂಬಿಸಿರುತ್ತದೆ ಎಂದು ತಿಳಿಯುವರು.

ಉದಾ : ಕುಟುಂಬದ ಮಿತವ್ಯಯದ ನಿರ್ವಹಣೆಯಲ್ಲಿ ಕುಟುಂಬದ ಸದಸ್ಯರು ತಮ್ಮ ಕೆಲಸದ ಸ್ಥಳಗಳಿಗೆ ನಡೆದೇ ಹೋಗಬೇಕು ಎಂಬ ನಿರ್ಧಾರ ಮಾಡುವುದು.

  • ನಿರ್ವಹಣೆಯಲ್ಲಿ ನಿಗದಿತ ಮತ್ತು ಹೊಂದಾಣಿಕೆಗಳ ಪ್ರಾಮುಖ್ಯತೆ ಬಹಳ ಮುಖ್ಯವಾದುದೆಂದು ಅರ್ಥೈಸಿಕೊಳ್ಳುವರು.

ಉದಾ: ಮಾಲೀಕ ಮತ್ತು ಕಾರ್ಮಿಕರ ನಡುವಿನ ಹೊಂದಾಣಿಕೆ

  • ನಿರ್ವಹಣೆಯ ಸಾಫಲ್ಯತೆಯು ರೂಪಿಸಿ ಕೊಂಡಿರುವ ಯೋಜನೆಯನ್ನು ಅವಲಂಬಿಸಿರುತ್ತದೆ ಎಂದು ಅರಿಯುವರು.

ಉದಾ : 2020ಕ್ಕೆ ಸಂಪೂರ್ಣ ಸಾಕ್ಷರತೆ.

ಅಡಿಯಲ್ಲಿ ಉಚಿತ ಕಡ್ಡಾಯ ಶಿಕ್ಷಣ, ಯೋಜನೆ, ವಿದ್ಯಾವೇತನಗಳು, ಸೈಕಲ್ ವಿತರಣೆ, ಇತ್ಯಾದಿ ಸೌಲಭ್ಯಪೂರಿತ ಯೋಜನೆಗಳ ಮಹತ್ವದ ಹಿನ್ನಲೆಯಲ್ಲಿ. ತೊಡಗಿಸಿ ಕೌಶಲ

  • ನಿರ್ವಹಣೆಯ ತತ್ವಗಳನ್ನು ಕೊಳ್ಳುವಿಕೆ ಅನುಸರಿಸುವರು.

(ಭಾವನಾತ್ಮಕ)

  • ಶಾಲೆಗಳಲ್ಲಿ ವಿದ್ಯಾ ಕಲಾ ವಿಜ್ಞಾನ, ಸಾಂಸ್ಕೃತಿಕ ಸಂಟನೆಗಳನ್ನು ಆಯೋಜಿಸುವುದು.
  • ಉತ್ತಮ ಫಲಿತಾಂಶಕ್ಕಾಗಿ, ವಿದ್ಯಾಗಳು ತಮ್ಮ ಅಭ್ಯಾಸ ಕ್ರಮದ ಯೋಜನೆ ತಯಾರಿಸಿಕೊಳ್ಳುವರು.
  • ವಿದ್ಯಾಜೀವನದಲ್ಲಿ ಉತ್ತಮ ನಿರ್ಧಾರ ಗಳಿಗೆ ಮಹತ್ವ ಕೊಡುವರು.

ಮೌಲ್ಯಗಳು

  • ಕಾಯಕ್ಷಮತೆ ಬೆಳಸಿಕೊಳ್ಳುವರು
  • ಕಾರ್ಯ ವಿಧಾನಕ್ಕೆ ಅಣಿಯಾಗುವರು
  • ಮುಂದಾಳತ್ವ
  • ತೀರ್ಮಾನದ ಮಹತ್ವ
  • ಒಗ್ಗಟ್ಟು (ಹೊಂದಾಣಿಕೆ)
  • ಶಿಸ್ತು
  • ಜವಾಬ್ದಾರಿ
  • ತಾಳ್ಮೆ, ಸಂಟನೆ, ವಿವೇಕ
  • ಮುಂದಾಲೋಚನೆ, ಸರಿ ತಪ್ಪು ಪರಾಮರ್ಶೆ ಇತ್ಯಾದಿ ಮೌಲ್ಯಗಳನ್ನು ಬೆಳೆಸಿಕೊಳ್ಳುವರು.

ಮನೋಧೋರಣೆ

  • ಕೆಲಸದ ನಿರ್ವಹಣೆಯಲ್ಲಿ ಮುಂದಾಳತ್ವ ಮತ್ತು ಇತರ ಸದಸ್ಯರ ಪಾತ್ರವೇನೆಂದು ಅರಿತು ಅದರಂತೆ ತನ್ನ ಸ್ವಭಾವವನ್ನು ಬೆಳೆಸಿಕೊಳ್ಳುವರು.
  • ಕೆಲಸದ ನಿರ್ವಹಣೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಎಚ್ಚರ ವಹಿಸುವರು.
  • ನಿರ್ವಹಣೆಯಲ್ಲಿ ಸಮಯಪಾಲನೆ, ಶಿಸ್ತು ಅಚ್ಚುಕಟ್ಟುತನಗಳು ಬಹು ಮುಖ್ಯವೆಂದು ಭಾವಿಸುವರು.
  • ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿ ಯನ್ನು ಮೆಚ್ಚಿಕೊಳ್ಳುವರು.
  • ಅಧಿಕಾರ ಮತ್ತು ಜವಾಬ್ದಾರಿಗಳನ್ನು ಗೌರವಿಸಿ ಅನುಸರಿಸುವರು.
  • ನಿರ್ವಹಣೆ ಮತ್ತು ನಿರ್ಧಾರಗಳಲ್ಲಿನ ತಪ್ಪುಗಳನ್ನು ಖಂಡಿಸಿ/ಸಲಹೆ ಸೂಚನೆ ಕೊಡುವರು.
  • ಕೆಲಸ ಮತ್ತು ಸಂಬಳದ ನಡುವಿನ ಸಾಮ್ಯತೆಯನ್ನು ಬಯಸುವರು.
  • ಸಂಟನೆಯಲ್ಲಿ ಹೊಂದಾಣಿಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರುವರು.

ಅಸಕ್ತಿ

  • ಸ್ತ್ರೀ ಶಕ್ತಿ ಸಂಗಳ ಕಾರ್ಯಗಳನ್ನು ಕುರಿತು ಮಾಹಿತಿ ಸಂಗ್ರಹಿಸುವರು.
  • ಸಮೀಪದ ಬ್ಯಾಂಕಿನ ವ್ಯವಹಾರದ ನಿಯಮಗಳನ್ನು ತಿಳಿಯುವರು.
  • ಊರಿನ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಮುಂದಾಳತ್ವ ವಹಿಸುವರು.
  • ಉತ್ತಮ ಫಲಿತಾಂಶ ನಿರ್ವಹಣೆಗೆ ವೇಳಾಪಟ್ಟಿ ತಯಾರಿಸಿಟ್ಟುಕೊಳ್ಳುವರು, ಅನುಸರಿಸುವರು.
  • ಶಾಲೆಯ ಸಾಂಿಕ ಚಟುವಟಿಕೆಗಳಲ್ಲಿ ಭಾಗವಹಿಸುವರು.
  • ಗೆಳೆತನ, ಭ್ರಾತೃತ್ವ, ಐಕ್ಯಮತ್ಯಗಳನ್ನು ಬೆಳೆಸಿಕೊಳ್ಳುವರು.

ಈ ಎಲ್ಲಾ ಕಲಿಕಾ ಮಾನಕಗಳನ್ನು ಒಳಗೊಂಡಂತೆ ನಿರ್ವಹಿಸಬೇಕಾದ ದಾಖಲೆಗಳ ವಹಿಯನ್ನು