ಪ್ರವೇಶದ್ವಾರ:ಗಣಿತ/ಪೀಠಿಕೆ
ಗಣಿತಶಾಸ್ತ್ರವು ಒಂದು ಭಾಷೆಯಾಗಿದ್ದು - ಬಹಳಷ್ಟು ಗಣಿತಶಾಸ್ತ್ರಜ್ಞರು ಗಣಿತವನ್ನು ಒಂದು ಕಲೆ ಮತ್ತು ಕಾವ್ಯವೆಂದು ಬಣ್ಣಿಸಿದ್ದಾರೆ. ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವಲ್ಲದೇ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ, ಶಿಲ್ಪಕಲೆಯಂತೆ ಶೀತಲ ಮತ್ತು ಕಟ್ಟುನಿಟ್ಟಾದ ಸೌಂದರ್ಯವನ್ನು ಒಳಗೊಂಡಿದೆ.ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನೂ ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಗಣಿತಶಾಸ್ತ್ರದ ಪ್ರಪಂಚವನ್ನು ವಿವರಿಸುವ ಅಸಮಂಜಸ ಪರಿಣಾಮದ ಬಗ್ಗೆ ಬರೆದಿದ್ದಾರೆ. ಕಲೆ ಮತ್ತು ಸೌಂದರ್ಯವಾದರೂ ಗಣಿತ ಮತ್ತು ಗಣಕದ ಕ್ರಿಯಾತ್ಮಕ ಜ್ಞಾನ , ಸಮಾಜದಲ್ಲಿ ವ್ಯವಹರಿಸಲು ಒಂದು ಬಹುಮುಖ್ಯ ಸಾಮರ್ಥ್ಯವಾಗಿದೆ.
ಹಾಗಿದ್ದರೂ ಈ ಭಾಷೆಯನ್ನು ಪ್ರಶಂಸಿಸಲು ಹಾಗೂ ನಿರ್ವಹಿಸಲು ಪ್ರತಿಯೊಬ್ಬರಿಗೆ ವ್ಯಾಕರಣದ ಹಾಗೂ ಶಬ್ದಕೋಶ ಕಲಿಕೆಯ ಅಗತ್ಯವಿದೆ. ಶಾಲಾ ಗಣಿತದ ಮುಖ್ಯ ಉದ್ದೇಶವು ಭಾಷಾ ಪ್ರೀತಿ ಹಾಗೂ ಸಂಪರ್ಕಿಸುವ ಕೌಶಲ್ಯಗಳನ್ನು ಒಳಗೂಡಿಸಿಕೊ ಳ್ಳುವುದಾಗಿದೆ . ಈ ಮಹಾದ್ವಾರವು ವಿದ್ಯ್ಯಾ ರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ಭಾಷೆಯಲ್ಲಿ ತಮ್ಮನ್ನು ತೊಡಗಿಸುವುದರಲ್ಲಿ ಮತ್ತು ಕೌಶಲ್ಯಗಳನ್ನು ನಿರ್ಮಿಸುವುದರಲ್ಲಿ ಸಹಾಯ ಮಾಡುತ್ತದೆ.