ಮೊದಲ ದಿನದ ವರದಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೭:೨೨, ೨೧ ಜುಲೈ ೨೦೧೪ ರಂತೆ Radha (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಎಸ್ .ಟಿ.ಎಫ್.ಸಮಾಜವಿಜ್ಞಾನ ರಾಜ್ಯಮಟ್ಟದ ಕಾರ್ಯಗಾರ ೨೦೧೪-೧೫ ಡಯಟ್ ರಾಜರಾಜೇಶ್ವರಿ ನಗರ ಬೆಂಗಳೂರು ನಗರ ಜಿಲ್ಲೆ,ಬೆಂಗಳೂರು. ಮೊದಲ ದಿನದ ವರದಿ

  1. ದಿನಾಂಕ ೧೫/೦೭/೨೦೧೫ ರಂದು STF ಸಮಾಜ ವಿಜ್ಞಾನ ರಾಜ್ಯಮಟ್ಟದಕಾರ್ಯಗಾರವು ಡಯಟ್ ರಾಜರಾಜೇಶ್ವರಿ ನಗರ ಬೆಂಗಳೂರು , ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.

ಈ ಸಂದರ್ಭಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶ್ರೀಯುತ ಮಂಜುನಾಥ್ ರವರು ,it For Change ನ ಶ್ರೀಯುತ ಗುರುಮೂರ್ತಿಯವರು,ಶ್ರೀಮತಿ ರಾಧಾ ರವರು ಹಾಜರಿದ್ದು ಕಾರ್ಯಕ್ರಮವನ್ನು ಎಲ್ಲಾ ಶಿಬಿರಾರ್ಥಿಗಳ ಪರಿಚಯದೊಂದಿಗೆ ಆರಂಭಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಯುತ ಮಂಜುನಾಥ್ ರವರು ವಿವಿಧ ಜಾಲ ತಾಣಗಳ ಬಳಕೆಯ ಮಹತ್ವದ ಬಗ್ಗೆ ತಿಳಿಸುತ್ತಾ ಶಿಕ್ಷಕರ ವೃತ್ತಿ ಪ್ರಗತಿಯಲ್ಲಿ ಕೋಯರ್ ನ ಮಹತ್ವದ ಬಗ್ಗೆ ವಿವರಿಸಿದರು. ಶ್ರೀಯುತ ಗುರುಮೂರ್ತಿಯವರು ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.. ನಂತರ ಶ್ರೀಮತಿ ರಾಧಾ ರವರು ಕೋಯರ್ ಟೆಂಪ್ಲೇಟ್ ಬಗ್ಗೆ ವಿವರಿಸಿದರು.ಹಾಗೂ ಈ ಕಾರ್ಯಗಾರದ ಅಜೆಂಡಾ ದಬಗ್ಗೆ ತಿಳಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ೧೦ನೇತರಗತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಆಯ್ದ ವಿಷಯಗಳಿಗೆ ಪರಿಕಲ್ಪನೆಗಳನ್ನು ರಚಿಸಲು ತಿಳಿಸಿದರು. ಎಲ್ಲಾ ಶಿಬಿರಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯಗಳಿಗೆ ಪರಿಕಲ್ಪನೆಗಳನ್ನು ರಚಿಸಿ ಮೈಂಡ್ ಮ್ಯಾಪ್ ಗಳನ್ನು ರಚಿಸಿದರು. ನಂತರ ಗುರುಮೂರ್ತಿಯವರು ಕೋಯರ್ ನಲ್ಲಿ ವಿಕಿರಚನೆಯ ವಿಧಾನಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕೋಯರ್ ಸಂಕಲನ ಕೈಪಿಡಿಯನ್ನು ಬಳಸುವ ಬಗೆಯನ್ನು ತಿಳಿಸಿದರು.ನಂತರ ವೆಬ್ ಲಿಂಕ್ ಗಳನ್ನು ಸೇರಿಸುವುದು, ಚಿತ್ರಗಳನ್ನು ಸೇರಿಸುವುದು,ವೀಡಿಯೋಗಳನ್ನು ಸೇರಿಸುವುದದು, ಸ್ಲೈಡ್ ಗಳನ್ನು ಸೇರಿಸುವುದು ಮತ್ತು ಮೈಂಡ್ ಮ್ಯಾಪನ್ನು ಸೇರಿಸುವ ಬಗ್ಗೆ ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳು ಥಾವು ಆಯ್ಕೆಮಾಡಿಕೊಂಡ ವಿಷಯದ ಮೇಲೆ ಕಾರ್ಯಗಳನ್ನು ಮುಂದುವರಿಸಿದರು.