ವಾಣಿಜ್ಯ ಬೆಳೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ

ಅಂದಾಜು ಸಮಯ

1 ವಾರ

  1. ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಜನೆ ಕೊಡುವ ಮೊದಲು ತೋಟಗಾರಿಕಾ ಬೆಳೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುವುದು.
  2. ಮಾಹಿತಿಯನ್ನು ಸಂಗ್ರಹಣೆ ಮಾಡಲು ರೈತರ ಸಹಾಯ ಪಡೆಯುವ ಬಗ್ಗೆ ಮಾಹಿತಿ ಕೊಡುವುದು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಪೇಪರ್
  2. ಪೆನ್
  3. ಮೊಬೈಲ್
  4. ಹಿರಿಯರ ಸಹಾಯ
  5. ಲೈಬ್ರೇರಿ
  6. ಹಳೆಯ ಪೇಪರ್ ಲೇಖನಗಳು
  7. ಇಂಟರ್ ನೆಟ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಇಂಟರ್ನೆಟ್ ನಿಂದ ಹೇಗೆ ಮಾಹಿತಿಯನ್ನು ಪಡೆಯುವುದು ಎಂದು ತಿಳಿಸ ಬೇಕು.
  2. ಮಾಹಿತಿಯಲ್ಲಿ ಬೆಳೆಯುವ ಕ್ರಮಗಳು, ನೀರಾವರಿ ಪದ್ದತಿ, ಹಾಕುವ ರಸಗೊಬ್ಬರ, ಇಳುವರಿಯ ರೀತಿ, ಬೆಳೆಗಳಿಗೆ ಬರುವ ರೋಗಗಳು, ಇತ್ಯಾದಿ ಮಾಹಿತಿಯನ್ನು ತರುವಂತೆ ತಿಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

  1. ಇಂಟರ್ ನೆಟ್ ಮಾಹಿತಿಯನ್ನು ಬಳಸಿಕೊಳ್ಳುವುದು
  2. ಪೇಪರ್ ಮಾಹಿತಿ ಪಡೆಯುವುದು
  3. ಕೃಷಿಗೆ ಸಂಬಂದಿಸಿದ ವಾರ್ತಾ ಪತ್ರಿಕೆಯನ್ನು ಉಪಯೋಗಿಸುವುದು.ಉದಾ: ರಬ್ಬರ್ ವಾರ್ತೆ, ಕೃಷಿ ವಿಜಯ, ಕೃಷಿ ವಾರ್ತೆ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಸ್ಥಳೀಯ ಕಬ್ಬು, ಅಡಿಕೆ, ರಬ್ಬರ್, ಇತ್ಯಾದಿ ಬೆಳೆಗಳ ರೈತರ ನ್ನು ಕೇಳಿ ಮಾಹಿತಿ ಪಡೆಯಬಹುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ
  2. ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು
  3. ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ
  4. ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ.
  2. ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು.
  3. ತಾನು ಮಾಹಿತಿ ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು.
  4. ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು.
  5. ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು.
  6. ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ ಚಿತ್ರವನ್ನು ಪಡೆಯುವನು.
  7. ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು .
  8. ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು?
  2. ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು?
  3. ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು?
  4. ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ.
  2. ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.?
  3. ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ?
  4. ಕಬ್ಬು ಉಪಯೋಗವೇನು?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ