ಸಂಪನ್ಮೂಲ ತಯಾರಿಕೆ ತಾಳೆಪಟ್ಟಿ
ಇದು ಸಂಪನ್ಮೂಲ ತಯಾರಿಸುವವರು, ವಿಷಯವನ್ನು ಮಂಡಿಸುವಾಗ ಬಳಸಬೇಕಾಗುವ ಒಂದು ತಾಳೆಪಟ್ಟಿ.
ಹೊಸ ವಿಷಯದ ಸೇರಿಕೆ=
1. ನೀವು ಹೊಸ ವಿಷಯವನ್ನು ಮಂಡಿಸುವ ಮೊದಲು, ಆ ವಿಷಯದ ಬಗ್ಗೆ ಮೈಂಡ್ ಮ್ಯಾಪ್ ಅನ್ನು ಮಾಡಿದ್ದೀರಾ?
ವೆಬ್ ಲಿಂಕ್ಸ್ ನ ಮಾಹಿತಿ
ನೀವು ವೆಬ್ ಲಿಂಕ್ಸ್ ಅನ್ನು ಕೊಡುತ್ತಿದ್ದರೆ, ದಯವಿಟ್ಟು ಈ ಕೆಳಕಂಡ ಮಾಹಿತಿಯನ್ನು ವೆಬ್ ಲಿಂಕ್ ನೊಡನೆ ಸೇರಿಸಿ
2. ವೆಬ್ ಸೈಟ್ ಯಾವುದು?
3. ಅದು ಏನು ಮಾಹಿತಿಯನ್ನು ಹೊಂದಿರುತ್ತದೆ?
4. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವೇ?
5. ಬೇರೆ ವೆಬ್ ಸೈಟ್ಗಳಲ್ಲಿ ಇರುವ ಮಾಹಿತಿಯೊಂದಿಗೆ ಈ ಮಾಹಿತಿಯನ್ನು ಪರಿಶೀಲಿಸಿದ್ದೀರಾ? (ನೀವು ಕನಿಷ್ಠ ೩ ವೆಬ್ ಸೈಟ್ ಗಳನ್ನು ಅದೇ ವಿಷಯದ ಬಗ್ಗೆ ನೋಡಬೇಕು)
ಕೃತಿಸ್ವಾಮ್ಯ(ಗ್ರಂಥ ಹಕ್ಕುಗಳು)ದ ಮಾಹಿತಿ
6. ನೀವು ಯಾವುದೇ ಪುಸ್ತಕ, ಪುಟ, ನಿರೂಪಣೆ, ಅನುಕರಣೆ, ಚಿತ್ರ ಅಥವ ವಿಡಿಯೋ ಬಳಸಿದರೆ, ಅದರ ಮೂಲವನ್ನು ತಿಳಿಸಿ.
7. ಮೇಲೆ ಇರುವಂತಹ ಸಂಪನ್ಮೂಲಗಳು ಈಗಾಗಲೆ ವೆಬ್ ನಲ್ಲಿ ಇದ್ದರೆ, ವೆಬ್ ಲಿಂಕ್ ಅನ್ನು ಮಾತ್ರ ಕೊಡಿ. ಕೊಯರ್ ನಲ್ಲಿ ಪುನಃ ಅಪ್ಲೋಡ್ ಮಾಡುವ ಅಗತ್ಯವಿಲ್ಲ.
ಚಟುವಟಿಕೆಗಳು
8. ತಿಳಿಸಿರುವಂತಹ ಚಟುವಟಿಕೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೀರಾ?
9. ಬೇರೊಬ್ಬರು ಮಾಡಿರುವಂತಹ ಚಟುವಟಿಕೆಯನ್ನು ನೀವು ಹಂಚುತ್ತಿದ್ದರ, ಅವರ ಅನುಮತಿ ಇದೆಯೇ ಎಂದು ತಿಳಿಸಿ.