ಮಾರುತಗಳು
ಮಾರುತಗಳು
ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿ ವ್ಯತ್ಯಾಸಗಳಿಂದ ಉಂಟಾಗುತ್ತವೆ.ವಾಯು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ಪವನದಿಕ್ಸೂಚಿ ಉಪಕರಣವನ್ನು ಬಳಸುವರು. ಅದೇ ರೀತಿ ವಾಯುವಿನ ವೇಗವನ್ನು ಅಳೆಯಲು ಪವನವೇಗಮಾಪಕ ಉಪಕರಣವನ್ನು ಉಪಯೋಗಿಸುವರು.
ಮಾರುತಗಳ ವಿಧಗಳು
- ನಿರಂತರ ಮಾರುತಗಳು (planetary winds) : ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು.
- ಋತುಮಾನ ಮಾರುತಗಳು (seasonal winds) : ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ.
- ಸ್ಥಳೀಯ ಮಾರುತಗಳು (local winds) : ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ.
- ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು.