ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು ವಾಯುಗುಣದ ಅರ್ಥ ಚಟುವಟಿಕೆ1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)


ಚಟುವಟಿಕೆ 1- ಚಟುವಟಿಕೆಯ ಹೆಸರು

ದಿನಪತ್ರಿಕೆಗಳಲ್ಲಿ ನೀಡುವ ದೇಶದ ಪ್ರಮುಖ ನಗರಗಳಲ್ಲಿಯ ಉಷ್ಣಾಂಶದ ವಿವರಗಳನ್ನು ಸಂಗ್ರಹಿಸಿ ವರದಿ ತಯಾರಿಸಿ .

ಅಂದಾಜು ಸಮಯ

ನಿರ್ದಿಷ್ಟಪಡಿಸಿಲ್ಲ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ದಿನಪತ್ರಿಕೆಗಳು , ಪೇಪರ್, ಪೆನ್,ಇತ್ಯಾದಿ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ದಿನಪತ್ರಿಕೆಗಳ ಸಂಗ್ರಹಕ್ಕೆ ಮಾಲೀಕರಿಂದ ಅನುಮತಿ ಪಡೆಯಿರಿ.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಅನುಮತಿ ಪಡೆದು ಸಂಗ್ರಹಿಸಿದ ಪತ್ರಿಕೆಗಳಲ್ಲಿ ವಿವಿಧ ನಗರಗಳಲ್ಲಿ ದಾಖಲಾಗಿರುವ ಉಷ್ಣಾಂಶದ ವಿವರಗಳನ್ನು ಕತ್ತರಿಸಿ ಅಥವಾ ಬರೆದುಕೊಳ್ಳಿ. ನಂತರ ಕತ್ತರಿಸಿದ ವಿವರಗಳನ್ನು ಹಾಳೆಯ ಮೇಲೆ ಅಂಟಿಸಿ ಅದಕ್ಕೆ ವಿವರಣೆ ಕೊಡಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಬೆಂಗಳೂರಿನಲ್ಲಿ ದಾಖಲಾಗಿರುವ ಉಷ್ಣಾಂಶಕ್ಕೂ ದೆಹಲಿಯಲ್ಲಿ ದಾಖಲಾಗಿರುವ ಉಷ್ಣಾಂಶಕ್ಕೂ ವ್ಯತ್ಯಾಸವೇಕೆ?
  2. ಭಾರತವು ಎಂತಹ ವಾಯುಗುಣವನ್ನು ಹೊಂದಿದೆ ಏಕ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಭಾರತದ ವಾಯುಗುಣವನ್ನು ಯಾವ ರೀತಿ ನಿರ್ಧರಿಸಲಾಗುತ್ತದೆ?
  2. ವಾಯುಗುಣಕ್ಕೂ ಹವಾಮಾನಕ್ಕೂ ವ್ಯತ್ಯಾಸವೇನು?

ಪ್ರಶ್ನೆಗಳು

  1. ಭಾರತದ ವಾಯುಗುಣಕ್ಕೆ ಹೊಂದಿಕೊಳ್ಳುವಂತಹ ಮರಗಿಡಗಳಾವುವು?
  2. ಭಾರತದ ವಾಯುಗುಣವನ್ನು ನಿರ್ಧರಿಸುವ ಅಂಶಗಳಾವುವು?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು