ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ- ಮಾಡ್ಯೂಲ್‌ಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಿಗುರು ೧ - ಪರಿಚಯದ ಹೊಸ ಹೆಜ್ಜೆ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್‌ ಕಂಟೆಂಟ್‌ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೨ - ನನ್ನ ಸವಾಲು, ನಮ್ಮ ಸವಾಲೇ !

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಒಟ್ಟು ಸಮಯ ೧೬೦ ನಿಮಿಷಗಳು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೩ - ಹದಿಹರೆಯದ ವ್ಯಾಖ್ಯಾನ

ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ ಹಾಗೂ ಅವು ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೪ - ಆಡಿಯೊ ರೆಕಾರ್ಡಿಗ್ ಬೇಸಿಕ್ಸ್

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೫ - ಆಡಿಯೊ ರೆಕಾರ್ಡಿಗ್ ಬೇಸಿಕ್ಸ್ - ಭಾಗ ೨

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಫೊಟೊಸ್‌

<a data-flickr-embed="true" href="https://www.flickr.com/photos/183105010@N04/albums/72157710033428987" title="GHGHS "> </a><script async src="//embedr.flickr.com/assets/client-code.js" charset="utf-8"></script>