"ಚಿಗುರು-೯-ಹದಿಹರೆಯದ ವ್ಯಾಖ್ಯಾನ ಭಾಗ -೨" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(KPSB module 9)
 
(ಅದೇ ಬಳಕೆದಾರನ ೪ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
== ಸಾರಾಂಶ ==
 
== ಸಾರಾಂಶ ==
 
ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.  
 
ಫೆಸಿಲಿಟೇಟರ್‌ - ಕಾರ್ತಿಕ್‌
 
ಕೊ-ಫೆಸಿಲಿಟೇಟರ್‌ಗಳು -ಶ್ರೇಯಸ್‌,  ಅನುಷಾ
 
== ಊಹೆಗಳು ==
 
== ಊಹೆಗಳು ==
೩೩ ನೇ ಸಾಲು: ೨೯ ನೇ ಸಾಲು:
 
ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)'''
 
ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)'''
  
ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು.
+
ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು.  
 +
 
 +
ಕಿಶೋರಿಯರಿಗಾಗಿ ತಯಾರಿಸಿದ ಆಡಿಯೋ ಕಥೆಗಳನ್ನು ಅವರಿಗೆ ಕೇಳಿಸುವುದು. ಆಡಿಯೋ ಕಥೆಯನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಆಲಿಸಬಹುದು.
 +
 
 +
[https://soundcloud.com/hosa-hejje-hosa-dishe/sets ಆಡಿಯೋ ಕಥೆಗಳು]
  
ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. '''(೫ ನಿಮಿಷ)'''
 
ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. '''(೫ ನಿಮಿಷ)'''
೮೦ ನೇ ಸಾಲು: ೮೦ ನೇ ಸಾಲು:
  
• ಹುಡುಗ ಹುಡುಗಿ ಕಥೆ
 
• ಹುಡುಗ ಹುಡುಗಿ ಕಥೆ
 
+
[[ಚಿತ್ರ:KPSB Def of Adolescence.jpg|thumb]]
 
ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು.  
 
ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು.  
  
೮೭ ನೇ ಸಾಲು: ೮೭ ನೇ ಸಾಲು:
 
2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ
 
2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ
  
ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
+
ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
  
“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.
 
“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.
೧೨೪ ನೇ ಸಾಲು: ೧೨೪ ನೇ ಸಾಲು:
 
== ಔಟ್‌ಪುಟ್‌ಗಳು ==
 
== ಔಟ್‌ಪುಟ್‌ಗಳು ==
 
• ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು
 
• ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು
 +
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಕರ್ನಾಟಕ ಪಬ್ಲಿಕ್‌ ಶಾಲೆ, ಬಸವನಗುಡಿ]]

೦೯:೫೯, ೨೪ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ

ಸಾರಾಂಶ

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.

ಊಹೆಗಳು

• ಪರೀಕ್ಷೆಗಳ ಬಗ್ಗೆ ಭಯ/ಆತಂಕ ಶುರುವಾಗಿರಬಹುದು.

• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ

• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ

• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ

• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ

• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ

• ನಮ್ಮ ಸೆಷನ್ ಸಫಲವಾಗಲು ರುತು ತರಹದ ಕಿಶೋರಿಯಿಲ್ಲ ಹಾಗೂ ಇಲ್ಲಿ ಭಯವಿಲ್ಲದೆ ಮಾತನಾಡುವ ಕಿಶೋರಿಯರು ಸ್ಪಂದಿಸುತ್ತಾರೆಂದು ಆಶಿಸುತ್ತೇವೆ.

• ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ

• ಶಾಲೆಗೆ ಎಂದು ಹೇಳಿ ಪಾರ್ಕಿಗೆ ಹೋಗುವ, ಶಾಲೆಯ ನಂತರ ಸಮವಸ್ತ್ರ ಬದಲಿಸಿ ಸಿಂಗರಿಸಿಕೊಂಡು ಹುಡುಗರೊಂದಿಗೆ ಹೋಗುವ ಕಿಶೋರಿಯರು ಇದ್ದಾರೆ.

ಉದ್ದೇಶ

ಕಿಶೋರಾವಸ್ಥೆಯ ಪರಿಚಯ ಮತ್ತು ವ್ಯಾಖ್ಯಾನವನ್ನು ಆರಂಭಿಸುವುದು

ಪ್ರಕ್ರಿಯೆ

ಕಿಶೋರಿಯರ ಕುಶಲೋಪರಿಯನ್ನು ವಿಚಾರಿಸುವ ಮೂಲಕ  ಮಾತುಕಥೆಯನ್ನು ಆರಂಭಿಸುವುದು.

ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. (೧೦ ನಿಮಿಷ)

ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು.

ಕಿಶೋರಿಯರಿಗಾಗಿ ತಯಾರಿಸಿದ ಆಡಿಯೋ ಕಥೆಗಳನ್ನು ಅವರಿಗೆ ಕೇಳಿಸುವುದು. ಆಡಿಯೋ ಕಥೆಯನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಆಲಿಸಬಹುದು.

ಆಡಿಯೋ ಕಥೆಗಳು

ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. (೫ ನಿಮಿಷ)

ಗುಂಪಿನಲ್ಲಿ ಕುಳಿತುಕೊಂಡ ನಂತರ ಪಾತ್ರಾಭಿನಯಗಳ ಶೀರ್ಷಿಕೆಗಳನ್ನು ಬಳಸಿಕೊಂಡು ಗುಂಪಿನ ಚರ್ಚೆಯನ್ನು ಪ್ರಾರಂಭಿಸಬಹುದು.

ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು

೧) ಯಾವ ಪಾತ್ರಾಭಿನಯ ಇಷ್ಟ ಆಯಿತು? ಯಾಕೆ?

೨) ಯಾವ ಪಾತ್ರ ಇಷ್ಟ ಆಯಿತು? ಯಾಕೆ?

೩) ಕಥೆ ಇಷ್ಟ ಆಯ್ತು ಅಂದರೆ, ಯಾವ ಕಥೆ ಇಷ್ಟ ಆಯ್ತು?

ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ  ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು. ಹೀಗೆಯೇ ಪ್ರತಿ ಕಥೆಯ ಬಗ್ಗೆಯೂ ಕೇಳುವುದು.

ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಗುಂಪಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು.

"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.

"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್‌, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.

"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”

ಹೀಗೇಯೇ ಎಲ್ಲಾ ಕಥೆಗಳ ಬಗ್ಗೆಯೂ ಒಂದೊಂದಾಗಿ ಏನನ್ನಿಸಿತು ಎಂದು ಕೇಳವುದು.

"ಹಾಡು ಕೇಳ್ತೀಯಾ?ಕಥೆ ಬಗ್ಗೆ ಏನು ಅನ್ನಿಸಿತು?” ಎಂದು ಕೇಳಿದರೆ ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಚೆನ್ನಾಗಿತ್ತು.

• ಹುಡುಗಿನೇ ಹುಡುಗನನ್ನು ಹೆಚ್ಚು ನೋಡುತ್ತಿದ್ದಳು.

• ಅಕ್ಕ ಬಂದು ಬೈದಳು.

ಹೀಗೆ ಎಲ್ಲಾ ಕಥೆಗಳ ಬಗ್ಗೆ ಕೇಳುತ್ತೇವೆ.

ಇದಾದ ನಂತರ ಕಿಶೋರಿಯರಿಗೆ ಪಾತ್ರಾಭಿನಯಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.

"ಇದನ್ನೆಲ್ಲಾ ನೊಡಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಚುಡಾಯಿಸುವುದು.

• ಕಾಲು ತುಳಿಯುವುದು.

• ಹೊಟ್ಟೆ ನೋವು.

• ಹುಡುಗ ಹುಡುಗಿ ಕಥೆ

KPSB Def of Adolescence.jpg

ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು.

1. ಒಂದು ಮಗುವಿನ ಚಿತ್ರ

2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ

ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.

“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.

ಅನ್ವಯ ಆದರೆ, ಏನೇನು ಅನ್ವಯ ಅಗುತ್ತವೆ? ಆಗಿಲ್ಲ ಅಂದರೆ ಏಕೆ ಆಗಲ್ಲ?

ಮಗುವಿನ ಚಿತ್ರದ ಬಗ್ಗೆ ಮೊದಲು ಕೇಳುವುದು.  

"ಮಗುವಿಗೆ ಹೊಟ್ಟೆ ನೋವು ಬರುತ್ತೆ" ಎಂದು ಕಿಶೋರಿಯರು ಹೇಳಬಹುದು.

ಆಮೇಲೆ ಉಳಿದ ಎರಡು ಗುಂಪುಗಳಿಗೆ ಬಂದ ಚಿತ್ರಗಳಿಗೆ ಏನೇನು ಅನ್ವಯ ಆಗುತ್ತದೆ ಎಂದು ಕೇಳುತ್ತೇವೆ.

• ಕಿಶೋರಿಯರು ಎಲ್ಲ ಕಥೆಗಳ ಬಗ್ಗೆ ಹೇಳಬಹುದು.

ಇದಾದ ನಂತರ ಈ ಕಿಶೋರಿಯರಿಗೆ ಏಷ್ಟು ವರ್ಷ ಇರಬಹುದು ಎಂದು ಕೇಳುತ್ತೇವೆ.

ಕಿಶೋರಿಯರು ವಯಸ್ಸಿನ ಬಗ್ಗೆ ಒಮ್ಮತಕ್ಕೆ ಬಂದ ನಂತರ ಈ ವಾರದ ಮಾತುಕತೆಯನ್ನು ಮುಗಿಸುತ್ತೇವೆ. (೩೫ ನಿಮಿಷ)

ಬೇಕಾಗಿರುವ ಸಂಪನ್ಮೂಲಗಳು

• ಆಡಿಯೋ ಕಥೆಗಳು

• ಕಂಪ್ಯೂಟರ್‌

• ಸ್ಪೀಕರ್‌

• ೩ ಚಿತ್ರಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩

ಒಟ್ಟು ಸಮಯ

೫೦ ನಿಮಿಷಗಳು

ಇನ್‌ಪುಟ್‌ಗಳು

• ಆಡಿಯೋ ಕಥೆಗಳು

ಔಟ್‌ಪುಟ್‌ಗಳು

• ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು