Difference between revisions of "ಚಿಗುರು ೨ - ನನ್ನ ಸವಾಲು, ನಮ್ಮ ಸವಾಲೇ !"

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search
(Created blank page)
 
Line 1: Line 1:
 +
= ಸಾರಾಂಶ =
 +
ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು.  ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಒಟ್ಟು ಸಮಯ ೧೬೦ ನಿಮಿಷಗಳು.
  
 +
ಫೆಸಿಲಿಟೇಟರ್‌ ಹೆಸರು: ಕಾರ್ತಿಕ್‌
 +
 +
ಕೊ-ಫೆಸಿಲಿಟೇಟರ್‌ಗಳು - ಅನುಷಾ,ಅಪರ್ಣ, ಶ್ರೇಯಸ್‌
 +
 +
= ಊಹೆಗಳು =
 +
1. ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು.
 +
 +
2. ಇಡೀ ದಿನ ಅವರಿಗೆ ನಿಶ್ಯಕ್ತಿ ಇರಬಹುದು (ತಿಂಡಿ ತಿನ್ನದೆ ಬಂದಿರಬಹುದು, ಅನಾರೋಗ್ಯ, ಮುಟ್ಟಾಗಿರಬಹುದು)
 +
 +
3. ಕಿಶೋರಿಯರಿಗೆ ತಮ್ಮ ಮನೆಯ ವಾತಾವರಣದಿಂದ ಹೆಚ್ಚಿನ ಮಾಹಿತಿ ಪಡೆಯಲು ಕಷ್ಟ ಆಗಿರಬಹುದು. ಯಾವುದೇ ವಿಚಾರಕ್ಕೆ ಅವರಿಗಿರುವ ಪ್ರಶ್ನೆಗಳಿಗೆ ಉತ್ತರ, ಮನೆಯಲ್ಲಿಯೇ ದೊರಕುವುದು ಎಂಬುದು ಅವರಿಗೆ ಗೊತ್ತಿಲ್ಲದಿರಬಹುದು.
 +
 +
4. ಮನೆಯಲ್ಲಿ ಅಂತರ್ಜಾಲದ ಸಂಪರ್ಕ ಇರಬಹುದು/ಇಲ್ಲದಿರಬಹುದು.
 +
 +
5. ಕಿಶೋರಾವಸ್ಥೆಯ ಬಗ್ಗೆ ಕೇಳಿರದೇ ಇರಬಹುದು.
 +
 +
6. ನಮಗೆ ಸರಿಯಾಗಿ ಪ್ರತಿಕ್ರಿಯೆ ಬರದೆ ಇರಬಹುದು. ಹೀಗಾಗಿ ಉದಾಹರಣೆಗಳನ್ನು ಪೂರ್ವತಯಾರಿ ಮಾಡಿಕೊಂಡು ಹೋಗಿರುವುದು ಒಳ್ಳೆಯದು.
 +
 +
7. ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.
 +
 +
= ಉದ್ದೇಶಗಳು =
 +
• ನಮ್ಮ ಕಾರ್ಯಕ್ರಮದ ಮೂಲಕ ಕಿಶೋರಿಯರು ತಮ್ಮ ದನಿಯನ್ನು ತಾವೇ ಅರಿಯಬೇಕು. ತಮ್ಮ ಸುತ್ತಲ ಗೆಳತಿಯರೊಂದಿಗೆ ಹಂಚಿಕೊಳ್ಳಬೇಕು.
 +
 +
• ಅದೆಷ್ಟೋ ವಿಷಯಗಳು ತಮಗೆ ಮಾತ್ರವೇ ಇರುವ ಸಮಸ್ಯೆಗಳು ಎಂಬ ಮನೋಸ್ಥಿತಿ. ತಮ್ಮಂತೆಯೇ ಇರುವ ಇತರರೊಂದಿಗೆ ಹಂಚಿಕೊಂಡಾಗ ಎಲ್ಲರಿಗೂ ಅವೇ ವಿಷಯ/ಸಮಸ್ಯೆಗಳು ಅಂತ ಅರ್ಥ ಮಾಡ್ಕೊಳೋದು.
 +
 +
• ಕಿಶೋರಿಯರ ಸವಾಲುಗಳ ಬಗ್ಗೆ ಮಾತನಾಡುವುದು.
 +
 +
= ಪ್ರಕ್ರಿಯೆ =
 +
* ಹಿಂದಿನ ವಾರದ ಚರ್ಚೆಗಳನ್ನು ಮತ್ತೆ ಜ್ಞಾಪಿಸುವುದು. ಹಾಗೂ ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು.
 +
* (೭ ಜನರ) ಗುಂಪಿನಲ್ಲಿ ನಿಮಗಿರುವ ಬೇರೆ ವಿಷಯ/ಸಮಸ್ಯೆಗಳನ್ನು ಚರ್ಚಿಸುವುದು (ಸುರುಳಿ/ವೃತ್ತಗಳನ್ನು ಬಳಸಿ). 
 +
* ಈ ಮಾಡ್ಯೂಲ್‌ ಅನ್ನು ೨ ವಾರಗಳಲ್ಲಿ ಮಾಡಲು ತಯಾರಿ ಮಾಡಲಾಗಿದೆ. ಹಾಗಾಗಿ ನಮಗೆ ೧೬೦ ನಿಮಿಷಗಳು ಸಿಗುತ್ತವೆ.
 +
 +
== ಪ್ರಕ್ರಿಯೆಯನ್ನು ಹೇಗೆ ಮಾಡುವುದು? ==
 +
ಕಿಶೋರಿಯರಿಗೆ ಇಬ್ಬರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು. ಇದು ಮೊದಲ ಗಂಭೀರ ಚಟುವಟಿಕೆ ಆಗಿರುವುದರಿಂದ ಕಿಶೋರಿಯರು ಅವರ ಸ್ನೇಹಿತೆಯ ಜೊತೆಗೆ ಗುಂಪು ಮಾಡಿಕೊಂಡರೆ ಅವರು ಮೈ ಚಳಿ ಬಿಟ್ಟು ಮಾತನಾಡಲು ಸುಲಭವಾಗುತ್ತದೆ.
 +
 +
ಕಿಶೋರಿಯರಿಗೆ ಅವರ ಸಮಸ್ಯೆ/ಕಾಳಜಿಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಲು ಹೇಳುತ್ತೇವೆ. ಅವರ ಸ್ನೇಹಿತೆಯರ ಜೊತೆಯೇ ಮಾತನಾಡಿಕೊಳ್ಳುವುದರಿಂದ ಕಿಶೋರಿಯರು ಯಾವುದೇ ಮುಜುಗರವಿಲ್ಲದೇ ಮಾತನಾಡಿಕೊಳ್ಳಬಹುದು.
 +
 +
ಫೆಸಿಲಿಟೇಟರ್‌ಗಳು ಯಾವುದಾದರೂ ಜೋಡಿಗೆ ಅರ್ಥ ಆಗಿಲ್ಲ ಅಂದರೆ ಏನಾದರೂ ಸರಳವಾದ ಉದಾಹರಣೆಯನ್ನು ಕೊಡಬಹುದು. ಉದಾಹರಣೆಗೆ ಹೋಮ್‌ವರ್ಕ್‌ ತುಂಬಾ ಜಾಸ್ತಿ ಇರುತ್ತೆ.
 +
 +
ಕಿಶೋರಿಯರಿಗೆ ಎ-೪ ಹಾಳೆಗಳನ್ನು ಕೊಟ್ಟು ಅವರು ಚರ್ಚಿಸಿದ ವಿಷಯಗಳನ್ನು ಅದರಲ್ಲಿ ಬರೆಯಲು ಹೇಳುವುದು.
 +
 +
ಎಲ್ಲ ಗುಂಪುಗಳ ಹಾಳೆಗಳನ್ನು ಒಟ್ಟುಗೂಡಿಸಿ, ಕಿಶೋರಿಯರ ಮುಂದೆ ಅವುಗಳನ್ನು ಎಲ್ಲರ ಮುಂದೆ ಹೇಗೆ ಬರೆದಿದ್ದಾರೋ ಹಾಗೆಯೇ ಓದುವುದು.
 +
 +
ಈ ವಾರದ ಚರ್ಚೆಯಲ್ಲಿ ಕಿಶೋರಿಯರು ಗಂಭೀರವಾದ ವಿಷಯಗಳ ಬಗ್ಗೆ ಮಾತನಾಡುವುದರಿಂದ, ಅವರು ನಿರುತ್ಸಾಹಿಗಳಾಗಿರಬಹುದು. ಆದ್ದರಿಂದ ಅವರ ಉತ್ಸಾಹವನ್ನು ಹೆಚ್ಚಿಸಲು ಹಾಗೂ ಮುಂದಿನ ವಾರಗಳಲ್ಲಿನ ಮಾತುಕತೆಗಳಿಗೆ ಅವರನ್ನು ಉತ್ಸುಕರಾಗಿಸಲು ಮೊದಲೇ ಸಂಕಲಿಸಿದ ಡಿಜಿಟಲ್‌ ಕಥೆಯನ್ನು ತೋರಿಸುತ್ತೇವೆ. ಈ ಡಿಜಿಟಲ್‌ ಕಥೆಯು ಬೇರೆ ಬೇರೆ ಚಲನಚಿತ್ರಗಳ ತುಣುಕುಗಳು, ಹಿನ್ನಲೆ ಸಂಗೀತ, ಹಾಗೂ ಕಿಶೋರಿಯರ ಚಿತ್ರಗಳನ್ನು ಬಳಸಿ ಸಂಕಲಿಸಲಾಗಿದೆ. ಹಿಂದಿನ ವಾರದಲ್ಲಿ ತೆಗೆದ ಕಿಶೋರಿಯರ ಚಿತ್ರಗಳನ್ನೇ ಉಪಯೋಗಿಸಲಾಗಿದೆ. ಹಳೆಯ ಚಿತ್ರಗಳನ್ನೇ ಉಪಯೋಗಿಸಿ ಡಿಜಿಟಲ್‌ ಕಥೆಯನ್ನು ಮಾಡುವುದರಿಂದ, ತಂತ್ರಜ್ಙಾನದ ಬೇರೆ ಬೇರೆ ಸಾಧ್ಯತೆಗಳನ್ನು ತಿಳಿದುಕೊಂಡಂತೆಯೂ ಆಗುತ್ತದೆ. ಕೃತಿಸ್ವಾಮ್ಯ ಹಾಗೂ ಗೋಪ್ಯತೆಯ ಕಾರಣಗಳಿಂದ ಡಿಜಿಟಲ್‌ ಕಥೆಯನ್ನು ಪ್ರಕಟಿಸಿಲ್ಲ.
 +
 +
ಇಲ್ಲಿಯವರೆಗೆ ಒಂದು ವಾರದ ಮಾತುಕತೆ ಮುಗಿಯುತ್ತದೆ.  (೮೦ ನಿಮಿಷಗಳು)
 +
 +
ನಂತರದ ವಾರದ ಮಾತುಕತೆಯಲ್ಲಿ, ಕಿಶೋರಿಯರನ್ನು ೪ ಗುಂಪುಗಳನ್ನಾಗಿ ವಿಂಗಡಿಸುತ್ತೇವೆ. ಕಿಶೋರಿಯರು ಅವರು ಕುಳಿತಿರುವ ಜಾಗದಿಂದ ಎದ್ದು ಓಡಾಡುವಂತೆ ಮಾಡಲು ಏನಾದರೂ ತಮಾಷೆಯ ಚಟುವಟಿಕೆಗಳ ಮೂಲಕ ಗುಂಪುಗಳನ್ನು ಮಾಡಿಕೊಳ್ಳಬಹುದು.
 +
 +
<ಸುರುಳಿಯ ಚಿತ್ರ>
 +
 +
ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್‌ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ.
 +
 +
೩ ಫೆಸಿಲಿಟೇಟರ್‌ಗಳು ಈ ಚಟುವಟಿಕೆಯನ್ನು ಒಂದು ಸಾರಿ ಮಾಡಿ ತೋರಿಸುವುದು. ಅವರು ಕಿಶೋರಿಯರಿಗೆ ಕೊಡುವ ಹಣೆಬೊಟ್ಟುಗಳಿಗಿಂತ ಭಿನ್ನವಾಗಿರುವ ಬಣ್ಣದ ಹಣೆಬೊಟ್ಟುಗಳನ್ನು ಉಪಯೋಗಿಸುತ್ತಾರೆ.
 +
 +
ಮೇಲಿನ ಪ್ರದರ್ಶನ ಆದ ನಂತರ ಕಿಶೋರಿಯರನ್ನು ಗುಂಪುಗಳಲ್ಲಿ ಕುಳಿತುಕೊಳ್ಳುವಂತೆ ಹೇಳುವುದು. ಗುಂಪುಗಳು ತರಗತಿ ಅಷ್ಟೇ ಅಲ್ಲದೇ ತರಗತಿಯ ಹೊರಗಡೆ ಕೂಡ ಕುಳಿತುಕೊಳ್ಳಬಹುದು.
 +
 +
ಒಂದೊಂದು ಗುಂಪಿಗೆ ಒಂದು ಚಾರ್ಟ್‌, ಮೂರು ಬಣ್ಣದ ಹಣೆಬೊಟ್ಟು, ಸ್ಕೆಚ್‌ ಪೆನ್ನುಗಳನ್ನು ಕೊಡುತ್ತೇವೆ. ಪ್ರತಿ ಗುಂಪಿನ ಜೊತೆಗೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ.
 +
 +
ಕಿಶೋರಿಯರಿಗೆ ಸ್ಕೆಚ್‌ ಪೆನ್‌ಗಳನ್ನು ಕೊಟ್ಟು ಚಟುವಟಿಕೆ ಮಾಡುವಾಗ ನೋಡಿದ ಸುರುಳಿಗಳನ್ನು ಬರೆದುಕೊಳ್ಳಲು ಹೇಳುತ್ತೇವೆ. (ಬಣ್ಣಗಳ ಆಯ್ಕೆ ಕಿಶೋರಿಯರಿಗೆ ಬಿಟ್ಟಿದ್ದು).
 +
 +
ಕಿಶೋರಿಯರು ಹಿಂದಿನ ವಾರ ಗೆಳತಿಯರ ಜೊತೆ ಮಾತನಾಡಿಕೊಂಡ ವಿಷಯಗಳನ್ನು ಗುಂಪಿನ ಜೊತೆ ಹಂಚಿಕೊಳ್ಳಬಹುದೇ ಎಂದು ಕೇಳುವುದು. ಕಿಶೋರಿಯರು ಅವರ ವಿಷಯವೊಂದೇ ಅಲ್ಲದೇ ಅವರ ಗೆಳತಿಯರ ವಿಷಯಗಳನ್ನೂ ಕೂಡ ಹೆಸರು ಹೇಳದೇ ಹಂಚಿಕೊಳ್ಳಬಹುದು. ಅವರು ಹೇಳಿದ ಅಂಶಗಳನ್ನು, ಹೇಳಿದ ಹಾಗೆಯೇ ಬರೆದುಕೊಳ್ಳುವುದು.  ೧೦ ನಿಮಿಷ
 +
 +
ಇದಾದ ನಂತರ ಪ್ರತಿ ಕಿಶೋರಿಯ ಹತ್ತಿರವು ಪ್ರತಿ ಸ್ಥಳಗಳಲ್ಲಿ ಅವು ಎದುರಿಸುವ ಸಮಸ್ಯೆಗಳಿಗೆ ಅನುಗುಣವಾಗಿ ಹಣೆಬೊಟ್ಟುಗಳನ್ನು ಇಡುತ್ತಾರೆ. ಮೂರು ಬಣ್ಣದ ಹಣೆಬೊಟ್ಟುಗಳನ್ನು ಕಿಶೋರಿಯರಿಗೆ ಕೊಡುತ್ತೇವೆ. ವಿಷಯ ಹಂಚಿಕೊಳ್ಳಬೇಕಾದರೆ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಬಣ್ಣದ ಬೊಟ್ಟುಗಳನ್ನು ಇಡಬೇಕು. ಮನೆಗೆ ನೀಲಿ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿಗಳಿಗೆ ಕೆಂಪು ಹಾಗು ಶಾಲೆಗೆ ಹಸಿರು ಬಣ್ಣದ ಹಣೆಬೊಟ್ಟುಗಳನ್ನು ಉಪಯೋಗಿಸಲಾಗಿದೆ. ೨೦ - ೨೫ ನಿಮಿಷಗಳು
 +
 +
ಎಲ್ಲ ಸಮಸ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳುವುದು. ಇದನ್ನ ಕಿಶೋರಿಯರಿಗೆ ತೋರಿಸುವುದಿಲ್ಲ.
 +
 +
ಪ್ರತಿ ಕಿಶೋರಿಯರ ಹಂಚಿಕೆ ಮುಗಿದ ನಂತರ ತರಗತಿಗೆ ಬರಬೇಕು. ಫೆಸಿಲಿಟೇಟರ್‌ಗಳು ಅವರವರ ಗುಂಪಿನ ಚಾರ್ಟ್‌ಗಳನ್ನು ಅವರೇ ಕರಿ ಹಲಗೆಯ ಮೇಲೆ ಅಂಟಿಸುತ್ತಾರೆ. ಹಾಳೆಯ ಮೇಲೆ ಬರೆದುಕೊಂಡ ಅಂಶಗಳನ್ನು ಬೇರೆ ಫೆಸಿಲಿಟೇಟರ್‌ಗಳ ಚಾರ್ಟ್‌ಗಳ ಕೆಳಗೆ ಅಂಟಿಸಬೇಕು. ಇದರಿಂದ ನಮ್ಮ ಮುಂದಿನ ಚರ್ಚೆಗೆ ಅನುವು ಮಾಡಿದಂತಾಗುತ್ತದೆ. ೫ ನಿಮಿಷ
 +
 +
ಕಿಶೋರಿಯರು ಸಾಲಾಗಿ ಬಂದು ಹಾಳೆಯ ಮೇಲೆ ಬರೆದ ಅಂಶಗಳನ್ನು ಓದುತ್ತಾರೆ.
 +
 +
ಪ್ರತಿ ಹಾಳೆಯಲ್ಲಿರುವ ಸಾಮಾನ್ಯ ಅಂಶಗಳ ಕೆಳಗೆ ಗುರುತು ಹಾಕುವುದರ ಮೂಲಕ ಇಬ್ಬರು ಫೆಸಿಲಿಟೇಟರ್‌ಗಳು ಅವುಗಳನ್ನು ಗುರುತಿಸುತ್ತಾರೆ ಹಾಗೂ ಅವುಗಳನ್ನು ಓದಿ ಹೇಳುತ್ತಾರೆ.
 +
 +
"ಈ ನಾಲ್ಕು ಚಾರ್ಟ್‌ಗಳನ್ನು ನೋಡಿದ್ರೆ ನಿಮಗೆ ಏನು ಅನ್ನಿಸುತ್ತೆ?” (ಸುರುಳಿಯನ್ನು ಕುರಿತು - ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೀರ, ಸುರುಳಿಗಳು ಬೇರೆ ಬೇರೆ ಆಕಾರಗಳಲ್ಲಿ ಇವೆ) ಎಂದು ಕಿಶೋರಿಯರನ್ನು ಕೇಳುವುದು.
 +
 +
ಕೆಲವು ಸಂದರ್ಭಗಳಲ್ಲಿ ಸುರುಳಿಯಲ್ಲಿ ಒಂದು ಬಣ್ಣದ ಹಣೆಬೊಟ್ಟುಗಳು ಜಾಸ್ತಿ ಇರಬಹುದು
 +
 +
"ನಿಮ್ಮ ಗೆಳತಿಯೊಂದಿಗೆ ನೀವು ಮಾತಾಡಿದ, ಹಣೆಬೊಟ್ಟು ಇಟ್ಟ, ಆಮೇಲೆ ಮಾತಾಡಿದ ಆಧಾರದ ಮೇಲೆ ಇಲ್ಲಿರುವ ಸುರುಳಿಗಳನ್ನು ನೋಡಿರುವ ಆಧಾರದ ಮೇಲೆ ನಿಮಗೆ ಏನು ಅನಿಸುತ್ತಿದೆ ? “ ಎಂದು ಕೇಳಬಹುದು.
 +
 +
ಅವರು ಏನೂ ಹೇಳದಿದ್ದರೆ ನಾವು ಮುಂದುವರಿದು -”ಎಲ್ಲರಿಗೂ ಒಂದೇ ಥರದ ಸಮಸ್ಯೆಗಳು ಇರುತ್ತೆ ಅಂತ ಅನಿಸುತ್ತಿದೆ, ಅದರ ಪ್ರಮಾಣ/ಡಿಗ್ರಿ ಬೇರೆ ಬೇರೆ ಇರಬಹುದು. ಅವುಗಳ ರೀತಿ ಬೇರೆ ಬೇರೆ ಇರಬಹುದು. ಎಲ್ಲರಿಗೂ ಒಂದೇ ಥರದ ಸಮಸ್ಯೆ ಇರುತ್ತೆ ಅಂತ ನಮಗೆ ಅನಿಸುತ್ತಿದೆ, ನಿಮಗೂ ಅನಿಸುತ್ತಿದೆಯೇ? “ ಎಂದು ಕಿಶೋರಿಯರನ್ನು ಕೇಳುವುದು. '''೨೦ ನಿಮಿಷ'''
 +
 +
"ಸಮಸ್ಯೆ ನಮ್ಮೊಬ್ಬರಿಗೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸಮಸ್ಯೆಗಳು ಇರುತ್ತವೆ. “ ಎಂದು ಕಿಶೋರಿಯರು ಹೇಳಬಹುದು.
 +
 +
"ಇವುಗಳ ಬಗ್ಗೆ ನಾವೆಲ್ಲ ಏನು ಮಾಡಬಹುದು ಎಂದು ಮುಂದಿನ ವಾರದಿಂದ ಮಾತಾಡಿಕೊಂಡು ಹೋಗೋಣ" ಎಂದು ಮಾತುಕತೆಯನ್ನು ಮುಗಿಸುವುದು. '''೧೦ ನಿಮಿಷ ಹೆಚ್ಚಿದೆ'''
 +
 +
= ಬೇಕಾಗಿರುವ ಸಂಪನ್ಮೂಲಗಳು =
 +
* ಚಾರ್ಟ್‌ ಪೇಪರ್‌ - ೫
 +
* ಸ್ಕೆಚ್‌ ಪೆನ್‌ - ೨ ಸೆಟ್‌
 +
* ಸುರುಳಿಯಲ್ಲಿ ಇಡಲು ಹಣೆಬೊಟ್ಟುಗಳು/ ಸ್ಕೆಚ್‌ ಪೆನ್‌ ಅಲ್ಲಿ ಇಡಬಹುದು. ೩ ಬೇರೆ ಬೇರೆ ತರಹದ ಬಣ್ಣಗಳ ಬೊಟ್ಟು/ ಸ್ಕೆಚ್‌ಗಳನ್ನು ಬಳಸಬಹುದು.
 +
* ನಮ್ಮ ಬಳಿ ಇರುವ ಆಡಿಯೋ ರಿಕಾರ್ಡರ್‌, ಟ್ಯಾಬು, ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌. (ತೋರಿಸಲು ಮಾತ್ರ)
 +
 +
= ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ =
 +
ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೪
 +
 +
= ಒಟ್ಟು ಸಮಯ =
 +
೧೬೦ ನುಮಿಷಗಳು (೨ ತರಗತಿಗಳು ಸೇರಿ)
 +
 +
= ಇನ್‌ಪುಟ್‌ಗಳು =
 +
• ಪೆನ್ಸಿಲ್‌ನಲ್ಲಿ ಸುರುಳಿ ಬರೆದ ಚಾರ್ಟ್‌ಗಳು
 +
 +
• ಡಿಜಿಟಲ್‌ ಕಥೆ
 +
 +
= ಔಟ್‌ಪುಟ್‌ಗಳು =
 +
• ಸುರುಳಿ ಹಾಗು ಹಣೆಬೊಟ್ಟು ಇಟ್ಟಿರುವ ಚಾರ್ಟ್‌ಗಳು
 +
 +
• ಸಮಸ್ಯೆಗಳ ಅಂಶಗಳನ್ನು ಬರೆದುಕೊಂಡ ಹಾಳೆಗಳು

Revision as of 11:59, 3 October 2019

ಸಾರಾಂಶ

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಒಟ್ಟು ಸಮಯ ೧೬೦ ನಿಮಿಷಗಳು.

ಫೆಸಿಲಿಟೇಟರ್‌ ಹೆಸರು: ಕಾರ್ತಿಕ್‌

ಕೊ-ಫೆಸಿಲಿಟೇಟರ್‌ಗಳು - ಅನುಷಾ,ಅಪರ್ಣ, ಶ್ರೇಯಸ್‌

ಊಹೆಗಳು

1. ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು.

2. ಇಡೀ ದಿನ ಅವರಿಗೆ ನಿಶ್ಯಕ್ತಿ ಇರಬಹುದು (ತಿಂಡಿ ತಿನ್ನದೆ ಬಂದಿರಬಹುದು, ಅನಾರೋಗ್ಯ, ಮುಟ್ಟಾಗಿರಬಹುದು)

3. ಕಿಶೋರಿಯರಿಗೆ ತಮ್ಮ ಮನೆಯ ವಾತಾವರಣದಿಂದ ಹೆಚ್ಚಿನ ಮಾಹಿತಿ ಪಡೆಯಲು ಕಷ್ಟ ಆಗಿರಬಹುದು. ಯಾವುದೇ ವಿಚಾರಕ್ಕೆ ಅವರಿಗಿರುವ ಪ್ರಶ್ನೆಗಳಿಗೆ ಉತ್ತರ, ಮನೆಯಲ್ಲಿಯೇ ದೊರಕುವುದು ಎಂಬುದು ಅವರಿಗೆ ಗೊತ್ತಿಲ್ಲದಿರಬಹುದು.

4. ಮನೆಯಲ್ಲಿ ಅಂತರ್ಜಾಲದ ಸಂಪರ್ಕ ಇರಬಹುದು/ಇಲ್ಲದಿರಬಹುದು.

5. ಕಿಶೋರಾವಸ್ಥೆಯ ಬಗ್ಗೆ ಕೇಳಿರದೇ ಇರಬಹುದು.

6. ನಮಗೆ ಸರಿಯಾಗಿ ಪ್ರತಿಕ್ರಿಯೆ ಬರದೆ ಇರಬಹುದು. ಹೀಗಾಗಿ ಉದಾಹರಣೆಗಳನ್ನು ಪೂರ್ವತಯಾರಿ ಮಾಡಿಕೊಂಡು ಹೋಗಿರುವುದು ಒಳ್ಳೆಯದು.

7. ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.

ಉದ್ದೇಶಗಳು

• ನಮ್ಮ ಕಾರ್ಯಕ್ರಮದ ಮೂಲಕ ಕಿಶೋರಿಯರು ತಮ್ಮ ದನಿಯನ್ನು ತಾವೇ ಅರಿಯಬೇಕು. ತಮ್ಮ ಸುತ್ತಲ ಗೆಳತಿಯರೊಂದಿಗೆ ಹಂಚಿಕೊಳ್ಳಬೇಕು.

• ಅದೆಷ್ಟೋ ವಿಷಯಗಳು ತಮಗೆ ಮಾತ್ರವೇ ಇರುವ ಸಮಸ್ಯೆಗಳು ಎಂಬ ಮನೋಸ್ಥಿತಿ. ತಮ್ಮಂತೆಯೇ ಇರುವ ಇತರರೊಂದಿಗೆ ಹಂಚಿಕೊಂಡಾಗ ಎಲ್ಲರಿಗೂ ಅವೇ ವಿಷಯ/ಸಮಸ್ಯೆಗಳು ಅಂತ ಅರ್ಥ ಮಾಡ್ಕೊಳೋದು.

• ಕಿಶೋರಿಯರ ಸವಾಲುಗಳ ಬಗ್ಗೆ ಮಾತನಾಡುವುದು.

ಪ್ರಕ್ರಿಯೆ

  • ಹಿಂದಿನ ವಾರದ ಚರ್ಚೆಗಳನ್ನು ಮತ್ತೆ ಜ್ಞಾಪಿಸುವುದು. ಹಾಗೂ ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು.
  • (೭ ಜನರ) ಗುಂಪಿನಲ್ಲಿ ನಿಮಗಿರುವ ಬೇರೆ ವಿಷಯ/ಸಮಸ್ಯೆಗಳನ್ನು ಚರ್ಚಿಸುವುದು (ಸುರುಳಿ/ವೃತ್ತಗಳನ್ನು ಬಳಸಿ).
  • ಈ ಮಾಡ್ಯೂಲ್‌ ಅನ್ನು ೨ ವಾರಗಳಲ್ಲಿ ಮಾಡಲು ತಯಾರಿ ಮಾಡಲಾಗಿದೆ. ಹಾಗಾಗಿ ನಮಗೆ ೧೬೦ ನಿಮಿಷಗಳು ಸಿಗುತ್ತವೆ.

ಪ್ರಕ್ರಿಯೆಯನ್ನು ಹೇಗೆ ಮಾಡುವುದು?

ಕಿಶೋರಿಯರಿಗೆ ಇಬ್ಬರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು. ಇದು ಮೊದಲ ಗಂಭೀರ ಚಟುವಟಿಕೆ ಆಗಿರುವುದರಿಂದ ಕಿಶೋರಿಯರು ಅವರ ಸ್ನೇಹಿತೆಯ ಜೊತೆಗೆ ಗುಂಪು ಮಾಡಿಕೊಂಡರೆ ಅವರು ಮೈ ಚಳಿ ಬಿಟ್ಟು ಮಾತನಾಡಲು ಸುಲಭವಾಗುತ್ತದೆ.

ಕಿಶೋರಿಯರಿಗೆ ಅವರ ಸಮಸ್ಯೆ/ಕಾಳಜಿಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಲು ಹೇಳುತ್ತೇವೆ. ಅವರ ಸ್ನೇಹಿತೆಯರ ಜೊತೆಯೇ ಮಾತನಾಡಿಕೊಳ್ಳುವುದರಿಂದ ಕಿಶೋರಿಯರು ಯಾವುದೇ ಮುಜುಗರವಿಲ್ಲದೇ ಮಾತನಾಡಿಕೊಳ್ಳಬಹುದು.

ಫೆಸಿಲಿಟೇಟರ್‌ಗಳು ಯಾವುದಾದರೂ ಜೋಡಿಗೆ ಅರ್ಥ ಆಗಿಲ್ಲ ಅಂದರೆ ಏನಾದರೂ ಸರಳವಾದ ಉದಾಹರಣೆಯನ್ನು ಕೊಡಬಹುದು. ಉದಾಹರಣೆಗೆ ಹೋಮ್‌ವರ್ಕ್‌ ತುಂಬಾ ಜಾಸ್ತಿ ಇರುತ್ತೆ.

ಕಿಶೋರಿಯರಿಗೆ ಎ-೪ ಹಾಳೆಗಳನ್ನು ಕೊಟ್ಟು ಅವರು ಚರ್ಚಿಸಿದ ವಿಷಯಗಳನ್ನು ಅದರಲ್ಲಿ ಬರೆಯಲು ಹೇಳುವುದು.

ಎಲ್ಲ ಗುಂಪುಗಳ ಹಾಳೆಗಳನ್ನು ಒಟ್ಟುಗೂಡಿಸಿ, ಕಿಶೋರಿಯರ ಮುಂದೆ ಅವುಗಳನ್ನು ಎಲ್ಲರ ಮುಂದೆ ಹೇಗೆ ಬರೆದಿದ್ದಾರೋ ಹಾಗೆಯೇ ಓದುವುದು.

ಈ ವಾರದ ಚರ್ಚೆಯಲ್ಲಿ ಕಿಶೋರಿಯರು ಗಂಭೀರವಾದ ವಿಷಯಗಳ ಬಗ್ಗೆ ಮಾತನಾಡುವುದರಿಂದ, ಅವರು ನಿರುತ್ಸಾಹಿಗಳಾಗಿರಬಹುದು. ಆದ್ದರಿಂದ ಅವರ ಉತ್ಸಾಹವನ್ನು ಹೆಚ್ಚಿಸಲು ಹಾಗೂ ಮುಂದಿನ ವಾರಗಳಲ್ಲಿನ ಮಾತುಕತೆಗಳಿಗೆ ಅವರನ್ನು ಉತ್ಸುಕರಾಗಿಸಲು ಮೊದಲೇ ಸಂಕಲಿಸಿದ ಡಿಜಿಟಲ್‌ ಕಥೆಯನ್ನು ತೋರಿಸುತ್ತೇವೆ. ಈ ಡಿಜಿಟಲ್‌ ಕಥೆಯು ಬೇರೆ ಬೇರೆ ಚಲನಚಿತ್ರಗಳ ತುಣುಕುಗಳು, ಹಿನ್ನಲೆ ಸಂಗೀತ, ಹಾಗೂ ಕಿಶೋರಿಯರ ಚಿತ್ರಗಳನ್ನು ಬಳಸಿ ಸಂಕಲಿಸಲಾಗಿದೆ. ಹಿಂದಿನ ವಾರದಲ್ಲಿ ತೆಗೆದ ಕಿಶೋರಿಯರ ಚಿತ್ರಗಳನ್ನೇ ಉಪಯೋಗಿಸಲಾಗಿದೆ. ಹಳೆಯ ಚಿತ್ರಗಳನ್ನೇ ಉಪಯೋಗಿಸಿ ಡಿಜಿಟಲ್‌ ಕಥೆಯನ್ನು ಮಾಡುವುದರಿಂದ, ತಂತ್ರಜ್ಙಾನದ ಬೇರೆ ಬೇರೆ ಸಾಧ್ಯತೆಗಳನ್ನು ತಿಳಿದುಕೊಂಡಂತೆಯೂ ಆಗುತ್ತದೆ. ಕೃತಿಸ್ವಾಮ್ಯ ಹಾಗೂ ಗೋಪ್ಯತೆಯ ಕಾರಣಗಳಿಂದ ಡಿಜಿಟಲ್‌ ಕಥೆಯನ್ನು ಪ್ರಕಟಿಸಿಲ್ಲ.

ಇಲ್ಲಿಯವರೆಗೆ ಒಂದು ವಾರದ ಮಾತುಕತೆ ಮುಗಿಯುತ್ತದೆ. (೮೦ ನಿಮಿಷಗಳು)

ನಂತರದ ವಾರದ ಮಾತುಕತೆಯಲ್ಲಿ, ಕಿಶೋರಿಯರನ್ನು ೪ ಗುಂಪುಗಳನ್ನಾಗಿ ವಿಂಗಡಿಸುತ್ತೇವೆ. ಕಿಶೋರಿಯರು ಅವರು ಕುಳಿತಿರುವ ಜಾಗದಿಂದ ಎದ್ದು ಓಡಾಡುವಂತೆ ಮಾಡಲು ಏನಾದರೂ ತಮಾಷೆಯ ಚಟುವಟಿಕೆಗಳ ಮೂಲಕ ಗುಂಪುಗಳನ್ನು ಮಾಡಿಕೊಳ್ಳಬಹುದು.

<ಸುರುಳಿಯ ಚಿತ್ರ>

ಇದೇ ಸಮಯದಲ್ಲಿ ಮೇಲೆ ತೋರಿಸಿದ ಸುರುಳಿಯ ಪಟವನ್ನು (ಸ್ಟಿಕರ್‌ ಅನ್ನು ಹೊರತುಪಡಿಸಿ) ಕಪ್ಪು ಹಲಗೆಯ ಮೇಲೆ ಅಂಟಿಸುವುದು. ಪಟದಲ್ಲಿ, ಮನೆ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿ, ಶಾಲೆಯನ್ನು ಪ್ರತಿನಿಧಿಸುವಂತೆ ೩ ಸುರುಳಿಗಳನ್ನು ಬರೆದಿರುತ್ತೇವೆ. ಈ ಜಾಗಗಳಲ್ಲಿ ಕಿಶೋರಿಯರು ಎದುರಿಸುವ ಬೇರೆ ಬೇರೆ ಸಮಸ್ಯೆಗಳನ್ನು ಬೇರೆ ಬೇರೆ ಬಣ್ಣಗಳ ಹಣೆಬೊಟ್ಟುಗಳನ್ನು ಉಪಯೋಗಿಸಿ ಗುರುತಿಸಲು ಹೇಳುತ್ತೇವೆ.

೩ ಫೆಸಿಲಿಟೇಟರ್‌ಗಳು ಈ ಚಟುವಟಿಕೆಯನ್ನು ಒಂದು ಸಾರಿ ಮಾಡಿ ತೋರಿಸುವುದು. ಅವರು ಕಿಶೋರಿಯರಿಗೆ ಕೊಡುವ ಹಣೆಬೊಟ್ಟುಗಳಿಗಿಂತ ಭಿನ್ನವಾಗಿರುವ ಬಣ್ಣದ ಹಣೆಬೊಟ್ಟುಗಳನ್ನು ಉಪಯೋಗಿಸುತ್ತಾರೆ.

ಮೇಲಿನ ಪ್ರದರ್ಶನ ಆದ ನಂತರ ಕಿಶೋರಿಯರನ್ನು ಗುಂಪುಗಳಲ್ಲಿ ಕುಳಿತುಕೊಳ್ಳುವಂತೆ ಹೇಳುವುದು. ಗುಂಪುಗಳು ತರಗತಿ ಅಷ್ಟೇ ಅಲ್ಲದೇ ತರಗತಿಯ ಹೊರಗಡೆ ಕೂಡ ಕುಳಿತುಕೊಳ್ಳಬಹುದು.

ಒಂದೊಂದು ಗುಂಪಿಗೆ ಒಂದು ಚಾರ್ಟ್‌, ಮೂರು ಬಣ್ಣದ ಹಣೆಬೊಟ್ಟು, ಸ್ಕೆಚ್‌ ಪೆನ್ನುಗಳನ್ನು ಕೊಡುತ್ತೇವೆ. ಪ್ರತಿ ಗುಂಪಿನ ಜೊತೆಗೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ.

ಕಿಶೋರಿಯರಿಗೆ ಸ್ಕೆಚ್‌ ಪೆನ್‌ಗಳನ್ನು ಕೊಟ್ಟು ಚಟುವಟಿಕೆ ಮಾಡುವಾಗ ನೋಡಿದ ಸುರುಳಿಗಳನ್ನು ಬರೆದುಕೊಳ್ಳಲು ಹೇಳುತ್ತೇವೆ. (ಬಣ್ಣಗಳ ಆಯ್ಕೆ ಕಿಶೋರಿಯರಿಗೆ ಬಿಟ್ಟಿದ್ದು).

ಕಿಶೋರಿಯರು ಹಿಂದಿನ ವಾರ ಗೆಳತಿಯರ ಜೊತೆ ಮಾತನಾಡಿಕೊಂಡ ವಿಷಯಗಳನ್ನು ಗುಂಪಿನ ಜೊತೆ ಹಂಚಿಕೊಳ್ಳಬಹುದೇ ಎಂದು ಕೇಳುವುದು. ಕಿಶೋರಿಯರು ಅವರ ವಿಷಯವೊಂದೇ ಅಲ್ಲದೇ ಅವರ ಗೆಳತಿಯರ ವಿಷಯಗಳನ್ನೂ ಕೂಡ ಹೆಸರು ಹೇಳದೇ ಹಂಚಿಕೊಳ್ಳಬಹುದು. ಅವರು ಹೇಳಿದ ಅಂಶಗಳನ್ನು, ಹೇಳಿದ ಹಾಗೆಯೇ ಬರೆದುಕೊಳ್ಳುವುದು. ೧೦ ನಿಮಿಷ

ಇದಾದ ನಂತರ ಪ್ರತಿ ಕಿಶೋರಿಯ ಹತ್ತಿರವು ಪ್ರತಿ ಸ್ಥಳಗಳಲ್ಲಿ ಅವು ಎದುರಿಸುವ ಸಮಸ್ಯೆಗಳಿಗೆ ಅನುಗುಣವಾಗಿ ಹಣೆಬೊಟ್ಟುಗಳನ್ನು ಇಡುತ್ತಾರೆ. ಮೂರು ಬಣ್ಣದ ಹಣೆಬೊಟ್ಟುಗಳನ್ನು ಕಿಶೋರಿಯರಿಗೆ ಕೊಡುತ್ತೇವೆ. ವಿಷಯ ಹಂಚಿಕೊಳ್ಳಬೇಕಾದರೆ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಬಣ್ಣದ ಬೊಟ್ಟುಗಳನ್ನು ಇಡಬೇಕು. ಮನೆಗೆ ನೀಲಿ, ಮನೆಯಿಂದ ಶಾಲೆಗೆ ಬರುವ ದಾರಿ/ ಬಸ್ಸು/ ಆಟೋ ಇತ್ಯಾದಿಗಳಿಗೆ ಕೆಂಪು ಹಾಗು ಶಾಲೆಗೆ ಹಸಿರು ಬಣ್ಣದ ಹಣೆಬೊಟ್ಟುಗಳನ್ನು ಉಪಯೋಗಿಸಲಾಗಿದೆ. ೨೦ - ೨೫ ನಿಮಿಷಗಳು

ಎಲ್ಲ ಸಮಸ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳುವುದು. ಇದನ್ನ ಕಿಶೋರಿಯರಿಗೆ ತೋರಿಸುವುದಿಲ್ಲ.

ಪ್ರತಿ ಕಿಶೋರಿಯರ ಹಂಚಿಕೆ ಮುಗಿದ ನಂತರ ತರಗತಿಗೆ ಬರಬೇಕು. ಫೆಸಿಲಿಟೇಟರ್‌ಗಳು ಅವರವರ ಗುಂಪಿನ ಚಾರ್ಟ್‌ಗಳನ್ನು ಅವರೇ ಕರಿ ಹಲಗೆಯ ಮೇಲೆ ಅಂಟಿಸುತ್ತಾರೆ. ಹಾಳೆಯ ಮೇಲೆ ಬರೆದುಕೊಂಡ ಅಂಶಗಳನ್ನು ಬೇರೆ ಫೆಸಿಲಿಟೇಟರ್‌ಗಳ ಚಾರ್ಟ್‌ಗಳ ಕೆಳಗೆ ಅಂಟಿಸಬೇಕು. ಇದರಿಂದ ನಮ್ಮ ಮುಂದಿನ ಚರ್ಚೆಗೆ ಅನುವು ಮಾಡಿದಂತಾಗುತ್ತದೆ. ೫ ನಿಮಿಷ

ಕಿಶೋರಿಯರು ಸಾಲಾಗಿ ಬಂದು ಹಾಳೆಯ ಮೇಲೆ ಬರೆದ ಅಂಶಗಳನ್ನು ಓದುತ್ತಾರೆ.

ಪ್ರತಿ ಹಾಳೆಯಲ್ಲಿರುವ ಸಾಮಾನ್ಯ ಅಂಶಗಳ ಕೆಳಗೆ ಗುರುತು ಹಾಕುವುದರ ಮೂಲಕ ಇಬ್ಬರು ಫೆಸಿಲಿಟೇಟರ್‌ಗಳು ಅವುಗಳನ್ನು ಗುರುತಿಸುತ್ತಾರೆ ಹಾಗೂ ಅವುಗಳನ್ನು ಓದಿ ಹೇಳುತ್ತಾರೆ.

"ಈ ನಾಲ್ಕು ಚಾರ್ಟ್‌ಗಳನ್ನು ನೋಡಿದ್ರೆ ನಿಮಗೆ ಏನು ಅನ್ನಿಸುತ್ತೆ?” (ಸುರುಳಿಯನ್ನು ಕುರಿತು - ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೀರ, ಸುರುಳಿಗಳು ಬೇರೆ ಬೇರೆ ಆಕಾರಗಳಲ್ಲಿ ಇವೆ) ಎಂದು ಕಿಶೋರಿಯರನ್ನು ಕೇಳುವುದು.

ಕೆಲವು ಸಂದರ್ಭಗಳಲ್ಲಿ ಸುರುಳಿಯಲ್ಲಿ ಒಂದು ಬಣ್ಣದ ಹಣೆಬೊಟ್ಟುಗಳು ಜಾಸ್ತಿ ಇರಬಹುದು

"ನಿಮ್ಮ ಗೆಳತಿಯೊಂದಿಗೆ ನೀವು ಮಾತಾಡಿದ, ಹಣೆಬೊಟ್ಟು ಇಟ್ಟ, ಆಮೇಲೆ ಮಾತಾಡಿದ ಆಧಾರದ ಮೇಲೆ ಇಲ್ಲಿರುವ ಸುರುಳಿಗಳನ್ನು ನೋಡಿರುವ ಆಧಾರದ ಮೇಲೆ ನಿಮಗೆ ಏನು ಅನಿಸುತ್ತಿದೆ ? “ ಎಂದು ಕೇಳಬಹುದು.

ಅವರು ಏನೂ ಹೇಳದಿದ್ದರೆ ನಾವು ಮುಂದುವರಿದು -”ಎಲ್ಲರಿಗೂ ಒಂದೇ ಥರದ ಸಮಸ್ಯೆಗಳು ಇರುತ್ತೆ ಅಂತ ಅನಿಸುತ್ತಿದೆ, ಅದರ ಪ್ರಮಾಣ/ಡಿಗ್ರಿ ಬೇರೆ ಬೇರೆ ಇರಬಹುದು. ಅವುಗಳ ರೀತಿ ಬೇರೆ ಬೇರೆ ಇರಬಹುದು. ಎಲ್ಲರಿಗೂ ಒಂದೇ ಥರದ ಸಮಸ್ಯೆ ಇರುತ್ತೆ ಅಂತ ನಮಗೆ ಅನಿಸುತ್ತಿದೆ, ನಿಮಗೂ ಅನಿಸುತ್ತಿದೆಯೇ? “ ಎಂದು ಕಿಶೋರಿಯರನ್ನು ಕೇಳುವುದು. ೨೦ ನಿಮಿಷ

"ಸಮಸ್ಯೆ ನಮ್ಮೊಬ್ಬರಿಗೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸಮಸ್ಯೆಗಳು ಇರುತ್ತವೆ. “ ಎಂದು ಕಿಶೋರಿಯರು ಹೇಳಬಹುದು.

"ಇವುಗಳ ಬಗ್ಗೆ ನಾವೆಲ್ಲ ಏನು ಮಾಡಬಹುದು ಎಂದು ಮುಂದಿನ ವಾರದಿಂದ ಮಾತಾಡಿಕೊಂಡು ಹೋಗೋಣ" ಎಂದು ಮಾತುಕತೆಯನ್ನು ಮುಗಿಸುವುದು. ೧೦ ನಿಮಿಷ ಹೆಚ್ಚಿದೆ

ಬೇಕಾಗಿರುವ ಸಂಪನ್ಮೂಲಗಳು

  • ಚಾರ್ಟ್‌ ಪೇಪರ್‌ - ೫
  • ಸ್ಕೆಚ್‌ ಪೆನ್‌ - ೨ ಸೆಟ್‌
  • ಸುರುಳಿಯಲ್ಲಿ ಇಡಲು ಹಣೆಬೊಟ್ಟುಗಳು/ ಸ್ಕೆಚ್‌ ಪೆನ್‌ ಅಲ್ಲಿ ಇಡಬಹುದು. ೩ ಬೇರೆ ಬೇರೆ ತರಹದ ಬಣ್ಣಗಳ ಬೊಟ್ಟು/ ಸ್ಕೆಚ್‌ಗಳನ್ನು ಬಳಸಬಹುದು.
  • ನಮ್ಮ ಬಳಿ ಇರುವ ಆಡಿಯೋ ರಿಕಾರ್ಡರ್‌, ಟ್ಯಾಬು, ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌. (ತೋರಿಸಲು ಮಾತ್ರ)

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪

ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೪

ಒಟ್ಟು ಸಮಯ

೧೬೦ ನುಮಿಷಗಳು (೨ ತರಗತಿಗಳು ಸೇರಿ)

ಇನ್‌ಪುಟ್‌ಗಳು

• ಪೆನ್ಸಿಲ್‌ನಲ್ಲಿ ಸುರುಳಿ ಬರೆದ ಚಾರ್ಟ್‌ಗಳು

• ಡಿಜಿಟಲ್‌ ಕಥೆ

ಔಟ್‌ಪುಟ್‌ಗಳು