ಬದಲಾವಣೆಗಳು

Jump to navigation Jump to search
KPSB Module 4
೧ ನೇ ಸಾಲು: ೧ ನೇ ಸಾಲು: −
ನನ್ನ ಸವಾಲು, ನಮ್ಮ ಸವಾಲೇ- ಭಾಗ ೧
+
== ಸಾರಾಂಶ ==
 +
ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು.  ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಕಿಶೋರಿಯರು ಅವರ ಗೆಳತಿಯರ ಜೊತೆಗೇ ಮಾತನಾಡಿ ಇವುಗಳನ್ನು ಪಟ್ಟಿ ಮಾಡುವುದರಿಂದ ಅವರಿಗೆ ಮೈ ಚಳಿ  ಬಿಟ್ಟು ಮಾತನಾಡಲು ಸಾಧ್ಯವಾಗುತ್ತದೆ.
 +
 
 +
ಫೆಸಿಲಿಟೇಟರ್‌ ಹೆಸರು: ಕಾರ್ತಿಕ್‌
 +
 
 +
ಕೊ-ಫೆಸಿಲಿಟೇಟರ್‌ಗಳು - ಅನುಷಾ, ಅಪರ್ಣ, ಶ್ರೇಯಸ್‌
 +
 
 +
== ಊಹೆಗಳು ==
 +
# ಎಲ್ಲರಿಗೂ ಬರೆಯಲು ಬರದಿರಬಹುದು.
 +
# ಕಿಶೊರಿಯರಲ್ಲಿ ತುಂಬಾ ಜನ (ಸುಮಾರು೨೦) ಗೈರುಹಾಜರಿಯಾಗಿರುತ್ತಾರೆ.
 +
# ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ.
 +
# ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ.
 +
# ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ .
 +
# ಒಬ್ಬ ಕಿಶೋರಿಯನ್ನು ಕಂಡರೆ ಯಾರಿಗೂ ಆಗಲ್ಲ - ಜಗಳಗಂಟಿ (ಹೆಚ್ಚಿನ ಪರಿಚಯದೊಂದಿಗೆ ಕಾರಣಗಳನ್ನು ತಿಳಿಯಬಹುದೇನೊ).
 +
# ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ .
 +
# ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ.
 +
# ಸಾಮಾನ್ಯವಾಗಿ ೭೦ ನಿಮಿಷಗಳ ತರಗತಿ ಇದ್ದರೂ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ.
 +
# ನಮಗೆ ಸರಿಯಾಗಿ ಪ್ರತಿಕ್ರಿಯೆ ಬರದೆ ಇರಬಹುದು. ಹೀಗಾಗಿ ಉದಾಹರಣೆಗಳನ್ನು ಪೂರ್ವತಯಾರಿ ಮಾಡಿಕೊಂಡು ಹೋಗಿರುವುದು ಒಳ್ಳೆಯದು.
 +
# ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.
 +
 
 +
== ಉದ್ದೇಶಗಳು ==
 +
• ನಮ್ಮ ಕಾರ್ಯಕ್ರಮದ ಮೂಲಕ ಕಿಶೋರಿಯರು ತಮ್ಮ ದನಿಯನ್ನು ತಾವೇ ಅರಿಯಬೇಕು. ಅದನ್ನು ತಮ್ಮ ಗೆಳತಿಯ ಜೊತೆ ಹಂಚಿಕೊಳ್ಳಬೇಕು.
 +
 
 +
• ಕಿಶೋರಿಯರ ಸವಾಲುಗಳ ಬಗ್ಗೆ ಮಾತನಾಡುವುದು.
 +
 
 +
== ಪ್ರಕ್ರಿಯೆ ==
 +
ಹಿಂದಿನ ವಾರದ ಚರ್ಚೆಗಳನ್ನು ಮತ್ತೆ ಜ್ಞಾಪಿಸುವುದು. ಹಾಗೂ ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು. ಕಟ್ಟುಪಾಡುಗಳನ್ನು ನಾವೇ ನೆನಪಿಸುವುದು. '''(೧೦ ನಿಮಿಷ)'''
 +
 
 +
ಕಿಶೋರಿಯರಿಗೆ ಇಬ್ಬರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು. ಕಿಶೋರಿಯರು ಅವರ ಸ್ನೇಹಿತೆಯ ಜೊತೆಗೆ ಗುಂಪು ಮಾಡಿಕೊಂಡರೆ ಅವರು ಮೈ ಚಳಿ ಬಿಟ್ಟು ಮಾತನಾಡಲು ಸುಲಭವಾಗುತ್ತದೆ. '''(೫ ನಿಮಿಷ)'''
 +
 
 +
ಕಿಶೋರಿಯರಿಗೆ ಅವರ ಸಮಸ್ಯೆ/ಕಾಳಜಿಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಲು ಹೇಳುತ್ತೇವೆ. ಅವರ ಸ್ನೇಹಿತೆಯರ ಜೊತೆಯೇ ಮಾತನಾಡಿಕೊಳ್ಳುವುದರಿಂದ ಕಿಶೋರಿಯರು ಯಾವುದೇ ಮುಜುಗರವಿಲ್ಲದೇ ಮಾತನಾಡಿಕೊಳ್ಳಬಹುದು.
 +
 
 +
ಫೆಸಿಲಿಟೇಟರ್‌ಗಳು ಯಾವುದಾದರೂ ಜೋಡಿಗೆ ಅರ್ಥ ಆಗಿಲ್ಲ ಅಂದರೆ ಏನಾದರೂ ಸರಳವಾದ ಉದಾಹರಣೆಯನ್ನು ಕೊಡಬಹುದು. ಉದಾಹರಣೆಗೆ ಹೋಮ್‌ವರ್ಕ್‌ ತುಂಬಾ ಜಾಸ್ತಿ ಇರುತ್ತೆ.
 +
 
 +
ಕಿಶೋರಿಯರಿಗೆ ಎ-೪ ಹಾಳೆಗಳನ್ನು ಕೊಟ್ಟು ಅವರು ಚರ್ಚಿಸಿದ ವಿಷಯಗಳನ್ನು ಅದರಲ್ಲಿ ಬರೆಯಲು ಹೇಳುವುದು.
 +
 
 +
ಎಲ್ಲರೂ ಬರೆದಾದ ನಂತರ ಮುಂದಿನ ವಾರ ಮಾತುಕತೆಯನ್ನು ಮುಂದುವರೆಸೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. '''(೩೫ ನಿಮಿಷಗಳು)'''
 +
 
 +
== ಬೇಕಾಗಿರುವ ಸಂಪನ್ಮೂಲಗಳು ==
 +
• ಎ-೪ ಹಾಳೆಗಳು
 +
 
 +
• ಸ್ಕೆಚ್‌ ಪೆನ್‌ - ೪ ಸೆಟ್‌ಗಳು
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ ==
 +
ಮುಖ್ಯವಾಗಿ ಒಬ್ಬರು ಹಾಗೂ ಸಹಾಯಕ್ಕಾಗಿ ೩ ಫೆಸಿಲಿಟೇಟರ್‌ಗಳು
 +
 
 +
== ಒಟ್ಟು ಸಮಯ ==
 +
೫೦ ನುಮಿಷಗಳು
 +
 
 +
== ಇನ್‌ಪುಟ್‌ಗಳು ==
 +
 
 +
== ಔಟ್‌ಪುಟ್‌ಗಳು ==
 +
• ಕಿಶೋರಿಯರು ಪಟ್ಟಿ ಮಾಡಿದ ಸಮಸ್ಯೆಗಳು
೪೦೭

edits

ಸಂಚರಣೆ ಪಟ್ಟಿ