ಟೀಚಿಂಗ್ ಅದರ್ ಸಬ್ಜೆಕ್ಟ್ಸ್ ಥ್ರೂ ಇಂಗ್ಲಿಷ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೨೮, ೨೫ ಸೆಪ್ಟೆಂಬರ್ ೨೦೧೯ ರಂತೆ Vedavathi.m (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ವಿಶ್ವ ಭಾಷೆಯಾಗಿ ಇಂಗ್ಲಿಷಿನ ಬೆಳವಣಿಗೆಯು ವಿವಿಧ ಹಂತಗಳಲ್ಲಿ ಶಿಕ್ಷಣದ ಮಾ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ವಿಶ್ವ ಭಾಷೆಯಾಗಿ ಇಂಗ್ಲಿಷಿನ ಬೆಳವಣಿಗೆಯು ವಿವಿಧ ಹಂತಗಳಲ್ಲಿ ಶಿಕ್ಷಣದ ಮಾಧ್ಯಮವಾಗಿ ಹೆಚ್ಚು ಅಂಗೀಕಾರಗಳಿಗೆ ಕಾರಣವಾಗಿದೆ. ಈ ವಿದ್ಯಮಾನದ ಬಗ್ಗೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಈಗ ಜಾಗತೀಕರಣದ ಕೊಡುಗೆ ಚೆನ್ನಾಗಿ ದಾಖಲಿಸಲಾಗಿದೆ. ಶೀಲಾಗ್ ಡೆಲ್ಲರ್‌ ಮತ್ತು ಕ್ರಿಸ್ಟಿನ್ ಪ್ರೈಸ್ ತಮ್ಮ ಪುಸ್ತಕ "ಟೀಚಿಂಗ್ ಅದರ್ ಸಬ್ಜೆಕ್ಟ್ಸ್ ಥ್ರೂ ಇಂಗ್ಲಿಷ್" ನಲ್ಲಿ ವಿವಿಧ ವಿಷಯಗಳ ಬಗ್ಗೆ ಮತ್ತು ವಿವಿಧ ತರಗತಿಯ ಸಂದರ್ಭಗಳಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ಇಂಗ್ಲಿಷ್ ಬಳಕೆಗೆ ಒತ್ತು ನೀಡುತ್ತಾರೆ. ಈ ಪುಸ್ತಕವು ವಿಶೇಷವಾಗಿ "ವಿಷಯ ಮತ್ತು ಭಾಷೆ ಸಂಯೋಜಿತ ಕಲಿಕೆ" ಯ ಚೌಕಟ್ಟನ್ನು ಬಳಸಿ ಶಾಲಾ ಶಿಕ್ಷಕರು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಂಗ್ಲೀಷ್ ಮಾಧ್ಯಮವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಪ್ರದರ್ಶಿಸುತ್ತದೆ. ಭಾಷಾ ಬೋಧನೆಯ ಸಾಂಪ್ರದಾಯಿಕ ವಿಧಾನಗಳಿಗೆ ವ್ಯತಿರಿಕ್ತವಾಗಿ, CLIL "ಸ್ವಾಧೀನ ಪಡಿಸಿಕೊಳ್ಳುವ ಪ್ರತಿಕ್ರಿಯೆಗೆ ವಿದ್ಯಾರ್ಥಿಯ ಪೂರ್ಣಪ್ರಮಾಣದ ಪಾಲ್ಗೊಳ್ಲುವಿಕೆ ಮತ್ತು ಭಾಷೆಯಲ್ಲಿನ ಸಂವಹಿಸುವಿಕೆಗೆ ಮಹತ್ವವನ್ನು ನೀಡಿದೆ. ಇದರರ್ಥ, ವಿವಿಧ ವಿಷಯಗಳ ಬೋಧನೆಯಲ್ಲಿ ಪಾಲ್ಗೊಳ್ಳುವಾಗ ಇಂಗ್ಲೀಷ್ನಲ್ಲಿ ಯಶಸ್ವಿಯಾಗಿ ಪರಿಕಲ್ಪನೆಯನ್ನು ಕಲ್ಪಿಸಬೇಕು ಮತ್ತು ಬೋಧನೆ ಮಾಡಬೇಕು. ಇಂಗ್ಲಿಷ್ ಮೂಲ ಭಾಷೆಯಲ್ಲದ ಹೆಚ್ಚಿನ ಶಿಕ್ಷಕರು, ಇಂಗ್ಲಿಷ್ನಲ್ಲಿ ವಿಷಯಗಳನ್ನು ಕಲಿಸಲು ಕಷ್ಟಪಡುತ್ತಾರೆ, ಏಕೆಂದರೆ ಅವರು ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವುದಿಲ್ಲ. ಈ ಪುಸ್ತಕವು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಅಂತಹ ಶಿಕ್ಷಕರು ಬಳಸಬಹುದಾದ ಬೋಧನಾ ತಂತ್ರಗಳನ್ನು ವಿವಿಧ ವಿಷಯಗಳಲ್ಲಿ ಹೇಗೆ ಅಳವಡಿಸಬಹುದೆಂದು ವ್ಯವಸ್ಥಿತವಾಗಿ ಪರಿಚಯಿಸುತ್ತದೆ.

ಹೀಗಾಗಿ, ಇದು ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಕಲಿಸುವ ಶಿಕ್ಷಕರು, ಮತ್ತು ವಿವಿಧ ವಿಷಯಗಳ ಬೋಧನೆಗಾಗಿ ಇಂಗ್ಲಿಷ್ ಅನ್ನು ಬಳಸುವಲ್ಲಿ ತಮ್ಮ ಬೋಧನಾ ಕೌಶಲ್ಯವನ್ನು ವರ್ಧಿಸಲು ಬಯಸುವವರಿಗೆ ಒಂದು ಸಂಪನ್ಮೂಲ ಪುಸ್ತಕ. ಮಾನವ ಭಾಷೆಯ ಪ್ರಮುಖ ಲಕ್ಷಣಗಳಲ್ಲಿ ಒಂದು ಏನೆಂದರೆ ಅಮೂರ್ತ ಆಲೋಚನೆಗಳನ್ನು ಸಂವಹಿಸಲು ಬಳಕೆದಾರರಿಗೆ ಅಪರಿಮಿತವಾದ ನಮ್ಯತೆಯನ್ನು ನೀಡುತ್ತದೆ. ಪರಿಕಲ್ಪನೆಗಳ ಕಲಿಕೆಗೆ ಮತ್ತು ಬೋಧನೆಗೆ ಇದು ಪ್ರಾಥಮಿಕ ಮಹತ್ವವುಳ್ಳದ್ದಾಗಿದೆ. ಹೀಗಾಗಿ ಒಂದು ವಿಷಯವನ್ನು ಬೋಧಿಸಲು ಉಪಯೋಗಿಸುವ ಭಾಷೆ ಹೇಗಿರಬೇಕೆಂದರೆ ಆ ಭಾಷೆಯನ್ನು ಬಳಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ವಸ್ತು ವಷಯವನ್ನು ಬೋಧಿಸುವಂತದ್ದಾಗಿರ ಬೇಕು. ಇದು ಭಾಷೆಯ ವ್ಯಾಕರಣದಲ್ಲಿ ಪರಿಣತಿಯನ್ನು ಹೊಂದಿರುವುದು ಮಾತ್ರವಲ್ಲ, ಅದರ ಕಾರ್ಯಚಟುವಟಿಕೆಗಳ ಬಗ್ಗೆ ಆಳವಾದ ತಿಳುವಳಿಕೆ ಕೂಡಾ ತಿಳಿದಿರಬೇಕು. ಡೆಲ್ಲರ್ ಮತ್ತು ಪ್ರೈಸ್ ವಿವಿಧ ವಿಷಯಗಳನ್ನು ಕಲಿಯುವಲ್ಲಿ ಇಂಗ್ಲಿಷ್ ಬಳಕೆಗೆ ಸಮರ್ಪಿತವಾದ ಅನೇಕ ಅಧ್ಯಾಯಗಳಲ್ಲಿ ಪ್ರದರ್ಶಿಸುತ್ತಾರೆ, ಅದೇ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತರಗತಿಯ ಚಟುವಟಿಕೆಗಳನ್ನು ನೀಡುವ ಮೂಲಕ ಹೇಗೆ ಯಶಸ್ವಿಯಾಗಬಹುದು ಎಂಬುದನ್ನು ತೋರಿಸುತ್ತದೆ. ಈ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳ ಅಭಿವ್ಯಕ್ತಿ ಮಾಧ್ಯಮವಾಗಿ ವಿದ್ಯಾರ್ಥಿಗಳು ಇಂಗ್ಲಿಷ್ ಬಳಕೆಯನ್ನು ಒಗ್ಗಿಕೊಳ್ಳಲು ಚಟುವಟಿಕೆಗಳು ಅನುವು ಮಾಡಿಕೊಡುತ್ತವೆ. ಭೌತಶಾಸ್ತ್ರ, ಕಲೆ, ಮುಂತಾದ ವಿಷಯ ವಸ್ತುಗಳ ಬೋಧನೆಗಾಗಿ ಪುಸ್ತಕವು ಸಮೃದ್ಧವಾಗಿ ಮಾರ್ಗಸೂಚಿಗಳನ್ನು ಒಳಗೊಂಡಿದ್ದು, ಇದು ಶಿಕ್ಷಕರ ಯಶಸ್ವಿ ಬೋಧನೆಗಾಗಿ ಸಲಹೆಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಪುಸ್ತಕವು ಭಾಷಾ ಶಿಕ್ಷಕರು ಮತ್ತು ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಲು ಇಂಗ್ಲಿಷ್ ಅನ್ನು ಬಳಸುತ್ತಿರುವ ಶಿಕ್ಷಕರಿಗೆ ಉಪಯುಕ್ತವಾಗಿದೆ. ಈ ಪುಸ್ತಕದ ಕುತೂಹಲಕಾರಿ ಅಂಶವೆಂದರೆ ಹೆಚ್ಚು ದೃಶ್ಯ ಮಾಹಿತಿಯ ಬಳಕೆಯ ಮೂಲಕ ಕಲಿಕೆಯನ್ನು ಹೆಚ್ಚು ಒಳಗೊಳಿಸುವುದು. ಹೆಚ್ಚು ನಿಖರವಾದ ಬೋಧನೆ ಮಾಡಲು ಮಾಹಿತಿಯುಕ್ತವಾದ ದೃಶ್ಯಗಳನ್ನು ಹೇಗೆ ರಚಿಸಬಹುದು ಎಂಬುದನ್ನು ಲೇಖಕರು ಪ್ರದರ್ಶಿಸುತ್ತಾರೆ. ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಹೇಗೆ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ರಚನಾತ್ಮಕ ಮತ್ತು ಉಪಯುಕ್ತರವಾಗಿ ಸಂವಹಿಸಬಹುದೆಂದು ಲೇಖಕರು ತೋರಿಸುತ್ತಾರೆ. ಇದು ವಿಷಯವಸ್ತುವನ್ನು ತಲುಪಿಸುವ ಒಂದು ಮುಖ್ಯವಾದ ಅಂಶ ಎಂದು ನಾನು ನಂಬುತ್ತೇನೆ. ಉತ್ತಮ ಶಿಕ್ಷಕರು ಉತ್ತಮ ಸಂವಹನಕಾರರಾಗಿರುತ್ತಾರೆ ಮತ್ತು ಪರಿಣಾಮಕಾರಿ ಪ್ರವಚನ ತಂತ್ರಗಳ ಬಳಕೆಯ ಮೂಲಕ ಜ್ಞಾನವನ್ನು ವರ್ಗಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿರುತ್ತದೆ. ಈ ಪುಸ್ತಕವು ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ಹೇಳುವುದರಿಂದ, ಶಿಕ್ಷಕರು ಯಶಸ್ವಿಯಾಗಿ ಸಂಭಾಷಣೆಗಳನ್ನು ನಡೆಸಲು ಸಾಕಷ್ಟು ಇಂಗ್ಲಿಷ್ ಜ್ಞಾನದೊಂದಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು.

ಅಂತಿಮವಾಗಿ, ಈ ಪುಸ್ತಕದ ಒಂದು ಅಪೂರ್ವ ಅಂಶದ ಬಗ್ಗೆ ನಾನು ಹೇಳುತ್ತೇನೆ- ತರಗತಿಯಲ್ಲಿ ಪರಿಣಾಮಕಾರಿ ಮತ್ತು ಫಲಪ್ರದ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ ಹೇಗೆ, ಕಲಿಕೆಯು ಬೌದ್ಧಿಕವಾಗಿ ತೃಪ್ತಿದಾಯಕ ಮತ್ತು ಮಾಹಿತಿಯುಕ್ತಗೊಳಿಸ ಬಹುದೆಂದು ಹೇಳುತ್ತದೆ. ವಿಭಿನ್ನ ವಿಷಯಗಳಿಗೆ ವಿವಿಧ ರೀತಿಯ ತರಗತಿಯ ಚಟುವಟಿಕೆಗಳು ಅಗತ್ಯವಿರುವುದರಿಂದ, ಲಾಭದಾಯಕವಾಗಿ ಕೆಲಸ ಮಾಡುವ ಚಟುವಟಿಕೆ ಸನ್ನಿವೇಶಗಳನ್ನು ರಚಿಸಲು ಲೇಖಕರು ವಿವಿಧ ಉದಾಹರಣೆಗಳನ್ನು ಆರಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಭಾಷೆಯಲ್ಲಿ, ಇದನ್ನು ವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಮಾಡುವ ಕಾರ್ಯಯೋಜನೆಯೆಂದು ಕರೆಯಲಾಗುತ್ತದೆ. ಆದಾಗ್ಯೂ, ಒಂದು ಚಟುವಟಿಕೆಯು ಕೇವಲ ಒಂದು ನಿಯೋಜನೆಗಿಂತಲೂ ಹೆಚ್ಚಿರುತ್ತದೆ, ಮತ್ತು ಅದರ ಪ್ರಾಥಮಿಕ ಗುರಿ ಮೌಲ್ಯಮಾಪನ ಮಾಡುವುದು ಮತ್ತು ದರ್ಜೆಗೆ ಒಳಪಡಿಸುವುದಕ್ಕೆ ಮಾತ್ರ ಸೀಮಿತವಲ್ಲದೆ ವಿದ್ಯಾರ್ಥಿಗಳನ್ನು ವಿವಿಧ ವಿಷಯಗಳ ಬಗ್ಗೆ ಸೃಜನಾತ್ಮಕವಾಗಿ ಯೋಚಿಸುವುದು ಮತ್ತು ಅವರ ಜ್ಞಾನಾರ್ಜನೆಗೆ ಹೇಗೆ ಕೊಡುಗೆ ನೀಡಬಹುದೆಂಬುದರಲ್ಲಿ ನೆರವಾಗುವುದು. ಅನೇಕ ಪುಟಗಳಲ್ಲಿ, ಲೇಖಕರು ಸಮೂಹ ಚಟುವಟಿಕೆಗಳನ್ನು, ಬೆಂಬಲಿಸಿದ್ದಾರೆ. ಅದು ವಿದ್ಯಾರ್ಥಿಗಳು ಹೇಗೆ ಸಹಕಾರಿ ಕೆಲಸವನ್ನು ಕಲಿಯಬಹುದು ಎಂಬುದರ ಬಗೆಗೆ ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಬೋಧನೆಗೆ ಸಂಬಂಧಿಸಿದ ಹೊಸ ಕೌಶಲ್ಯಗಳನ್ನು ಕಲಿಯಲು ಬಯಸುವ ಶಿಕ್ಷಕರಿಗೆ ವಿಷೇಷವಾಗಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಬಳಸುವವರಿಗೆ ಈ ಪುಸ್ತಕವು ಉಪಯುಕ್ತವೆಂದು ನಾನು ಭಾವಿಸುತ್ತೇನೆ. ಭಾರತೀಯ ಪ್ರೇಕ್ಷಕರಿಗಾಗಿ, ಈ ಪುಸ್ತಕವು ಸಾಕಷ್ಟು ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಹೆಚ್ಚಿನ ಶಿಕ್ಷಕರಿಗೆ ಇಂಗ್ಲಿಷ್ ಎರಡನೆಯ ಮತ್ತು ಪ್ರಾಬಲ್ಯವಿಲ್ಲದ ಭಾಷೆ. ಪುಸ್ತಕವು ಸಂಶೋಧಕರಿಗೆ ಮತ್ತು ನವೀನ ಬೋಧನಾ ವಿಧಾನಗಳ ಬಗ್ಗೆ ಹೆಚ್ಚು ತಿಳಿಯಲು ಬಯಸುವ ಇತರ ವೃತ್ತಿಪರರಿಗೆ ಉತ್ತಮ ಸಂಪನ್ಮೂಲವಾಗಿದೆ. ರಮೇಶ್ ಕುಮಾರ್ ಮಿಶ್ರಾ (ಪಿಎಚ್ಡಿ, ದೆಹಲಿ ವಿಶ್ವವಿದ್ಯಾಲಯ) ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವರ್ತನೆಯ ಮತ್ತು ಅರಿವಿನ ವಿಜ್ಞಾನ ಕೇಂದ್ರದಲ್ಲಿ ಅರಿವಿನ ವಿಜ್ಞಾನದ ಸಹಾಯಕ ಪ್ರೊಫೆಸರ್ ಆಗಿದ್ದಾರೆ. ಭಾಷೆಯ ಸಂಸ್ಕರಣೆಯ ಮಲ್ಟಿಮೋಡಲ್ ಅಂಶಗಳ ಕ್ಷೇತ್ರ, ಲಕ್ಷ್ಯದ ವ್ಯವಸ್ಥೆಗಳೊಂದಿಗೆ ಭಾಷಾ ಸಂವಹನ, ಅನಕ್ಷರಸ್ಥರಲ್ಲಿ ಜ್ಞಾನಗ್ರಹಣ, ಆಕ್ಯುಲೋ ಮೋಟಾರ್ ನಿಯಂತ್ರಣ, ವಿಷುಯಲ್-ಪ್ರಾದೇಶಿಕ ಗಮನ ಮತ್ತು ಭಾಷಣ-ಭಾಷೆಯ ಅಸ್ವಸ್ಥತೆಗಳು ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಾರೆ. Email: rkmishra@cbcs.ac.in