ತ್ರಿಭುಜದ ಅಂಶಗಳು ಮತ್ತು ಅಳತೆಗಳು
From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ತ್ರಿಭುಜವನ್ನು ರೂಪಿಸುವ ಅಂಶಗಳನ್ನು ತನಿಖೆ ಮಾಡಲಾಗುತ್ತದೆ. ಈ ಅಂಶಗಳನ್ನು ಅಳೆಯುವುದರಿಂದ ತ್ರಿಭುಜಗಳ ಗುಣಲಕ್ಷಣಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ. ಈ ಅಂಶಗಳ ನಡುವಿನ ಸಂಬಂಧವು ಪರಿಕಲ್ಪನೆಯಾಗಿದೆ.
ಅಂದಾಜು ಸಮಯ
೩೦ ನಿಮಿಷಗಳು
ಕಲಿಕೆಯ ಉದ್ದೇಶಗಳು
ತ್ರಿಭುಜ ಮತ್ತು ಅದರ ಗುಣಲಕ್ಷಣಗಳನ್ನು ಕಲಿಯಲು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು, ಸಮಾನಾಂತರ ರೇಖೆಗಳ ಪೂರ್ವ ಜ್ಞಾನ
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಜಿಯೋಜಿಬ್ರಾ ಕಡತವನ್ನು ತೋರಿಸಿ ಮತ್ತು ಕಂಡುಬರುವ ಕೋನಗಳು ಮತ್ತು ಬಾಹುಗಳ ಮೌಲ್ಯಗಳನ್ನು ದಾಖಲಿಸಲು ವಿದ್ಯಾರ್ಥಿಗಳನ್ನು ಕೇಳಿ ಮತ್ತು ಬಾಹು ಮತ್ತು ಕೋನದ ನಡುವೆ ಏನಾದರೂ ಸಂಪರ್ಕವಿದೆಯೇ ಎಂದು ಕೇಳಿ
- ತ್ರಿಭುಜದಲ್ಲಿನ ಕೋನಗಳ ಮೊತ್ತ ಎಷ್ಟು?
- ವಿದ್ಯಾರ್ಥಿಗಳು ತಮಗೆ ನೀಡಲಾದ ತಂತಿಗಳಿಂದ ಯಾವುದಾದರೂ ಮೂರು ತಂತಿಗಳನ್ನು ತೆಗೆದುಕೊಳ್ಳುವ ಮೂಲಕ ತ್ರಿಭುಜಗಳನ್ನು ಮಾಡುತ್ತಾರೆ. ತ್ರಿಭುಜ ಸಾಧ್ಯವಾಗದ ಯಾವುದಾದರೂ ಸಂದರ್ಭವಿದೆಯೇ?
- ತ್ರಿಭುಜದ ಬಾಹು
- "ತ್ರಿಭುಜದಲ್ಲಿನ ಅಳತೆಗಳು” ಫೈಲ್ ಬಳಸಿ. ವಿದ್ಯಾರ್ಥಿಗಳು ತ್ರಿಭುಜ ಪರಿಕಲ್ಪನೆಯನ್ನು ಸಾಮಾನ್ಯೀಕೃತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಈ ಫೈಲ್ ಅನ್ನು ಬಳಸಬಹುದು. ಬಿಂದುವಿನಲ್ಲಿಉಂಟಾದ ಶೃಂಗಾಭಿಮುಖ ಕೋನಗಳು, ಪಾರ್ಶ್ವ ಕೋನಗಳು ಇತ್ಯಾದಿಗಳ ಬಗ್ಗೆ ಚರ್ಚೆ ಮಾಡಲು ಈ ಫೈಲ್ ಅನ್ನು ಬಳಸಬಹುದು. ತ್ರಿಭುಜವನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. (ಅಗತ್ಯವಿರುವಂತೆ ಈ ಫೈಲ್‌ಗಾಗಿ ಭೋಧನಾ ಟಿಪ್ಪಣಿಗಳನ್ನು ಬಳಸಿ)
- ವಿದ್ಯಾರ್ಥಿಗಳಿಗೆ ನೀಡಲಾದ ತಂತಿಗಳಿಂದ ಇನ್ನೂ 3 ತ್ರಿಭುಜಗಳನ್ನು ರಚಿಸಲು ಹೇಳಿ. ವಿದ್ಯಾರ್ಥಿಗಳು ಇದರಲ್ಲಿ ಎಲ್ಲಾ ಕೋನಗಳು ಲಘು ಮತ್ತು ಒಂದು ಕೋನವು ಅಧಿಕವಾಗಿರುವ ತ್ರಿಭುಜವನ್ನು ಮಾಡಬೇಕು. ಕೋನಗಳಧ ಪ್ರಕಾರದದಿಂದ ಈ ಕೆಳಗಿನ ಜಿಯೋಜಿಬ್ರಾ ಫೈಲ್ ಅನ್ನು ಬಳಸಿ. ವಿದ್ಯಾರ್ಥಿಗಳು ತ್ರಿಭುಜದ ವಿಧಗಳನ್ನು ಅನ್ವೇಷಿಸಲಿ.
- ವಿದ್ಯಾರ್ಥಿಗಳಿಗೆ ನೀಡಲಾದ ತಂತಿಗಳೊಂದಿಗೆ ಎರಡು ಅಥವಾ ಮೂರು ತ್ರಿಭುಜಗಳ ಮತ್ತೊಂದು ಗುಂಪನ್ನು ಮಾಡಲು ಹೇಳಿ. ತ್ರಿಭುಜದ ಬಾಹುಗಳ ಬಗ್ಗೆ ನೀವು ಏನಾದರೂ ಹೇಳಬಹುದೇ? ಬಾಹುಗಳಿಂದ ತ್ರಿಭುಜದ ವಿಧಗಳು ಎಂದು ಕರೆಯಲ್ಪಡುವ ಜಿಯೋಜಿಬ್ರಾ ಫೈಲ್ ಅನ್ನು ತೋರಿಸಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
- ವಿದ್ಯಾರ್ಥಿಗಳಿಗೆ ಅಳೆತೆಮಾಡಲು ಸಾಧ್ಯವಿದೆಯೇ? ಯಾವ ಅಳತೆಗಳು ಸಾಧ್ಯ ಎಂಬ ಕಲ್ಪನೆ ಅವರಿಗೆ ಇದೆಯೇ?
- ಕೋನದ ಮೊತ್ತವನ್ನು ಸಾಮಾನ್ಯೀಕರಿಸಲು ಅವರಿಗೆ ಸಾಧ್ಯವಿದೆಯೇ?
- ತ್ರಿಭುಜದ ಬಾಹುಗಳ ಬಗ್ಗೆ ಯಾವುದಾದರೂ ಫಲಿತಾಂಶವನ್ನು ಸಾಮಾನ್ಯೀಕರಿಸಲು ಅವರಿಗೆ ಸಾಧ್ಯವಿದೆಯೇ?
- ತ್ರಿಭುಜವನ್ನು ಸಾಮಾನ್ಯ ರೀತಿಯಲ್ಲಿ ಗುರುತಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆಯೇ?
- ತ್ರಿಭುಜಗಳ ವಿಧಗಳನ್ನು ಗುರುತಿಸಲು ಸಮರ್ಥರಾಗಿದ್ದಾರೆಯೇ?