ಬಿಲ್ಲಹಬ್ಬ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ಯಮುನಾ ನದಿ ತೀರದಲ್ಲಿದ್ದ ಮಥುರೆಯನ್ನು ಆಳುತ್ತಿದ್ದವನು ಕಂಸ ಮಹಾರಾಜ. ತನ್ನ ತಂದೆ ಉಗ್ರಸೇನನನ್ನು ಬಂಧಿಸಿ ಕಾರಾಗೃಹದಲ್ಲಿರಿಸಿ ತಾನೇ ರಾಜ್ಯಭಾರ ಮಾಡುತ್ತಿದ್ದನು. ಸ್ವಭಾವತಃ ಕ್ರೂರಿಯಾದ ಕಂಸ, ತನ್ನ ತಂಗಿಯಾದ ದೇವಕಿಯನ್ನು ಮಾತ್ರ ಬಹುವಾಗಿ ಪ್ರೀತಿಸುತ್ತಿದ್ದನು. ಆ ಕಾರಣದಿಂದಲೇ ತನ್ನ ಆತ್ಮೀಯ ಗೆಳೆಯನಾದ ವಸುದೇವನಿಗೆ ದೇವಕಿಯನ್ನು ಧಾರೆಯೆರೆದು ಕೊಟ್ಟಿದ್ದನು. ಆದರೆ, ಕಂಸನ ತಂಗಿಯ ಮೇಲಿನ ಪ್ರೀತಿ ತನ್ನ ಮೇಲಿನ ಮಮಕಾರಕ್ಕಿಂತ ದೊಡ್ಡದಾಗಿಯೇನೂ ಇರಲಿಲ್ಲ. ತನ್ನ ತಂಗಿ ದೇವಕಿ ಮತ್ತು ಗೆಳೆಯ ವಸುದೇವರ ಮದುವೆ ಮುಗಿಸಿ ಅವರನ್ನು ತನ್ನ ರಥದಲ್ಲಿಯೇ ಕುಳ್ಳಿರಿಸಿಕೊಂಡು ತಾನೇ ಅವರಿಬ್ಬರಿಗೆ ಸಾರಥಿಯಾಗಿ ತಂಗಿಯನ್ನು ಗಂಡನ ಮನೆಗೆ ಕಳುಹಿಸಿಕೊಡಲು ಹೊರಟನು. ದುರದೃಷ್ಟವಶಾತ್, ಅಶರೀರವಾಣಿಯೊಂದು ಅವನನ್ನು ತಡೆದು ನಿಲ್ಲಿಸಿತು. ಎಲೋ ಕಂಸ! ನಿನ್ನ ತಂಗಿ ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶು ನಿನಗೆ ಮೃತ್ಯುರೂಪವಾಗುತ್ತದೆ ಎಂಬ ನುಡಿಯು ಕೇಳಿಬಂತು. ತಂಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಕಂಸ, ಅಶರೀರವಾಣಿಯ ಮಾತು ಕೇಳಿ ತಂಗಿಯನ್ನೇ ಕೊಲ್ಲಲು ಮುಂದಾಗುತ್ತಾನೆ. ಆದರೆ, ವಸುದೇವ ಕಂಸನನ್ನು ತಡೆದು ನಿಲ್ಲಿಸಿ, ದೇವಕಿ ಪ್ರತಿಬಾರಿ ಮಗುವಿಗೆ ಜನ್ಮ ನೀಡಿದಾಗಲೂ ತಾನೇ ಆ ಶಿಶುವನ್ನು ತಂದೊಪ್ಪಿಸುವುದಾಗಿ ಮಾತು ನೀಡುತ್ತಾನೆ. ಮಹಾಕ್ರೂರಿಯಾದ ಕಂಸ ವಸುದೇವನ ಮಾತಿಗೆ ಸಮ್ಮತಿಸಿದ್ದೇ ಆತನ ಪಾಲಿಗೆ ಮುಳುವಾಯಿತು. ವಿಧಿ ಬರೆದ ಲಿಪಿಯುಂ ಜಲಲಿಪಿಯೇ!

ತನ್ನ ತಂಗಿ ದೇವಕಿ ಮತ್ತು ಗೆಳೆಯ ವಸುದೇವರಿಬ್ಬರನ್ನು ತನ್ನ ಕಾರಾಗೃಹದಲ್ಲಿಯೇ ಬಂಧಿಯಾಗಿರಿಸಿದ ಕಂಸನಿಗೆ ಕೊಟ್ಟ ಮಾತಿನಂತೆಯೇ, ಪ್ರತಿಬಾರಿ ದೇವಕಿಯು ಮಗುವಿಗೆ ಜನ್ಮ ನೀಡಿದಾಗಲೂ ವಸುದೇವ ಆ ಮಗುವನ್ನು ಕಂಸನಿಗೆ ತಂದೊಪ್ಪಿಸುತ್ತಿದ್ದ. ಕಂಸ ಆ ಮಗುವನ್ನು ಯಾವ ದಯೆ, ದಾಕ್ಷಿಣ್ಯವಿಲ್ಲದೆ ಕೊಲ್ಲುತ್ತಿದ್ದ. ಹೀಗೆ, ಮುಂದುವರಿಯಿತು ಶಿಶು ಸಂಹಾರ.

ಎಂಟನೇ ಮಗುವಿನ ಸರದಿ ಕಂಸನ ಮೃತ್ಯುರೂಪನಾದ ಶ್ರೀಕೃಷ್ಣ. ವಿಜಯ ಸಂವತ್ಸರದ ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿವಸ ದೇವಕಿದೇವಿ ಮುದ್ದಾದ ಕೃಷ್ಣವರ್ಣದ ಗಂಡುಮಗುವಿಗೆ ಜನ್ಮ ನೀಡಿದಳು. ದೇವಕಿ ತನ್ನ ಎಂಟನೇ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಶಂಖ ಚಕ್ರ ಗದಾಧರನಾದ ಶ್ರೀಹರಿ ಪ್ರತ್ಯಕ್ಷನಾಗಿ, ಈ ಮಗುವನ್ನು ನಂದಗೋಪನ ಮನೆಗೆ ಕೊಂಡೊಯ್ದು, ಆತನ ಪತ್ನಿ ಯಶೋದಾ ದೇವಿಯ ಮಗ್ಗುಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತೆಗೆದುಕೊಂಡು ಹಿಂದಿರುಗುವಂತೆ ಸೂಚನೆ ನೀಡುತ್ತಾನೆ. ದೈವಕೃಪೆಯಿಂದ ವಸುದೇವನಿಗೆ ಕಟ್ಟಿದ್ದ ಕಬ್ಬಿಣದ ಸರಪಳಿಗಳು ಹಾಗೆಯೇ ಬಿಚ್ಚಿಕೊಂಡವು. ಕಾವಲುಗಾರರೆಲ್ಲರೂ ನಿದ್ರಾವಶರಾಗಿದ್ದರು. ಸೆರೆಮನೆಯ ಬಾಗಿಲು ತೆರೆದುಕೊಂಡಿತು. ಮಗುವನ್ನು ಬುಟ್ಟಿಯಲ್ಲಿ ಹೊತ್ತ ವಸುದೇವ ನಂದಗೋಪನ ಮನೆಯೆಡೆ ಹೊರಟನು. ಮಧ್ಯರಾತ್ರಿಯ ಸಮಯ, ಭೀಕರ ಮಳೆ ಗಾಳಿ, ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಯಮುನೆ, ಜಗದೋದ್ಧಾರನನ್ನು ಹೊತ್ತೊಯ್ಯಲು ವಸುದೇವನಿಗೆ ದಾರಿ ಮಾಡಿಕೊಟ್ಟಳು. ಆದಿಶೇಷ ಮಳೆಗಾಳಿಯಿಂದ ಮಗುವಿಗೆ ರಕ್ಷಣೆ ನೀಡಿದನು.

ನಟ್ಟ ನಡುರಾತ್ರಿಯ ವೇಳೆ. ಗಾಳಿ ಮಳೆ ಒಂದೆಡೆ. ಇಲ್ಲಿಯೂ ಎಲ್ಲರೂ ನಿದ್ರಾವಶರಾಗಿದ್ದರು. ಸುಗಮವಾಗಿ ಗೋಕುಲವನ್ನು ತಲುಪಿದ ವಸುದೇವ, ಶ್ರೀಹರಿಯ ಸೂಚನೆಯಂತೆ ಯಶೋದೆಯ ಮಗ್ಗುಲಲ್ಲಿ ಮಲಗಿದ್ದ ಹೆಣ್ಣುಮಗುವನ್ನು ತಾನೆತ್ತಿಕೊಂಡು, ತನ್ನ ಮಗುವನ್ನು ಆಕೆಯ ಮಗ್ಗುಲಲ್ಲಿರಿಸಿ ಮರಳಿ ಮಥುರೆಯೆಡೆಗೆ ಧಾವಿಸಿದನು. ಏನೂ ಬದಲಾವಣೆಯೇ ಆಗಿಲ್ಲವೆನ್ನುವಂತೆ ಎಲ್ಲವೂ ಯಥಾಪ್ರಕಾರವಿತ್ತು. ಮುಂಜಾವಿನಲ್ಲಿ ಮಗುವಿನ ಅಳುವಿನ ದನಿ ಕೇಳಿಸುತ್ತಿದ್ದಂತೆ, ಕಾವಲುಗಾರರು ಬಂದು, ಅಲ್ಲಿದ್ದ ಹೆಣ್ಣುಮಗುವನ್ನು ತೆಗೆದುಕೊಂಡು ಹೋಗಿ ಕಂಸನಿಗೆ ಒಪ್ಪಿಸಿದರು. ಕಂಸ ಮಗುವನ್ನು ಕೊಲ್ಲಲು ಮುಂದಾಗುತ್ತಿದ್ದಂತೆ, ಅಂತರಿಕ್ಷಕ್ಕೆ ಜಿಗಿದ ಮಗುವಿನ ರೂಪದಲ್ಲಿದ್ದ ಮಾಯೆಯು, ಎಲೇ ಕಂಸ, ನಿನ್ನ ಮೃತ್ಯುರೂಪಿಯು ಬೇರೆಲ್ಲೋ ಬೆಳೆಯುತ್ತಿರುವುದಾಗಿ ಎಚ್ಚರಿಸಿ ಮರೆಯಾಯಿತು.

ಇದು ದೈವಲೀಲೆ. ಕಂಸನ ಸಂಹಾರವು ವಿಧಿ ಲಿಖಿತ. ಅದನ್ನು ತಪ್ಪಿಸುವುದು ಯಾರಿಗೂ ಸಾಧ್ಯವಾಗಲಿಲ್ಲ. ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಮಹಾಭಾರತದಲ್ಲಿರುವ ಕಂಸ ವಧೆಯ ಭಾಗವನ್ನು 'ಕಂಸಾಯಣ' ಎಂಬ ನಾಟಕವನ್ನು ರಚಿಸಿದ್ದು ಆ ಕೃತಿಯಿಂದ 'ಬಿಲ್ಲಹಬ್ಬ' ಎಂಬ ನಾಟಕವನ್ನು ಆರಿಸಿಕೊಳ್ಳಲಾಗಿದೆ.

 ಶ್ರೀಕೃಷ್ಣ ಜನ್ಮ ವೃತ್ತಾಂತ ಮತ್ತು ಕಂಸವಧೆಯ ಬಗ್ಗೆ ಮತ್ತಷ್ಟು ಮಾಹಿತಿಗಾಗಿ 'ಇಲ್ಲಿ ಕ್ಲಿಕ್ ಮಾಡಿ'

ಕಲಿಕೋದ್ದೇಶಗಳು

  • ಕೃಷ್ಣನು ಮಾಡಿದ ದುಷ್ಟರ ಸಂಹಾರಗಳನ್ನು ತಿಳಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪೌರಾಣಿಕ ವಿಷಯಗಳನ್ನು ಪರಿಚಯಿಸುವದು.
  • ವಸುದೇವ ದೇವಕಿಯರು ಮಕ್ಕಳನ್ನು ನೆನೆದು ವ್ಯಥೆ ಪಟ್ಟ ಸನ್ನಿವೇಶವನ್ನು ವಿವರಿಸಿ ಪೋಷಕರ ಬಗ್ಗೆ ಗೌರವ ಭಾವನೆ ಬೆಳೆಸುವುದು.
  • ವಸುದೇವ, ದೇವಕಿ ಮತ್ತು ಕಂಸ ಇವರ ಸಂಭಾಷಣೆಯನ್ನು ನಾಟಕೀಯವಾಗಿ ಪರಿಚಯಿಸಿ ಅಭಿನಯ ಕೌಶಲ್ಯವನ್ನು ಬೆಳೆಸುವುದು.
  • ಕಥಾ ಸಾಹಿತ್ಯವನ್ನು ನಾಟಕ ಸಾಹಿತ್ಯಕ್ಕೆ ಪರಿವರ್ತಿಸುವ ಸಾಮರ್ಥ್ಯವನ್ನು ಹೆಚ್ಚಿಸುವದು.
  • ಲಿಂಗ, ವಚನ, ವಾಕ್ಯದ ಬಗ್ಗೆ ಪರಿಚಯಿಸಿ, ಮಾತು ಮತ್ತು ಬರವಣಿಗೆಯಲ್ಲಿ ಆ ವ್ಯಾಕರಣಾಂಶಗಳನ್ನು ಸೂಕ್ತವಾಗಿ ಬಳಸುವ ಸಾಮರ್ಥ್ಯವನ್ನು ಬೆಳೆಸುವುದು.

ಕವಿ ಪರಿಚಯ

ಎಚ್ಚೆಸ್ವಿ, ಯೆಂದೇ ಕನ್ನಡಿಗರಿಗೆ, ಆಪ್ತಗೆಳೆಯರಿಗೆ, ಪರಿಚಿತರಾಗಿರುವ, ಎಚ್.ಎಸ್.ವೆಂಕಟೇಶಮೂರ್ತಿ ಯವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಂಮೃದ್ದಗೊಳಿಸಿದ, ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಮೇರು ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು.(ಜನನ:ಜೂನ್,೨೩,೧೯೪೪), ಈಗ ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಅತ್ಯಂತ ಜನಪ್ರಿಯ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ವಾಸದ ಮನೆಯ ಹತ್ತಿರ, 'ಡಾ. ಎಚ್.ಎಸ್.ವಿ. ರಸ್ತೆ', ಎನ್ನುವ ಮುನಿಸಿಪಲ್ ಫಲಕವಿದೆ. ತಮ್ಮ ಕಾಲೇಜ್ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾದ ಮೇಲೂ ಅವರು ದಿನವಿಡಿ ಬ್ಯುಸಿಯಾಗಿರುತ್ತಾರೆ.

ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರ ಬಗ್ಗೆ ವಿಕಿಪೀಡಿಯಾದಲ್ಲಿ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ>>

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ೧೦ ಅವಧಿಯಲ್ಲಿ ಈ ಗದ್ಯವನ್ನು ಬೋಧಿಸುವಂತೆ ಯೋಜಿಸಿಕೊಳ್ಳುವುದು. ಮೊದಲು ಯಾವುದಾದರೊಂದು ನಾಟಕದ ದೃಶ್ಯವನ್ನು ಶಿಕ್ಷಕರು ಸ್ವತಃ ಅಭಿನಯಿಸಿ ತೋರಿಸುವುದು. ಕವಿ ಕೃತಿ ಪರಿಚಯವನ್ನು ಚಾರ್ಟ್ ಮತ್ತು ವೀಡಿಯೋ ಪ್ರದರ್ಶನದ ಮೂಲಕ ಮಾಡುವುದು. ಹೊಸ ಪದಗಳ ಪರಿಚಯ ಮಾಡುವುದು. ಪಾತ್ರಗಳನ್ನು ಮಕ್ಕಳಿಗೆ ಹಂಚಿಕೆ ಮಾಡಿ ಗದ್ಯವನ್ನು ವಾಚನ ಮಾಡಿಸುವುದು. ವಾಚನ ಮಾಡುವಾಗ ನಾಟಕ ಶೈಲಿಯಲ್ಲಿ ವಾಚನ ಮಾಡಲು ತಿಳಿಸುವುದು. ಲಿಂಗ, ವಚನ ಮತ್ತು ವಾಕ್ಯ ರಚನಾ ಅವಧಿಯಲ್ಲಿ ಶಿಕ್ಷಕರು ವಿವಿಧ ವಾಕ್ಯಗಳನ್ನು ರಚಿಸುವುದನ್ನು ತಿಳಿಸುವುದು. ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಿ ಆ ಸಂಭಾಷಣೆಯನ್ನು ಅಭಿಯಿಸುತ್ತಾ ಮಾಡುವುದರ ಮೂಲಕ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳುವುದು.

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಬಿಲ್ಲ ಹಬ್ಬ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ https://www.youtube.com/watch?v=Mr6LFIYHHr4&list=PLd9dxCEJEd8ZVShKRywMnqLSBv25ZPswb&index=1

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ಚಟುಟವಟಿಕೆ-೧: ವಿದ್ಯಾರ್ಥಿಗಳು ಪಠ್ಯದ ಎಲ್ಲಾ ಪಾತ್ರಗಳನ್ನು ಏಕ ಪಾತ್ರಾಭಿನಯದ ರೀತಿಯಲ್ಲಿ ವಾಚಿಸುವುದು. ವಿಧಾನ/ಪ್ರಕ್ರಿಯೆ : ವಿದ್ಯಾರ್ಥಿಗಳು ಬಾಯೋದಿನ ಸಮಯದಲ್ಲಿ ಇದನ್ನು ಅನ್ವಯಿಸಿಕೊಳ್ಳುವುದು. ಸಮಯ: ಒಂದು ಅವಧಿ ಸಾಮಗ್ರಿಗಳು/ಸಂಪನ್ಮೂಲಗಳು: ಪಠ್ಯ ಪುಸ್ತಕ ಹಂತಗಳು: - ಪಠ್ಯ ಹಂಚಿಕೆ - ವಿದ್ಯಾರ್ಥಿಗಳಿಂದ ವಾಚನ ಮತ್ತು ಅಭಿನಯ ಚರ್ಚಾ ಪ್ರಶ್ನೆಗಳು: ವಿದ್ಯಾರ್ಥಿ ಸಂಭಾಷಣಾ ಶೈಲಿಯಲ್ಲಿ ವಾಚಿಸಿದನೇ? ಆ ಭಾಗದಲ್ಲಿ ಬರುವ ಪಠ್ಯಾಂಶಗಳ ಮೇಲಿನ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ನಾಟಕಾಭಿನಯ: ವಿಧಾನ/ಪ್ರಕ್ರಿಯೆ: : ಹಲವು ವಿದ್ಯಾರ್ಥಿಗಳಿಗೆ ಪಾತ್ರಗಳನ್ನು ಹಂಚಿ ಇಡೀ ನಾಟಕವನ್ನು ಅಭಿನಯಿಸುವುದು. ಸಮಯ: ಎರಡು ಅವಧಿಗಳು ಸಾಮಗ್ರಿಗಳು/ಸಂಪನ್ಮೂಲಗಳು: ಪಠ್ಯ ಪುಸ್ತಕ ,ವೇಷಭೂಷಣಗಳು ಹಂತಗಳು ಪಾತ್ರ ಹಂಚಿಕೆ ತರಬೇತಿ ಅಭಿನಯ ಮತ್ತು ವಿಶ್ಲೇಷಣೆ ಚರ್ಚಾ ಪ್ರಶ್ನೆಗಳು ಪಠ್ಯಾಂಶದ ಮೇಲಿನ ಪ್ರಶ್ನೆಗಳು ಭಾವ ವ್ಯಕ್ತಪಡಿಸುವಿಕೆಯ ಮೇಲಿನ ಪ್ರಶ್ನೆಗಳು

  • ಕಂಸವಧೆಯ ವೀಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ

೧) ವೀಡಿಯೋ - ೧ ೨) ವೀಡಿಯೋ - ೨ ೩) ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ವ್ಯಾವಹಾರಿಕ ಭಾಷೆ ಮತ್ತು ಗ್ರಾಂಥಿಕ ಭಾಷೆಯ ವಿಭಿನ್ನತೆಯನ್ನು ಅರಿಯುವುದು. ಆಲಿಸುವಿಕೆ: ನಾಟಕದ ವೀಕ್ಷಣೆ ಮತ್ತು ಸಂಭಾಷಣೆಯನ್ನು ಆಲಿಸುವುದು. ಮಾತನಾಡುವುದು: ವಿವಿಧ ಪಾತ್ರಗಳ ಸಂಭಾಷಣೆಯನ್ನು ಮಾಡುವುದು. ಓದುವುದು: ಪಠ್ಯವನ್ನು ನೋಡಿಕೊಂಡು ಸಂಭಾಷಣೆಯನ್ನು ವಾಚಿಸುವುದು. ಬರೆಯುವುದು: ಪಠ್ಯದ ಮೇಲಿನ ಪ್ರಶ್ನೆಗಳಿಗೆ ವಾಕ್ಯ ರೂಪದಲ್ಲಿ ಉತ್ತರ ಬರೆಯವುದು. ಗ್ರಂಥಾಲೋಡನ: ಇಡೀ ನಾಟಕವನ್ನು ಮೂಲ ಕೃತಿಯಿಂದ ಓದುವುದು.

ಶಬ್ದಕೋಶ

ಬಿಸಿಲು ಮಚ್ಚು ಗೂಢಾಚಾರರು ಧಾಂದ್ಲೆ ಸಂಕೋಲೆ ಹಾಲಾಹಲ ಬಿಲ್ಲ ಹಬ್ಬ

ವ್ಯಾಕರಣ

ಲಿಂಗ : ವಿಧಗಳು: ಸ್ತ್ರೀ ಲಿಂಗ, ಪುಲ್ಲಿಂಗ, ನಪುಂಸಕಲಿಂಗ ವಚನ: ಏಕವಚನ: ಬಹುವಚನ ವಾಕ್ಯರಚನೆ: ಕರ್ತೃ, ಕರ್ಮ, ಕ್ರಿಯಾಪದ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ