"ಭಾರತಕ್ಕೆ ಯೋರೋಪಿಯನ್ನರ ಆಗಮನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: <center>1. '''ಪಾಠದ ಮುಖ್ಯಾಂಶಗಳು''': (1 '''ಅಂಕದ ಪ್ರಶ್ನೆಗಳಿಗಾಗಿ''')</center> === ಮುಖ್ಯಾ...)
 
 
೨೨ ನೇ ಸಾಲು: ೨೨ ನೇ ಸಾಲು:
 
==== 3. ಎರಡು ಅಂಕದ ಪ್ರಶ್ನೆಗಳು- ಉತ್ತರಗಳು: ====
 
==== 3. ಎರಡು ಅಂಕದ ಪ್ರಶ್ನೆಗಳು- ಉತ್ತರಗಳು: ====
  
1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು? ====
+
1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು?  
 
     ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು.  
 
     ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು.  
  
2. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ. ===
+
2. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ.  
ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು. ===
+
ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು.  
  
 
3. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ.  
 
3. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ.  
• 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್‍ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. ===
+
• 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್‍ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು.  
• ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು. ===
+
• ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು.  
 
• ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ.
 
• ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ.
 +
 
===4. ಮೂರು ಅಂಕದ ಪ್ರಶ್ನೆಗಳು- ಉತ್ತರಗಳು: ====
 
===4. ಮೂರು ಅಂಕದ ಪ್ರಶ್ನೆಗಳು- ಉತ್ತರಗಳು: ====
 
'''1. '''ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು &nbsp;ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ'''.'''
 
'''1. '''ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು &nbsp;ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ'''.'''

೧೫:೩೮, ೧೫ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ

1. ಪಾಠದ ಮುಖ್ಯಾಂಶಗಳು: (1 ಅಂಕದ ಪ್ರಶ್ನೆಗಳಿಗಾಗಿ)

ಮುಖ್ಯಾಂಶಗಳು:

• 17ನೇ ಶತಮಾನದವರಗೆ ಭಾರತದಲ್ಲಿ ಯುರೋಪಿನ ವ್ಯಾಪಾರವು ಪೋರ್ಚುಗೀಸರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು. • ಕರ್ನಾಟಿಕ್ ಯುದ್ಧಗಳು ಇಂಗ್ಲಿಷರ ಮತ್ತು ಪ್ರೆಂಚರ ನಡುವೆ ನಡೆದವು. • ಪ್ರೆಂಚರನ್ನು ವಾಂಡಿವ ಕದನದಲ್ಲಿ ಸೋಲಿಸಿದ ಇಂಗ್ಲಿಷರ ಸೇನಾಧಿಕಾರಿ ಸರ್ ಐರ್‍ಕೂಟ. • ಪ್ಲಾಸಿಕದನದಲ್ಲಿ ಇಂಗ್ಲಿಷ ಸೇನೆಯ ನೇತೃತ್ವವಹಿಸಿದ್ದವನು ರಾಬರ್ಟಕ್ಲೈವ್. • ಬಂಗಾಳದಲ್ಲಿ ದ್ವಿ-ಸರಕಾರವನ್ನು ಜಾರಿಗೆ ತಂದವನು ರಾಬರ್ಟಕ್ಲೈವ್ • ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಕ್ರಿಶ 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದನು • ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಮೊದಲು ಬಂದು ತಲುಪಿದನು. • ಕ್ರಿಶ 1453 ರಲ್ಲಿ ಅಟೋಮನ್ ಟರ್ಕರು ಕಾನ್‍ಸ್ಟಾಂಟಿನೋಪಲ್‍ನ್ನು ವಶಪಡಿಸಿಕೊಂಡರು. • ಮೊಘಲ್ ಚಕ್ರವರ್ತಿಯಾದ ಫರೂಕ್ ಸಿಯಾರನು ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದನು. • ಮೊದಲ ಕರ್ನಾಟಿಕ್ ಯುದ್ದದ ಸಂದರ್ಭದಲ್ಲಿ ಇದ್ದ ಕರ್ನಾಟಿಕ್‍ದ ನವಾಬ ಅನ್ವರುದ್ದೀನ್. • ಇಂಗ್ಲಿಷರು : ರಾಬರ್ಟಕ್ಲೈವ್ : : ಪ್ರೆಂಚರು : ಡೂಪ್ಲೆ. • ಬ್ರಿಟಿಷರ ಸೇನಾಮುಖಂಡನಾಗಿದ್ದ ಸರ್ ಐರ್‍ಕೂಟ್‍ನು ವಾಂಡಿವಾಷ ಕದನದಲ್ಲಿ ಪ್ರೆಂಚರನ್ನು ಸಂಪೂರ್ಣವಾಗಿ ಸೋಲಿಸಿದನು. • ಸಿರಾಜುದ್ದೌಲನ ನಂತರ ಬಂಗಾಳದ ನವಾಬನಾದವನು ಮೀರ್‍ಜಾಫರ್ • ಮೀರಜಾಫರನ ನಂತರ ಬಂಗಾಳದ ನವಾಬನಾದವನು ಮೀರ್‍ಕಾಸಿಂ • ಪ್ಲಾಸಿ ಕದನ : 1757 : : ಬಕ್ಸಾರ ಕದನ : 1764

2. ಬಹು ಆಯ್ಕೆ ಪ್ರಶ್ನೆಗಳು- ಉತ್ತರಗಳು:

3. ಎರಡು ಅಂಕದ ಪ್ರಶ್ನೆಗಳು- ಉತ್ತರಗಳು:

1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು?

    ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು. 

2. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ. ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು.

3. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ. • 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್‍ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. • ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು. • ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ.

4. ಮೂರು ಅಂಕದ ಪ್ರಶ್ನೆಗಳು- ಉತ್ತರಗಳು: =

1. ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು  ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ.


• ಮೊದಲನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲಿಷರು ಸೋತರೂ, ಮದ್ರಾಸ್ ಒಪ್ಪಂದದಿಂದ ಪ್ರೆಂಚರು ಮದ್ರಾಸನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟರು.


• ಎರಡನೇ ಕರ್ನಾಟಿಕ್ ಯುದ್ಧದಲ್ಲಿ ಪ್ರೆಂಚರ ಬೆಂಬಲಿತ ಚಂದಾಸಾಹೇಬನನ್ನು ಇಂಗ್ಲಿಷರು ತಿರುಚಿನಾಪಳ್ಳಿಯಲ್ಲಿ ಕೊಂದು ಆರ್ಕಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು.


• ಮೂರನೇ ಕರ್ನಾಟಿಕ್ ಯುದ್ಧದ ನಿರ್ಣಾಯಕ ಕದನವಾದ ವಾಂಡಿವಾಷ ಕದನದಲ್ಲಿ ಪ್ರೆಂಚರು ಪೂರ್ಣವಾಗಿ ಸೋತು ಭಾರತದಲ್ಲಿ ತಮ್ಮ ಪ್ರಭಾವ ಕಳೆದುಕೊಂಡರು.


• ಈ ರೀತಿ ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಸಹಾಯ ಮಾಡಿದವು.


2. ಪ್ಲಾಸಿ ಕದನವು ಯಾವಾಗ, ಯಾರ ಯಾರ ನಡುವೆ ನಡೆಯಿತು? ಪ್ಲಾಸಿ ಕದನದ ಫಲಿತಾಂಶಗಳೇನು?


ಕ್ರಿಶ 1757 ಜೂನ್ 23 ರಂದು ಬಂಗಾಳದ ನವಾಬ ಸಿರಾಜುದ್ದೌಲ್ ಮತ್ತು ಇಂಗ್ಲಿಷರ ನಡುವೆ ನಡೆಯಿತು.


ಪ್ಲಾಸಿ ಕದನದ ಫಲಿತಾಂಶಗಳೆಂದರೆ –


• ಸಿರಾಜುದ್ದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.


• ಬ್ರಿಟಿಷರಿಗೆ ಸಹಕರಿಸಿದ ಮೀರ್‍ಜಾಫರ್‍ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.


• ಇಂಗ್ಲಿಷರು ಮೀರ್‍ಜಾಫರ್‍ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.


3. ಮೀರ್‍ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳಾವವು?


ಇಂಗ್ಲಿಷರು ಮೀರ್‍ಜಾಫರನನ್ನು ಕೆಳಗಿಳಿಸಿ ಮೀರ್‍ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು. ಇದಕ್ಕೆ ಪ್ರತಿಯಾಗಿ ಅವನು ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್ ಪ್ರದೇಶಗಳನ್ನು ಇಂಗ್ಲಿಷರಿಗೆ ಬಳುವಳಿಯಾಗಿ ನೀಡಿದನು.


4. ಬಕ್ಸಾರ ಕದನಕ್ಕೆ ಕಾರಣ & ಪರಿಣಾಮಗಳೇನು?


• ಇಂಗ್ಲಿಷರ ಹಿಡಿತದಿಂದ ಹೊರಬರಲು ಮೀರಕಾಸಿಂ ಪ್ರಯತ್ನಿಸಿದಾಗ ಇಂಗ್ಲಿಷರು ಅವನನ್ನು ಪದಚ್ಯುತಗೊಳಿಸಿ ಮೀರಜಾಫರನನ್ನು ಮತ್ತೆ ಬಂಗಾಳದ ನವಾಬನನ್ನಾಗಿ ಮಾಡಿದರು.


• ಕೋಪಗೊಂಡ ಮೀರಕಾಸಿಂನು ಮೊಘಲ್ ಚಕ್ರವರ್ತಿ ಷಾ ಅಲಂ, ಔದ್‍ನ ನವಾಬ ಷುಜಾ ಉದ್ದೌಲರೊಡನೆ ತ್ರಿಮೈತ್ರಿಕೂಟ ಒಪ್ಪಂದ ಮಾಡಿಕೊಂಡು ಇಂಗ್ಲಿಷರ ವಿರುದ್ಧ 1764 ರಲ್ಲಿ ದಾಳಿಮಾಡಿದನು.


• ಈ ಯುದ್ದದಲ್ಲಿ ಮೀರ್‍ಕಾಸಿಮ್‍ನ ಒಕ್ಕೂಟ ಸೈನ್ಯ ಸೋಲು ಅನುಭವಿಸಿತು.


• ಈ ಕದನದ ಪರಿಣಾಮವಾಗಿ ಬಿಹಾರ, ಒರಿಸ್ಸಾ ಮತ್ತು ಬಂಗಾಳ ಪ್ರಾಂತ್ಯಗಳು ಇಂಗ್ಲಿಷರ ವಶವಾದವು.


5. ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಕಾರಣವೇನು?


• ಮಧ್ಯಯುಗದಲ್ಲಿ ಭಾರತ & ಯುರೋಪಿನ ವ್ಯಾಪಾರವು ಪರ್ಶಿಯನ್ ಕೊಲ್ಲಿ, ಕೆಂಪು ಸಮುದ್ರ & ಭಾರತದ ವಾಯುವ್ಯ ಪ್ರದೇಶಗಳ ಮೂಲಕ ನಡೆಯುತ್ತಿತ್ತು.


• ಮೆಡಿಟೇರಿಯನ್ ಹಾಗೂ ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.


• ಕ್ರಿಶ 1400ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು.


• ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.


6. ಯುರೋಪಿಯನ್ನರಿಗೆ ಭಾರತದ ಸಾಂಬಾರ ಪದಾರ್ಥಗಳು ಬಹಳ ಪ್ರಿಯವಾಗಿದ್ದವು ಎಂಬುದನ್ನು ಹೇಗೆ ಹೇಳುವಿರಿ.


• ಪ್ರಾಚೀನ ಕಾಲದಿಂದಲೂ ಭಾರತ ಹಾಗೂ ಯುರೋಪಿನ ಮಧ್ಯವಾಣಿಜ್ಯ ಸಂಬಂಧಗಳು ಬೆಸೆದುಕೊಂಡಿದ್ದವು.


• ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಇತ್ಯಾದಿ


• ವಸ್ತುಗಳಿಗೆ ಯುರೋಪಿನ ಜನರಿಂದ ಯಥೇಚ್ಛ ಬೇಡಿಕೆಯಿತ್ತು.


• ಈ ವಸ್ತುಗಳನ್ನು ಯುರೋಪಿನ ಗ್ರೀಕ್ & ರೋಮನ್ ಸಾಮ್ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿತ್ತು.


7. ಭಾರತದಲ್ಲಿ ಇಂಗ್ಲಿಷರ ಸಾಮ್ರಾಜ್ಯದ ಒಡೆಯರಾಗಲು ಅವರ  ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯೇ ಕಾರಣ ಈ ಹೇಳಿಕೆಯನ್ನು ಸಮರ್ಥಿಸಿ.


• ಇಂಗ್ಲಿಷರ ವ್ಯಾಪಾರಿಗಳು ಸಾಮ್ರಾಜ್ಯದೊಡೆಯರಾದದ್ದು ಕೇವಲ ಸೈನ್ಯ ಬಲದಿಂದಲ್ಲ.


• ಬದಲಿಗೆ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯನ್ನು ಉಪಯೋಗಿಸಿದರು.


• ಹೇಗೆಂದರೆ ಭಾರತೀಯ ರಾಜರಲ್ಲಿದ್ದ ಅನೈಕ್ಯತೆ & ಆಂತರಿಕ ಕಲಹಗಳನ್ನು ಉಪಯೋಗಿಸಿ ಒಬ್ಬರ ಮೇಲೆ ಒಬ್ಬರನ್ನು ಮೇಲೆತ್ತಿ ಅವರಲ್ಲಿಯೇ ಒಡಕನ್ನುಂಟು ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.


8. 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳೇನು?


• 3ನೇ ಕರ್ನಾಟಿಕ್ ಯುದ್ಧವು ಬ್ರಿಟಿµರು & ಪ್ರೆಂಚರ ನಡುವೆ ನಡೆಯಿತು.


• ಈ ಯುದ್ಧದಲ್ಲಿ ಪ್ರೆಂಚರು ಸಂಪೂರ್ಣವಾಗಿ ಸೋತರು.


• ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಂಗ್ಲಿಷರ ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.


• ಆದಾಗ್ಯೂ ಇನ್ನು ಮುಂದೆ ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿ ಅಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.