ಭಿನ್ನರಾಶಿಗಳ ಪರಿಚಯಿಸುವಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ಧೇಶಗಳು:

   • ಭಿನ್ನರಾಶಿಗಳನ್ನು ವಿವಿಧ ರೀತಿಗಳಲ್ಲಿ ನಿರೂಪಿಸುವುದು

   • ಅಂಶ, ಛೇದಗಳನ್ನು ಅರ್ಥಮಾಡಿಕೊಳ್ಳುವುದು

   • ಏಕಾಂಶ ಭಿನ್ನರಾಶಿಗಳ ಅರ್ಥ, ಅವುಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು

   • ಸಮ ಭಿನ್ನರಾಶಿಗಳ ಅರ್ಥ, ಅವುಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು

   • ಏಕಾಂಶ ಹಾಗು ಸಮ ಭಿನ್ನರಾಶಿಗಳನ್ನು ಹೋಲಿಸುವುದು

ತರಗತಿ ಚಟುವಟಿಕೆ:

  • ಮಕ್ಕಳು ಇಲ್ಲಿಯವರೆಗೆ ಭಿನ್ನರಾಷಿಗಳ ಬಗ್ಗೆ ಏನೆಲ್ಲ ಕಲಿತಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ತರಗತಿಯನ್ನು ಪ್ರಾರಂಭಿಸಿ
  • ಅಂಶ, ಛೇದ, ಭಾಗ, ಈ ಪದಗಳ ಅರ್ಥಗಳನ್ನು ಚರ್ಚಿಸಿ
  • Fractions: Intro ಸಿಮ್ಯುಲೇಶನ್ನ Intro ಪರದೆಯನ್ನು ಬಳಸಿ
  • ಭಿನ್ನರಾಶಿಯ ಛೇದ ಸಂಖ್ಯೆಯನ್ನು ಮಾತ್ರ ಹೆಚ್ಚಿಸುತ್ತಾ, ಮಕ್ಕಳಿಗೆ ಚಿತ್ರದಲ್ಲಿ ಏನಾಗುತ್ತಿದೇ ಎಂದು ಗಮನಿಸಲು ಹೇಳಿ (ಚಿತ್ರವನ್ನು ಸಮಭಾಗಗಳಾಗಿ ಮಾಡಲು ಹಾಕುವ ಗುರುತುಗಳು ಕಡಿಮೆಯಾಗುತ್ತಿದೆ ಹಾಗು ಬುಟ್ಟಿಯಲ್ಲಿರುವ ತುಂಡುಗಳ ಗಾತ್ರ ಕಡಿಮೆಯಾಗುತ್ತಿದೆ)
  • ಮೇಲಿರುವ ಇತರ ಆಕಾರಗಳ ಬಟನ್ ಗಳನ್ನು ಸಹ ಒತ್ತಿ ಬೇರೆ ಬೇರೆ ಆಕಾರಗಳನ್ನು ಭಾಗ ಮಾಡುವ ವಿಧಾನಗಳನ್ನು ತೋರಿಸಿ
  • ಮಕ್ಕಳಿಗೆ ಒಂದೆರೆಡು ಸಂಖ್ಯೆಗಳನ್ನು ಹೇಳಿ, ಬೇರೆ ಬೇರೆ ಆಕಾರಗಳನ್ನು ಆ ಸಂಖ್ಯೆಗೆ ಅನುಗುಣವಾಗಿ ಭಾಗ ಮಾಡಲು ಹೇಳಿ. ಉದಾ: 5 – ವ್ರುತ್ತ, ಆಯತ, ರೇಖಾಖಂಡ, ಸಿಲಿಂಡರ್ ಇವುಗಳನ್ನು ೫ ಸಮಭಾಗಗಳಾಗಿ ವಿಭಾಗಿಸಿ
  • ಈಗ, ಸಿಮ್ಯುಲೇಶನ್ ನಲ್ಲಿ ಅಂಶದ ಸಂಖ್ಯೆಯನ್ನು 1 ಮಾಡಿ. ಇತರ ಆಕಾರಗಳಲ್ಲಿ 1 ಭಾಗ ಹೇಗೆ ಇರುತ್ತದೆ ಎಂದು ತೋರಿಸಿ.
  • ಮಕ್ಕಳಿಗೆ ತಾವು 5 ವಿಭಾಗಗಳನ್ನು ಗುರುತಿಸಿರುವ ತಮ್ಮ ಚಿತ್ರದಲ್ಲಿ 1 ವಿಭಾಗವನ್ನು ಛಾಯೆಗೊಳಿಸಲು/ ಬಣ್ಣ ಹಚ್ಚಲು ಹೇಳಿ
  • ಈಗ ಮಕ್ಕಳಿಗೆ ಕೆಳಗಿರುವ ಟೇಬಲ್ ಅನ್ನು ತಮ್ಮ ಪುಸ್ತಕಗಳಲ್ಲಿ ನಕಲಿ ಮಾಡಿ, ಬರ್ತಿಸಲು ಹೇಳಿ
1/2
1/4
1/6
1/8
  • ಮಕ್ಕಳು ಏನನ್ನು ಗಮನಿಸಿದ್ದಾರೆ ಎಂದು ಚರ್ಚಿಸಿ. ಛೇದ ಹೆಚ್ಚಾದಂತೆ ಭಾಗದ ಗಾತ್ರ ಕಡಿಮೆಯಾಗುವುದನ್ನು ಒತ್ತಾಯಿಸಿ ಹೇಳಿ
  • ಈಗ ಸಿಮ್ಯುಲೇಶನ್ ನಲ್ಲಿ ಒಂದು ಛೇದಕ್ಕೆ ಅಂಶವನ್ನು / ಅಂಶದ ಸಂಖ್ಯೆಯನ್ನು ಹೆಚ್ಚಿಸಿ. ಮಕ್ಕಳು ಏನು ಗಮನಿಸುತ್ತಿದ್ದಾರೆ ಎಂದು ಪ್ರಶ್ನಿಸಿ. ಬೇರೆ ಬೇರೆ ಛೇದಗಳಿಗೆ ಇದನ್ನು ಪುನಃ ಮಾಡಿ, ಮಕ್ಕಳೊಂದಿಗೆ ಚರ್ಚಿಸಿ
  • ಈಗ ಇನ್ನು ಕೆಲವು ಭಿನ್ನರಾಷಿಗಳನ್ನು ಕೊಟ್ಟು, ಮಕ್ಕಳು ತಮ್ಮ ಪುಸ್ತಕದಲ್ಲಿ ಬರೆದಿರುವ ಕೋಷ್ಟಕ/ಟೇಬಲ್ ಅನ್ನು ಪುನಃ ಬರ್ತಿ ಮಾಡಲು ಹೇಳಿ
  • ಈಗ ತಾವು ಬರೆದಿರುವ ಭಿನ್ನರಾಷಿಗಳಲ್ಲಿ ಕೆಲವು ಜೋಡಿಗಳನ್ನು ಆಯ್ಕೆಮಾಡಿ, ಅವನ್ನು ಹೋಲಿಸಿದಾಗ ಯಾವುದು ದೊಡ್ಡದು ಮತ್ತು ಯಾವುದು ಚಿಕ್ಕದಾಗಿರುತ್ತದೆ ಎಂದು ಪ್ರಶ್ನಿಸಿ
  • ದೊಡ್ಡದು/ಚಿಕ್ಕದನ್ನು ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಚರ್ಚಿಸಿ


ಸಮ ಭಿನ್ನರಾಶಿಯಲ್ಲಿ ಛೇದವು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಿದೆ ಎಂಬುದನ್ನು ಸೂಚಿಸಿದರೆ, ಅಂಶವು ಅವುಗಳಲ್ಲಿ ಪರಿಗಣಿಸಿದ ಭಾಗಗಳ ಸಂಖ್ಯೆಯನ್ನು ಸೂಚಿಸುತ್ತದೆ. ಆದುದರಿಂದ ಸಮ ಭಿನ್ನರಾಶಿಯಲ್ಲಿ ಯಾವಾಗಲೂ ಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ.