"ಮಗ್ಗದ ಸಾಹೇಬ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೩೦ ನೇ ಸಾಲು: ೧೩೦ ನೇ ಸಾಲು:
 
# '''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
# '''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
 
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ನಿಂದ [https://www.google.com/search?q=indian+village+activities&safe=active&client=ubuntu&hs=pNu&channel=fs&tbm=isch&source=lnt&tbs=sur:fmc&sa=X&ved=0ahUKEwjSh4GE5sfhAhXTdXAKHRliCaQQpwUIIQ&biw=1366&bih=572&dpr=1 10-15 ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು] ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
+
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ]  
 
# '''ಚರ್ಚಾ ಪ್ರಶ್ನೆಗಳು;'''
 
# '''ಚರ್ಚಾ ಪ್ರಶ್ನೆಗಳು;'''
 
* ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)  
 
* ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)  

೦೫:೨೭, ೧೬ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಚಿತ್ರ:Maggada Saheba Lesson Plan edited.mm

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಸಣ್ಣ ಕಥೆ ಸಾಹಿತ್ಯದ ಪರಿಚಯ
  2. ಅಜ್ಞಾತ ಸಾಹಿತಿಯ ಪರಿಚಯ
  3. ಪ್ರಾದೇಶಿಕತೆಯ ಪರಿಚಯ
  4. ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು
  5. ಮಕ್ಕಳಲ್ಲಿ ಔದ್ಯೋಗಿಕ ಶಿಕ್ಷಣ, ಸ್ವಯಂ ಉದ್ಯೋಗ, ನವೀನ ಶಿಕ್ಷಣದ ಮಹತ್ವವನ್ನು ತಿಳಿಸುವುದು.
  6. ಗುಡಿ ಕೈಗಾರಿಕೆಯ ಪ್ರಸ್ತುತ ಪರಿಸ್ಥಿತಿಯ ಅವಲೋಕನ

ಭಾಷಾ ಕಲಿಕಾ ಗುರಿಗಳು

  1. ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು  ಚಿತ್ರ ಸಂಪನ್ಮೂಲದ ಬಳಕೆ
  2. ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
  3. ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
  4. ಕಠಿಣ ಪದಗಳ ಅರ್ಥ ತಿಳಿಯಲು  ಗೋಲ್ಟನ್‌ ಶಬ್ಧಕೋಶದ ಬಳಕೆ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ವಿಕಿಪೀಡಿಯದಲ್ಲಿನ ಕನ್ನಡದಲ್ಲಿ ಸಣ್ಣಕಥೆಯ ಮಾಹಿತಿ

ಪ್ರಸ್ತುತ ಗದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ಈ ಗದ್ಯಪಾಠವನ್ನು ಬಾಗಲೋಡಿ ದೇವರಾಯರ ಸಣ್ಣಕಥೆಯಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ತಂದೆಯು ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡನು.

ಕವಿ/ ಲೇಖಕರ ಪರಿಚಯ

ಬಾಗಲೋಡಿ ದೇವರಾಯರ (ಜನನ; ೨೭-೨-೧೯೨೭,ಮರಣ ೨೫-೭-೧೯೮೫) ತಂದೆ ಬಾಗಲೋಡಿ ಕೃಷ್ಣರಾಯರು. ಬಾಗಲೋಡಿ ದೇವರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ಇವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ, ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ.( ಆನರ್ಸ್) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೇ ಮೊದಲ ರ‍್ಯಾಂಕ್ ಪಡೆದರು. ಆಗಲೇ ಕತೆಗಳನ್ನು ಬರೆಯಲಾರಂಭಿಸಿ ಲೇಖಕರೆನಿಸಿದ್ದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್‌ಗೆ ಅಯ್ಕೆಯಾದರು. ಭಾರತದ ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ಅಂದರೆ ೧೯೮೫ರಲ್ಲಿ ತೀರಿಕೊಂಡರು. ಇವರ ಪ್ರಮುಖ ಕಥಾ ಸಂಕಲನಗಳು: 'ಹುಚ್ಚುಮನಸಿನ ಮುನಸೀಫ ಮತ್ತು ಇತರ ಕತೆಗಳು', 'ಆರಾಧನಾ', 'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' ಮುಂತಾದವುಗಳು. 'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.

ಪಾಠದ ಬೆಳವಣಿಗೆ/ ಪಾಠದ ವಿವರ

ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು.ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು.ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು

ಪರಿಕಲ್ಪನೆ -೧ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ

ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ

ಚಿತ್ರ:Maggada Saheba manetanada Hinnele Edited.mm

ವಿವರಣೆ

ಚಟುವಟಿಕೆಗಳು

ಚಟುವಟಿಕೆ - ೧

  • ಚಟುವಟಿಕೆಯ ಹೆಸರು; ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ
  • ವಿಧಾನ/ಪ್ರಕ್ರಿಯೆ: ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು

ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

  • ಸಮಯ: 10 ನಿಮಿಷಗಳು
  • ಹಂತಗಳು: ಪ್ರೊಜೆಕ್ಟರ್‌ನಲ್ಲಿ ಚಿತ್ರ ಪ್ರದರ್ಶನ - ಮಕ್ಕಳೊಂದಿಗೆ ಚಿತ್ರನೋಡಿ ಚರ್ಚೆ
  • ಸಾಮಗ್ರಿಗಳು/ಸಂಪನ್ಮೂಲಗಳು; ಪ್ರೊಜೆಕ್ಟರ್‌, ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು (H5P),
  • ಚರ್ಚಾ ಪ್ರಶ್ನೆಗಳು;
    1. ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
    2. ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ
    3. ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸಿ ಮುನ್ನಡೆಯ ಬೇಕು? ಸರಿ - ತಪ್ಪು

ಚಟುವಟಿಕೆ - ೨

  1. ಚಟುವಟಿಕೆ; ಚಿತ್ರವನ್ನು ನೋಡಿ ಹಬ್ಬವನ್ನು ಗುರುತಿಸಿ
  2. ವಿಧಾನ/ಪ್ರಕ್ರಿಯೆ ; ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು.
  3. ಸಮಯ ; ೧೦ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು : ಸಂಪನ್ಮೂಲ
  5. ಹಂತಗಳು ;
  6. ಚರ್ಚಾ ಪ್ರಶ್ನೆಗಳು;
    1. ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
    2. ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
    3. ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ

ಶಬ್ದಕೋಶ/ಪದ ವಿಶೇಷತೆ

  • ಈ ಪದಗಳಿಗೆ ಗೋಲ್ಡನ್‌ ಶಬ್ದಕೋಶ ಬಳಸಿ ಅರ್ಥ ತಿಳಿಯಿರಿ - - ವಾಡಿಕೆ - ಪ್ರತಿನಿಧಿ - ಸದಾಚಾರ - ಉರ್ಸ್‌
  • ಅನ್ಯಭಾಷೆಯದು ಎನಿಸುವ ೫ ಪದಗಳನ್ನು ಪಟ್ಟಿಮಾಡಿ ಅದರ ಅರ್ಥ ತಿಳಿಯಿರಿ

ವ್ಯಾಕರಣಾಂಶ

ಸಜಾತಿಯ ಒತ್ತಕ್ಷರ - ವಿಜಾತಿಯ ಒತ್ತಕ್ಷರ ಪಟ್ಟಿಮಾಡಿ

ಉದಾ: ಕಟ್ಟಿಸಿದ್ದರು - ಸದ್ಭಾವನೆ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ಈ ಪಾಠಕ್ಕೆ ಆರು ಅವಧಿಗಳನ್ನು ನಿಗಧಿಪಡಿಸಿದೆ. ಮೊದಲನೆಯ ಅವಧಿಯಲ್ಲಿ ಸಣ್ಣ ಕಥೆಯನ್ನು ಕೇಳಿಸಿ ಅದರ ಕಲ್ಪನೆಯನ್ನು ಮೂಡಿಸಿದ ಬಳಿಕ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ, ಅರ್ಥೈಸಿ ಓದಿ, ಆಶಯಗಳನ್ನು ತಿಳಿಸಬಹುದು. ಎರಡನೆ, ಮೂರನೆ, ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು. ಐದನೆ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು.
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ. ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು. ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

೧ನೇ ಅವಧಿ ಮೌಲ್ಯಮಾಪನ

ಕವಿ ಪರಿಚಯವನ್ನು ಪಾಠದ ಆರಂಭದಲ್ಲಿ ಅಥವ ತರಗತಿ ಆರಂಭವಾದ ಮಧ್ಯದಲ್ಲಿ ಕಲಿಸಬಹುದು. ಆದರೆ ಈ ಲೇಖಕರು ಕೆಲವು ಮಕ್ಕಳಿಗೆ ಅಪರಿಚಿತರಾಗಿರುವುದರಿಂದ ಸಣ್ಣ ಕಥೆಕೇಳಿಸಿ ನಂತರ ಇವರ ಪರಿಚಯವನ್ನು ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಿಗೆ ಸಣ್ಣ ಕಥೆಗಳ ಮಹತ್ವ ತಿಳಿದುಕೊಳ್ಳುವುದರ ಜೊತೆ ಪ್ರಾಣಿ ಆಧಾರಿತ ಕಥೆಗಳಿಗೂ ದೈನಂದಿನ ಕಥೆಯಲ್ಲಿನ ಮನುಷ್ಯನನ್ನು ಕುರಿತು ಹೇಳುವ ಕಥೆಗೂ ವ್ಯತ್ಯಾಸ ಮತ್ತು ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಮಕ್ಕಳಿಗೆ ತಿಳಿಯುತ್ತದೆ. ಆದರೂ ತರಗತಿಯ ನಿರ್ಣಯ ಆಯಾ ಶಿಕ್ಷಕರಿಗೆ ಬಿಟ್ಟಿರುತ್ತದೆ.

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೨. ಕರೀಮನ ಚಟುವಟಿಕೆಗಳು

ಚಿತ್ರ:Karimana Chatuvatike.mm

ಪಠ್ಯಭಾಗ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆ

ಚಟುವಟಿಕೆ ೧

  1. ಚಟುವಟಿಕೆಯ ಹೆಸರು; ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ
  2. ವಿಧಾನ/ಪ್ರಕ್ರಿಯೆ: ವೀಡಿಯೋ ವೀಕ್ಷಣೆ ಮತ್ತು ಪ್ರಶ್ನೆಗಳಿಗೆ ಉತ್ತರ
  3. ಸಮಯ: 15ನಿಮಿಷಗಳು
  4. ಹಂತಗಳು: ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು.
  5. ಸಾಮಗ್ರಿಗಳು/ಸಂಪನ್ಮೂಲಗಳು; ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗಕ್ಕೆ ಭೇಟಿಯ ಡಿಜಿಟಲ್‌ ಕಥಾ ಪ್ರಸ್ತುತಿ
  6. ಚರ್ಚಾ ಪ್ರಶ್ನೆಗಳು;
  • ನಿಮ್ಮಲ್ಲಿ ಯಾರಾದರು ಮಗ್ಗಕ್ಕೆ ಭೇಟಿ ನೀಡಿರುವಿರಾ? ಎಲ್ಲಿ ? ಅದರ ಅನುಭವವನ್ನು ಹಂಚಿಕೊಳ್ಳಿರಿ
  • ದಿನದಿಂದ ದಿನಕ್ಕೆ ಮಗ್ಗಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಸಿ?
  • ಮಗ್ಗದ ಬಟ್ಟೆ ಮತ್ತು ಕೈಗಾರಿಕೆಯಲ್ಲಿ ತಯಾರಾದ ಬಟ್ಟೆಯಲ್ಲಿ ಯಾವುದು ಬಳಕೆಗೆ ಚಂದ ಮತ್ತು ಯಾವುದು ದುಬಾರಿ? ಏಕೆ

ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ ಪದ ಸಂಪತ್ತನ್ನು ವೃದ್ದಿಸುವುದು

ವ್ಯಾಕರಣಾಂಶ

  1. ನಾಮ ಪದ ಮತ್ತು ಕ್ರಿಯಾ ಪದದ ಪರಿಚಯ (ಚಿತ್ರ ಬಳಸಿ)

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಅವಧಿಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೩. ಮನೆ ಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು

ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ

ಚಿತ್ರ:Mane bitta Kareem.mm

ವಿವರಣೆ

ಚಟುವಟಿಕೆಗಳು

ಚಟುವಟಿಕೆಗಳು ೧

  1. ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
  2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
  3. ಸಮಯ: 15ನಿಮಿಷಗಳು
  4. ವೃದ್ದಿಗೊಳ್ಳುವ ಸಾಮರ್ಥ್ಯಗಳು  ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
  5. ಹಂತಗಳು: ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
  6. ಸಾಮಗ್ರಿಗಳು/ಸಂಪನ್ಮೂಲಗಳು; ಈ ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ
  7. ಚರ್ಚಾ ಪ್ರಶ್ನೆಗಳು;
  • ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
  • ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
  • ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?

ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ

ವ್ಯಾಕರಣಾಂಶ

  • ಅಲ್ಪ ಪ್ರಾಣ ಮತ್ತು ಮಹಾ ಪ್ರಾಣದ ಬಗ್ಗೆ ತಿಳಿಯಿರಿ
  • ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ ಗಳ ಬಗ್ಗೆ ತಿಳಿಯಿರಿ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು/ ಭಾಷಾ ವೈವಿಧ್ಯತೆ

ಈ ಪಾಠದಲ್ಲಿ ಕಂಡು ಬಂದಿರುವ ಅನ್ಯ ದೇಶೀಯ ಪದಗಳನ್ನು ಪಟ್ಟಿಮಾಡಿ - ಅವು ಯಾವ ಭಾಷೆಯ ಪದಗಳೆಂದು ತಿಳಿಯಿರಿ

ಉದಾ: ಉರ್ಸ್‌ - ಹೆಡ್‌ ಮಾಸ್ಟರ್‌

ಅವಧಿ-3ರ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗ ಕರೀಮನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು. ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು.

ಪೂರ್ಣ ಪಾಠದ ಮೌಲ್ಯಮಾಪನ

ಇಲ್ಲಿ ಧಾರ್ಮಿಕ ಸಹಿಷ್ಣುವನ್ನು ಸಾರುವ ಕಥೆ ಇದೆ. ಕಥೆಯ ಓಟ ವೇಗವಾಗಿದ್ದರೂ ಸಣ್ಣ ಕಥೆಯಾದ್ದರಿಂದ ಬೇಗ ವಿಷಯವನ್ನು ದಾಟಿಸಿಬಿಡಬಹುದು. ಆದರೂ ಅವನು ಸರವನ್ನು ಏನು ಮಾಡಿದ ಎಂದು ಅಥವ ಅವನು ಕಳ್ಳ ಅಲ್ಲೆ ಎಂದು ಮಕ್ಕಳು ಕೇಳಬಹುದು. ಶಿಕ್ಷಕರು ಆಲೋಚಿಸಿ ಧನಾತ್ಮಕವಾಗಿ ಉತ್ತರಿಸಬೇಕು. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಹೊಸ ಹೊಸ ಕಲ್ಪನೆಯನ್ನು ಮೂಡಿಸುತ್ತದೆ.

ಮಕ್ಕಳ ಚಟುವಟಿಕೆ