ಮಗ್ಗದ ಸಾಹೇಬ- ಗುಂಪು ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಗುಂಪು ಚಟುವಟಿಕೆಗಳು

ಕಡತವನ್ನು ನಕಲು ಮಾಡಿಕೊಳ್ಳಲು ಅಥವ ಡೌನ್‌ಲೋಡ್‌ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿರಿ

ಪಾಠ ಪರಿಚಯ

ಚಟುವಟಿಕೆ-೧ ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ಮಾತನಾಡುವರು ಮಕ್ಕಳು ತಮಗೆ ಗೊತ್ತಿರುವ ವೃತ್ತಿಗಳ ಬಗ್ಗೆ ವಿವರವನ್ನು ನೀಡುವರು ಮುಖ್ಯವಾಗಿ ವಿದ್ಯಾರ್ಥಿಗಳು ಹೇಳುವ ವೃತ್ತಿಯ ಲಕ್ಷಣಗಳು ಮತ್ತು ಆಧುನಿಕ ಯುಗದಲ್ಲಿ ಆ ವೃತ್ತಿಗೆ ಇರುವ ಸ್ಥಾನಮಾನ ಮತ್ತು ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಕ್ಕಳು ಪರಿಚಯ ಮಾಡಿಕೊಡುವರು. ಪ್ರಕ್ರಿಯೆ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನಾಗಿ ಮಾಡಿ,ಪ್ರತಿ ಗುಂಪಿನವರು ಒಂದರಿಂದ ಎರಡು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಗುಂಪಿನಲ್ಲಿ ಚರ್ಚೆ ಮಾಡಿ ನಂತರ ತರಗತಿಯಲ್ಲಿ ವಿವರಣೆಯನ್ನು ನೀಡುವರು.

ಗುಂಪು ೧ ರ ಚಟುವಟಿಕೆಗಳು

ಗದ್ಯದಲ್ಲಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡುವುದು-ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳನ್ನುಪಟ್ಟಿ ಮಾಡುವುದು   ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಪಟ್ಟಿ ಮಾಡುವುದು

  • ಹಿರಿಯ* ಕಿರಿಯ
  • ಪವಿತ್ರ * ಅಪವಿತ್ರ
  • ನಿರಾಸೆ * ಆಸೆ
  • ಅಗ್ಗದು * ಬಾರಿ
  • ಆರಂಭ * ಮುಕ್ತಾಯ
  • ಉತ್ಸಾಹ * ನಿರುತ್ಸಾಹ
  • ವರ * ಶಪ
  • ಯುವಕ * ಮುದುಕ
  • ಉಪಕಾರ * ಅಪಕಾರ
  • ಸಮಾಧಾನ * ಅಸಮಾಧಾನ
  • ಕೀರ್ತಿ * ಅಪಕೀರ್ತಿ
  • ಆರೋಗ್ಯ * ಅನಾರೋಗ್ಯ

ಮಗ್ಗದ ಬಗ್ಗೆ ಮಕ್ಕಳಿಗೆ ಇರುವ ಆಲೋಚನೆಗಳನ್ನು ನಕ್ಷೆಯ ಮೂಲಕ ಪಟ್ಟಿ ಮಾಡುವುದು ದಾರ,ಬಣ್ಣ ,ಬಟ್ಟೆ,ಯಂತ್ರ,ಕಟ್ಟಿಗೆ,ವ್ಯಾಪಾರಿ,ಮಾರಾಟ,ಕೊಳ್ಳುವವರು,ಹಣ  

ಪಠ್ಯಪುಸ್ತಕದಲ್ಲಿ ನೀಡಿರುವ ಪ್ರಶ್ನೆಗಳನ್ನು ಹೊರತುಪಡಿಸಿ ಮಕ್ಕಳು ಪಠ್ಯವನ್ನು ಓದಿ ಸ್ವಯಂ ಪ್ರಶ್ನೆಗಳನ್ನು ರಚನೆ ಮಾಡುವುದು

  • ಕರೀಮನು ಮನೆಯಿಂದ ಮಾಯವಾಗಲು ಕಾರಣವೇನು?
  • 'ನವೀನ ಶಿಕ್ಷಣ'ಎಂದರೇನು?
  • ರಹೀಮನಿಗೆ ಕಿರಿಯ ಮಗ'ಕರೀಮ'ಎಂದರೆ ಕೋಪ ಏಕೆ?
  • ಕರೀಮನಿಗೆ ಪದ್ಮಭೂಷಣ ಪ್ರಶಸ್ತಿ ಬರಲು ಕಾರಣವೇನು?
  • ಹುಸೇನ್ ಸಾಹೇಬರು ಮಗ್ಗವನ್ನು ಮುಟ್ಟದಿರಲು ಕಾರಣವೇನು?

ಕೆಳಗಿನ ಪದಗಳಿಗೆ ಅರ್ಥವನ್ನು ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.ಪರಿವರ್ತನೆ,ಗೌಪ್ಯ,ಅಪಕೀರ್ತಿ,ಅಗ್ಗ,ಹಠಮಾರಿ

  • ಪರಿವರ್ತನೆ:ಗಾಂಧೀಜಿಯವರ ಕಥೆಗಳನ್ನು ಓದಿದ ನಂತರ ಗಾಂಧೀಜಿಯವರ ಬಗ್ಗೆ ಇಂದ ಅಭಿಪ್ರಾಯದಲ್ಲಿ ಪರಿವರ್ತನೆ ಆಯಿತು.
  • ಗೌಪ್ಯ:ನಮ್ಮ ಮನೆಯಲ್ಲಿ ನಡೆಯುವ ಕೆಲವು ವಿಷಯಗಳನ್ನು ಗೌಪ್ಯವಾಗಿ ಇಡುತ್ತೇವೆ.
  • ಅಪಕೀರ್ತಿ:ನನ್ನ ಮನೆಯರಿಗೆ ನನ್ನ ವರ್ತನೆಯಿಂದ ಅಪಕೀರ್ತಿಯನ್ನು ತರುವುದಿಲ್ಲ.
  • ಅಗ್ಗ:ಬೆಂಗಳೂರಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಬೇರೆ ಸ್ಥಳಗಳಲ್ಲಿ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ.
  • ಹಠಮಾರಿ:ಚಿಕ್ಕ ಮಕ್ಕಳು ತಮಗೆ ಇಷ್ಟವಾದ ವಸ್ತುವಿಗಾಗಿ ಹಠ ಮಾಡುತ್ತಾರೆ.

ನಿಮಗೆ ಗೊತ್ತಿರುವ ಉದ್ಯೋಗಗಳ ಬಗ್ಗೆ ಚಿತ್ರಗಳನ್ನು ಸಂಗ್ರಹಿಸಿ ಬರೆಯಿರಿ,.
 
ಪಾಠದಲ್ಲಿ ಬರುವ ಹಬ್ಬಗಳನ್ನು ಪಟ್ಟಿ ಮಾಡಿ -ಅವುಗಳ ಬಗ್ಗೆ ಪ್ರಬಂಧವನ್ನು ಬರೆಯುವುದು ಗಣೇಶ್ ಚತುರ್ಥಿಹಿಂದು ಪುರಾಣ ಗ್ರಂಥಗಳ ಪ್ರಕಾರ ಗಣೇಶನ ದೇವತೆ ಪಾರ್ವತಿ ರಚಿಸಲಾಯಿತು, ಶಿವನ ಹೆಂಡತಿ. ಇದು ಒಂದು ದಿನ ಪಾರ್ವತಿ ಅವರು ಸ್ನಾನವಾದ ಮೊದಲು ತನ್ನ ದೇಹದ ಮೇಲೆ ಬಳಸಿದ ಪೇಸ್ಟ್ ಒಂದು ಶಿಲ್ಪ ರೂಪುಗೊಂಡ ಹೇಳಲಾಗುತ್ತದೆ. ಆ ಚಿತ್ರದಲ್ಲಿ ಜೀವ ತುಂಬಿದೆ ಮತ್ತು ತನ್ನ ಬಚ್ಚಲು ಪ್ರವೇಶ ಕಾವಲು ಆದೇಶ. ದೇವರು ಶಿವ ಹಿಂತಿರುಗಿ ಆ ಹುಡುಗ ತನ್ನ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಿತು. ತೀವ್ರ ಕ್ರೋಧ ಶಿವ ಹುಡುಗನ ತಲೆ ಹೊಡೆದು. ಈ ಘಟನೆಯು ತೀರಾ ದುಃಖ ಪಾರ್ವತಿ ತುಂಬಿದ ಮತ್ತು ತನ್ನ ಮಗ ಮರಳಿ ಶಿವನಲ್ಲಿ ಕೋರಿಕೊಳ್ಳುತ್ತಾರೆ. ನಂತರ ಶಿವ ಆನೆಯ ತಲೆ ಸ್ಥಿರ ಮತ್ತು ಹುಡುಗನ ದೇಹದ ಮೇಲೆ ಜೀವನದ ಪುನಃಸ್ಥಾಪಿಸಲು. ಶಿವ ಈ ಹುಡುಗ ಎಂಬ “ಗಣಪತಿ” Gan ಸಾಧನವಾಗಿ (ಅತಿಥೇಯಗಳ) & ಪತಿ ಎಂದರೆ (ಮುಖ್ಯ) ಮತ್ತು ಆಶೀರ್ವಾದ ಗಣಪತಿ ಪ್ರತಿ ಹೊಸ ಸಾಹಸಕ್ಕೆ ಮೊದಲು ಪೂಜಿಸಲಾಗುತ್ತದೆ ಎಂದು. ಗಣೇಶ ಅಡ್ಡರಸ್ತೆ ಮೆರವಣಿಗೆ ಗಣೇಶ ಚತುರ್ಥಿ ಚಿತ್ರಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಕೊಂಡಿಗಳನ್ನು ಕಂಡುಕೊಳ್ಳುತ್ತಾನೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ ರಲ್ಲಿ ಗಣಪತಿ ವಿಸರ್ಜನ್ ಮೆರವಣಿಗೆ ಪ್ರಾರಂಭಿಸಿದರು 1893 ಮತ್ತು ಭಾರತದ ಸಮೂಹ ನಡುವೆ ಸ್ವಾತಂತ್ರ್ಯ ಚಳುವಳಿ ಬಗ್ಗೆ ಜಾಗೃತಿ ಭೇದಿಸುವುದಕ್ಕೆ ವೇದಿಕೆಯಾಗಿ ಇದು ಬಳಸಲಾಗುತ್ತದೆ.

ಕೃಷ್ಟಾಷ್ಟಮಿದುಯೋಧನನ ತೊಡೆ ಮುರಿದು ಬಿದ್ದಲ್ಲಿಂದ ಕಲಿಯುಗ ಆರಂಭವಾಗಿ 5112 ವರ್ಷಗಳು ಸಂದಿವೆ. ದ್ವಾಪರಯುಗ ಮುಗಿದ 3-4 ವರ್ಷಗಳಲ್ಲಿ ಶ್ರೀ ಕೃಷ್ಣ ತನ್ನ ಕರ್ಮ ಮುಗಿಸಿದ್ದಾನೆ. ಪರಂಧಾಮ ಸೇರಿದ್ದಾನೆ. ಆತ ಬದುಕಿದ್ದು 108 ವರ್ಷ.ಅಂದರೆ ಆತ 5222 ವರ್ಷಗಳ ಹಿಂದೆ ಜನಿಸಿದ್ದಾನೆ ಎನ್ನುತ್ತಾರೆ ಎಸ್.ಎಂ.ಎಸ್.ಪಿ ಸಂಸ್ಕೃತ ಮಹಾಪಾಠಶಾಲಾ ಪ್ರಾಚಾರ್ಯರು. ಹೌದು ಬೆಣ್ಣೆ ಕದ್ದು ಮೆದ್ದ, ದೇವಕಿಯ ಕಂದ ಶ್ರೀ ಕೃಷ್ಣನಿಗೆ 5222ನೇ ಜನ್ಮ ದಿನದ ಸಂಭ್ರಮ. ಜಗತ್ತಿಗೆ ಭಗವದ್ಗೀತೆಯೆಂಬ ಆಧ್ಯಾತ್ಮದ ಟಾನಿಕ್ ನೀಡಿದ ಮಹಾತ್ಮ. ನೀನು ಕರ್ಮ ಮಾಡು, ಫಲಾಫಲ ನನಗಿರಲಿ ಎನ್ನುವ ಬೋಧನೆಯನ್ನು ಮಾಡಿದ ಚೇತನ ಪುರುಷ. ನಂದಗೋಕುಲದಲ್ಲಿ ವಸುದೇವ-ದೇವಕಿಯ ಅಷ್ಟಮ ಗರ್ಭದಲ್ಲಿ ಅವತಾರವೆತ್ತಿದ ಶ್ರೀಕೃಷ್ಣ ಸಿಂಹಮಾಸದ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರದ ಚಂದ್ರೋದಯ ಕಾಲದಲ್ಲಿ ಧರೆಗಿಳಿದನಂತೆ. ದುಷ್ಟರಿಗೆ ಶಿಕ್ಷೆ ಕೊಟ್ಟು ಶಿಷ್ಟರನ್ನು ಪಾಲಿಸುವ ಜವಾಬ್ಧಾರಿ ವಹಿಸಿದ ಧರ್ಮಬೋಧಕ. ಕೃಷ್ಣ ಪಕ್ಷದಲ್ಲಿ ಹುಟ್ಟಿದ ಇವನಲ್ಲಿ ಎಲ್ಲರನ್ನೂ ಆಕರ್ಷಿಸುವ ಗುಣ.

ಗುಂಪು ೨ ರ ಚಟುವಟಿಕೆಗಳು

ಪಾಠದಲ್ಲಿ ಬರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿ, ಅವುಗಳನ್ನು ಬಿಡಿಸಿ ಬರೆಯಿರಿ

  • ಮಗ್ಗ: ಮ್+ಅ+ಗ್+ಗ್+ಅ
  • ಅಬ್ದುಲ್ : ಅ+ಬ್+ದ್+ಉ+ಲ್
  • ಜನಪ್ರಿಯ= ಜ್+ಅ+ನ್+ಅ+ಪ್+ರ್+ಇ+ಯ್+ಅ
  • ದೇವಸ್ಥಾನ : ದ್+ಏ+ವ್+ಅ+ಸ್+ಥ್+ಅ+ನ್+ಅ

ಹೊಸ ಪದಗಳನ್ನು ಪಟ್ಟಿ ಮಾಡುವುದು

ಐದು ಪದಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ

  • ಪ್ರತಿನಿಧಿ:ಮುಖ್ಯಗುರುಗಳಿಗೆ ತರಗತಿಯಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಲು ಎಲ್ಲಾರ ಪರವಾಗಿ ನಾನು ಪ್ರತಿನಿಧಿಯಾಗಿ ಹೊಗುತ್ತೇನೆ .
  • ಆಧಿಪತ್ಯ:ಮನೆಯಲ್ಲಿ ನಮ್ಮ ತಮ್ಮನ ಮೇಲೆ ನಾನು ಆಧಿಪತ್ಯವನ್ನು ಚಲಾಯಿಸುತ್ತೇನೆ.
  • ಉತ್ಸಾಹ:ಅಶೋಕನಿಗೆ ಆಟವಾಡುವದರಲ್ಲಿ ತುಂಬಾ ಉತ್ಸಾಹವಿದೆ.

ತಮಗೆ ಗೊತ್ತಿರುವ ಹಬ್ಬಗಳನ್ನು ಪಟ್ಟಿ ಮಾಡಿ,ಒಂದರ ಕುರಿತು ಪ್ರಬಂಧ ಬರೆಯುವುದು.(ಅವಧಿ ೨)

  1. ಯುಗಾದಿ
  2. ದಸರಾ
  3. ದೀಪವಾಳಿ
  4. ಶ್ರೀರಾಮ ನವಮಿ
  5. ಶಿವರಾತ್ರಿ
  6. ಗಣೇಶಚತುರ್ಥಿ
  7. ನಾಗರ ಪಂಚಾಮಿ
  8. ರಂಜಾನ್
  9. ಬಕ್ರಿದ್
  10. ಕ್ರಿಸ್ ಮಸ್

ಗುಂಪು ೩ ರ ಚಟುವಟಿಕೆಗಳು

  1. ಪಾಠದಲ್ಲಿ ಬರುವ ೧೦ ಪದಗಳನ್ನು ಪಟ್ಟಿ ಅವುಗಳನ್ನು ಬಿಡಿಸಿ ಬರೆಯಿರಿ.
  2. ಗುಣಿತಾಕ್ಷರ ರಹಿತ ಮತ್ತು ಗುಣಿತಾಕ್ಷರ ಸಹಿತ ಪದಗಳನ್ನು ಪಟ್ಟಿ ಮಾಡಿ.