ಮಗ್ಗದ ಸಾಹೇಬ ಚಟುವಟಿಕೆ ೨ ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚಟುವಟಿಕೆ - ೨ 
ಚಟುವಟಿಕೆ; ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ 
ವಿಧಾನ/ಪ್ರಕ್ರಿಯೆ ; ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಹಬ್ಬದ ಹೆಸರಿನ ಮುದ್ರಣವಾದ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು. 
ಸಮಯ ; ೧೦ ನಿಮಿಷಗಳು
ಸಾಮಗ್ರಿಗಳು/ಸಂಪನ್ಮೂಲಗಳು : ಸಂಪನ್ಮೂಲ 
ಹಂತಗಳು ; ಮೊದಲು ಚಿತ್ರಗಳನ್ನು ತಂಡದಿಂದ ಒಬ್ಬರು ವೀಕ್ಷಿಸುತ್ತಾರೆ. ನಂತರ ಉಳಿದವರ ಜೊತೆ ಚರ್ಚಿಸಿ ತರಗತಿಯ ಜೊತೆ ಪ್ರಸ್ತುತಪಡಿಸುತ್ತಾರೆ. ಪ್ರತಿ ಚಿತ್ರವೂ ಸಾಧ್ಯವಾದಷ್ಟು ಮಕ್ಕಳು ಗುರುತಿಸುವ ಮಟ್ಟದಲ್ಲಿದ್ದು ಹಬ್ಬದ ಆಚರಣೆಯ ಕಾರಣ, ಹಿನ್ನೆಲೆ, ಮಹತ್ವ, ಮತ್ತು ಅವರವರ ಮನೆಯಲ್ಲಿ ಆಚರಿಸುವ ಬಗೆಯನ್ನು ಮಕ್ಕಳು ತಿಳಿಸುತ್ತಾರೆ ಮತ್ತು ಉಳಿದವರು ತಿಳಿದುಕೊಳ್ಳುತ್ತಾರೆ.  
ಚರ್ಚಾ ಪ್ರಶ್ನೆಗಳು;
ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ