ಮಗ್ಗದ ಸಾಹೇಬ ಚಟುವಟಿಕೆ ೫ ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು ಮತ್ತು ಬರೆಯುವುದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆಗಳು ೧

   ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
   ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
   ಸಮಯ: 15ನಿಮಿಷಗಳು
   ವೃದ್ದಿಗೊಳ್ಳುವ ಸಾಮರ್ಥ್ಯಗಳು  ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
   ಹಂತಗಳು: ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
   ಸಾಮಗ್ರಿಗಳು/ಸಂಪನ್ಮೂಲಗಳು; ಈ ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ
   ಚರ್ಚಾ ಪ್ರಶ್ನೆಗಳು;
   ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
   ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
   ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?