"ರಚನಾ ಸಮಾಜ ವಿಜ್ಞಾನ 9 ಕಲಿಕಾ ಪ್ರಗತಿಯ ಅವಲೋಕನವಾಗಿ ಅಭ್ಯಾಸ ಹಾಳೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =15. ಕಲಿಕಾ ಪ್ರಗತಿಯ ಅವಲೋಕನವಾಗಿ ಅಭ್ಯಾಸ ಹಾಳೆ = ಕಲಿಕೆಯಲ್ಲಿ ಮಗುವಿನ ಭಾಗವಹ...)
 
( ಯಾವುದೇ ವ್ಯತ್ಯಾಸವಿಲ್ಲ )

೦೯:೦೪, ೧೬ ನವೆಂಬರ್ ೨೦೧೩ ದ ಇತ್ತೀಚಿನ ಆವೃತ್ತಿ

15. ಕಲಿಕಾ ಪ್ರಗತಿಯ ಅವಲೋಕನವಾಗಿ ಅಭ್ಯಾಸ ಹಾಳೆ

ಕಲಿಕೆಯಲ್ಲಿ ಮಗುವಿನ ಭಾಗವಹಿಸುವಿಕೆ, ಜವಾಬ್ದಾರಿ, ಅಭಿವ್ಯಕ್ತಿಗಳನ್ನು ಒಳಗೊಂಡಂತೆ ಮಗುವಿನ ಬೌದ್ಧಿಕ ಶಕ್ತಿ, ಆತ್ಮಗೌರವ ಹಾಗೂ ವರ್ತನೆಗಳನ್ನು ಅರ್ಥೈಸಿಕೊಳ್ಳಲು ಬಳಸುವ ಅದ್ಭುತ ಸಾಧನವೇ ಅಭ್ಯಾಸಹಾಳೆ.

ಮಗು ಸ್ವ ಅನುಭವ ಹಂಚಿಕೊಳ್ಳುವುದರೊಂದಿಗೆ ಸಂವೇದನಾಶೀಲತೆಯಿಂದ ಸ್ವಯಂ ಅವಲೋಕನವನ್ನು ಮಾಡಿಕೊಳ್ಳಲು ಉತ್ತಮ ಮಾಪನವಾಗಿದೆ. ಮಗು ತನ್ನ ತಪ್ಪುಗಳನ್ನು ಶಿಕ್ಷಕರು, ಸ್ನೇಹಿತರು ಗಮನಿಸುತ್ತಾರೆ ಎಂಬ ಎಚ್ಚರಿಕೆಯೊಂದಿಗೆ ತಪ್ಪು ಮಾಡುತ್ತಲೇ ಸರಿಯಾದ ಕ್ರಮ/ಉತ್ತರಗಳನ್ನು ಕಂಡುಕೊಳ್ಳುತ್ತಾ ಹೋಗುತ್ತದೆ. ಶಿಕ್ಷಕರು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಚಟುವಟಿಕೆಗಳನ್ನು ಕಲಿಕೆಯ ಸಂದರ್ಭದಲ್ಲಿ ಬಳಸಿಕೊಂಡರೂ, ಪಾಠದ ಕೊನೆಯಲ್ಲಿ ಮಕ್ಕಳ ಕಲಿಕೆಯ ಪ್ರಗತಿಯ ಅವಲೋಕನಕ್ಕಾಗಿ ಹಾಗೂ ಕಲಿವಿನಲ್ಲಿ ಹಿಂದುಳಿದ ಮಕ್ಕಳಿಗೆ ಹಿಮ್ಮಾಹಿತಿ ನೀಡುವ ಸಲುವಾಗಿ ಅಭ್ಯಾಸ ಹಾಳೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ಅಭ್ಯಾಸ ಹಾಳೆಯು ಮಗುವಿನ ಕಲಿಕಾ ಅನುಭವಗಳನ್ನು ಬಹಳ ಮುಖ್ಯವಾಗಿ ಅರ್ಥೈಸುವಂತಿರಬೇಕು.

ಸೂಚನೆ: (ಅಭ್ಯಾಸ ಹಾಳೆಯಲ್ಲಿ ಎಲ್ಲಾ ಮಾದರಿಯ ಪ್ರಶ್ನಾವಳಿಗಳು ಇರಬೇಕೆಂದು ತಿಳಿಯಬೇಕಿಲ್ಲ. ಇಲ್ಲಿ ಮಕ್ಕಳ ಅರ್ಥೈಸಿಕೊಂಡಿರುವಿಕೆಯನ್ನು ಅನುಕೂಲಿಸಲು ಪ್ರಶ್ನೆಗಳಿದ್ದು, ಇವು ಮಗುವಿನ ಯಾವ ರೀತಿಯ ಕಲಿಕೆಯನ್ನು ಬಯಸುತ್ತವೆ ಎಂಬುದನ್ನು ಒಳಗೊಂಡಂತಿರಲಿ).

ಉದಾಹರಣೆಯಾಗಿ ಒಂದು ಅಭ್ಯಾಸ ಹಾಳೆಯನ್ನು ಮಾದರಿಯಾಗಿ ಕೊಡಲಾಗಿದೆ.

ಅಭ್ಯಾಸ ಹಾಳೆ

ಘಟಕ : ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿವರ್ಗ, (ಭೂಗೋಳ ವಿಭಾಗ).

I. ಕೆಳಗಿನ ವಾಕ್ಯಗಳಲ್ಲಿ ಬಿಟ್ಟು ಹೋಗಿರುವ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ:

1) ಕರ್ನಾಟಕದಲ್ಲಿ ____________ ಮಾದರಿ ವಾಯುಗುಣವಿದೆ.

2) ವಾಯುಗುಣದ ಋತುಗಳನ್ನು _________ ವಿಭಾಗಗಳಾಗಿ ವಿಂಗಡಿಸಲಾಗಿದೆ.

3) ಕರ್ನಾಟಕಕ್ಕೆ ___________ ಮಾರುತಗಳಿಂದ ಹೆಚ್ಚು ಮಳೆ ಬರುತ್ತದೆ.

4) ತೇವಾಂಶವನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವ ಮಣ್ಣು ___________

5) ಕರ್ನಾಟಕ ಕಾಡುಗಳಲ್ಲಿ ಹೆಚ್ಚಿಗೆ ___________ ಮರ ಕಂಡು ಬರುತ್ತದೆ.


II. ಕೆಳಗಿನ ಪ್ರತಿ ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ:

1) ಕರ್ನಾಟಕ ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನಗಳ ಸಂಖ್ಯೆ

ಎ) ಐದು ಬಿ) ಎಂಟು ಸಿ) ಹನ್ನೆರಡು ಡಿ) ಇಪ್ಪತ್ತನಾಲ್ಕು

2) ಚಳಿಗಾಲದಲ್ಲಿ ಮರಗಳು ಎಲೆ ಉದುರಿಸಲು ಕಾರಣ

ಎ) ಸೂರ್ಯನ ಕಿರಣ ಬಿ) ತೇವಾಂಶದ ಕೊರತೆ ಸಿ) ಮಳೆ ಕಡಿಮೆ ಡಿ) ಶಾಖ ಕಡಿಮೆ

3) ಸುಣ್ಣ ಮತ್ತು ಉಪ್ಪಿನಾಂಶ ಹೆಚ್ಚಾಗಿರುವ ಮಣ್ಣು

ಎ) ಕಪ್ಪು ಬಿ) ಲ್ಯಾಟರೈಟ್ ಸಿ) ಕೆಂಪು ಡಿ) ಮೆಕ್ಕಲು

4) ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಿದು

ಎ) ಆಗುಂಬೆ ಬಿ) ಚಿತ್ರದುರ್ಗ ಸಿ) ಚಿರಾಪುಂಜಿ ಡಿ) ನಾಯಕನಹಟ್ಟಿ

5) ಕರ್ನಾಟದಲ್ಲಿ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲಾವಧಿ

ಎ) ಅಕ್ಟೋಬರ್, ನವೆಂಬರ್ ಬಿ) ಮಾರ್ಚ್-ಮೇ ಸಿ) ಡಿಸೆಂಬರ್, ಫೆಬ್ರವರಿ ಡಿ) ಜೂನ್-ಸೆಪ್ಟೆಂಬರ್


III. ಈ ಕೆಳಗಿನ ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೇ ಪದದ ಸಂಬಂಧ ಕಲ್ಪಿಸಿ ಬರೆಯಿರಿ.

1) ರಾಗಿ, ಕೆಂಪುಮಣ್ಣು, ಹತ್ತಿ, __________

2) ಕಾಫಿ, ಪಾನೀಯ ಬೆಳೆ, ಸೂರ್ಯಕಾಂತಿ, __________


IV. ಕೆಳಗಿನ ಆಯಾ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ:

1) ಆನೆ, ಹುಲಿ, ಸಿಂಹ, ಹಿಮಕರಡಿ.

2) ಲವಂಗ, ಸಾಸಿವೆ, ದಾಲ್ಚಿನ್ನಿ, ಏಲಕ್ಕಿ.


V. ಕೆಳಗಿನ `ಅ' ಪಟ್ಟಿಯಲ್ಲಿರುವ ಪದಗಳೊಂದಿಗೆ `ಬ' ಪಟ್ಟಿಯ ಪದಗಳನ್ನು ಹೊಂದಿಸಿ ಉತ್ತರಕ್ಕಾಗಿ ನೀಡಲಾಗಿರುವ `ಸಿ' ಪಟ್ಟಿಯಲ್ಲಿ ಬರೆಯಿರಿ:

`ಅ' ಪಟ್ಟಿ `ಬ' ಪಟ್ಟಿ `ಸಿ' ಪಟ್ಟಿ

1) ಗೋಡಂಬಿ ಎ) ನಿತ್ಯ ಹರಿದ್ವರ್ಣದ ಕಾಡುಗಳು __________

2) ಹೊನ್ನೆ ಬಿ) ಗಿರಿಧಾಮ __________

3) ಬಾಬಾಬುಡನಗಿರಿ ಸಿ) ಚಳಿಗಾಲ __________

4) ಆಗುಂಬೆ ಡಿ) ಕರಾವಳಿ __________

5) ಡಿಸೆಂಬರ್-ಫೆಬ್ರವರಿ ಇ) ಹೆಚ್ಚು ಮಳೆ ಬೀಳುವ ಪ್ರದೇಶ __________


VI. ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರವನ್ನು ಬರೆಯಿರಿ:

1) ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ ಯಾವುದು?

2) ಸ್ವಾಭಾವಿಕ ಸಸ್ಯ ವರ್ಗ ಎಂದರೇನು?

3) ಎಲೆ ಉದುರುವ ಸಸ್ಯವರ್ಗಗಳು ಎಲ್ಲಿ ಕಂಡುಬರುತ್ತವೆ?

4) ವಿಶ್ವ ಫಾರಂಪರಿಕ ಪ್ರದೇಶವೆಂದು ಕರ್ನಾಟಕದ ಯಾವ ಭಾಗವನ್ನು ೋಷಿಸಲಾಗಿದೆ?

5) ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯವಿರುವ ಜಿಲ್ಲೆ ಯಾವುದು?


VII. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಗಳನ್ನು ಬರೆಯಿರಿ:

1) ವಾಯುಗುಣವನ್ನು ನಿರ್ಧರಿಸುವ ಅಂಶಗಳಾವುವು?

2) ಕರ್ನಾಟಕದ ಪ್ರವಾಸ ಮಾಸ ಎಂದು ಜನವರಿ ತಿಂಗಳನ್ನು ಏಕೆ ಕರೆಯುತ್ತಾರೆ?

3) ಕರ್ನಾಟಕದ ಪ್ರಮುಖ ಅರಣ್ಯ ಪ್ರದೇಶಗಳಾವುವು?


VIII. ಕೆಳಗಿನ ವಿಷಯಗಳಿಗೆ ಟಿಪ್ಪಣಿ ಬರೆಯಿರಿ:

1) ಕಪ್ಪುಮಣ್ಣು

2) ನಿತ್ಯ ಹರಿದ್ವರ್ಣದ ಕಾಡುಗಳು


IX. ಕೆಳಗಿನವುಗಳಿಗೆ ಕಾರಣ ಕೊಡಿ

1) ಕರ್ನಾಟಕದ ಉತ್ತರ ಮೈದಾನ ಪ್ರದೇಶದಲ್ಲಿ ಬೇಸಿಗೆಯಲ್ಲಿ ಮಳೆ ಬೀಳುತ್ತದೆ.

2) ಕರ್ನಾಟಕದ ಪೂರ್ವ ಮೈದಾನ ಪ್ರದೇಶವು ಮಳೆಯ ನೆರಳಿನ ಪ್ರದೇಶವಾಗಿದೆ.

3) ಕರ್ನಾಟಕವು ಶ್ರೀಗಂಧದ ನಾಡು

4) ಪಂಚನದಿಗಳ ಬೀಡಾದ ಬೀಜಾಪುರ ಕಡಿಮೆ ಅರಣ್ಯ ಪ್ರದೇಶ ಹೊಂದಿದೆ.


X. ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಗಳನ್ನು ಬರೆಯಿರಿ:

1) ಕರ್ನಾಟಕದಲ್ಲಿ ಅತೀವೃಷ್ಟಿ - ಅನಾವೃಷ್ಟಿ.

2) ವಿಶ್ವ ಪರಂಪರೆಯ ಸಾಲಿನಲ್ಲಿ ಕರ್ನಾಟಕದ ಪಶ್ವಿಮಟ್ಟ ಪ್ರದೇಶ.

3) ಕರ್ನಾಟಕ ವನ್ಯ ಪ್ರಾಣಿ ಸಂಕುಲ.


XI. ಕೆಳಗಿನ ಪ್ರಶ್ನೆಗಳಿಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಗಳನ್ನು ಬರೆಯಿರಿ:

1) ಬೇಸಿಗೆಕಾಲ, ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಕಂಡಂತೆ ವಾತಾವರಣದಲ್ಲಾಗುವ ವ್ಯತ್ಯಾಸಗಳನ್ನು ಸಂಗ್ರಹಿಸಿರಿ.

2) ಅರಣ್ಯ ಸಂರಕ್ಷಣೆಯಲ್ಲಿ ನಿಮ್ಮ ಪಾತ್ರವೇನೆಂಬುದನ್ನು ಬರೆಯಿರಿ.


XII. ನಿಮ್ಮ ಸಮೀಪದ ಪಕ್ಷಿಧಾಮ ಒಂದಕ್ಕೆ ಭೇಟಿ ನೀಡಿ ಆ ಪಕ್ಷಿಧಾಮದ ವಿಶೇಷತೆಯನ್ನು ವನ್ಯ ಜೀವಿ ಸಂರಕ್ಷಣಾ ಹಿನ್ನಲೆಯಲ್ಲಿ ಅರ್ಥೈಸಿರಿ. ಿ. ನಿಮ್ಮ ಸುತ್ತ ಮುತ್ತಲಿನಲ್ಲಿ ಕಂಡುಬರುವ ಸಸ್ಯವರ್ಗಗಳನ್ನು ಗುರುತಿಸಿ, ಅವು ಯಾವ ವಿಧದ ಅರಣ್ಯ ವರ್ಗಕ್ಕೆ ಸೇರುತ್ತವೆ ಎಂಬ ವಿಚಾರವಾಗಿ ಅಲ್ಲಿನ ವಾಯುಗುಣ, ಪ್ರದೇಶದ ಹಿನ್ನಲೆಯೊಂದಿಗೆ ಯೋಜನೆ ತಯಾರಿಸಿರಿ.


XIV. ಚಟುವಟಿಕೆಗಳು

  • ಸಾಕುಪ್ರಾಣಿ, ಕಾಡುಪ್ರಾಣಿಗಳ ಚಿತ್ರ ಸಂಗ್ರಹ
  • ವಿವಿಧ ಬಗೆಯ ಮಣ್ಣಿನ ಸಂಗ್ರಹ, ಆಯಾ ಬೆಳೆಗಳೊಂದಿಗೆ
  • ನೀವು ಕಡ್ಡಾಯವಾಗಿ ಒಂದೊಂದು ಗಿಡ ನೆಟ್ಟು ಪೋಶಿಸುವುದು.


XV. ಕರ್ನಾಟಕದ ರೇಖಾ ನಕ್ಷೆಯನ್ನು ಬರೆದು ಈ ಕೆಳಗಿನ ಪ್ರದೇಶಗಳನ್ನು ಗುರುತಿಸಿರಿ.

1) ಪಶ್ಚಿಮ ಟ್ಟಗಳು, ರಾಯಚೂರು, ಆಗುಂಬೆ, ಕೊಕ್ಕರೆ ಬೆಳ್ಳೂರು, ಬಂಡಿಪುರ, ಟಪ್ರಭಾನದಿ, ಉಡುಪಿ, ಬೆಂಗಳೂರು.

2) ಕರ್ನಾಟಕದ ನಕ್ಷೆಯನ್ನು ಬರೆದು ನಮ್ಮ ಪ್ರದೇಶದ ಮಣ್ಣು ಯಾವುದೆಂದು, ನಿಮಗೆ ಪಠ್ಯ ಪುಸ್ತಕದಲ್ಲಿ ನೀಡಿರುವ ಮಣ್ಣುಗಳ ಹಂಚಿಕೆ ನಕ್ಷೆಯನ್ನು ಆಧರಿಸಿ ಗುರುತಿಸಿರಿ.


XVI. ಪಠ್ಯಪುಸ್ತಕದಲ್ಲಿನ ಜ್ಞಾನದ ಜೊತೆಗೆ ನಿಮ್ಮ ಶಾಲಾ ಗ್ರಂಥಾಲಯದಲ್ಲಿ ದೊರೆಯುವ ಸಂಬಂಧಿಸಿದ ಟಕಕ್ಕೆ ಪೂರಕವಾಗುವ ಕೃತಿಗಳನ್ನು ಅಭ್ಯಸಿಸಿರಿ.

ಉದಾ : - ಭೂಗೋಳ ಸಂಗಾತಿ : ಡಿ.ಎಸ್.ಇ.ಆರ್.ಟಿ.

- ಪ್ರಪಂಚದ ಭೂಗೋಳ: ಎಸ್. ಮಲ್ಲಪ್ಪ

- ಭೂಮಿಕ : ಡಿ.ಎಸ್.ಇ.ಆರ್.ಟಿ.