ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ. | ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ. |