SWOT ವಿಶ್ಲೇಷಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೭:೦೫, ೧೨ ಜನವರಿ ೨೦೨೪ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:TIEE ಕಾರ್ಯಗಾರಗಳು using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

Click here to access English page

SWOT ವಿಶ್ಲೇಷಣೆಯ ನಾಲ್ಕು ಪ್ರಮುಖ ಅಂಶಗಳೆಂದರೆ ಸಾಮರ್ಥ್ಯ/ಬಲ, ದೌರ್ಬಲ್ಯ, ಅವಕಾಶಗಳು ಮತ್ತು ಅಪಾಯಗಳು. ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು ಆಂತರಿಕ ಅಂಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅವಕಾಶಗಳು ಮತ್ತು ಅಪಾಯಗಳು ಬಾಹ್ಯ ಅಂಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.

   1. ಸಾಮರ್ಥ್ಯಗಳು/ಬಲ:  ನಿಮ್ಮ ಶಾಲೆಯ ಬಲ/ಸಾಮರ್ಥ್ಯವು ಒಂದು ಆಂತರಿಕ ಧನಾತ್ಮಕ ಅಂಶವಾಗಿದ್ದು ನೀವು ಅದನ್ನು ನಿಯಂತ್ರಿಸಬಹುದಾಗಿರುತ್ತದೆ. ಕೆಲವು ಉದಾಹರಣೆಗಳೆಂದರೆ ಗುಣಮಟ್ಟದ ಶಿಕ್ಷಕರು, ಶಾಲೆಯ ಭೌತಿಕ ಮೂಲಸೌಕರ್ಯಗಳು,  ಬೇರೆ ಸರ್ಕಾರಿ ಶಾಲಾ ಶಿಕ್ಷಕರ ಗುಂಪು/ಜಾಲ.
   2. ದೌರ್ಬಲ್ಯಗಳು .  ದೌರ್ಬಲ್ಯಗಳು ಒಂದು ಆಂತರಿಕ ಗುಣಲಕ್ಷಣವಾಗಿದ್ದು, ಅದು ನಿಮ್ಮಸಾಮರ್ಥ್ಯಗಳು/ಬಲವನ್ನು ಋಣಾತ್ಮಕವಾಗಿ ತೆಗೆದುಹಾಕುತ್ತದೆ. ಉದಾ: ಖಾಲಿ ಇರುವ ಶಿಕ್ಷಕ ಹುದ್ದೆಗಳು, ಮೂಲಭೂತ ಸೌಕರ್ಯದ ಕೊರತೆಗಳು  
   3. ಅವಕಾಶಗಳು. ಅವಕಾಶಗಳು ಒಂದು ಬಾಹ್ಯ ಅಂಶವಾಗಿದ್ದು, ಅದು ನಿಮ್ಮ ಶಾಲೆಯ ಯಶಸ್ಸಿಗೆ ಸಾಧ್ಯತೆ ಒದಗಿಸುವಲ್ಲಿ ಅನುಕೂಲಕರವಾಗಿದೆ. ಉದಾ: ಸ್ಥಳೀಯ ಸಮುದಾಯ  ವ್ಯಕ್ತಿಗಳಿಂದ ಅಥವಾ ರಾಜಕಾರಣಿಗಳಿಂದ ನಿಮ್ಮ ಕೆಲಸಕ್ಕೆ ದೊರಕುವ ಸಹಾಯ, ಶಾಲೆಗೆ ಹಾಜರಾದಾಗ ಮಕ್ಕಳಿಗೆ ನೀಡಲಾಗುವ ಉತ್ತೇಜನ   
   4. ಅಪಾಯಗಳು. ಅಪಾಯಗಳು ಒಂದು  ಬಾಹ್ಯ ಅಂಶವಾಗಿದ್ದು, ಅದು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ ಹಾಗು ಅದು ನಿಮ್ಮ ಶಾಲೆಯ ಯಶಸ್ಸಿಗೆ ಋಣಾತ್ಮಕವಾಗಿ ಪರಿಣಾಮಕಾರಿಯಾಗಿರಬಹುದು. ಉದಾ: ನಿಮ್ಮ ಶಾಲೆಯ ಹತ್ತಿರವೇ ತೆರೆಯಲಾದ ಇಂಗ್ಲಿಷ್ ಮಾಧ್ಯಮದ ಶಾಲೆ.

ಮೇಲೆ ನೀಡಲಾಗಿರುವ ಉದಾಹರಣೆಗಳನ್ನು ಗಮನಿಸಿ, ನಿಮ್ಮ ಶಾಲೆಯ ಸಂಭರ್ಭಕ್ಕನುಗುಣವಾದ SWOT ವಿಶ್ಲೇಷಣೆಯನ್ನು ಮಾಡಿ, ನಿಮ್ಮ ಶಾಲೆಯ SWOT ಪಟ್ಟಿಯನ್ನು ತಯಾರಿಸಿ, ಪ್ರತಿಯೊಂದು ಆಯಾಮಗಳಲ್ಲಿ ಕನಿಷ್ಠ ಮೂರು ಅಂಶಗಳನ್ನು ಪಟ್ಟಿ ಮಾಡಿ.

ಧನಾತ್ಮಕಗಳು ಋಣಾತ್ಮಕಗಳು
ಆಂತರಿಕ ಸಾಮರ್ಥ್ಯ/ಬಲ ದೌರ್ಬಲ್ಯ
ಬಾಹ್ಯ ಅವಕಾಶಗಳು ಅಪಾಯಗಳು