ಚಿಗುರು-೮-ಪುರುಷಪ್ರಧಾನ ಸಂದೇಶಗಳು ಭಾಗ-೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೧೩, ೨೪ ಜೂನ್ ೨೦೨೦ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಾರಾಂಶ

ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹೀರಾತುಗಳಲ್ಲಿ ಮಹಿಳೆಯರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರ ಈ ಚರ್ಚೆಯನ್ನು ಮುಂದುವರೆಸುತ್ತಾ ಜಾಹೀರಾತುಗಳಲ್ಲಿ ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸುತ್ತೇವೆ. ಇವುಗಳ ಮೂಲಕ ಪುರುಷ ಪ್ರಧಾನತೆಯ ಬಗ್ಗೆ ಮಾತನಾಡುವುದು ಈ ಮಾಡ್ಯೂಲಿನ ಉದ್ದೇಶ.

ಊಹೆಗಳು

1. ಹಿಂದಿನ ವಾರದ ನಮ್ಮ ಚರ್ಚೆಯ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು.  

2. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.

3. ಇದು ಹೆಚ್ಚು ಉತ್ಸಾಹಕರ ಚಟುವಟಿಕೆಯಾದ್ದರಿಂದ ಗಲಾಟೆ ಹೆಚ್ಚಿರಬಹುದು.

4. ಮನೆಯಲ್ಲಿ ಟಿ.ವಿ ಇಲ್ಲದೆ ಅಥವಾ ಮನೆಯವರು ಸಿನೆಮಾಗಳಿಗೆ ಕರೆದುಕೊಂಡು ಹೋಗದಿರುವ ಕಾರಣಗಳಿಂದ ಕೆಲವರು ಜಾಹಿರಾತುಗಳನ್ನು ನೋಡದೆ ಇರಬಹುದು.

5. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.

ಉದ್ದೇಶ

• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಖುಷಿಯಿಂದ ಕೇಳುವ/ ನೋಡುವ ಜಾಹಿರಾತುಗಳಲ್ಲಿ ಸ್ತ್ರೀ-ಪುರುಷ ಚಿತ್ರಣ ಹೇಗೆ ನಮ್ಮ ಸ್ವ-ಚಿತ್ರದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು.

• ಇವುಗಳು ಹೇಗೆ ಪಿತೃ ಪ್ರಧಾನತೆಯ ಸಂಕೇತಗಳಾಗಿವೆ ಎಂದು ಚರ್ಚಿಸುತ್ತಾ ಹೋಗುವುದು.  

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಇದಾದ ನಂತರ ನಾವೇ ನೆನಪಿಸುವುದು. (೧೦ ನಿಮಿಷ)

ಕಳೆದ ವಾರ ಜಾಹಿರಾತುಗಳನ್ನು ನೋಡಿದ ನಂತರ ಅವುಗಳಲ್ಲಿರುವ ಅಂಶಗಳ ಬಗ್ಗೆ ಇರುವ ಸಾಮಾನ್ಯತೆಗಳನ್ನು ಚರ್ಚಿಸಿದ್ದೆವು. ಅವುಗಳ ಆಧಾರದಲ್ಲಿ ನಿಮ್ಮ ಮನೆಗಳಲ್ಲಿ ಏನನ್ನಾದರೂ ಗಮನಿಸಲು ಸಾಧ್ಯವಾದುವೆ? ಎಲ್ಲೆಲ್ಲಿ ಅವುಗಳನ್ನು ನೋಡಿದಿರಿ ಹಾಗು ಗುರುತಿಸಿದ ಅಂಶಗಳು ಏನೇನು? (ಇವುಗಳನ್ನು ನಾವು ಪಟ್ಟಿ ಮಾಡುವುದು) (೧೦ ನಿಮಿಷ)

ನೋಡಿರದ ಜಾಹಿರಾತುಗಳನ್ನು ತೋರಿಸುತ್ತೇವೆ. ಒಂದೊಂದು ಜಾಹಿರಾತಿನ ನಂತರ ಅವುಗಳ ಬಗ್ಗೆ ಚರ್ಚಿಸುವುದು. ಇದುವರೆಗೂ ನೀವು ನೋಡಿದ ಎಲ್ಲಾ ಜಾಹಿರಾತುಗಳಲ್ಲಿ ನೋಡಿದ ಸಾಮಾನ್ಯ ಅಂಶಗಳು ಯಾವುವು? ಅವುಗಳನ್ನು ಹೇಳಬಹುದೇ? (ಬೋರ್ಡಿನ ಮೇಲೆ ಪಟ್ಟಿ ಮಾಡುವುದು) (೨೦ ನಿಮಿಷ)

ಈಗ ಕೆಲವು ಜಾಹಿರಾತುಗಳನ್ನು ನೋಡೋಣ. (ಪ್ರತಿ ಜಾಹಿರಾತಿನ ನಂತರ ಅವುಗಳ ಬಗ್ಗೆ ಮಾತನಾಡುವುದು) (ಇವರು ಹೇಳಿದ ಅಂಶಗಳ ಪಟ್ಟಿ ಮಾಡುವುದು. ಉದಾ: ಗಟ್ಟಿಮುಟ್ಟಾದ ದೇಹ, ಯಾವ ರೀತಿಯ ಪುರುಷ ಆದರೂ ಸಾಕು, ಗಂಡು ಹೇಗೆ ಇದ್ದರೂ ಹೆಣ್ಣು ಮೈಮೇಲೆ ಬೀಳುವಳು ಅನ್ನುವುದನ್ನು ಹೆಮ್ಮೆ ಇಂದ ತೋರಿಸುವುದು, ಈ ಹೆಣ್ಣು ಸಾಮಾನ್ಯವಾಗಿ ಸೆಕ್ಸಿ ಆಗಿರುತ್ತಾಳೆ, ಬಣ್ಣ ಯಾವುದಾದರೂ ಸರಿ) (೨೫ ನಿಮಿಷ)

ಇದುವರೆಗೂ ನೀವು ನೋಡಿದ ಎಲ್ಲಾ ಜಾಹಿರಾತುಗಳಲ್ಲಿ ನೋಡಿದ ಸಾಮಾನ್ಯ ಅಂಶಗಳು ಯಾವುವು? ಅವುಗಳನ್ನು ಹೇಳಬಹುದೇ? (ಬೋರ್ಡಿನ ಮೇಲೆ ಪಟ್ಟಿ ಮಾಡುತ್ತೇವೆ) (೧೦ ನಿಮಿಷ)

ಯಾಕೆ ಹೀಗೆ ಎಂಬುದನ್ನು ಮುಂದಿನ ವಾರ ಮಾತನಾಡೋಣ ಎಂದು ಹೇಳಿ ಮಾತುಕಥೆಯನ್ನು ಮುಗಿಸುವುದು.

ಬೇಕಾದ ಸಂಪನ್ಮೂಲಗಳು

• ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧

• ಸ್ಪೀಕರ್‌ - ೧

• ಪ್ರೊಜೆಕ್ಟರ್‌ - ೧

• ಕ್ಯಾಮೆರಾ - ೧

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

- ಒಬ್ಬ ಮುಖ್ಯ ಫೆಸಿಲಿಟೇಟರ್‌, ಮೂರು ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೮೦ ನಿಮಿಷ

ಇನ್‌ಪುಟ್‌ಗಳು

ಡೌನ್‌ಲೋಡ್‌ ಮಾಡಿ ಸಂಕಲನ ಮಾಡಿದ ವಿಡಿಯೋಗಳು.

ಔಟ್‌ಪುಟ್‌ಗಳು

ಕಿಶೋರಿಯರ ಜೊತೆ ಚರ್ಚಿಸಿದ ಅಂಶಗಳ ಟಿಪ್ಪಣಿಗಳು.