Difference between revisions of "Social Science: Question papers"

From Karnataka Open Educational Resources
Jump to navigation Jump to search
Line 27: Line 27:
  
 
= Practice Questions from districts =
 
= Practice Questions from districts =
 +
 +
ಇಲಾಕೆಯೂ ಬಿಡುಗಡೆ ಮಾಡಿರುವ ಪ್ರಶ್ನೆ ಪತ್ರಿಕೆಗಳನ್ನು download ಮಾಡಲು [http://dsert.kar.nic.in/html/questionbank.html ಇಲ್ಲಿ] ಒತ್ತಿ.
 +
 
== Chitradurga ==
 
== Chitradurga ==
 
'''Scocial Science Question paper along with answers (downloaded from eshale.org) - Shared by H S Ramachandrappa malladihalli'''<br>
 
'''Scocial Science Question paper along with answers (downloaded from eshale.org) - Shared by H S Ramachandrappa malladihalli'''<br>

Revision as of 11:16, 14 February 2013

Now is exam time and many of the STF teachers have shared sample and practice questions. These are given below for your reference.

Old SSLC exam papers

ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು

april 2009

April 2010

April 2011

June 2011

April 2012

June 2012

Solved SSLC papers

Model answers April 2009

Model Answer April 2010

Model Answers April 2011

Model Answer April 2012

Practice Questions from districts

ಇಲಾಕೆಯೂ ಬಿಡುಗಡೆ ಮಾಡಿರುವ ಪ್ರಶ್ನೆ ಪತ್ರಿಕೆಗಳನ್ನು download ಮಾಡಲು ಇಲ್ಲಿ ಒತ್ತಿ.

Chitradurga

Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below

ಪ್ರಶ್ನೆ ಪತ್ರಿಕೆ 1

ಪ್ರಶ್ನೆ ಪತ್ರಿಕೆ 2

ಪ್ರಶ್ನೆ ಪತ್ರಿಕೆ 3

ಮಂಡ್ಯ

ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ

ಮೈಸೂರು

ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ

ಯಾದಗಿರಿ

ಮೂರು ಅಂಕಗಳ ಪ್ರಶ್ನೆಗಳು 3 marks question

ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ಮೂರು ಅಂಕಗಳ ಪ್ರಶ್ನೆಗಳು. download ಮಾಡಲು ಇಲ್ಲಿ ಒತ್ತಿ

ಮೂರು ಅಂಕದ ಪ್ರಶ್ನೆಗಳು


  1. ಫ್ರೆಂಚರ ಅವನತಿಗೆ ಕಾರಣಗಳೇನು ?
  2. ಭಾರತದಲ್ಲಿ ಪೋರ್ಚುಗೀಸರು ತಮ್ಮ ಅಧಿಕಾರ ಸ್ಥಾಪಿಸಲು ಅಸಮರ್ಥರಾದರು ಏಕೆ ?
  3. ಬಕ್ಸಾರ್ ಕದನಕ್ಕೆ ಕಾರಣವಾದ ಘಟನೆ ಮತ್ತು ಪರಿಣಾಮ ತಿಳಿಸಿ .
  4. ಪ್ಲಾಸೀ ಕದನ ಯಾರ-ಯಾರ ನಡುವೆ ನಡೆಯಿತು ? ಇದರ ಪರಿಣಾಮಗಳೇನು ?
  5. ಮೈಸೂರು ಸಂಸ್ಥಾನಕ್ಕೆ ಸರ್ ಎಮ್. ವಿಶ್ವೇಶರಯ್ಯನವರು ನೀಡಿರುವ ಕೊಡುಗೆಗಳೇನು ?
  6. ನಾಲ್ವಡಿ ಕೃಷ್ಣರಾಜ ಒಡೆಯರನ್ನು ಆಧುನಿಕ ಮೈಸೂರು ನಿರ್ಮಾಪಕರೆಂದು ಏಕೆ ಕರೆಯುವರು ?
  7. ಚಿಕ್ಕ ದೇವರಾಜ ಒಡೆಯರ ಆಡಳಿತಾತ್ಮಕ ಸುಧಾರಣೆಗಳನ್ನು ತಿಳಿಸಿ . ಅಥವಾ ಚಿಕ್ಕ ದೇವರಾಜ ಒಡೆಯರು ಒಬ್ಬ ಸಮರ್ಥ ಆಡಳಿತಗಾರರೆಂದು ಹೇಗೆ ಸಮರ್ಥಿಸುವಿರಿ ?
  8. 1857ರ ದಂಗೆಯ ಪರಿಣಾಮಗಳೇನು ?
  9. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳೇನು ?
  10. 1857 ರ ದಂಗೆಗೆ ರಾಜಕೀಯ ಕಾರಣವನ್ನು ತಿಳಿಸಿ .
  11. 1857ರ ಮಹಾದಂಗೆಗೆ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳೇನು ?
  12. ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ಸ್ಥಿತಿ ಶೋಚನೀಯವಾಗಿತ್ತು ಎಂದು ಹೇಗೆ ಸಮರ್ಥಿಸುವಿರಿ ?
  13. ಸ್ವತಂತ್ರ ಹೋರಾಟದಲ್ಲಿ ವೃತ್ತ ಪತ್ರಿಕೆಗಳ ಮಹತ್ವವೇನು ?
  14. ಇಂಗ್ಲೀಷ್ ಶಿಕ್ಷಣವು ಭಾರತೀಯರ ಮೇಲೆ ಬೀರಿದ ಪ್ರಭಾವವೇನು ?
  15. ಸಂಪತ್ತಿನ ಪ್ರವಾಹ ಸಿದ್ಧಾಂತ ಎಂದರೇನು ? ಅದರ ಪ್ರಮುಖ ಅಂಶಗಳನ್ನು ತಿಳಿಸಿ . ಅಥವಾ ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣವೇನು ?
  16. 1773 ರ ರೆಗ್ಯುಲೇಟಿಂಗ್ ಶಾಸನದ ನಿಬಂಧನೆಗಳೇನು ?
  17. 1853ರ ಶಾಸನವು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ . ಹೇಗೆ ?
  18. 1935 ರ ಭಾರತ ಸರ್ಕಾರದ ಶಾಸನವು ಸಂವಿಧಾನ ರಚನೆಯಲ್ಲಿ ಬಹುಮುಖ್ಯ ದಾಖಲೆಯಾಗಿದೆ . ಹೇಗೆ ?
  19. ಸರ್ದಾರ್ ಪಟೇಲರು ಹೈದರಾಬಾದಿನ ಮೇಲೆ ಪೋಲೀಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು ? ಅಥವಾ ಹೈದರಾಬಾದನ್ನು ಭಾರತದ ಒಕ್ಕೂಟದಲ್ಲಿ ಹೇಗೆ ವಿಲೀನಗೊಳಿಸಲಾಯಿತು ?
  20. ಏಕೀಕರಣದ ಮೊದಲು ಕರ್ನಾಟಕದ ಸ್ಥಿತಿಗತಿ ಹೇಗಿತ್ತು ?
  21. ವರ್ಣಭೇದ ನೀತಿ ಎಂದರೇನು ? ಇದನ್ನು ಹೇಗೆ ಅಂತ್ಯಗೊಳಿಸಲಾಯಿತು ?
  22. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಿತಿಗತಿಗಳ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳಾವುವು ?
  23. ಅತಿಲಾಭಕೋರತನಕ್ಕೆ ಅನುಸರಿಸುವ ಅನೈತಿಕ ಮಾರ್ಗಗಳಾವುವು ?
  24. ವಿಶ್ವ ಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಾವುವು ?
  25. ವಿಶ್ವ ಸಂಸ್ಥೆಯ ಉದ್ದೇಶಗಳಾವುವು ?
  26. ಅಂತರಾಷ್ಟ್ರೀಯ ಕಾರ್ಮಿಕ ಸಂಘದ (I.L.O) ಗುರಿಗಳೇನು ?
  27. ವಿಶ್ವ ಆರೋಗ್ಯ ಸಂಸ್ಥೆಯ (W.H.O) ಪ್ರಮುಖ ಗುರಿಗಳೇನು ?
  28. ಅಂತರಾಷ್ಟ್ರೀಯ ಹಣಕಾಸು ನಿಧಿ (I.M.F) ಉದ್ದೇಶಗಳೇನು ?
  29. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ವಿಧಿಸಿದ ಷರತ್ತುಗಳಾವುವು ?
  30. ಸ್ವಾತಂತ್ರ ನಂತರ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಾಯಿತು ?
  31. ಉತ್ತರ ಭಾರತದ ಮೈದಾನ ಪ್ರದೇಶವನ್ನು "ಭಾರತದ ಹೃದಯ" ಭಾಗ ಎಂದು ಕರೆಯಲು ಕಾರಣವೇನು ?
  32. ಹಿಮಾಲಯ ಪರ್ವತವು ಭಾರತದ ಜನರ ಜೀವನದ ಮೇಲೆ ಪ್ರಭಾವ ಬೀರಿದೆ . ಹೇಗೆ ?
  33. ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ವ್ಯತ್ಯಾಸಗಳೇನು ?
  34. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳಾವುವು ?
  35. ಕಪ್ಪು ಮಣ್ಣು (ರೆಗೂರು) ಮತ್ತು ಕೆಂಪು ಮಣ್ಣಿನಲ್ಲಿರುವ ವ್ಯತ್ಯಾಸಗಳೇನು ?
  36. ಲ್ಯಾಟರೈಟ್ (ಜಂಬಿಟ್ಟಿಗೆ ) ಮಣ್ಣು ಮತ್ತು ಕೆಂಪು ಮಣ್ಣಿಗಿರುವ ವ್ಯತ್ಯಾಸಗಳೇನು ?
  37. ಮಿಶ್ರ ಬೇಸಾಯವೆಂದರೇನು ? ಅದರ ಲಕ್ಷಣವೇನು ?
  38. ಗೋಧಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
  39. ಭತ್ತದ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
  40. ಚಹಾ ಮತ್ತು ಕಾಫಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
  41. ಉತ್ಪಾದಕ ಕೈಗಾರಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿ .
  42. ಭಾರತದಲ್ಲಿ ಕೈಗಾರಿಕಾಭಿವೃದ್ಧಿಗೆ ಅನುಕೂಲಕರವಾದ ಅಂಶಗಳಾವುವು ?
  43. ರೈಲು ಸಾರಿಗೆಗಿಂತ ರಸ್ತೆ ಸಾರಿಗೆ ಅನುಕೂಲಕರವಾಗಿದೆ . ಹೇಗೆ ?
  44. ಇತ್ತೀಚಿಗೆ ಒಳನಾಡಿನ ಜಲಸಾರಿಗೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಏಕೆ ?
  45. ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಾವುವು ?
  46. ರಾಷ್ಟ್ರ ಸಂಘದ ವಿಫಲತೆಗೆ ಕಾರಣಗಳೇನು ?
  47. ನಾಲ್ಕನೇಯ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಾವುವು ?
  48. ಭಾರತದ ಯೋಜನಾ ಆಯೋಗದ ಕಾರ್ಯಗಳಾವುವು ?
  49. ಪಂಚಶೀಲ ತತ್ವಗಳಾವುವು ?

ನಾಲ್ಕು ಅಂಕಗಳ ಪ್ರಶ್ನೆಗಳು marks questions

ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು ಇಲ್ಲಿ ಒತ್ತಿ

ನಾಲ್ಕು ಅಂಕದ ಪ್ರಶ್ನೆಗಳು

  1. ಸ್ವತಂತ್ರ ಹೋರಾಟದಲ್ಲಿ ಸುಭಾಶ್ ಚಂದ್ರಬೋಸ್ ರವರ ಸೇನೆಯ ಪಾತ್ರವೇನು ? ಅಥವಾ ಐ.ಎನ್.ಎ ಸೇನೆಯ ಸಾಧನೆಗಳೇನು?
  2. ಮಂದಗಾಮಿಗಳೆಂದರೆ ಯಾರು ? ಅವರ ಪ್ರಮುಖ ಬೇಡಿಕಗಳೇನು ?
  3. ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವೇನು ? ವಿವರಿಸಿ .
  4. ಭಾರತ ಸ್ವತಂತ್ರ ಹೋರಾಟದಲ್ಲಿ ತಿಲಕರ ಪಾತ್ರವನ್ನು ವಿವರಿಸಿ .
  5. 1942 ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ ) ಚಳುವಳಿಯನ್ನು ವಿವರಿಸಿ .
  6. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು ?
  7. ಸ್ವಾತಂತ್ರ್ಯದ ನಂತರ ಸ್ತ್ರೀಯರ ಸ್ಥಾನಮಾನ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು ?
  8. ಬಡತನ ಎಂದರೇನು ? ಅದರ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
  9. ಅನಕ್ಷರತೆ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
  10. ಆರ್ಥಿಕ ಅಸಮಾನತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
  11. ವಿಶ್ವ ಸಂಸ್ಥೆಯ ಸಾಧನೆಗಳೇನು ?
  12. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ . ಹೇಗೆ ?
  13. ಭದ್ರತಾ ಮಂಡಳಿಯ ರಚನೆ ಮತ್ತು ಕಾರ್ಯಗಳನ್ನು ತಿಳಿಸಿರಿ .
  14. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸಿ . ಅಥವಾ ಭಾರತದ ವ್ಯವಸಾಯವು ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ . ಹೇಗೆ ?
  15. ಭಾರತದಲ್ಲಿ ಕೃಷಿ ಹಿಂದುಳಿದಿರಲು ಕಾರಣವೇನು ?
  16. ಕೃಷಿಯ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
  17. ವೈಜ್ಞಾನಿಕ ಬೇಸಾಯವೆಂದರೇನು ? ಇದು ಒಳಗೊಂಡಿರುವ ಅಂಶಗಳಾವುವು ?
  18. ಮಣ್ಣಿನ ಸವೆತ ಎಂದರೇನು ? ಅದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಾವುವು ?
  19. ಭಾರತದ ಪಾವತಿ ಶುಲ್ಕವು ಯಾವಾಗಲೂ ಪ್ರತಿಕೂಲವಾಗಿರಲು ಕಾರಣಗಳೇನು ?
  20. ರಫ್ತನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಿರಿ .


Model Question Paper

Notes and guides from Districts

ಮಂಡ್ಯ

ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು odp

download ಮಾಡಲು File:SSLC Maps (Nagu Shahabad)2003.pdf

ಯಾದಗಿರಿ

ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಯುದ್ಧಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟು

ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ.

ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ ಇದರ ಸುಲಭ ಮುದ್ರಣದ ಪ್ರತಿಯನ್ನು Download ಮಾಡಲು ಇಲ್ಲಿ ಒತ್ತಿ


'ಕ್ರ'.


ಸಂ


ಯುದ್ಧಗಳು


ಕಾಲ


ಭಾಗವಹಿಸಿದವರು


ಕಾರಣಗಳು


ಮುನ್ನಡೆ


ಪರಿಣಾಮಗಳು


ಒಪ್ಪಂದ


ಗಳು






1


1'ನೇ ಕರ್ನಾಟಿಕ್ ಯುದ್ಧ


1746-48


ಫ್ರೆಂಚರು (ಡೂಪ್ಲೆ)


ಮತ್ತು


ಆರ್ಕಾಟಿನ ನವಾಬ ಅನ್ವರುದ್ದೀನ


(ಬ್ರಿಟೀಷರ ಬೆಂಬಲಿತ)


1.ಯೂರೋಪನಲ್ಲಿ ಆಸ್ಟ್ರಿ ಯಾದ ಉತ್ತರಾಧಿಕಾರತ್ವದ ಯುದ್ಧ. (1740)


2.ಆಂಗ್ಲರು ಹಿಂದೂ ಮಹಾ ಸಾಗರದಲ್ಲಿ ಫ್ರೆಂಚ್ ಹಡಗುಗಳನ್ನು ಸೆರೆಹಿಡಿದುದು


'3.'ಡೂಪ್ಲೆ ಬ್ರಿಟೀಷರ ಮದ್ರಾಸನ್ನು ಗೆದ್ದದ್ದು .


ಆಂಗ್ಲರು ಮದ್ರಾಸನ್ನು ಪೋರ್ಚುಗೀಸರಿಂದ ಬಿಡಿಸಿ ಕೊಡುವಂತೆ ಅನ್ವರುದ್ದೀನನಿಗೆ ಹೇಳಿದರು .ಅದರಂತೆ ಅನ್ವರುದ್ದೀನ ಸೂಚಿಸಿದ ಸೂಚನೆಯನ್ನು ಡೂಪ್ಲೆ ತಿರಸ್ಕರಿಸಿದನು. ಇದರಿಂದ ಕೋಪಗೊಂಡ ನವಾಬ ಅನ್ವರುದ್ದೀನನು ಮದ್ರಾಸಗೆ ಮುತ್ತಿಗೆ ಹಾಕಿದನು.


'1.'ಡೂಪ್ಲೆಗೆ ಗೆಲುವು ಆಯಿತು.


'2.'ಅನ್ವರುದ್ದೀನನಿಗೆ ಸೋಲು ಆಯಿತು. 3.ಯೂರೋಪನಲ್ಲಿ ಇಂಗ್ಲೀಷ ಹಾಗೂ ಫ್ರೆಂಚರ ಯುದ್ಧ ಕೊನೆಗೊಂಡಿತು.


ಪ್ಯಾರೀಸ್ ಒಪ್ಪಂದ -1748









2


2'ನೇ ಕರ್ನಾಟಿಕ್ ಯುದ್ಧ


1749-54


ಫ್ರೆಂಚರು (ಡೂಪ್ಲೆ) ಮುಜಾಫರ್ ಜಂಗ್ ಚಂದಾಸಾಹೇಬ್


ಮತ್ತು


ಆಂಗ್ಲರು (ರಾ . ಕ್ಲೈವ್)


ನಾಸಿರ್ ಜಂಗ್


ಅನ್ವರುದ್ಧೀನ


ಮಹಮ್ಮದ್ ಅಲಿ



'1.'ಆಂಗ್ಲರು ಮತ್ತು ಫ್ರೆಂಚರು ಸ್ಥಳೀಯ ರಾಜರುಗಳ ಆಂತರೀಕ ವ್ಯವಹಾರದಲ್ಲಿ ಕೈ ಹಾಕತೊಡಗಿದರು. '2.'ತಂಜಾವೂರಿನ ಸಿಂಹಾಸನಕ್ಕಾಗಿ ಶಹಜಿ ಹಾಗೂ ಪ್ರತಾಪಸಿಂಗ್ ಇಬ್ಬರೂ ಪಿತೂರಿ ನಡೆಸಿ ಆಂಗ್ಲರ ಸಹಾಯ ಬೇಡಿದರು.


'3.'ಹೈದ್ರಾಬಾದ್ ಹಾಗೂ ಕಾರ್ನಾಟಿಕ್ ಗಳ ಉತ್ತರಾಧಿಕಾರದ ಒಳಜಗಳಗಳು ಫ್ರೆಂಚರು ಮತ್ತು ಆಂಗ್ಲರಿಗೆ ವರವಾಗಿ ಪರಿಣಮಿಸಿದವು.


ಚಂದಾಸಾಹೇಬನು ಫ್ರೆಂಚರು ಹಾಗೂ ಮುಜಾಫರ್ ಜಂಗ್ ರ ಸಹಾಯದಿಂದ ಆರ್ಕಾಟ್ ಮೇಲೆ ದಾಳಿ ಮಾಡಿ ನವಾಬ ಅನ್ವರುದ್ಧೀನ್ ನನ್ನು ಕೊಂದು ತಾನೇ ನವಾಬನಾದನು.ಅನ್ವರುದ್ಧೀನ್ ನ ಮಗ ಮಹಮ್ಮದ್ ಅಲಿಯು ತಿರುಚನಾಪಲ್ಲಿಗೆ ಹೋಗಿ ಆಶ್ರಯ ಪಡೆದನು .ಆರ್ಕಾಟ್ ಮೇಲೆ ರಾಬರ್ಟ್ ಕ್ಲೈವ್ ದಾಳಿ ಮಾಡಿದಾಗ ಚಂದಾಸಾಹೇಬ್ ತಂಜಾವೂರಿಗೆ ಓಡಿದನು. ಹೈದ್ರಾಬಾದ್ ನಲ್ಲಿ ನಾಸಿರ್ ಜಂಗ್ ನನ್ನು ಕೊಂದು ಮುಜಾಫರ್ ಜಂಗ್ ನವಾಬನಾದನು.


1.ಈ ಯುದ್ಧವು ನಿರ್ಣಾಯಕ ಆಗಿರಲಿಲ್ಲ.


2.'ಕಾರ್ನಾಟಿಕ್ ದಲ್ಲಿ ಆಂಗ್ಲರು ಪ್ರಬಲರಾದರು.


'3.'ಹೈದ್ರಾಬಾದ್ ನಲ್ಲಿ ಫ್ರೆಂಚರು ಪ್ರಬಲರಾದರು.


4.ಹೆಚ್ಚು ಪ್ರದೇಶಗಳು ಆಂಗ್ಲರು ಮತ್ತು ಫ್ರೆಂಚರ ಆಧೀನಕ್ಕೆ ಬಂದವು.




















3


3'ನೇ ಕರ್ನಾಟಿಕ್ ಯುದ್ಧ


1758-63


ಆಂಗ್ಲರು


(ಸರ್ ಐರ್ ಕೂಟ)


ಮತ್ತು


ಫ್ರೆಂಚರು


(ಕೌಂಟ್ ಡಿ ಲಾಲಿ ,


ಕ್ಯಾಪ್ಟನ್ ಬುಸ್ಸೀ)



1. ಯುರೋಫ್ ನಲ್ಲಿ ನಡೆದ ಸಪ್ತವಾರ್ಷಿಕ ಯುದ್ಧ (1756-63)



2. ಫ್ರೆಂಚ್ ಸರಕಾರ ಆಂಗ್ಲರ ಪ್ರಾಭಲ್ಯ ಮುರಿಯಲು ಕೌಂಟ್ '- 'ಡಿ '- 'ಲಾಲಿಯನ್ನು ಗವರ್ನರ್ ಆಗಿ ಭಾರತಕ್ಕೆ ಕಳುಹಿಸಿದ್ದು.



ಕೌಂಟ್ ಡಿ ಲಾಲಿಯು ಆಂಗ್ಲರ ಪೋರ್ಟ ಸೈಂಟ ಡೇವಿಡ್ ನ್ನು ವಶಪಡಿಸಿಕೊಂಡು ಮದ್ರಾಸಿಗೆ ಮುತ್ತಿಗೆ ಹಾಕಲು ಹೈಡ್ರಾಬಾದ ದಿಂದ ಕ್ಯಾಪ್ಟನ್ ಬುಸ್ಸೀಯನ್ನು ಕರೆಸಿಕೊಂಡನು.ಆಗ ಆಂಗ್ಲರ ಸರ್'- 'ಐರ್ '-'ಕೂಟ ಹೈಡ್ರಾಬಾದಗೆ ಮುತ್ತಿಗೆ ಹಾಕಿದನು.


ಸರ್ ಐರ್ ಕೂಟನಿಗೂ ಕ್ಯಾಪ್ಟನ್ ಬುಸ್ಸಿಗೂ 1760 'ರಲ್ಲಿ ವಾಂಡಿವಾಷ್ ನಲ್ಲಿ ನಡೆದು , ಕ್ಯಾಪ್ಟನ್ ಬುಸ್ಸಿ ಸೋತನು. 1761 ರಲ್ಲಿ ಕೌಂಟ್'- 'ಡಿ'- 'ಲಾಲಿ ಪಾಂಡಿಚೇರಿ ಯಲ್ಲಿ ಶರಣಾಗತನಾದನು.


1. 1760 ' ವಾಂಡಿವಾಷ್ ಯುದ್ಧದಲ್ಲಿ ಕ್ಯಾಪ್ಟನ್ ಬುಸ್ಸೀ ಸೋತು ಸೆರೆಸಿಕ್ಕನು


2.1761 'ರಲ್ಲಿ ಪಾಂಡಿಚೇರಿಯಲ್ಲಿ ಕೌಂಟ್ ಡಿ ಲಾಲಿ ಶರಣಾಗತನಾದನು.


3.ಆಂಗ್ಲರು ಪಾಂಡಿಚೇರಿ', 'ಚಂದ್ರ ನಾಗೂರು ಗಳನ್ನು ಫ್ರೆಂಚರಿಗೆ ಹಿಂತಿರುಗಿಸಿದರು.


4.ಭಾರತದಲ್ಲಿ ಫ್ರೆಂಚರ ಪ್ರಭಾವ ಕೊನೆಗೊಂಡಿತು.


1763


ಒಪ್ಪಂದ-


ಪ್ಯಾರೀಸ್












4


ಪ್ಲಾಸೀ ಕದನ


1757





ಬಂಗಾಲದ ನವಾಬ ಸಿರಾಜ್-ಉದ್-ದೌಲ್


ಮತ್ತು


ಇಂಗ್ಲೀಷರು (ರಾಬರ್ಟ್ ಕ್ಲೈವ್)


1.ಬಂಗಾಲದ ನವಾಬ ಸಿರಾಜ್'-'ಉದ್'-'ದೌಲ್ ತನ್ನ ನಿರಂಕುಶ ಪ್ರಭುತ್ವವದಿಂದ ಹಲವಾರು ಜನರ ವಿರೋಧಿಯಾಗಿದ್ದನು.


2.ಆಂಗ್ಲರು ನವಾಬನ ವಿರೋಧಿ ಕೃಷ್ಣಬಲ್ಲಬ್ ನಿಗೆ ಕಲ್ಕತ್ತಾ ಕೋಟೆಯಲ್ಲಿ ಆಶ್ರಯ ನೀಡಿದ್ದು ನವಾಬನ ಅಸಮಾಧಾನಕ್ಕೆ ಕಾರಣವಾಯಿತು.


3. ಆಂಗ್ಲರು ನವಾಬನ ಅನುಮತಿಯಿಲ್ಲದೆ ಕಲ್ಕತ್ತಾ ಕೋಟೆಯನ್ನು ಬಲಪಡಿಸಿಕೊಳ್ಳ ತೊಡಗಿದರು.


4. ನವಾಬ ಕೋಪಗೊಂಡು ಆಂಗ್ಲರ ಕಾಸಿಂಬಜಾರ್ ಮತ್ತು ಫೋರ್ಟ್ ವಿಲಿಯಂ ಗಳನ್ನು ವಶಪಡಿಸಿಕೊಂಡನು. (1756)


ನವಾಬ ಆಂಗ್ಲರ ಕಾಸಿಂಬಜಾರ್ , ಫೋರ್ಟ್ ವಿಲಿ ಯಂಗಳನ್ನು ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ ಅಘಾತವಾಯಿತು. ಕ್ಲೈವ್ ಕಲ್ಕತ್ತಾಕ್ಕೆ ಬಂದು ಫೋರ್ಟ್ ವಿಲಿಯಂನ್ನು ಪುನಃ ವಶಪಡಿಸಿಕೊಂ ಡನು. ಕ್ರಿ.ಶ 1757 'ಜೂನ್ '23ರಂದು ಪ್ಲಾಸಿ ಎಂಬಲ್ಲಿ ಯುದ್ಧ ನಡೆಯಿತು. ನವಾಬನ ವಿರೋಧಿಗಳ ಪಕ್ಷ ದಲ್ಲಿ ದ್ದ ನವಾಬನ ಸೇನೆ ಯುದ್ಧದಲ್ಲಿ ಭಾಗವಹಿಸಲಿಲ್ಲ. ಇದರಿಂದ ನವಾಬನಿಗೆ ಸೋಲಾಯಿತು.


'1.'ಸಿರಾಜ್'-'ಉದ್'-'ದೌಲ್ ನು ಯುದ್ಧದಲ್ಲಿ ಮಡಿದನು.


2.ಇಂಗ್ಲೀಷರು ಮೀರ್ ಜಾಫರ್ ನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು.


3.ಇಂಗ್ಲೀಷರು ಬಂಗಾಳದಲ್ಲಿ 24 ಫರಗಣಗಳ ಜಮೀನ್ದಾರಿ ಹಕ್ಕನ್ನು ಪಡೆದು ಭದ್ರವಾಗಿ ನೆಲೆಯೂರಿದರು.





















5


ಬಾಕ್ಸರ್ ಕದನ


1764


ಇಂಗ್ಲೀಷರು


(ಹೆಕ್ಟರ್ ಮನ್ರೋ)


ಮತ್ತು


ಮೀರ್ ಖಾಸಿಂ,


ಅವಧ್ ನ ನವಾಬ ಷೂಜ್-ಉದ್ದೌಲ್ , ದೆಹಲಿಯ ಚಕ್ರವರ್ತಿ 2ನೇ ಷಾ ಅಲಂ


1. 'ಮೀರ್ ಖಾಸಿಂ ಇಂಗ್ಲೀಷರ ಕೈಗೊಂಬೆ ಆಗಿರಲು ಇಚ್ಛಿಸದೆ ಅಧಿಕಾರ ಚಲಾಯಿಸ ಲು ಯತ್ನಿಸಿದನು.


2. ಇಂಗ್ಲೀಷರ ತೆರಿಗೆರಹಿತ ವ್ಯಾಪಾರದಿಂದ ಲಾಭ ಕಡಿಮೆಯಾದ ಕಾರಣ ತೆರಿಗೆರಹಿತ ವ್ಯಾಪಾರವನ್ನು ನಿರ್ಬಂಧಿಸಿದನು.


3. ಇದನ್ನರಿತ ಇಂಗ್ಲೀಷರು ಮೀರ್ ಖಾಸಿಂ ನನ್ನು ಕೆಳಗಿಳಿಸಿ ಮೀರ್ ಜಾಫರ್ ನನ್ನು ನವಾಬನನ್ನಾಗಿ ಮಾಡಿದರು.


1764 ರಲ್ಲಿ ಬಾಕ್ಸಾರ್ ಎಂಬಲ್ಲಿ ಆಂಗ್ಲ ಕಮಾಂಡರ್ ಹೆಕ್ಟರ್ ಮನ್ರೋ ಹಾಗೂ ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟದ ಮಧ್ಯೆ ಯುದ್ಧ ನಡೆಯಿತು.


1. 'ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟಕ್ಕೆ ಸೋಲಾಯಿತು


2.ಆಂಗ್ಲ ಕಮಾಂಡರ್ ಹೆಕ್ಟರ್ ಮನ್ರೋ ಗೆದ್ದನು.


3.ಆಂಗ್ಲರಿಗೆ ಬಿಹಾರ್','ಓರಿಸ್ಸಾ ','ಬಂಗಾಲ ಗಳು ದೊರಕಿದವು.


4.ಬಂಗಾಲದಲ್ಲಿ ದ್ವಿಮುಖ ಸರಕಾರ ಜಾರಿಯಾಯಿತು.


ಅಲಹಾಬಾದ ಒಪ್ಪಂದ-1765









6


1'ನೇ ಆಂ'-'ಮೈ ಯುದ್ಧ


1767-68


ಹೈದರಾಲಿ, ಹೈದರಾಬಾದಿನ ನಿಜಾಮ


ಮತ್ತು


ಇಂಗ್ಲೀಷರು, ಹೈದ್ರಾಬಾದಿನ ನಿಜಾಮ


'1.'ಹೈದರಾಲಿಯ ಪ್ರಾಬಲ್ಯವನ್ನು ಮರಾಠರು ಹಾಗೂ ಹೈದರಾಬಾದಿನ ನಿಜಾಮ ಸಹಿಸದಾದರು .


2. ಇಂಗ್ಲೀಷರ ಸಹಾಯದಿಂದ ಹೈದರಾಬಾದಿನ ನಿಜಾಮ ಮೈಸೂರಿನ ಮೇಲೆ ದಾಳಿ ಮಾಡಿದನು.


ನಿಜಾಮ ಮೈಸೂರಿನ ಮೇಲೆ ದಾಳಿ ಮಾಡಿದನು. ಹೈದರಾಲಿಯೊಂದಿಗೆ ಸೋತು ಅವನ ಜೊತೆ ಸೇರಿ ತಿರುಚನಾಪಲ್ಲಿಗೆ ದಾಳಿ ಮಾಡಿದ.ಮತ್ತೆ ಇಂಗ್ಲೀಷರು ಹೈದ್ರಾಬಾದಗೆ ದಾಳಿ ಮಾಡುವರೆಂಬ ಭಯದಿಂದ ಅವರ ಪಕ್ಷ ಸೇರಿದ.


1. 'ಹೈದರಾಲಿ ಮತ್ತು ಇಂಗ್ಲೀಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿದರು .


2. ಗೆದ್ದ ಪ್ರದೇಶಗಳ ಹಸ್ತಾಂತ ರ ಒಪ್ಪಂದದ ಷರತ್ತಾಗಿತ್ತು.


3. ಹೈದರನ ಮೇಲೆ ಆಕ್ರಮಣವಾದಾಗ ಸಹಾಯ ಮಾಡುವ ಭರವಸೆಯನ್ನು ಆಂಗ್ಲರು ನೀಡಿದರು.


ಮದ್ರಾಸ್ ಒಪ್ಪಂದ--1769








7


2'ನೇ ಆಂ '- 'ಮೈ ಯುದ್ಧ


1780-84





ಹೈದರಾಲಿ,


ಟಿಪ್ಪು ಸುಲ್ತಾನ್ ಮತ್ತು


ಇಂಗ್ಲೀಷರ


ಸರ್-ಐರ್-ಕೂಟ


1.'ಮದ್ರಾಸ ಒಪ್ಪಂದದಂತೆ ಮರಾಠರು ಮೈಸೂರಿನ ಮೇಲೆ ದಾಳಿ ಮಾಡಿದಾಗ ಇಂಗ್ಲೀಷರು ಹೈದರ್ ನ ನೆರವಿಗೆ ಬರಲಿಲ್ಲ.


2.ಹೈದರ್ ಅಲಿ ಫ್ರೆಂಚರ ಜೊತೆ ಒಪ್ಪಂದ ಮಾಡಿಕೊಂಡನು .


ವಾರನ್ ಹೆಸ್ಟಿಂಗ್ಸನು ಮಾಹೆಯನ್ನು 1780 ರಲ್ಲಿ


ಗೆದ್ದನು.ಐರ್'-'ಕೂಟನು ಸೋಲಿಗನೂರು ಯುದ್ಧ(1781)ದಲ್ಲಿ ಹೈದರಾಲಿಯನ್ನು ಸೋಲಿ ಸಿದನು. ಟಿಪ್ಪು ಸುಲ್ತಾನನು ಬ್ರಿಟೀಷರಿಂದ ಕಂಚಿ ಮತ್ತು ಮಂಗಳೂರನ್ನು ಗೆದ್ದನು.


1.1782 ರ ಆರ್ಕಾಟ್ ಯುದ್ಧದಲ್ಲಿ ಹೈದರ್ ಮಡಿದನು.


2.1784 ರಲ್ಲಿ ಮಂಗಳೂರು ಒಪ್ಪಂದವಾಯಿತು.


3.ಪರಸ್ಪರ ಶತ್ರುಗಳಿಗೆ ಸಹಾಯ ಮಾಡಬಾರದೆಂದು ಒಪ್ಪಂದವಾಯಿತು.


ಮಂಗಳೂರು ಒಪ್ಪಂದ --1784












8


3'ನೇ ಆಂಗ್ಲೋ'-'ಮೈಸೂರು ಯುದ್ಧ


1790-92








ಇಂಗ್ಲೀಷರು,(ಕಾರ್ನವಾಲೀಸ್) ಮರಾಠರು, ನಿಜಾಮ


ಮತ್ತು


ಟಿಪ್ಪು ಸುಲ್ತಾನ


1. 'ಟಿಪ್ಪು ಆಂಗ್ಲರೊಂದಿಗೆ ಮಾಡಿಕೊಂಡ ಒಪ್ಪಂದ ತಾತ್ಕಾಲಿಕ ಎಂದು ಅರಿತಿದ್ದನು.


2.ಮುಂಬರುವ ಯುದ್ಧದ ಸಿದ್ಧತೆಗಾಗಿ ಫ್ರೆಂಚರೊಂದಿಗೆ ಒಪ್ಪಂದ ಬಯಸಿದನು. ' 3.'ಪರ್ಷಿಯಾ','ಟರ್ಕಿ','ಅಪಘಾನಿಸ್ತಾನ ದೇಶಗಳಿಗೆ ಸಹಾಯ ಯಾಚಿಸಿ ತನ್ನ ರಾಯಭಾರಿಗಳನ್ನು ಕಳಿಸಿದನು.


ಟಿಪ್ಪು ಸುಲ್ತಾನ ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದನು.ಇಂಗ್ಲೀಷರು ಟಿಪ್ಪುವಿನ ವಿರುದ್ಧ 1789ರಲ್ಲಿ ಯುದ್ಧ ಸಾರಿದರು. ಕಾರ್ನವಾ ಲೀಸ್', 'ಮರಾಠರು', 'ನಿಜಾಮರು ಸೇರಿ, ಬೆಂಗಳೂರನ್ನು ವಶಪಡಿಸಿಕೊಂ ಡರು. 1791ರಲ್ಲಿ ಶ್ರೀರಂಗಪಟ್ಟಣ ಕೋಟೆಯನ್ನು ಮುತ್ತಿದರು.ಟಿಪ್ಪು ಅನಿವಾರ್ಯವಾಗಿ 1792ರಲ್ಲಿ ಒಪ್ಪಂದಕ್ಕೆ ಮುಂದಾದನು.


1.1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದ ವಾಯಿತು.ಈ ಒಪ್ಪಂದದ ಕರಾರಿನ ಪ್ರಕಾರ 2.ಟಿಪ್ಪು ಅರ್ಧ ರಾಜ್ಯವನ್ನು ಕಳೆದುಕೊಂಡ ನು. '3. 'ತಮಿಳುನಾಡು','ಮಲಭಾರ ಪ್ರದೇಶಗಳು ಇಂಗ್ಲೀಷರಿಗೆ ಸೇರಿದವು. 4.ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ಸೇರಿತು. 5. 'ಬಳ್ಳಾ','ರಿ ಕಡಪ','ತುಂಗಭದ್ರಾ ದೋಅಬ್ ಪ್ರಾಂತ ನಿಜಾಮನಿಗೆ ಸೇರಿತು. 6.ಯುದ್ಧ ಪರಿಹಾರ ನಿಧಿಗಾಗಿ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಯಿತು.


ಶ್ರೀರಂಗ ಪಟ್ಟಣ ಒಪ್ಪಂದ-1792














9


4'ನೇ ಆಂಗ್ಲೋ'-'ಮೈಸೂರು ಯುದ್ಧ


1799






ಇಂಗ್ಲೀಷರು, (ಲಾರ್ಡ ವೆಲ್ಲೆಸ್ಲಿ)


ಮತ್ತು


ಟಿಪ್ಪು ಸುಲ್ತಾನ


1. 'ಟಿಪ್ಪು ಬ್ರಿಟೀಷರಿಂದಾದ ಸೋಲು ಅವಮಾನ ಮರೆಯಲಿಲ್ಲ .


2.ರಾಜಧಾನಿಯ ರಕ್ಷಣೆ ಬಲಪಡಿಸಿದನು.


'3.'ಫ್ರೆಂಚರಿಂದ ಸೈನ್ಯಕ್ಕೆ ತರಬೇತಿ ನೀಡಿದನು


4.'ಅಪಘಾನಿಸ್ತಾನ',ಹಾಗೂ ಟರ್ಕಿಸುಲ್ತಾನರ ಜೊತೆ ಒಪ್ಪಂದಕ್ಕೆ ಮಾತುಕತೆ ಮುಂದಾದನು.


'5.'ಟಿಪ್ಪುವಿನ ಆಂತರೀಕ ಶತ್ರುಗಳು ಹೆಚ್ಚಾದರು 6.ರಾಜಧಾನಿಯಲ್ಲಿ ಒಳಸಂಚುಗಳು ನಡೆದವು.


ಲಾರ್ಡವೆಲ್ಲೆಸ್ಲಿ ಯು ಟಿಪ್ಪುವಿನ ವಿರುದ್ಧ ಯುದ್ಧ ಹೂಡಿ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳ ಲು ಒತ್ತಾಯಪಡಿಸಿದನು. ಟಿಪ್ಪು ಒಪ್ಪದಾದಾಗ ನಾಲ್ಕೂ ಕಡೆಗಳಿಂದ ಇಂಗ್ಲೀಷರೊಡನೆ ಮರಾಠರು, ನಿಜಾಮರು ಸೇರಿ ರಾಜಧಾನಿ ಶ್ರೀರಂಗಪಟ್ಟಣವನ್ನು ಸುತ್ತುವರೆದರು. ಟಿಪ್ಪು ಯುದ್ಧದಲ್ಲಿ ಹೋರಾಡುತ್ತಾ ಮಡಿದನು.


1. 'ಟಿಪ್ಪು ಸುಲ್ತಾನ ಮಡಿದನು.


2.ಬಹುಪಾಲು ಮೈಸೂರು ಬ್ರಿಟೀಷರು ಮತ್ತು ನಿಜಾಮರ ನಡುವೆ ಹರಿದು ಹಂಚಿಹೋಯಿತು


3.ಅಳದುಳಿದ ಹಳೇ ಮೈಸೂರಿಗೆ ಮುಮ್ಮಡಿ ಕೃಷ್ಣರಾಜ ಒಡೆಯ ರನ್ನು ರಾಜನನ್ನಾಗಿ ಮಾಡಿದರು.


'4.'ಮೈಸೂರನ್ನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಿಸಲಾಯಿತು.








--









10


1'ನೇ ಆಂ'.- 'ಮರಾಠ ಯುದ್ಧ


1775-82



ಮರಾಠರು


(ನಾನಾ ಫಡ್ನವೀಸ ), ಹೈದರಾಲಿ, ನಿಜಾಮ


ಮತ್ತು ಇಂಗ್ಲೀಷರು (ವಾರನ್ ಹೆಸ್ಟಿಂಗ್ಸ)


1.ಅಧಿಕಾರಕ್ಕಾಗಿ ರಘುನಾಥರಾಯನು ಕುತಂತ್ರ ನಡೆಸಿದನು. 2.'ರಘುನಾಥರಾಯ ಮತ್ತು ನಾನಾ ಫಡ್ನವೀಸರ ಒಳಜಗಳಗಳು.


.3.ಬ್ರಿಟೀಷರ ಮುಂಬೈ ಸರಕಾರ ರಘುನಾಥ ರಾಯ ನಿಗೆ ಆಶ್ರಯ ನೀಡಿದ್ದು .


4.ಇಂಗ್ಲೆಂಡಿನ ನಿರ್ದೇಶಕ ಮಂಡಲಿ ಸೂರತ್ ಒಪ್ಪಂದವನ್ನು ಮಾನ್ಯ ಮಾಡಿದ್ದು.


ಮರಾಠರಿಗೂ ಇಂಗ್ಲೀಷರಿಗೂ 1775ರಲ್ಲಿ ಯುದ್ಧ ಆರಂಭವಾಯಿತು.ಮೊದಲು ನಾನಾ ಫಡ್ನವೀಸನಿಗೆ ಜಯವಾಯಿತು. ನಂತರ ಮರಾಠಾ ಒಕ್ಕೂಟಕ್ಕೆ ಸೋಲಾಯಿತು.


1.ಸೂರತ್ ಒಪ್ಪಂದ-1775


2.ಪುರಂದರ ಒಪ್ಪಂದ-1776





'1.'ಮರಾಠರು ಸೋತರು.


2.'ಸಾಲ್ಬಾಯಿ ಒಪ್ಪಂದವಾಯಿತು. 3.ಎರಡನೇ ಮಾಧವರಾಯ ಪೇಶ್ವೆಯಾದನು.


'4.'ರಘುನಾಥರಾಯನಿಗೆ ವಿಶ್ರಾಂತಿ ವೇತನ ನೀಡಲಾಯಿತು.


ಸಾಲ್ಬಾಯಿ ಒಪ್ಪಂದ-1782





11


2'ನೇ ಆಂ'.- 'ಮರಾಠ ಯುದ್ಧ


1800-1802


2ನೇ ಬಾಜಿರಾಯ, ಇಂಗ್ಲೀಷರು


ಮತ್ತು


ಗ್ವಾಲಿಯರ್ ನ ಸಿಂಧ್ಯ, ಇಂದೋರಿನ ಹೋಳ್ಕರ್


1'ನಾನಾ ಫಡ್ನವೀಸನ ಮರಣದ ನಂತರ ಪೇಶ್ವೆ ಮೇಲೆ ನಿಯಂತ್ರಣ ಸಾಧಿಸಲು ಮರಾಠಾ ನಾಯಕ ರಲ್ಲಿ ನಡೆದ ಪೈಪೋಟಿ.


2. ಪೇಶ್ವೆ 2'ನೇ ಬಾಜಿರಾಯ ಸಹಾಯಕ ಸೈನ್ಯ ಪದ್ಧತಿಯನ್ನು ಸ್ವೀಕರಿಸಿದ್ದು.


2'ನೇ ಬಾಜಿರಾಯ ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ್ದರಿಂದ ಕೋಪಗೊಂಡ ಗ್ವಾಲಿಯರ್ ನ ಸಿಂದ್ಯ ಹಾಗೂ ಇಂದೋರಿನ ಹೋಳ್ಕರರು ಇಂಗ್ಲೀಷರೊಡನೆ ಯುದ್ಧ ಹೂಡಿ ,ಅನೇಕ ಕಡೆಗಳಲ್ಲಿ ಸೋತರು.


1.ಗ್ವಾಲಿಯರ್ಸಿಂಧ್ಯ, ಇಂಧೋರಿ ಹೋಳ್ಕರ್, ಬರೋಡ ಗಾಯಕ ವಾಡ, ನಾಗಪುರ ಭೋಂಸ್ಲೆ ಇವರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದರು.



ಬೆಸ್ಸೀನ್ ಒಪ್ಪಂದ -1802









12


3'ನೇ ಆಂಗ್ಲೋ'-'ಮರಾಠ ಯುದ್ಧ


1817-18





2ನೇ ಬಾಜಿರಾಯ


ಹಾಗೂ ಮರಾಠ ನಾಯಕರು


. ಮತ್ತು


ಇಂಗ್ಲೀಷರು


1. 2'ನೇ ಆಂಗ್ಲೋ '-'ಮರಾಠ ಯುದ್ಧದ ಸೋಲಿನಿಂದ ಮರಾಠ ನಾಯಕರಲ್ಲಿ ಅಸಮಾಧಾನ ಉಂಟಾಯಿತು.


2. 2'ನೇ ಬಾಜಿರಾಯ ಇಂಗ್ಲೀಷರ ಪೂನಾ ರೆಸಿಡೆನ್ಸಿ ಕಛೇರಿ ಮೇಲೆ ದಾಳಿ ಮಾಡಿದನು.


'2'ನೇಬಾಜಿರಾಯನು ಇಂಗ್ಲೀಷರೊಡನೆ ಹೋರಾಡಿ ಸೋತುಹೋದನು. ಇಂಗ್ಲೀಷರು ಮರಾಠ ಪ್ರಮುಖ ರೊಡನೆ ಹೊಸ ತೀರ್ಮಾನಗಳನ್ನು ಕೈಗೊಂಡರು.


'2 'ನೇಬಾಜಿರಾಯನಿಗೆ ವಿಶ್ರಾಂತಿವೇತನ ನೀಡಿ ಬೀತೂರಿಗೆ ಕಳಿಸಲಾಯಿತು.


'1.'ಮರಾಠರ ರಾಜ್ಯವನ್ನು ಬೊಂಬಾಯಿ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು.


'2.'ಮರಾಠ ನಾಯಕರು ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟರು.


3.ಮರಾಠ ಸಾಮ್ರಾಜ್ಯದ ಅವನತಿ ಯಾಯಿತು.

















13


1'ನೇ ಆಂಗ್ಲೋ'-'ಸಿಖ್ ಯುದ್ಧ


1845-46






ಲಾಲ್ ಸಿಂಗ


ಮತ್ತು


ಬ್ರಟೀಷರು


ಲಾಲ್ ಸಿಂಗನು ಖಾಲ್ಸಾ ಸೈನ್ಯವನ್ನು ತನ್ನೆಡೆಗೆ ಒಲಿಸಿಕೊಂಡು ಇಂಗ್ಲೀಷರೊಡನೆ ಯುದ್ಧ ಹೂಡಿದನು.


ಮಡ್ಕಿ', ,'ಫಿರೋಜ್ ಷಾ ', 'ಅನಲ್ ವಾರಾದ ಕದನಗಳಲ್ಲಿ ಸಿಖ್ ರು ಸೋತರು.


'1. 'ಮಹಾರಾಜನು ಸಿಖ್ಖರ ಪ್ರದೇಶದ ಮೇಲೆ ಇದ್ದ ಹಕ್ಕನ್ನು ಬಿಟ್ಟುಕೊಟ್ಟನು.


'2.'ಸೆಟ್ಲೆಜ'-'ರಾವಿ ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ ಸೇರಿತು.


3.'ಕಾಶ್ಮೀರ ಗುಲಾಬಸಿಂಗನಿಗೆ 75'ಲಕ್ಷ ರೂ.ಗಳಿಗೆ ಕೊಡಲಾಯಿತು.


ಅವನು ಆಂಗ್ಲರ ಆಧೀನನಾದನು.


.ಲಾಹೋರ ಒಪ್ಪಂದ-1846








14


2'ನೇ ಆಂಗ್ಲೋ'-'ಸಿಖ್ ಯುದ್ಧ


1848-49


ಮುಲ್ತಾನಿನ


ಮುಲ್ ರಾಜ ,


ಅಪ್ಘನ್ ನಾಯಕ


ದೋಸ್ತ-ಅಲಿ


ಮತ್ತು


ಇಂಗ್ಲೀಷರು


(ಜನರಲ್ ನೇಪಿಯರ್)



1.ಪಂಜಾಬಿನಲ್ಲಿ ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ ಣೆಯನ್ನು ದುಲೀಪ್ ಸಿಂಗನಿಗೆ ವಹಿಸಿದ್ದರಿಂದ ಸಿಖ ಸೈನಿಕರಿಗೆ ಅಸಮಾಧಾನವಾಯಿತು.


2 .ಮುಲ್ತಾನಿನ ಅಧಿಕಾರಿ ಮುಲ್ ರಾಜ ದಂಗೆಯೆದ್ದನು.


3. ಅಪ್ಘನ್ ನಾಯಕ ದೋಸ್ತ'-'ಅಲಿ ಸಿಖ್ಖರ ದಂಗೆಯನ್ನು ಬೆಂಬಲಿಸಿದನು.






1949'ರಲ್ಲಿ ಜಾಲಿಯನ್ ವಾಲಾದಲ್ಲಿ ನಡೆದ ಯುದ್ಧದಲ್ಲಿ ಜನರಲ್ ನೇಪಿಯರ್ ಸಿಖ್ಖರನ್ನು ಸೋಲಿಸಿದನು.


'1.'ಸಿಖ್ಖಅಂತ್ಯವಾಯಿತು.


'2.'ದುಲೀಪಸಿಂಗನಿಗೆ ವಿಶ್ರಾಂತಿವೇ ತನವನ್ನು ನೀಡಲಾಯಿತು.


3.ಇದರ ನೆನಪಿಗಾಗಿ ದುಲೀಪ ಸಿಂಗ ನು ಇಂಗ್ಲೀಷರಿಗೆ "'ಕೋಹಿನೂರ ವಜ್ರ"ವನ್ನು ನೀಡಿದನು.























15


ಪ್ರಥಮ ಸ್ವಾತಂತ್ರ್ಯ ಸಂಗ್ರಾಮ


1854














ಭಾರತೀಯರು ಮತ್ತು


ಬ್ರಿಟೀಷರು









1.ರಾಜಕೀಯ ಕಾರಣಗಳು


2.ಆರ್ಥಿಕ ಕಾರಣ ಗಳು


3.ಸಾಮಾಜಿಕ ಕಾರಣಗಳು.


4.ಧಾರ್ಮಿಕ ಕಾರಣಗಳು.


5.ಸೈನಿಕ ಕಾರಣಗಳು


6.ಆಡಳಿತಾತ್ಮಕ ಕಾರಣಗಳು.


7.ತತ್ ಕ್ಷಣದ ಕಾರಣ.


1.ಮೀರತ್ ನಲ್ಲಿ ಸಿಪಾಯಿಗಳು ಸೆರೆಮನೆ ಒಡೆದು ಬಹಿರಂಗ ಹತ್ಯೆ ನಡೆಸಿದರು.


2.ಕಾನ್ಪುರದಲ್ಲಿ ನಾನಾಸಾಹೇಬನ ನಾಯ


ಕತ್ವದಲ್ಲಿ ಇಂಗ್ಲೀಷರ ಹತ್ಯೆ ನಡೆಸಿದರು. ನಾನಾಸಾಹೇಬ ಸೋತು ನೇಪಾಳಕ್ಕೆ ಓಡಿದ 3.ಲಕ್ನೋದಲ್ಲಿ ಬೇಗಂ ಹಜರತ್ ಮಹಲ್ ದಂಗೆ ಎದ್ದಳು.ಸೋತು ನೇಪಾಳಕ್ಕೆ ಫಲಾಯನ ಮಾಡಿದಳು.


4.ಮಧ್ಯಪ್ರದೇಶದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಯುದ್ಧ ಹೂಡಿದಳು. ಹೋರಾಡುತ್ತಾ ಅಸುನೀಗಿದಳು.


1.ಇಂಗ್ಲೀಷ ಸರಕಾರದ ನೇರ ಆಳ್ವಿಕೆ ಪ್ರಾರಂ ಭವಾಯಿತು. 2.ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಭಾರತದ ವ್ಯವಹಾರ ವಹಿ ಸಲಾಯಿತು. 3.'ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ಕಾನೂನು ಹಿಂತೆಗೆದುಕೊ ಳ್ಳಲಾ ಯಿತು. 4.ಕ್ರಿ.ಶ.1858 ರಲ್ಲಿ ರಾಣಿ ವಿಕ್ಟೋ ರಿಯಾ "ಮ್ಯಾಗ್ನಾ ಕಾರ್ಟಾ'" ಹೊರಡಿಸಿ ದಳು.5.ಭಾರತೀಯರ ಧಾರ್ಮಿಕ ನಂಬಿಕೆ ಗಳಲ್ಲಿ ಹಸ್ತಕ್ಷೇಪ ಮಾಡು ವುದಿಲ್ಲ ಎಂದು ಭರವಸೆ ಇತ್ತಳು.6.ಭಾರತೀಯರ ಬೆಂಬಲ ದಿಂದ ಮಾತ್ರ ಭಾರತವನ್ನು ಆಳಬಹುದೆಂ ಬುದನ್ನು ಬ್ರಿಟೀಷರು ಮನಗಂಡರು.




















16


ಒಂದನೆಯ ಮಹಾಯ ದ್ಧ


1914-18








ಜರ್ಮನಿ,ಆಸ್ಟ್ರೋ ಹಂಗೇರಿ,ಇಟಲಿ ಬಲ್ಗೇರಿಯಾ,ಟರ್ಕಿ ಮತ್ತು ಇಂಗ್ಲೆಂಡ, ಫ್ರಾನ್ಸ , ರಷ್ಯ, ಸರ್ಬಿಯಾ, ಬೆಲ್ಜಿಯಂ, ಅಮೇರಿಕಾ





1.ಅತ್ಯುಗ್ರ ರಾಷ್ಟ್ರೀಯತೆ


2.ಪ್ರತಿಸ್ಪರ್ಧೆಯ ಮೈತ್ರಿಕೂಟಗಳ ಪದ್ಧತಿ.(ಕದನ ಬಾಂಧವ್ಯತ್ರಯ', 'ಕದನ ಸೌಹಾರ್ಧತ್ರಯ ') 3.ಶಸ್ತ್ರಾಸ್ತ್ರಗಳ ಪೈಪೋಟಿ


4.ತಕ್ಷಣದ ಕಾರಣ :-ಆಸ್ಟ್ರಿಯಾದ ರಾಜಕುಮಾರ ಸೆರಾಜಿವೊ ನಗರದಲ್ಲಿ ಸರ್ಬೀಯಾದ ಪ್ರಜೆಯಿಂದ ಕೊಲೆಯಾದುದು.


ಆಸ್ಟ್ರಿಯಾ ಜರ್ಮನಿಯ ಬೆಂಬಲದಿಂದ ಸರ್ಬಿಯಾ ವನ್ನು ಶಿಕ್ಷಿಸಲು ಮುಂದಾಯಿತು. ರಷ್ಯ ಸರ್ಬಿಯಾ ವನ್ನು ಬೆಂಬಲಿಸಿತು.ಜರ್ಮನಿ ಫ್ರಾನ್ಸನ ಮೇಲೆ, ಇಂಗ್ಲೆಂಡ್ ಜರ್ಮನಿ ಮೇಲೆ ಯುದ್ಧ ಪ್ರಾರಂಭಿಸಿ ದವು. ಜರ್ಮನಿ ಬ್ರಿಟೀಷ ಜಲಾಂತರ್ಗಾಮಿ ನೌಕೆ ಲೂಸಿತಾನಿಯಾ ವನ್ನು ಮುಳುಗಿಸಿದ್ದಕ್ಕಾಗಿ ಅಮೇರಿಕಾ ಯುದ್ಧದಲ್ಲಿ ಭಾಗವಹಿಸಿತು.1918ರಲ್ಲಿ ಜರ್ಮನಿಯು ಮಾರ್ನೆ ಎಂಬಲ್ಲಿ ಸೋತು,ಚಕ್ರವರ್ತಿ 2'ನೇ ಕೈಸರ್ ವಿಲಿಯಂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು.


1. ಲಕ್ಷಾಂತರ ಜನ ಸತ್ತರು.


2.ಹೆಚ್ಚು ಜನ ಕೈ ಕಾಲು ಕಳೆದುಕೊಂಡು ಅಂಗವಿಕಲರಾದರು .


3.ನಗರ,ರಸ್ತೆ, ಸೇತು ವೆ,ರೈಲುಮಾರ್ಗ, ಕಾರ್ಖಾನೆ, ನಾಶವಾದ ವು. '4.1929' ತೀವ್ರ ಆರ್ಥಿಕ ಬಿಕ್ಕಟ್ಟಿಗೂ ಇದು ಕಾರಣವಾಯಿತು.'5.'ವರ್ಸೈಲ್ಸ ಒಪ್ಪಂದವಾಯಿತು.6. 'ರಾಷ್ಟ್ರಸಂಘ '(1919) ವು ಸ್ಥಾಪನೆಯಾಯಿತು.


ವರ್ಸೈಲ್ಸ ಒಪ್ಪಂದ 1919












17


ಎರಡನೆಯ ಮಹಾಯುದ್ಧ


1939 – 44


ಜರ್ಮನಿ,ಜಪಾನ್, ಇಟಲಿ, ಗ್ರೀಸ್ ಹಾಗೂ ಇತರ ದೇಶಗಳು ಮತ್ತು


ಫ್ರಾನ್ಸ,ಇಂಗ್ಲೆಂಡ್,ರಷ್ಯ, ಅಮೇರಿಕಾ ಹಾಗೂ ಇತರ ದೇಶಗಳು.


'1.'ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾ ವಾದ ಹಾಗೂ ಸಾಮ್ರಾಜ್ಯವಾದಗಳು. 2.ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ರಾಷ್ಟ್ರಸಂಘ ತಡೆಯದೇ ಹೋದುದು.


3.'ಹಿಟ್ಲರ್ ಮತ್ತು ಮುಸ್ಸಲೋನಿಯರ ವಿರುದ್ಧ ಯಾರೂ ಸಶಸ್ತ್ರ ಕ್ರಮ ಕೈಗೊಳ್ಳಲು ಮುಂದಾಗದಿರುವದು.


'4.'ಜರ್ಮನಿ ಹಾಗೂ ರಷ್ಯ ಗಳು ಪರಸ್ಪರ ಒಪ್ಪಂದ ಮಾಡಿಕೊಂಡು ಪೊಲೆಂಡನ್ನು ಹಂಚಿಕೊಂಡದ್ದು.


'ಜರ್ಮನಿ':-ಪೋಲೆಂಡ್,ನಾರ್ವೆ,ಮತ್ತು ಡೆನ್ಮಾರ್ಕಗಳ ನ್ನು ಗೆದ್ದಿತು.ಫ್ರಾನ್ಸನ್ನು ವಶಪಡಿಸಿ ಕೊಂಡಿತು. ಇಂಗ್ಲೆಂಡ್ ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು. ರಷ್ಯದ ದಾಳಿಗೆ ಪ್ರಯತ್ನಿಸಿ ಅಪಾರ ಸಾವು ನೋವು ಅನುಭವಿಸಿತು. 'ಗ್ರೀಸ್':-ಆಫ್ರಿಕಾದ ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ ಮುಂತಾದ ಪ್ರದೇಶಗಳ ಮೇಲೆ ದಾಳಿ ಮಾಡಿತು. ಜಪಾನ್ ':- ಏಷ್ಯಾದ ಫಿಲಿಫೈನ್ಸ,ಮಲಯ ,ಸಿಂಗಾಪುರ, ಇಂಡೋ ಚೀನಾ,ಇಂಡೋನೇಷ್ಯಾ ಗಳ ನ್ನು ಗೆದ್ದು ಅಂಡಮಾನ್ ದ್ವೀಪಗಳನ್ನು ಗೆದ್ದು ಭಾರತ ದ ಕಡೆಗೆ ಸಾಗಿತು.1941 ರಲ್ಲಿ ಅಮೇರಿಕಾದ ಪರ್ಲ್ ಹರ್ಬರ್ ಮೇಲೆ ದಾಳಿ ಮಾಡಿತು. ಅಮೇರಿಕಾ '1945'ರಲ್ಲಿ ಹೋರಾಟಕ್ಕಿಳಿದು ಜಪಾನ್ ಮೇಲೆ ಬಾಂಬ್ ದಾಳಿ ಮಾಡಿತು.


1.ಜಪಾನಿನ ಹೀರೋಶಿಮಾ ಹಾಗೂ ನಾಗಾಸಾಕಿ ನಗರಗಳು ನಾಶವಾದವು. 2.ಸುಮಾರು ಐದುಕೋಟಿ ಜನ ಸತ್ತ ರು. 3. 50 ಲಕ್ಷ ಯಹೂದಿಗಳನ್ನು ಹಿಟ್ಲರ್ ವಿಷಾನಿಲಗೃಹ ದಲ್ಲಿ ಕೊಲ್ಲಿಸಿದ್ದ.


4.ಇಡೀ ಯುರೋಫ್ ನಾಶವಾಗಿ ನಗರ ಪಟ್ಟಣ,ಕೈಗಾರಿಕೆ,ರಸ್ತೆ,ರೈಲು ಮಾರ್ಗಗಳು ನಾಶವಾದವು. 5ಅಮೇರಿಕಾದ ಅಧ್ಯಕ್ಷ ಟ್ರೂಮನ್ "ಮಾರ್ಷಲ್ ಯೋಜನೆ'" ರೂಪಿಸಿದ. '6.'ಜರ್ಮನನ್ನು ನಿಶ್ಯಸ್ತ್ರೀಕರಣ ಗೊಳಿಸಿ, ಗೆದ್ದ ರಾಷ್ಟ್ರಗಳ ಉಸ್ತುವಾರಿಗೆ ವಹಿಸಿದರು.7. ಜಾಗತಿಕ ಚಿರಶಾಂತಿಗಾಗಿ ವಿಶ್ವಸಂಸ್ಥೆ ಸ್ಥಾಪನೆಯಾಯಿತು.














---




ವಿಸ್ತ್ರುತ ರೂಪಗಳು

ಇದರ ಸುಲಭ ಮುದ್ರಣ ಪ್ರತಿಗಾಗಿ ವಿಸ್ತ್ರುತ ರೂಪಗಳು ಇಲ್ಲಿ ಒತ್ತಿ



Xನೇ ತರಗತಿಯ ಪೌರನೀತಿಯಲ್ಲಿ ಅಭ್ಯಸಿಸಲಾಗುವ ಸಂಕ್ಷಿಪ್ತರೂಪಗಳ ವಿಸ್ತೃತ ರೂಪಗಳು


'ಕ್ರ'.


ಸಂ


ಸಂಕ್ಷಿಪ್ತ ರೂಪಗಳು


ರಚಸಿದ


ಇಸ್ವಿ


ವಿಸ್ತೃತ ರೂಪಗಳು


(Long forms in English)


ವಿಸ್ತೃತ ರೂಪಗಳ ಅರ್ಥ


('ಕನ್ನಡದಲ್ಲಿ ')


1


USA


--


United States of America


ಅಮೇರಿಕಾ ಸಂಯುಕ್ತ ಸಂಸ್ಥಾ ನ


2


USSR


--


Union of Soviet Socialistic Republic


ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟ


3


POK


--


Pak occupied kashmir


ಪಾಕ್ ಆಕ್ರಮಿತ ಕಾಶ್ಮೀರ


4


OAU


1963


Organization of African Unity


ಆಫ್ರಿಕನ್ ಒಕ್ಕೂಟ ಸಂಸ್ಥೆ


5


NATO


1949


North Atlantic Treaty Organization


ಉತ್ತರ ಅಟ್ಲಾಂಟಿಕ್ ಒಡಂಬಡಿಕೆ ಸಂಸ್ಥೆ


6


SEATO


1954


South East Asian Treaty Organization


ಆಗ್ನೇಯ ಏಷ್ಯನ್ ಒಡಂಬಡಿಕೆ ಸಂಸ್ಥೆ


7


CENTO


1955


Central Nations Treaty Organization


ಕೇಂದ್ರ ರಾಷ್ಟ್ರಗಳ ಒಡಂಬಡಿಕೆ ಸಂಸ್ಥೆ


8


CIS


1991


Commonwealth of independent states


ಸ್ವತಂತ್ರ ಗಣತಂತ್ರಗಳ ಒಕ್ಕೂಟ (ರಷ್ಯ ನೇತೃತ್ವದಲ್ಲಿ)


9


SAARC


1985


South Asian Association for regional co-operation


ದಕ್ಷಿಣ ಏಷಿಯಾ ಪ್ರಾದೇಶಿಕ ಸಹಕಾರ ಸಂಘ


10


UNO


1945


United Nations Organization


ವಿಶ್ವಸಂಸ್ಥೆ


11


NCB


1955


National children Board


ರಾಷ್ಟ್ರೀಯ ಮಕ್ಕಳ ಮಂಡಳಿ


12


ICCW


1952


Indian council for child welfare


ಭಾರತದ ಮಕ್ಕಳ ಕಲ್ಯಾಣ ಸಂಸ್ಥೆ


13


ISI


1947


Indian Standard Institute


ಭಾರತದ ಗುಣಮಟ್ಟ ಸಂಸ್ಥೆ


14


AGMARK


1977


Agricultual Marketing


ಕೃಷಿ ಮಾರುಕಟ್ಟೆ


15


COFE


POSA


1974


Consumption of foreign Exchange And Prohibition of smuggling Act


ವಿದೇಶಿ ವಿನಿಮಯದ ಉಳಿಕೆ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟುವ ಶಾಸನ


16


IRDP


1980


Intensive Rural Development Programme


ಉದ್ದೇಶಿತ ಗ್ರಾಮೀಣ ಅಭಿವೃದ್ಧಿ ಯೋಜನೆ


17


NREP


1980


National Rural Employment programme


ರಾಷ್ತ್ರೀಯ ಗ್ರಾಮೀಣ ಉದ್ಯೋಗ ಯೋಜನೆ


18


FAO


1945


Food and Agriculture Organization


ಆಹಾರ ಮತ್ತು ಕೃಷಿ ಸಂಸ್ಥೆ


19


WHO


1948


World Health Organization


ವಿಶ್ವ ಆರೋಗ್ಯ ಸಂಸ್ಥೆ


20


UNESCO


1946


United nations Educational,sceintific and Cultural Organizaton


ವಿಶ್ವಸಂಸ್ಥೆಯ ಶೈಕ್ಷಣಿಕ ,ವೈಜ್ಞಾನಿಕ,ಮತ್ತು ಸಾಂಸ್ಕೃತಿಕ ಸಂಸ್ಥೆ


21


NCERT


1961


National Council for Education Research and Training


ರಾಷ್ಟ್ರೀಯ ಶಿಕ್ಷಣ,ಸಂಶೋಧನೆ,ಮತ್ತು ತರಬೇತಿ ಸಂಸ್ಥೆ


22


ILO


1962


International Labour Organzation


ಅಂತರಾಷ್ಟ್ರೀಯ ಕಾರ್ಮೀಕ ಸಂಘ


23


UNICEF


1946


United nations International Children Emergency Fund


ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ


24


IMF


1945


International Monetary Fund


ಅಂತರಾಷ್ಟ್ರೀಯ ಹಣಕಾಸಿನ ನಿಧಿ


25


IBRD


1944


International Bank Of Re-construction and Development


ಅಂತರಾಷ್ಟ್ರೀಯ ಪುನರ್ -ರಚನೆ ಮತ್ತು ಅಭಿವೃದ್ಧಿ ಬ್ಯಾಂಕ್


26


UNCTAD


1960


United Nations Conference Of Trade and Development


ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ


27


WTO


1995


World Trade Organization


ವಿಶ್ವ ವಾಣಿಜ್ಯ ಸಂಸ್ಥೆ


28


GATT


1994


General Agreement On Trade and Tariff


ವಾಣಿಜ್ಯ ಮತ್ತು ಸುಂಕದ ಸಾಮಾನ್ಯ ಒಪ್ಪಂದ


29


IPKF


1988


Indian peace keeping Force


ಭಾರತೀಯ ಶಾಂತಿ ಸ್ಥಾಪನಾ ದಳ


30


LTTE


--


Liberation of Tamil Tigers Ealam


ಸ್ವತಂತ್ರ ತಮಿಳು ಹುಲಿಗಳ ಸಂಘ


31


NPT


1970


Non- proliferation Treaty


ಅಣ್ವಸ್ತ್ರ ಪ್ರಸರಣ ನಿರ್ಬಂಧ ಒಪ್ಪಂದ


32


BWC


1975


Biological Weapen convention


ಜೈವಿಕ ಅಸ್ತ್ರಗಳ ಉತ್ಪಾದನೆ ನಿಷೇಧ ಒಪ್ಪಂದ


33


ASEAN


1967


Association Of south east Assian Nations


ಆಗ್ನೇಯ ಏಷಿಯಾ ರಾಷ್ಟ್ರಗಳ ಸಂಘ


34


SAPTA


1955


South Asian preferencial Trade Area


ದಕ್ಷಿಣ ಏಷಿಯಾ ಆದ್ಯತಾ ವ್ಯಾಪಾರ ಕ್ಷೇತ್ರ


35


SAD


--


South Asian Development


ದಕ್ಷಿಣ ಏಷಿಯಾ ಅಭಿವೃದ್ಧಿ


36


SAVE


--


SAARC Audio -visual Exchange


ಸಾರ್ಕ್ ರಾಷ್ಟ್ರಗಳ ದೃಶ್ಯ-ಶ್ರವಣ ಮಾಧ್ಯಮ ವಿನಿಮಯ


37


NAM


1961


Non -Alignment Movement


ಅಲಿಪ್ತ ರಾಷ್ಟ್ರಗಳ ಚಳುವಳಿ


38


TISCO


1907


Tata Iron and Steel Company


ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ (ಜಂಷಡ್ಪುರ)


39


IISCO


1919


Indian Iron and Steel Company


ಭಾರತೀಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಬರ್ನಪುರ)


40


MISCO


1923


Mysore Iron and Steel Company


ಮೈಸೂರು ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)


41


VISCO


--


Vishveshwarayy Iron and Steel Company


ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)


42


SAIL


1973


Steel Authority of India Limited


ಭಾರತದ ಉಕ್ಕು ಪ್ರಾಧಿಕಾರ ನಿಯಮಿತ


43


FACTS


--


Fertilizers and Chemicals Travenkore Limited


ತಿರುವಾಂಕೂರು ರಸಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆ (ತಿರುವಾಂಕೂರು)


44


NACIL


2007


National Aviation Company India Limited


ಭಾರತೀಯ ರಾಷ್ಟ್ರೀಯ ವೈಮಾನಿಕ ಕಂಪನಿ ನಿಯಮಿತ


45


PIN


1972


Postal Index Number


ಅಂಚೆ ಸಂಕೇತ ಸಂಖ್ಯೆ


46


QMS


1986


Quick Mail Service


ತುರ್ತು ಸಂದೇಶ ಸೇವೆ


47


STD


1973


Subscriber's Trunk Dil


ಅಂತರತಾಷ್ಟ್ರೀಯ ನೇರ ಸಂಪರ್ಕ ಸಾಧನ


48


WWW


--


Wourld Wide Web


ಪ್ರಪಂಚದಾದ್ಯಂತ ಜಾಲ


49


INTELSAT


--


Inter National Tele-communication Sattelite consortium


ಅಂತರರಾಷ್ಟ್ರೀಯ ದೂರಸಂಪರ್ಕ ಉಪಗ್ರಹ


50


AIR


1930


All India Radio


ಆಕಾಶವಾಣಿ


51


SFC


--


State Finance Corporation


ರಾಜ್ಯ ಹಣಕಾಸು ನಿಗಮ


52


IDC


--


Industrial design Centres


ಕೈಗಾರಿಕಾ ವಿನ್ಯಾಸ ಕೇಂದ್ರ


53


ICAR


--


Indian Council Of Agricultural Research


ಭಾರತೀಯ ವ್ಯವಸಾಯ ಸಂಶೋಧನಾ ಮಂಡಳಿ


54


HMT


--


Hindustan Machine Tools


ಹಿಂದೂಸ್ಥಾನ ಯಂತ್ರೋಪಕರಣಗಳ ಕಾರ್ಖಾನೆ (ಬೆಂಗಳೂರು)


55


ITI


--


Indian Telephone Industry


ಭಾರತೀಯ ದೂರವಾಣಿ ಕೈಗಾರಿಕೆ (ಬೆಂಗಳೂರು)


56


FCI


1965


Food Corporation of India


ಭಾರತದ ಆಹಾರ ನಿಗಮ


57


CFTRI


--


Central Food and Technology Research Institute


ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ


(ಮೈಸೂರು)



ವಿಶೇಷ ಸೇವಾ ಘಟಕಗಳು

ಸುಲಭ ಮುದ್ರಣದ ಪ್ರತಿಯನ್ನು download ಮಾಡಲು ವಿಶೇಷ ಸೇವಾ ಘಟಕಗಳು ಇಲ್ಲಿ ಒತ್ತಿ


ವಿಶ್ವ ಸಂಸ್ಥೆಯ ವಿಶೇಷ ಸೇವಾ ಘಟಕಗಳ ಸಮಗ್ರ ಮಾಹಿತಿಯ ಚಾರ್ಟು


'ಕ್ರ'.


ಸಂ


ವಿಶೇಷ ಸೇವಾ ಘಟಕಗಳು


ಸ್ಥಾಪಿಸಿದ


ಇಸ್ವಿ


ಕೇಂದ್ರ ಕಛೇರಿ


ಇರುವ ಸ್ಥಳ


ಗುರಿ ಮತ್ತು ಉದ್ದೇಶಗಳು'/'ಕಾರ್ಯಗಳು


1


ಆಹಾರ ಮತ್ತು ಕೃಷಿ ಸಂಸ್ಥೆ (FAO)


1945


ಇಟಲಿಯ ರಾಜ ಧಾನಿ ರೋಂ ನಗರ


ಗುರಿಗಳು':- 1.ವಿಶ್ವದ ಜನರ ಸ್ಥಿತಿಗತಿಗಳನ್ನು ಉತ್ತಮಪಡಿಸುವದು. 2 ವಿಶ್ವವನ್ನು ಹಸಿವಿನಿಂದ ಮುಕ್ತಾಯ ಮಾಡುವದು.


'ಕಾರ್ಯಗಳು':-1.ವಿಶ್ವದ ಆಹಾರ ಮತ್ತು ಕೃಷಿ ಪರಿಸ್ಥಿತಿಯನ್ನು ಉತ್ತಮಪಡಿಸುವದು. 2. ಪೌಷ್ಟಿಕ ಆಹಾರ ವಸ್ತುಗಳ ಬಳಕೆಯ ಜಾರಿಗೆ ತರುವದು. 3. ಸ್ವಾಭಾವಿಕ ಸಂಪನ್ಮೂಲಗಳನ್ನು ರಕ್ಷಿಸಿ ಕೃಷಿಗೆ ಸೌಲಭ್ಯಗಳನ್ನು ಒದಗಿಸುವದು. 4. ಗ್ರಾಮೀಣ ಜನರ ಸ್ಥಿತಿಗತಿಯನ್ನು ಉತ್ತಮಪಡಿಸುವದು.


2


ವಿಶ್ವ ಆರೋಗ್ಯ ಸಂಸ್ಥೆ (WHO)


1948


ಸ್ವಿ ಟ್ಜರ್ ಲ್ಯಾಂಡಿನ ಜಿನೆವಾ


'ಗುರಿ':-1.ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವದು.


ಕಾರ್ಯಗಳು':- 1. ಭಯಂಕರ ರೋಗಗಳ ನಿರ್ಮೂಲನೆ. 2.ಏಡ್ಸ ರೋಗದ ವಿರುದ್ಧ ಕ್ರಮ . 3. ಮಲೇರಿಯಾ ,ಕಾಲರಾ ,ಪ್ಲೇಗು ಮುಂತಾದ ಸಾಂಕ್ರಮಿಕ ರೋಗಗಳ ವಿರುದ್ಧ ಕ್ರಮ . 4. ಆಹಾರ ವಸ್ತುಗಳಲ್ಲಿ ಪೌಷ್ಟಿಕಾಂಶದ ಸುಧಾರಣೆ ಮತ್ತು ರೋಗ ನಿಯಂತ್ರಣಕ್ಕೆ ಕ್ರಮ .


5.ಜನರಿಗೆ ಪರಿಸರ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ , ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಆಚರಣೆ. ಮಾಡುವದು .


3


ವಿಶ್ವಸಂಸ್ಥೆಯ ಶೈಕ್ಷಣಿಕ , ವೈಜ್ಞಾನಿಕ,ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO)


1946 ನವೆಂಬರ್ -04


ಫ್ರಾನ್ಸನ ರಾಜಧಾನಿ ಫ್ಯಾರೀಸ್ ನಗರ


ಗುರಿಗಳು':- 1. ಶಾಂತಿ ಸ್ಥಾಪನೆ. 2. ಮಾನವ ಹಕ್ಕುಗಳ ಸಂರಕ್ಷಣೆ . 3. ಮಾನವನನ್ನು ವಿಕಾಸದ ಕೇಂದ್ರವಾಗಿಸುವದು. 4. ಮಾನವನ ವಿಕಾಸಕ್ಕಂದೇ ವಿಜ್ಞಾನ ತಂತ್ರಜ್ಞಾನಗಳನ್ನು ಬಳಸುವದು . 5. ಶೈಕ್ಷಣಿಕ ಅಭಿವೃದ್ಧಿ ಸಾಧನೆ. 6. ಪರಿಸರ ಮತ್ತು ಮಾನವರ ನಡುವೆ ಸಮತೋಲನ. 7. ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು . 8. ಮಾಹಿತಿ ಹಾಗೂ ಜ್ಞಾನಾರ್ಜನೆಗಳ ಮುಕ್ತ ಸಂಚಾರ. 9.ಸೃಜನಶೀಲ, ಭೌದ್ಧಿಕ ಹಾಗೂ ಕಲಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ವಿಶ್ವದಲ್ಲಿ ಸದ್ಭಾವನೆ ಶಾಂತಿಗಳನ್ನು ಸ್ಥಾಪಿಸುವದು .


4


ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ILO)


1962


ಸ್ವಿ ಟ್ಜರ್ ಲ್ಯಾಂಡಿನ ಜಿನೆವಾ ನಗರ


ಗುರಿ':- 1. ವಿಶ್ವದ ಕಾರ್ಮಿಕ ವರ್ಗದ ಸ್ಥಿತಿಗತಿಗಳನ್ನು ಸುಧಾರಿಸುವದು.


ಕಾರ್ಯಗಳು':-1. ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕ ವರ್ಗದ ಜೀವನ ಮಟ್ಟವನ್ನು ಸುಧಾರಿಸುವದು.


2. ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವದು. 3. ಕಾರ್ಮಿಕರೆಲ್ಲರಿಗೂ ಕನಿಷ್ಠ ಆದಾಯವನ್ನು ಒದಗಿಸುವದು.


4. ಬಾಲಕಾರ್ಮಿಕರ ನೇಮಕವನ್ನು ತಡೆಯುವದು. 5. ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಠಿಕ ಆಹಾರ ,ವಸತಿ ಸೌಲಭ್ಯಗಳನ್ನು ಒದಗಿಸುವದು. 6. ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲ್ಗೊಳ್ಳುವ ಅವಕಾಶ ನೀಡುವದು.


5


ವಿಶ್ವಸಂಸ್ಥೆಯ ಅಂತರ ರಾ ಷ್ಟ್ರೀಯ ಮಕ್ಕಳ ತುರ್ತು ನಿಧಿ (UNICEF)






1946


ನ್ಯೂಯಾರ್ಕ್ ನಗರ


ಉದ್ದೇಶ':-1. ವಿಶ್ವದಲ್ಲಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳ ಮತ್ತು ಮಾತೆಯರ ಜೀವನ ಮಟ್ಟವನ್ನು ಸುಧಾರಿಸುವದು.


ಕಾರ್ಯಗಳು':- 1. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳಿಗೆ ಹಾಲು ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ.


2. ಗರ್ಭಿಣಿ ಸ್ತ್ರೀಯರಿಗೆ ಸಹಾಯ ಮಾಡುತ್ತದೆ. 3 . ಮಕ್ಕಳ ಅನೈತಿಕ ವ್ಯಾಪಾರವನ್ನು ತಡೆಗಟ್ಟಿದೆ.


6


ಅಂತರರಾಷ್ಟ್ರೀಯ ಹಣ ಕಾಸಿನ ನಿಧಿ (IMF)


1945


ವಾಷಿಂಗ್ ಟನ್ ಡಿ.ಸಿ


'ಉದ್ದೇಶಗಳು':-1.ಅಂತರರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ ನೀಡುವದು. 2. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಸಮತೋಲನ ಸಾಧಿಸಿ ಎಲ್ಲಾ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವದು. 3. ವಿನಿಮಯ ದರಗಳಲ್ಲಿ ಸ್ಥಿರತೆ ಕಾಪಾಡುವದು. 4. ವಿಶ್ವವ್ಯಾಪಾರಕ್ಕೆ ಪ್ರೋತ್ಸಾಹ ನೀಡಿ ಆದಾಯ ಉದ್ಯೋಗಗಳಲ್ಲಿ ವಿಕಾಸ ಸಾಧಿಸುವದು. 5. ಅಂತರರಾಷ್ಟ್ರೀಯ ಆರ್ಥಿಕ ಸಹಕಾರದ ಮೂಲಕ ಎಲ್ಲಾ ರಾಷ್ಟ್ರಗಳ ಆರ್ಥಿಕ ಭದ್ರತೆಯನ್ನು ಕಾಪಾಡುವದು.


7


ಅಂತರರಾಷ್ಟ್ರೀಯ ಪುನರ್ರಚನೆ ಮತ್ತು ಅಭಿವೃದ್ಧಿ ಬ್ಯಾಂಕು (IBRD)


1944


ವಾಷಿಂಗ್ ಟನ್


ಉದ್ದೇಶಗಳು':-1. ಸದಸ್ಯ ರಾಷ್ಟ್ರಗಳ ಆರ್ಥಿಕ ಪುನರ್ರಚನೆ ಮತ್ತು ಪ್ರಗತಿಗೆ ಸಹಾಯ ಮಾಡುವದು.


2. ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಬಂಡವಾಳ ಹೂಡಿ ವಿದೇಶಿ ವ್ಯಾಪಾರವನ್ನು ಸಮತೂಕದಲ್ಲಿ ಬೆಳೆಯುವಂತೆ ಮಾಡುವದು.


3. ವಿಶ್ವದ ಅಭಿವೃದ್ಧಿ ಯೋಜನೆಗಳಿಗೆ ಸಹಾಯ ಮಾಡುವದು.


4. ಖಾಸಗಿ ಒಡೆತನದ ಉದ್ದಿಮೆದಾರರು ಪಡೆದ ಸಾಲಕ್ಕೆ ಭರವಸೆ ನೀಡುವದು.


5. ಸದಸ್ಯ ರಾಷ್ಟ್ರಗಳ ವಿಕಾಸಕ್ಕೆ ಧೀರ್ಘಾವಧಿ ಸಾಲ ನೀಡಿ ಅವುಗಳ ಪ್ರಗತಿಗೆ ಸಹಕರಿಸುವದು.


8


ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇ ಳನ(UNCTAD)


1960


ನ್ಯೂಯಾರ್ಕ್


'ಉದ್ದೇಶ':-1.ಅಭಿವೃದ್ಧಿಶೀಲ ದೇಶಗಳ ಆರ್ಥಿಕ ವಿಕಾಸವನ್ನು ತ್ವರಿತಗೊಳಿಸುವದು.


'ಕಾರ್ಯಗಳು':-1. ವಾಣಿಜ್ಯ ನೀತಿಗಳ ಪರಾಮರ್ಶೆ. 2. ಅಂತರರಾಷ್ಟ್ರೀಯ ಸರಕಾರಗಳ ಸಮಸ್ಯೆಗಳ ಚರ್ಚೆ.


3. ಸಮ್ಮೇಳನ ಹಾಗೂ ಸಮಾಲೋಚ ನೆಗಳ ಮೂಲಕ ಒಮ್ಮತದ ಅಭಿಪ್ರಾಯ ಸಾಧಿಸುವದು. 4. ತಾಂತ್ರಿಕ ಸಹಕಾರ.


5. ಯೋಜನೆಗಳ ಉಸ್ತುವಾರಿ ಜಾರಿ ಹಾಗೂ ಮುಂದುವರೆಸಿಕೊಂ ಡು ಹೋಗಲು ಕ್ರಮ .


9


ವಿಶ್ವ ವಾಣಿಜ್ಯ ಸಂಸ್ಥೆ


(WTO)


1995 ಜನೇವರಿ -01


ನ್ಯೂಯಾರ್ಕ್


ಗುರಿಗಳು':-1. ವಿಶ್ವಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಸಹಕರಿಸುವದು.


2.ವಿಶ್ವದ ಆರ್ಥಿಕ ನೀತಿಯನ್ನು ನಿರೂಪಿಸುವದು.


ಕಾರ್ಯಗಳು':- 1.ವಿಶ್ವದಲ್ಲಿನ ರಾಷ್ಟ್ರಗಳಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸುವದು.


2. ವಾಣಿಜ್ಯ ,ವ್ಯಾಪಾರ ತೆರಿಗೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವದು.


ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಒಪ್ಪಂದಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟು

ಸುಲಭದ ಮುದ್ರಣ ಪ್ರತಿಯನ್ನು download ಮಾಡಲು 'ಒಪ್ಪಂದಗಳು' ಇಲ್ಲಿ ಒತ್ತಿ

'ಕ್ರ'.


ಸಂ


ಒಪ್ಪಂದಗಳ


ಹೆಸರುಗಳು


ಒಪ್ಪಂದ ದ ಇಸ್ವಿ


ಒಪ್ಪಂದ ಮಾಡಿ


ಕೊಂಡವರು


ಒಪ್ಪಂದದ ಷರತ್ತುಗಳು '/'ಕರಾರುಗಳು


1


ಪ್ಯಾರೀಸ್ ಒಪ್ಪಂದ


1748


ಇಂಗ್ಲೀಷರು ಮತ್ತು


ಫ್ರೆಂಚರು


1)ಭಾರತದಲ್ಲಿ ಇಂಗ್ಲೀಷರು ಮತ್ತು ಫ್ರೆಂಚರ ನಡುವೆ ಶಾಂತಿ ಮೂಡಿತು.


2)ಮದ್ರಾಸನ್ನು ಡೂಪ್ಲೆ ಪುನಃ ಇಂಗ್ಲೀಷರಿಗೆ ಬಿಟ್ಟು ಕೊಟ್ಟನು.


2


ಪ್ಯಾರೀಸ್ ಒಪ್ಪಂದ


1763


ಇಂಗ್ಲೀಷರು ಮತ್ತು


ಫ್ರೆಂಚರು


1)ಇಂಗ್ಲೀಷರು ಪಾಂಡಿಚೇರಿ ಮತ್ತು ಚಂದ್ರನಾಗೂರು ಪ್ರದೇಶಗಳನ್ನು ಫ್ರೆಂಚರಿಗೆ ಹಿಂತಿರುಗಿಸಿದರು.


2)ಈ ಒಪ್ಪಂದದಿಂದ ಭಾರತದಲ್ಲಿ ಫ್ರೆಂಚರ ಪ್ರಭಾವ ಕಡಿಮೆಯಾಯಿತು.


3


ಅಲಹಬಾದ ಒಪ್ಪಂದ


1765


ಇಂಗ್ಲೀಷರು (ರಾಬರ್ಟ್ ಕ್ಲೈವ್) ಮತ್ತು 2ನೇ ಷಾ ಅಲಂ,ಅವಧ್ ನ ಷೂಜ್- ಉದ್- ದೌಲ್


1) 2'ನೇ ಷಾ ಅಲಂ ಹಾಗೂ ಅವಧ್ ಷೂಜ್'- 'ಉದ್'- 'ದೌಲ್ ರು ಇಂಗ್ಲೀಷರ ಸ್ನೇಹಿತರಾದರು.


2) 'ಬಂಗಾಳ','ಬಿಹಾರ','ಓರಿಸ್ಸಾ ಗಳಲ್ಲಿ ಕಂದಾಯ ವಸೂಲಿಯ ದಿವಾನಿ ಹಕ್ಕನ್ನು ಆಂಗ್ಲರು ಪಡೆದರು.


3) 'ರಾಬರ್ಟ್ ಕ್ಲೈವ್ ಬಂಗಾಳದ ಗವರ್ನರ್ ಆದನು.ಅಲ್ಲಿ ದ್ವಿಮುಖ ಸರಕಾರ ಪದ್ಧತಿ ಜಾರಿಗೆ ತಂದನು.


4


ಮದ್ರಾಸ್ ಒಪ್ಪಂದ


1769


ಇಂಗ್ಲೀಷರು ಮತ್ತು


ಹೈದರ್ ಅಲಿ


1) 'ಇಂಗ್ಲೀಷರು ಮತ್ತು ಹೈದರ್ ಅಲಿ ಪರಸ್ಪರ ಗೆದ್ದ ಪ್ರದೇಶಗಳ ಹಸ್ತಾಂತರ ಮಾಡಿಕೊಳ್ಳುವದು .


2) 'ಹೈದರ್ ಅಲಿ ಮೇಲೆ ಪರರ ಆಕ್ರಮಣವಾದಾಗ , ಇಂಗ್ಲೀಷರು ಸೈನ್ಯದ ಸಹಾಯ ಮಾಡುವುದು.


5


ಮಂಗಳೂರು ಒಪ್ಪಂದ


1784


ಇಂಗ್ಲೀಷರು (ವಾರನ್ ಹೆಸ್ಟಿಂಗ್ಸ) ಮತ್ತು ಟಿಪ್ಪು ಸುಲ್ತಾನ್


1) ಇಂಗ್ಲೀಷರು ಟಿಪ್ಪುವಿಗೆ ಮಂಗಳೂರು','ಮಲಬಾರ್ ಪ್ರದೇಶಗಳನ್ನು ನೀಡುವದು.


2) 'ಇಂಗ್ಲೀಷರು ಮತ್ತು ಟಿಪ್ಪು ಸುಲ್ತಾನ್ ರು ಪರಸ್ಪರ ಶತ್ರುಗಳಿಗೆ ಸಹಾಯ ಮಾಡಬಾರದು.


6


ಶ್ರೀರಂಗಪಟ್ಟಣ ಒಪ್ಪಂದ


1792


ಇಂಗ್ಲೀಷರು (ಕಾರ್ನವಾಲೀಸ್), ನಿಜಾಮ,ಮರಾಠರು


ಮತ್ತು ಟಿಪ್ಪು ಸುಲ್ತಾನ್




1) 'ಟಿಪ್ಪು ತನ್ನ ಅರ್ಧರಾಜ್ಯವನ್ನು ಶತ್ರುಗಳಿಗೆ ಒಪ್ಪಿಸಿದನು. ಅದನ್ನು ಒಕ್ಕೂಟದ ಮೂವರು ಹಂಚಿಕೊಂಡರು. 2) ಈಗಿನ ತಮಿಳು ನಾಡಿನ ಬಹುತೇಕ ಪ್ರದೇಶಗಳು ಹಾಗೂ ಮಲಭಾರ ಇಂಗ್ಲೀಷರಿಗೆ ಸೇರಿದವು. 3) 'ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ದೊರಕಿದವು. 4) 'ಬಳ್ಳಾರಿ','ಕಡಪ','ತುಂಗಭದ್ರಾ ದೋ'-'ಅಬ್ ಪ್ರಾಂತ ನಿಜಾಮನಿಗೆ ಸೇರಿದವು.


5) 'ಟಿಪ್ಪು ಯುದ್ಧ ಪರಿಹಾರ ನಿಧಿಗಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಯಿತು.


7


ಸೂರತ್ ಒಪ್ಪಂದ


1775


ಇಂಗ್ಲೀಷರು ಮತ್ತು ರಘುನಾಥ ರಾಯ(ಮರಾಠ ನಾಯಕ)


1) ಇಂಗ್ಲೀಷರು ರಘುನಾಥರಾಯನನ್ನು ಮರಾಠಾ ಪೇಶ್ವೆಯನ್ನಾಗಿ ಮಾಡುವುದು.


2) ರಘುನಾಥರಾಯ ಇಂಗ್ಲೀಷರಿಗೆ ಸಾಲ್ಸೆಟ್ ಮತ್ತು ಬೆಸ್ಸೀನ್ ಗಳನ್ನು ಕೊಡುವುದು.


8


ಪುರಂದರ ಒಪ್ಪಂದ


1776


ಇಂಗ್ಲೀಷರು(ವಾ. ಹೆಸ್ಟಿಂಗ್ಸ ) ಮತ್ತು ನಾನಾ ಫಢ್ನವೀಸ್(ಮ .ನಾಯಕ)


1) ಇಂಗ್ಲೀಷರು ರಘುನಾಥರಾಯನಿಗೆ ಸಹಾಯ ಮಾಡುವದನ್ನು ನಿರಾಕರಿಸಿದರು. 2) ಫಡ್ನವೀಸನು ಇಂಗ್ಲೀಷರಿಗೆ ಠಾಣಾ ಮತ್ತು ಸಾಲ್ಸೆಟ್ ಗಳನ್ನು ನೀಡಿದನು.ಹಾಗೂ 3) ಬ್ರೋಚ್ ನ ಕಂದಾಯ ವಸೂಲಿ ಹಕ್ಕನ್ನು ನೀಡಿದನು.


9


ಸಾಲ್ಬಾಯಿ ಒಪ್ಪಂದ


1782


ಇಂಗ್ಲೀಷರು ಮತ್ತು


ಮರಾಠಾ ಒಕ್ಕೂಟ


1) 'ಎರಡನೇ ಮಾಧವರಾಯನನ್ನು ಪೇಶ್ವೆಯಾಗಿ ಮಾಡಲಾಯಿತು. 2) 'ರಘುನಾಥರಾಯನಿಗೆ ವಿಶ್ರಾಂತಿ ವೇತನ ನೀಡಲಾಯಿತು. 3) 'ರಘುನಾಥರಾಯ'ನ ಮಗ ಎರಡನೇ ಬಾಜಿರಾಯನನ್ನು ಮುಂದೆ ಪೇಶ್ವೆ ಮಾಡುವ ಭರವಸೆ ನೀಡಲಾಯಿತು.


10


ಬೆಸ್ಸೀನ್ ಒಪ್ಪಂದ


1802


ಇಂಗ್ಲೀಷರು / 2ನೇ ಬಾಜೀರಾಯ


1) ಮರಾಠರ ಪೇಶ್ವೆ ಎರಡನೆಯ ಬಾಜೀರಾಯನು ಇಂಗ್ಲೀಷರ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡನು.


11


ಅಮೃತಸರ್ ಒಪ್ಪಂದ


1809


ಇಂಗ್ಲೀಷರು ಮತ್ತು


ರಣಜಿತ್ ಸಿಂಗ್ (ಸಿಖ್ಖರು)


1) 'ರಣಜಿತ್ ಸಿಂಗನ ರಾಜ್ಯಕ್ಕೆ ಸೆಟ್ಲಜ್ ನದಿ ಮೇರೆಯಾಯಿತು.


2) ಇಂಗ್ಲೀಷರು ಹಾಗೂ ರಣಜಿತ್ ಸಿಂಗರ ನಡುವೆ ಶಾಶ್ವತ ಮೈತ್ರಿ ಏರ್ಪಟ್ಟತು.


12


ಲಾಹೋರ್ ಒಪ್ಪಂದ


1846


ಇಂಗ್ಲೀಷರು ಮತ್ತು


ಗುಲಾಬ್ ಸಿಂಗ್ (ಸಿಖ್ಖರು)


1) 'ಸಿಖ್ಖರು ತಮ್ಮ ಪ್ರದೇಶದ ಮೇಲಿದ್ದ ಹಕ್ಕನ್ನು ಬಿಟ್ಟುಕೊಟ್ಟರು. '2) 'ರಾವಿ'-'ಸೆಟ್ಲಜ್ ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ ಸೇರಿತು.3) 'ಗುಲಾಬ್ ಸಿಂಗ್ 75 ಲಕ್ಷ ರೂ.ಪಡೆದು ಇಂಗ್ಲೀಷರ ಆಧೀನ ರಾಜನಾದನು.


13


ವರ್ಸೈಲ್ಸ್ ಒಪ್ಪಂದ


1919


ಇಂಗ್ಲೆಂಡ್, ಫ್ರಾನ್ಸ , ರಷ್ಯ ,


ಅಮೇರಿಕಾ ಮತ್ತು ಜರ್ಮನಿ


'1) 'ಜರ್ಮನಿಯನ್ನು ಎಲ್ಲಾ ರೀತಿಯಿಂದ ದುರ್ಬಲಗೊಳಿಸಲಾಯಿತು. 2) ಮಹಾಯುದ್ಧಕ್ಕೆ ಜರ್ಮನಿಯೇ ಕಾರಣವೆಂದು ಒಪ್ಪಿಸಿ ಯುದ್ಧ ಪರಿಹಾರ ನೀಡಲು ಒಪ್ಪಿಸಲಾಯಿತು.3) ವಿಶ್ವಶಾಂತಿಗಾಗಿ ರಾಷ್ಟ್ರಸಂಘವನ್ನು ಸ್ಥಾಪಿಸಲಾಯಿತು.


14


ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದ


1963


ಅಮೇರಿಕಾ , ರಷ್ಯಾ , ಇಂಗ್ಲೆಂಡ್


ವಾತಾವರಣದಲ್ಲಿ, ಬಾಹ್ಯಾಕಾಶದಲ್ಲಿ,ಹಾಗೂ ಸಮುದ್ರ ತಳದಲ್ಲಿ ಅಣ್ವಸ್ತ್ರಗಳ ಸಿಡಿತ, ಪರೀಕ್ಷೆಗಳನ್ನು ನಿಷೇಧಿಸಿದೆ. ಆದರೆ ಭೂಮಿಯ ತಳಭಾಗದಲ್ಲಿ ನಿಷೇಧಿಸಿಲ್ಲ.


15


ಬಾಹ್ಯಾಕಾಶ ಒಪ್ಪಂದ


1967


ಅಮೇರಿಕಾ , ಸೋ.ರಷ್ಯಾ . ಒಕ್ಕೂಟ


ಬಾಹ್ಯಾಕಾಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.


16


ಅಣ್ವಸ್ತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಒಪ್ಪಂದ


1970


ಅಮೇರಿಕಾ , ಇಂಗ್ಲೆಂಡ್ , ರಷ್ಯಾ


ಅಣುಶಕ್ತಿ ರಾಷ್ಟ್ರಗಳು ವಿಶ್ವದ ಇತರ ರಾಷ್ಟ್ರಗಳಿಗೆ ಈ ಅಣ್ವಸ್ತ್ರಗಳನ್ನು ಹಂಚುವದನ್ನು ಅಥವಾ ಅವುಗಳ ತಯಾರಿಕೆಗೆ ತಂತ್ರಜ್ಞಾನ ಒದಗಿಸುವುದನ್ನು ನಿಷೇಧಿಸಿದೆ.


17


ಜೈವಿಕ ಅಣ್ವಸ್ತ್ರಗಳ ಉತ್ಪಾ ದನೆ ಹಾಗೂ ದಾಸ್ತಾನು ನಿಷೇಧ ಒಪ್ಪಂದ


1975




ಜೈವಿಕ ಅಸ್ತ್ರಗಳ ಉತ್ಪಾದನೆ ಮತ್ತು ದಾಸ್ತಾನುಗಳನ್ನು ನಿಷೇಧಿಸಿದೆ.


ವಿಫಲತೆಗೆ ಕಾರಣಗಳು

ಸುಲಭ ಮುದ್ರಣದ ಪ್ರತಿಗಾಗಿ ವಿಫಲತೆಗೆ ಕಾರಣಗಳು ಇಲ್ಲಿ ಒತ್ತಿ


ವಿಫಲತೆಗೆ ಕಾರಣಗಳ ಸಮಗ್ರ ಮಾಹಿತಿ


ಕ್ರ'.'ಸಂ


ವಿವರಗಳು


ಕಾಲ


ಅವನತಿ'/'ವಿಫಲತೆಗೆ ಕಾರಣಗಳು






1


ಪೋರ್ಚುಗೀಸರು


1510


'1. 'ಅಲ್ಬುಕರ್ಕನ ನಂತರ ಬಂದ ಅಧಿಕಾರಿಗಳು ಅಸಮರ್ಥರೂ, ಭ್ರಷ್ಠರೂ ಆಗಿದ್ದರು. ' 2. 'ಮರಾಠರು ಬೆಸ್ಸಿನ್ ನಿಂದ ಹೊರಹಾಕಿದರು.


'3. 'ಮೊಘಲರು 1632 ರಲ್ಲಿ ಹೂಗ್ಲಿಯಿಂದ ಹೊರಹಾಕಿದರು. 4. ಇವರ ಮತಾಂಧತೆ ನೀತಿಯಿಂದ ಬೇಸತ್ತ ಜನ ಗೋವೆಯನ್ನು ತ್ಯಜಿಸಿದರು.


5. ಇವರಲ್ಲಿ ಆಳಲು ಬೇಕಾದ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಇರಲಿಲ್ಲ. 6. 1580 ರಲ್ಲಿ ಪೋರ್ಚುಗಲ್ ತನ್ನ ಸ್ವಾತಂತ್ರವನ್ನು ಕಳೆದುಕೊಂಡು ಕೆಲಕಾಲ ಸ್ಪೇನ್ ಆಳ್ವಿಕೆಗೆ ಒಳಪಟ್ಟಿತ್ತು.








2


ಫ್ರೆಂಚರು


1763


1. ಫ್ರೆಂಚರು ವ್ಯಾಪಾರವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಇವರಿಗೆ ಯುದ್ಧಗಳಿಗೆ ಬೇಕಾದ ಸಂಪನ್ಮೂಲಗಳ ಕೊರತೆಇತ್ತು.


2. ಇಂಗ್ಲೀಷರು ವ್ಯಾಪಾರದ ಮೇಲೆ ಹೆಚ್ಚು ಗಮನ ಹರಿಸಿದರು. ಇವರಿಗೆ ಯುದ್ಧಗಳಿಗೆ ಬೇಕಾದ ಸಂಪನ್ಮೂಲಗಳು ಇದ್ದವು. 3. 'ಫ್ರಾನ್ಸ'ನಲ್ಲಿ ರಾಜಕೀಯ ಅಸ್ಥಿರತೆ ಇದ್ದ ಕಾರಣ ಫ್ರೆಂಚ್ ಕಂಪನಿಗೆ ಬೆಂಬಲ ಸಿಗಲಿಲ್ಲ. 4.ಇಂಗ್ಲೆಂಡಿನಲ್ಲಿ ರಾಜಕೀಯ ಸ್ಥಿರತೆ ಇದ್ದ ಕಾರಣ ಇಂಗ್ಲೀಷರಿಗೆ ಪೂರ್ಣ ಬೆಂಬಲ ಸಿಕ್ಕಿತು'.


'5. 'ಇಂಗ್ಲೀಷ ನೌಕಾಪಡೆ ಫ್ರೆಂಚರ ನೌಕಾಪಡೆಗಿಂತ ಉತ್ತಮವಾಗಿತ್ತು. 6. ಇಂಗ್ಲೀಷ ಅಧಿಕಾರಿಗಳಲ್ಲಿ ಪರಸ್ಪರ ಸಹಕಾರ ಇತ್ತು ಫ್ರೆಂಚರ ಅಧಿಕಾರಿಗಳಲ್ಲಿ ಸಹಕಾರವಿರಲಿಲ್ಲ. 7. ಫ್ರೆಂಚರ ಡೂಪ್ಲೆ ಕೇವಲ ಚತುರನಾಗಿದ್ದನು. ಆದರೆ ಇಂಗ್ಲೀಷರ ರಾಬರ್ಟ ಕ್ಲೈವ ಯುದ್ಧ ಮತ್ತು ರಾಜಕೀಯದಲ್ಲಿ ಸಮಯಾನುಸಾರ ನಿರ್ಣಯ ತೆಗೆದುಕೊಳ್ಳುತ್ತಿದ್ದನು.




3


ಡಚ್ಚರು




ದಕ್ಷಿಣ ಪೂರ್ವ ಏಷ್ಯಾದಲ್ಲಿ ಹೊಸದಾಗಿ ಗಳಿಸಿಕೊಂಡ ದ್ವೀಪಗಳ ಕಡೆಗೆ ಹೆಚ್ಚು ಗಮನ ಹರಿಸಿದರು.








4


ಪ್ರ.ಸ್ವಾ. ಸಂಗ್ರಾಮ


1857


1. ಸೂಕ್ತ ಸೇನಾ ನಾಯಕತ್ವದ ಕೊರತೆ. 2. ಸಿಪಾಯಿಗಳು ಲೂಟಿ ದರೋಡೆಯಿಂದ ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು. 3. ಇಂಗ್ಲೀಷರಲ್ಲಿದ್ದ ಸುಧಾರಿತ ಶಸ್ತ್ರಾಸ್ತ್ರಗಳು ಸಿಪಾಯಿಗಳಲ್ಲಿರಲಿಲ್ಲ. 4. ಬ್ರಿಟೀಷರಿಗಿದ್ದ ಟೆಲಿಗ್ರಾಫ ವ್ಯವಸ್ಥೆ ಸಿಪಾಯಿಗಳಿಗಿರಲಿಲ್ಲ. 5. ಭಾರತೀಯ ರಾಜರುಗಳಾದ ಸಿಖ್ಖರು ', 'ನಿಜಾಮರು ', ಮುಂತಾದ ಸಂಸ್ಥಾನಗಳ ರಾಜರು ಬ್ರಿಟೀಷರಿಗೆ ನಿಷ್ಠೆ ತೋರಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ. 6. ಸಿಪಾಯಿಗಳಲ್ಲಿ ಸಂಘಟನೆಯ ಕೊರತೆ ಇತ್ತು. 7. ಇಂಗ್ಲೀಷರು ನಿಶ್ಚಿತ ಗುರಿ ಹೊಂದಿದ್ದರು.ಆದರೆ ಸಿಪಾಯಿಗಳಿಗೆ ಖಚಿತ ಗುರಿ ಇರಲಿಲ್ಲ.




5


ರಾಷ್ಟ್ರಸಂಘ


1939


1. 'ಅಮೇರಿಕಾ ಸಂಯುಕ್ತ ಸಂಸ್ಥಾನ ಆರಂಭದಿಂದಲೂ ಸಂಘವನ್ನು ಸೇರಲಿಲ್ಲ. 2. ವಿಶ್ವದ ಎಲ್ಲಾ ರಾಷ್ಟ್ರಗಳೂ ಲೀಗ್ ನ ಸದಸ್ಯರಾಗಿರಲಿಲ್ಲ. 3. ಲೀಗ್ ಗೆ ತನ್ನದೇ ಆದ ಸೈನ್ಯಶಕ್ತಿ ಇರಲಿಲ್ಲ. 4. ಹಲವಾರು ದೇಶಗಳು ಲೀಗ್ ನಿಂದ ಹೊರಗುಳಿದವು. 5. ಲೀಗ್ ತೃಪ್ತಿಕರವಾದ ನಿಶ್ಯಸ್ತ್ರೀಕರಣವನ್ನು ತರಲು ವಿಫಲಗೊಂಡಿತು.



ವಿಶ್ವಸಂಸ್ಥೆಯ ಅಂಗಸಂಸ್ಥೆಗಳು

ಸುಲಭ ಮುದ್ರಣ ಪ್ರತಿಯನ್ನು download ಮಾಡಲು ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಇಲ್ಲಿ ಒತ್ತಿ

ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ರಚನೆ ಮತ್ತು ಕಾರ್ಯಗಳ ಚಾರ್ಟು


'ಕ್ರ'.


ಹೆಸರುಗಳು


ಅಂಗಸಂಸ್ಥೆಗಳ ರಚನಾವಿಧಾನ


ಅಂಗಸಂಸ್ಥೆಗಳ ಕಾರ್ಯಗಳು


1


ಸಾಮಾನ್ಯ ಸಭೆ


ಪ್ರತೀ ಸದಸ್ಯ ರಾಷ್ಟ್ರಗಳೂ ತಲಾ '5 'ಜನರಂತೆ ಪ್ರತಿನಿಧಿಗಳನ್ನು ಕಳುಹಿಸಿಕೊಡು ತ್ತಾರೆ .ಅವರೆಲ್ಲರೂ ಸಾಮಾನ್ಯ ಸಭೆಯ ಸದಸ್ಯರಾಗಿರುತ್ತಾರೆ.ಆದರೆ ಪ್ರತೀ ದೇಶಕ್ಕೆ ಒಂದೇ ಮತದ ಹಕ್ಕು ಇರುತ್ತದೆ.


1. ಪ್ರತೀ ವರ್ಷ ಸೆಪ್ಟಂಬರ್ ನಲ್ಲಿ ಸಾಮಾನ್ಯ ಸಭೆ ಹಾಗೂ ತುರ್ತು ಸಮಯದಲ್ಲಿ ವಿಶೇಷ ಸಭೆಗಳನ್ನು ಕರೆಯುತ್ತದೆ. 2. ವಿಶ್ವಸಂಸ್ಥೆಯ ವ್ಯಾಪ್ತಿಯ ಎಲ್ಲಾ ವಿಷಯಗಳ ಬಗ್ಗೆ ಸಾಮಾನ್ಯ ಚರ್ಚೆ ಮಾಡುತ್ತದೆ . ಹಾಗೂ 3. ಪ್ರಮುಖ ವಿಷಯಗಳನ್ನು ಬಹುಮತದ ಅಥವಾ '2/3 ಮತಗಳ ಬೆಂಬಲದಿಂದ ನಿರ್ಧರಿಸುತ್ತದೆ. 4. ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.


5. ಪ್ರತೀ ರಾಷ್ಟ್ರ ನೀಡಬೇಕಾದ ಚಂದಾ ಹಣವನ್ನು ನಿಗಧಿ ಮಾಡುತ್ತದೆ.


6. ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತದೆ.


2


ಭದ್ರತಾ ಸಮಿತಿ


'5 'ಖಾಯಂ (ವಿಟೋ ಅಧಿಕಾರ ಹೊಂದಿರುವ )ರಾಷ್ಟ್ರಗಳು ಹಾಗೂ ಸಾಮಾನ್ಯ ಸಭೆಯಿಂದ 2'ವರ್ಷಗಳ ಅವಧಿಗೆ ಆಯ್ಕೆಯಾದ 10 'ಹಂಗಾಮಿ ರಾಷ್ಟ್ರಗಳ ಸದಸ್ಯರನ್ನು ಒಳಗೊಂಡಿರುತ್ತದೆ.


1.ಖಾಯಂ ರಾಷ್ಟ್ರಗಳು ವಿಟೋ ಅಧಿಕಾರ ಹೊಂದಿವೆ. 2.ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆ ಯನ್ನು ಶಫಾರಸ್ಸು ಮಾಡುವ,ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿದೆ. 3.ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರ ಹೊಂದಿದೆ. 4.ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.


3


ಆರ್ಥಿಕ ಮತ್ತು ಸಾಮಾಜಿಕ ಸಮಿತಿ


ಸಾಮಾನ್ಯ ಸಭೆಯು 3'ವರ್ಷ'ಗಳ ಅವಧಿಗಾಗಿ 54 'ಸದಸ್ಯರನ್ನು ಆಯ್ಕೆ ಮಾಡುತ್ತದೆ. ಪ್ರತೀ ವರ್ಷ '1/3 (18) ಸದಸ್ಯರು ನಿವೃತ್ತಿ ಹೊಂದುತ್ತಾರೆ.


ಗುರಿಗಳು':-1. ಉದ್ಯೋಗಾವಕಾಶ ಒದಗಿಸುವದು. 2. ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಮತ್ತು ಜೀವನಮಟ್ಟ ಸುಧಾರಣೆ. 3. ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ 4. ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ. 5. ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಗೌರವ ಕಾಪಾಡುವದು.


6. ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.


4


ಧರ್ಮದರ್ಶಿ ಸಮಿತಿ


1. ವಿಶ್ವಸ್ಥ ಪ್ರದೇಶಗಳ ಆಡಳಿತವನ್ನು ನೋಡಿಕೊಳ್ಳುವ ಸದಸ್ಯ ರಾಷ್ಟ್ರಗಳು.


2. ಭದ್ರತಾ ಮಂಡಳಿಯ ಶಾಸ್ವತ ರಾಷ್ಟ್ರಗಳು.


3. ಸಾಮಾನ್ಯ ಸಭೆಯಿಂದ 3 'ವರ್ಷಗಳ ಅವಧಿಗಾಗಿ ಚುನಾಯಿತ ಸದಸ್ಯ ರು


1. ವಿದೇಶಿ ಆಳ್ವಿಕೆಗೆ ಒಳಪಟ್ಟ ರಾಷ್ಟ್ರಗಳಿಗೆ ಸ್ವಾತಂತ್ರ ದೊರಕಿಸಿಕೊಡುವದು.


2. ಪರಕೀಯರ ಆಳ್ವಿಕೆಗೆ ಒಳಗಾದವರಿಗೆ ಮಾನವೀಯ ಹಕ್ಕುಗಳನ್ನು ನೀಡಿ ರಕ್ಷಿಸುವದು.


3. ಪರಕೀಯರಿಂದ ಸ್ವಾತಂತ್ರ ಪಡೆಯುವಂತೆ ಪ್ರೋತ್ಸಾಹಿಸುವದು.


5


ಸಚಿವಾಲಯ


5 'ವರ್ಷಗಳಿಗಾಗಿ ಆಯ್ಕೆಯಾದ ಮಹಾಕಾರ್ಯದರ್ಶಿ,ಹಾಗೂ ಸಿಬ್ಬಂದಿ ಯವರು ಕಾರ್ಯನಿರ್ವಹಿಸುತ್ತಾರೆ. ಮಹಾಕಾರ್ಯದರ್ಶಿ ಇದರ ಮುಖ್ಯಸ್ಥ.


ಭದ್ರತಾ ಮಂಡಳಿಯ ಖಾಯಂ ಸದಸ್ಯರ ಆದೇಶದಂತೆ ಕಾರ್ಯಭಾರ ನಡೆಸಿಕೊಂಡು ಹೋಗುವದು ಇವರ ಕರ್ತವ್ಯವಾಗಿದೆ.


6


ಅಂತರರಾಷ್ಟ್ತೀಯ ನ್ಯಾಯಾಲಯ


ಭದ್ರತಾ ಸಮಿತಿ ಮತ್ತು ಸಾಮಾನ್ಯ ಸಭೆಯವರಿಂದ ಆಯ್ಕೆಯಾದ 15 'ಜನ ನ್ಯಾಯಾದೀಶ ರಿರುತ್ತಾರೆ. ಪ್ರತೀ ವರ್ಷ 5'ಜನ ನಿವೃತ್ತಿ ಹೊಂದುತ್ತಾರೆ.


ಅಂತರರಾಷ್ಟ್ರೀಯ ವ್ಯಾಜ್ಯಗಳನ್ನು ಬಗೆಹರಿಸುವುದು.




- ಇವುಗಳನ್ನು ತಯಾರಿಸಿ ಹಂಚಿಕೊಂಡವರು - ಮಲ್ಲಿಕಾರ್ಜುನ ಕಾವಲಿ, ಸ.ಪ್ರೌ.ಶಾಲೆ, ಹೊನಗೇರಾ, ಯಾದಗಿರಿ

ದಕ್ಷಿಣ ಕಣ್ಣಡ

Prakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ

ಉಡುಪಿ

ಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes

most likely questions

ಮೂರು ಅಂಕಗಳ ಪ್ರಶ್ನೆಗಳು

download ಮಾಡಲು ಇಲ್ಲಿ ಒತ್ತಿ


ಮೂರು ಅಂಕದ ಪ್ರಶ್ನೆಗಳು


  1. ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯಾ ವಾಗಿತ್ತೆಂದು ವಿವರಿಸಿ.
  2. ವಿಶ್ವಸಂಸ್ಥೆಯ ಉದ್ದೇಶಗಳೇನು? ಅವುಗಳು ಹೇಗೆ ಸ್ಥಾಪಿಸಲ್ವಡುತ್ತದೆ?
  3. ರೆಗ್ಯುಲೇಟಿಂಗ್ ಆಕ್ಟನ ನಿರ್ಬಂಧನೆಗಳೇನು?
  4. ಲಾಭಕೋರದ ಅನೈತಿಕ ಮಾರ್ಗ ವನ್ನು ತಡೆಯುವಲ್ಲಿ ರುವ 2 ಶಾಸನ ತಿಳಿಸಿ.
  5. ಪ್ಲಾಸಿ ಕದನದ ಪರಿಣಾಮ
  6. ಅಸಹಕಾರ ಚಳುವಳಿ ನಿರೂಪಿಸಿ.
  7. ನಿಯಂತ್ರತ ಮಾರುಕಟ್ಟೆ ರೈತರಿಗೆ ಸಹಾಯಕಾರಿಯಾಗಿದೆ. ವಿವರಿಸಿ.
  8. ಪ್ರಾಂತೀಯತೆ ಎಂದರೇನು? ಅದನ್ನು ನಿವಾರಿಸಲು ಕೈಗೊಂಡಿರುವ ಕಾರ್ಯಗಳೇನು?
  9. ಆಲಿಪ್ತ ಚಳುವಳಿಯ ಉದ್ದೇಶಗಳೇನು?
  10. ಪಂಚಶೀಲತತ್ವಗಳಾವುವು?
  11. ಕಾಡುಗಳ ಸಂರಕ್ಷಣೆಗೆ ಹಾಕಿಕೊಂಡಿರುವ ಕ್ರಮಗಳಾವುವು?
  12. ಮೆಕ್ಕಲು ಮಣ್ಣು ಮತ್ತು ಕಪ್ಪುಮಣ್ಣುಗಳಿಗಿರುವ ವ್ಯತ್ಯಾಸವೇನು?
  13. ವರ್ಗಾವಹ ಮತ್ತು ಸ್ಥಿರ ಬೇಸಾಯ ವ್ಯತ್ಯಾಸ ತಿಳಿಸಿ.
  14. ಗೋಧಿ ಮತ್ತು ಚಹಾದ ಬೆಳೆಗೆ ಬೇಕಾಗುವಭೌಗೋಳಿಕ ಅಂಶಗಳು ಯಾವುವು?
  15. ತಾಮ್ರದ ಉಪಯೋಗವೇನು?
  16. ಕೃಷಿ ಮಾರುಕಟೆಯಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಗಳು ಯಾವುವು?
  17. ಭಾರತ ಪ್ರತಿಕೂಲ ಪಾವತಿ ಶುಲ್ಕ ಹೊಂದಿದೆ. ಕಾರಣ ನೀಡಿ.
  18. ಯೋಜನೆ ಅವಶ್ಯಕತೆ ಇದೆಯೇ ಚರ್ಚಿಸಿ.
  19. ರಪ್ತು ಹೆಚ್ಚಿಸಲು ಸರಕಾರ ಕೈಗೊಂಡಿರುವ ಕ್ರಮವೇನು?
  20. ಭಾರತದ ಬಡತನ ನಿರ್ಮೂಲನೆಗೆ IRDP ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
  21. ವಾಂಡಿವಾಸ್ ಕದನಕ್ಕೆ ಕಾರಣ ಮತ್ತು ಪರಿಣಾಮಗಳೇನು?
  22. ಪ.ವರ್ಗ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
  23. ಭಾರತೀಯ ಉದ್ಧಾರದಲ್ಲಿ ಥಿಯೋಸಾಫಿಕಲ್ ಸೊಸೈಟಿಯ ಕೊಡುಗೆಯೇನು?
  24. ಮಾನವ ಸಂಪನ್ಮೂಲದ ಪ್ರಾಮುಖ್ಯವೇನು?
  25. ಕೆಂಪು ಮತ್ತು ಲ್ಯಾಟ್ ರೈಟ್ ಮಣ್ಣುಗಳಿಗಿರುವ ವ್ಯತ್ಯಾಸವೇನು?
  26. ಹಣಕಾಸಿನ ನೀತಿಯ ಉದ್ಧೇಶ ಎಣು?
  27. ಧರ್ಮದರ್ಶಿ ಸಮಿತಿ ಏಕೆ ಸ್ಥಾಪಿಸಲ್ವಟ್ಟಿತು?


ನಾಲ್ಕು ಅಂಕಗಳ ಪ್ರಶ್ನೆಗಳು 4 marks questions

download ಮಾಡಲು ಇಲ್ಲಿ ಒತ್ತಿ

ನಾಲ್ಕು ಅಂಕದ ಪ್ರಶ್ನೆಗಳು



  1. ಪೋರ್ಚ್‍ಗೀಸರ ಅವನತಿಗೆ ಕಾರಣವೇನು?
  2. ಪ್ರೆಂಚರ ಅವನತಿಗೆ ಕಾರಣವೇನು?
  3. ಚಿಕ್ಕದೇವರಾಜ ಒಡೆಯರ್ ಒಬ್ಬ ಸಮರ್ಥ ಆಡಳಿತಗಾರ ಎಂದು ಹೇಗೆ ಸಮರ್ಥಿಸುವಿರಿ?
  4. ನಾಲ್ಕನೇಯ ಆಂಗ್ಲೋ ಮೈಸೂರು ಯುದ್ಧಕ್ಕೆ ಕಾರಣ ಮತ್ತು ಪರಿಣಾಮ ತಿಳಿಸಿ.
  5. ಮೈಸೂರು ಸಂಸ್ಥಾನಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ನವರ ಕೊಡುಗೆಗಳೇನು?
  6. ಸಿಪಾಯಿದಂಗೆ ವಿಫಲತೆಗೆ ಕಾರಣವೇನು?
  7. ಸಿಪಾಯಿದಂಗೆಯಿಂದಾದ ಪರಿಣಾಮವೇನು?
  8. ಜಮೀನ್ದಾರಿ ಮತ್ತು ರೈತವಾರಿ ಪದ್ಧತಿಯ ವ್ಯತ್ಯಾಸ ತಿಳಿಸಿ.
  9. 1935ಕಾನೂನು ಭಾರತದ ಇತಿಹಾಸದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಏಕೆ?
  10. ಕ್ವಿಟ್ ಇಂಡಿಯಾ ಚಳುವಳಿಯನ್ನು ವಿವರಿಸಿ.
  11. ಮಂದಗಾಮಿ ಯಾರು? ಅದರ ಉದ್ದೇಶ ಏನಾಗಿತ್ತು?
  12. ಜಪಾನಿನ ಆಧುನಿಕ ಪ್ರಗತಿ ಹೇಗಾಯಿತು?
  13. ವಿಶ್ವಸಂಘದ ಸಾಧನೆ ಮತ್ತು ವಿಫಲತೆ ತಿಳಿಸಿ.
  14. ಅನಕ್ಷರತೆ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು?
  15. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳೇನು?
  16. ಪ್ರಾಥಮಿಕ ಶಿಕ್ಷಣ ವನ್ನು ಜನಪ್ರಿಯಗೊಳಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
  17. ಸ್ತ್ರೀಯರ ಸ್ಥಾನಮಾನ ಉತ್ತಮ ಗೊಳಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
  18. ಭದ್ರತಾಸಮಿತಿ ರಚನೆ ಮತ್ತು ಕಾರ್ಯ ವಿವರಿಸಿ.
  19. ಯುನೆಸ್ಕೋದ ಗುರಿಗಳೇನು?
  20. ವಿಶ್ವಸಂಸ್ಥಯ ಸಾಧನೆಗಳೇನು?
  21. ಪಶ್ಚಿಮ ತೀರ ಮತ್ತು ಪೂರ್ವ ತೀರದ ವ್ಯತ್ಯಾಸವೇನು?
  22. ವಿವಿದ್ದೋಶ ನದಿಕಣಿವೆ ಯೋಜನೆಯ ಉದ್ದೇಶವೇನು?
  23. ವ್ಯವಸಾಯದ ವಿಧಗಳಾವುವು? ಒಂದನ್ನು ವಿವರಿಸಿ.
  24. ಕೈಗಾರಿಕೆಗಳ ಪ್ರಾಮುಖ್ಯತೆಗಳೇನು?
  25. ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅವಶ್ಯಕಂಶಗಳಾವುವು?
  26. ರೈಲು ಮಾರ್ಗ ಆಧುನಿಕರಣಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳೇನು?
  27. ಕೃಷಿಯ ಮಹತ್ವವೇನು?
  28. ಕೃಷಿಯು ಹಿಂದುಳಿಯಲು ಕಾರಣಗಳೇನು?
  29. ವೈಜ್ಞಾನಿಕ ಬೇಸಾಯ ಎಂದರೇನು? ಅದು ಒಳಗೊಂಡಿರುವ ಅಂಶಗಳೇನು?
  30. ಗೃಹ ಮತ್ತು ಸಣ್ಣಪ್ರಮಾಣದ ಕೈಗಾರಿಕೆಗಳ ಸಮಸ್ಯೆ ಏನು?
  31. ವಿದೇಶಿ ವ್ಯಾಪಾರದ ಲಕ್ಷಣಗಳೇನು?
  32. ಸತ್ಯಶೋಧಕ ಸಮಾಜದ ತತ್ವವೇನು?
  33. 947ರಿಂದ ಭಾರತ ಮತ್ತು ರಷ್ಯಾದ ನಡುವೆ ನಡೆದ ಉತ್ತಮ ಭಾಂದವ್ಯ ಬೆಳೆದು ಬಂದಿರಲು ಕಾರಣ ಪಟ್ಟಿಮಾಡಿ.
  34. ಭಾರತದ ವ್ಯವಸಾಯ ಮಾರುಕಟ್ಟೆ ಸಮಸ್ಯೆ ನಿಯಂತ್ರಿತ ಮಾರುಕಟ್ಟೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸಲು ಸಾಧ್ಯವಾಗಿದೆ.
  35. ಭಾರತದ ಆರ್ಥಿಕಾಭಿವೃದ್ಧಿಗೆ ಸಣ್ಣ ಪ್ರಮಾಣ ಮತ್ತು ಗೃಹ ಕೈಗಾರಿಕೆಗೆ ಹೇಗೆ ಸಹಕಾರಿಯಾಗಿದೆ.
  36. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೋಸರ ಪಾತ್ರ ವಿವರಿಸಿ.
  37. ಇಂಗ್ಲೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯವಾಗಿತ್ತೆಂದು ಹೇಗೆ ಸಮರ್ಥಿಸುವಿರಿ.
  38. SAARC ಹಮ್ಮಿಕೊಂಡ ಕಾರ್ಯಕ್ರಮಗಳಾವುವು?
  39. ಕೃಷಿಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಾವುವು? ಅವರ ಪರಿಸ್ಥಿತಿ ಸುಧಾರಿಸಲು ಸರಕಾರ ಕೈಗೊಂಡಿರುವ ಕ್ರಮಗಳೇನು?
  40. ಹಿಮಾಲಯ ಪರ್ವತದ ಪ್ರಮುಖ್ಯತೆ ತಿಳಿಸಿ.
  41. ಭಾರತೀಯರ ಅಭಿವೃದ್ಧಿಗೆ ಥಿಯೋಸಾಫಿಕಲ್ ಸೊಸೈಟಿ ಕೊಡುಗೆ ಏನು?
  42. ಬಡತನ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು?


Cronology of important events

notes on Ist world war

Notes on 2nd World War

SSLC Economics

National Movement


SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್

maps of India pdf

maps of India odp

ಬೆಳಗಾವಿ

ಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್

ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ




ಸಮಾಜ




ಬ್ರಹ್ಮ ಸಮಾಜ




ಆಯ೯ ಸಮಾಜ




ಪ್ರಾಥನಾ ಸಮಾಜ




ಸತ್ಯ ಶೋಧಕ ಸಮಾಜ




ರಾಮಕೃಷ್ಣ ಮಿಷನ್


ಥಿಯೋಸಾಫಿಕಲ್ ಸೋಸಾಯಿಟಿ










ಸ್ಥಾಪಕರು


ರಾಜಾ ರಾಮ


ಮೋಹನರಾಯ




ಸಾಮಾಜಿಕ ಸುಧಾರಕರು html m2e95ca53.jpg


ದಯಾನ೦ದ ಸರಸ್ವತಿ




ಸಾಮಾಜಿಕ ಸುಧಾರಕರು html m3af0024b.jpg




ಆತ್ಮರಾವ್ ಪಾ೦ಡುರ೦ಗ




ಸಾಮಾಜಿಕ ಸುಧಾರಕರು html m54877c1c.jpg


ಜೋತಿರಾವ ಫುಲೆ






ಸಾಮಾಜಿಕ ಸುಧಾರಕರು html 2d6c698a.jpg


ಸ್ವಾಮಿ ವಿವೇಕಾನ೦ದ




ಸಾಮಾಜಿಕ ಸುಧಾರಕರು html m5dddc018.jpg




ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್


ಸಾಮಾಜಿಕ ಸುಧಾರಕರು html m204fde60.jpg


ಸ್ಥಾಪನೆ ಆದ ವಷ೯


1828


1875


1867


1873


1897


1879


ಸ್ಥಾಪನೆ ಸ್ಥಳ


ಕೋಲ್ಕತ್ತಾ


ಗುಜರಾತ


ಮು೦ಬೈ


ಪುಣೆ


ಕೋಲ್ಕತ್ತಾ


ಮದ್ರಾಸ ಬಳಿ ಅಡ್ಯಾರ


ತತ್ವಗಳು


ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು


ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ


ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ


ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.


ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.


ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .


ವಿಷೇಶತೆ ಮತ್ತು ಅನುಯಾಯಿಗಳು


ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ


ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.


ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .


ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ


ಸಿಸ್ಟರ್ ನಿವೇದಿತ.


ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .



ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ

ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ


ಕನಾ೯ಟಕದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರು

ಇದರ ಸುಲಭ ಮುದ್ರಣ ಪ್ರತಿಯನ್ನು ‌download maadalu ಇಲ್ಲಿ] ಒತ್ತಿ

ದ೦ಗೆ


ವಷ೯


ನಾಯಕತ್ವ


ವಿಶೇಷತೆ


1800


ಧೋ೦ಡಿಯ ವಾಘ


ಬಿದನೂರ ಶಿಕಾರಿಪೂರ ವಶಪಡಿಸಿಕೊ೦ಡನು'.


  1. ಕೊಪ್ಪಳದ ದ೦ಗೆ

1819


ಜಮಿನ್ದಾರ ವೀರಪ್ಪಾ


ಬ್ರಿಟಿಷರಿ೦ದ ಕೊಪ್ಪಳ ವಶಪಡಿಸಿಕೊ೦ಡನು'.


  1. ಕಿತ್ತೂರ ದ೦ಗೆ

1824


ಕಿತ್ತೂರ ಚೆನ್ನಮ್ಮಾ', 'ಸ೦ಗೋಳ್ಳಿರಾಯಣ್ಣ


ಕನಾಟ೯ಕದಲ್ಲಿ Freedom Fighters html m6902d054.jpg


ವೀರಾವೇಶದಿ೦ದ ಹೋರಾಡಿ'.'ಬ್ರಿಟಿಷ ಅಧಿಕಾರಿ ಥ್ಯಾಕರೆಯನ್ನು ಕೊ೦ದಳು', 'ನ೦ತರ ಸೆರೆ ಸಿಕ್ಕಳು'. 'ರಾಯಣ್ಣಾ ಗೆರಿಲ್ಲಾ ಯುದ್ದದಿ೦ದ ಬ್ರಿಟಿಷರನ್ನು ಕಾಡಿದನು '.


  1. ಹಲಗಲಿ ದ೦ಗೆ

1857


500 'ಜನ ಬೇಡರು


ಶಸ್ತ್ರಾಸ್ರ್ತ ತ್ಯಾಗ ಮಾಡದೆ ಸ್ವಾಭಿಮಾನ ಬಿಡದೆ ಬ್ರಿಟಿಷರ ವಿರುದ್ದ ಹೊರಾಡಿ ಪ್ರಾಣ ತ್ಯಾಗ ಮಾಡಿದರು'.


  1. ಸುರಪೂರದ ದ೦ಗೆ

1857


ರಾಜ ವೆ೦ಕಟಪ್ಪಾ ನಾಯಕ


ಸ್ವಾಭಿಮಾನ ಬಿಡದೆ ಬ್ರಿಟಿಷರ ಗುಲಾಮಗಿರಿ ಒಪ್ಪದೆ ಪ್ರಾಣ ತ್ಯಾಗ ಮಾಡಿದ ನಾಯಕ


  1. ನರಗ೦ದದ ದ೦ಗೆ

1858


ಕನಾಟ೯ಕದಲ್ಲಿ Freedom Fighters html 58af30fa.jpgಭಾಸ್ಕರಾವ್


ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುಧ್ಧ ಹೋರಾಡಿದನು '.


  1. ಕಾನೂನ ಭ೦ಗ ಚಳುವಳಿ

1930


ಎ೦'.'ಪಿ'. 'ನಾಡಕಣಿ೯


ಅ೦ಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹದ ನಾಯಕತ್ವ ವಹಿಸಿದರು'.


  1. ಕ೦ದಾಯ ನಿರಾಕರಣೆ

1931


ಹಿರೆಕೆರೂರಿನ ವೀರನಗೌಡ


ಕರ ನಿರಾಕರಣೆ ಚಳುವಳಿ ಪ್ರಾರ೦ಭಿಸಿದರು'.


  1. ಶಿವಪೂರದ ದ್ವಜ ಸತ್ಯಾಗ್ರಹ

1938


ಟಿ'.'ಸಿ'.'ಸಿದ್ದಲಿ೦ಗಯ್ಯ


25000'ಜನ ಪಾಲ್ಗೊ೦ಡಿ ದ್ದರು'. 'ವಿಧುರಾಶ್ವತ್ಥ ಘಟನೆ '.


ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ

ಚಿತ್ರದುರ್ಗ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದ ಕೆಲವು ನಾಯಕರ, ಮತ್ತು ಅವರು ಆಯ್ದುಕೊಂಡ ಹಾದಿಯ ಒಂದು ಸುಲಭ ಚಿತ್ರಣ

5 India Map 58 x 46 copy.jpg


ಭಾರತದ ಹಿಮಾಲಯ ಪರ್ವತ ಶ್ರೇಣಿ ಭೂಪಟ

4 36 X 48 ( 3 x 4 FEET )-1-.jpgHIMALAYA @ HILLS copy.jpg

ಮೊದಲನೆ ಮತ್ತು ಎರಡನೇ ಮಹಾಯುದ್ಧದ ಸುಲಭ ಚಿತ್ರಣ

5 world-1-.tif 5x4 2copys copy.jpg

ಭಾರತದ ನದಿಗಳು ಮತ್ತು ವಿವಿದೋದ್ಧೇಶ ಕಣಿವೆಗಳ ಭೂಪಟ

6 3 x 4 FEET )-1-.jpg DAMS @ RIVERS.jpg

ಭಾರತದ ವಾಯುಗುಣ

9 wether 36x48 PRINT copy.jpg

ಭಾರತದಲ್ಲಿ ಯುರೋಪಿಯನ್ನರ ನೆಲೆಗಳು ಮತ್ತು ಕಾರ್ನಾಟಿಕ್ ಯುದ್ಧದ ಸುಲಭ ಚಿತ್ರಣ =

10 3 x 4- feet TRADING CENTRES PRINT copy.jpg


ಪ್ರಪಚದ ಸ್ವಾಭಾವಿಕ ಪ್ರದೇಶಗಳು

7 N R W 1 58x36 PRINT.jpg

8 N R W 2-1-.tif 5x8 36 PRINT copy.jpg

-ರಚಿಸಿದವರು ಚಿತ್ರದುರ್ಗ ಶಿಕ್ಷಣ ಇಲಾಖೆ ಮತ್ತು ಸಮಾಜವಿಜ್ಞಾನ ಶಿಕ್ಷಕರ ವೇದಿಕೆ 

ರಾಯಚೂರು

SSLC ಪೌರನೀತಿ ಅಧ್ಯಾಯನದ ನೋಟ್ಸ್ಗಳು.

ಅಧ್ಯಾಯ 1 -ಭಾರತ ಎದುರಿಸುತ್ತಿರೌವ ಸವಾಲುಗಳು

1] ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಆ ದೇಶದ ಜನತೆಯ ಶೈಕ್ಷಣಿಕ ಮಟ್ಟ ಉನ್ನತವಾಗಿರಬೇಕು.


2] ಕ್ರಿ ಶ 2001 ರ ಜನಗಣತಿಯಂತೆ ಶೇ. 76 ರಷ್ಟು ಪುರುಷರು ಮತ್ತು ಶೇ. 54 ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ.


3] ಅನಕ್ಷರತೆಯನ್ನು ಹೋಗಲಾಡಿಸಲು ಸರ್ಕಾರ ಕೈಗೊಂಡ ಕ್ರಮಗಳು


1. ಕ್ರಿ ಶ 1978 ರಲ್ಲಿ ರಾಷ್ಟ್ರೀಯ ವಯಸ್ಕರ ಶಿಕ್ಷಣ ಯೋಜನೆಯ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.


2. ಸಂವಿಧಾನದ 93 ನೇ ತಿದ್ದುಪಡಿಯಂತೆ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಸಾರಲಾಗಿದೆ.


3. ಸಂವಿಧಾನದ 42 ನೇಯ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಸಮವರ್ತಿಪಟ್ಟಿಗೆ ಸೇರಿಸಲಾಗಿದೆ.


4. ಅನಕ್ಷರಸ್ತರನ್ನು ಸಾಕ್ಷರರನ್ನಾಗಿಸುವ ಉದ್ದೇಶದಿಂದ 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್‍ನ್ನು ಜಾರಿಗೆ ತರಲಾಗಿದೆ.


5. ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.


4] ಭಾರತ ಸರ್ಕಾರ 1986 ರಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತು.


5] ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣದ ಪ್ರಮುಖ ಗುರಿ – 14 ವರ್ಷದ ವಯಸ್ಸಿನೊಳಗಿರುವೆಲ್ಲಾ ಮಕ್ಕಳಿಗೂ ಶಿಕ್ಷಣ


ಸೌಲಭ್ಯ ಒದಗಿಸುವದು.


6] ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಕೈಗೊಂಡ ಕ್ರಮಗಳು


1. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಉದಾ


ಕಟ್ಟಡ, ಕುಡಿಯುವ ನೀರು, ಶೌಚಾಲಯ ಇತ್ಯಾದಿ.


2. ಆರು ವರ್ಷ ತುಂಬಿದ ಎಲ್ಲಾ ಮಕ್ಕಳನ್ನೂ ಶಾಲೆಗೆ ದಾಖಲು ಮಾಡಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.


3. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅಧಿಕ ಸವಲತ್ತುಗಳನ್ನು ಒದಗಿಸುವದು.


4. ಬಾಲಕೀಯರ ಶಿಕ್ಷಣಕ್ಕೆ ಅಧಿಕ ಒತ್ತು ನೀಡುವದು.


5. ಶಾಲೆಗೆ ದಾಖಲಾದ ಮಕ್ಕಳು ಶಾಲೆ ಬಿಟ್ಟು ಹೋಗದಂತೆ ಆಕರ್ಷಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.


ಉದಾ

ಕ್ಷೀರ

ಯೋಜನೆ, ಅಕ್ಷರದಾಸೋಹ(ಮಧ್ಯಾಹ್ನ ಬಿಸಿಯೂಟ), ಇತ್ಯಾದಿ


6. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿವೇತನ, ಉಚಿತ ಸೈಕಲ್ ವಿತರಣೆ ಮುಂತಾದ


ಯೋಜನೆಗಳ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.


7. ಮಕ್ಕಳನ್ನು ಆಕರ್ಷಿಸಲು ರಜಾ ಅವಧಿಯಲ್ಲಿ “ಚಿಣ್ಣರ ಅಂಗಳ”ದಂತಹ ಆಕರ್ಷಕ ಯೋಜನೆಯನ್ನು ರೂಪಿಸಲಾಗಿದೆ.


7]ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥತಿಗತಿ ಸುಧಾರಿಸಲು ಕೈಗೊಂಡ ಕ್ರಮಗಳು


1. ರಾಜ್ಯ ಶಾಸನಸಭೆ ಮತ್ತು ಲೋಕಸಭೆಯಲ್ಲಿ ನಿರ್ದಿಷ್ಟ ಪ್ರಮಾಣದ ಸ್ಥಾನಗಳನ್ನು ಮೀಸಲಿಡಲಾಗಿದೆ.


2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಸ್ಪರ್ಧಿಸಲೆಂದೇ ಹಲವಾರು ಚುನಾವಣಾ ಕ್ಷೇತ್ರಗಳನ್ನು ಕಾದಿರಿಸಲಾಗಿದೆ.


3. ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಲ್ಲಿ ನಿರ್ದಿಷ್ಟ


ಪ್ರಮಾಣದ ಪಾಲನ್ನು ಮೀಸಲಿಡಲಾಗಿದೆ.


4. ಅಸ್ಪøಶ್ಯತೆ ಆಚರಣೆಗೆ ಸಂಬಂಧಪಟ್ಟ ಘಟನೆಗಳನ್ನು ತಿರ್ಮಾನಿಸಲು ವಿಶೇಷ ಮತ್ತು ಸಂಚಾರಿ ನ್ಯಾಯಾಲಯಗಳನ್ನು


ಸ್ಥಾಪಿಸಲಾಗಿದೆ.


5. ಈ ವರ್ಗಗಳ ನಾಗರಿಕ ಹಕ್ಕುಗಳ ಅನುಸ್ಟಾನಕ್ಕಾಗಿ ಕ್ರಿ ಶ 1978 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ


ಒಂದು ಆಯೋಗವನ್ನು ರಚಿಸಲಾಗಿದೆ.


6. ಈ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯಗಳು, ವಿದ್ಯಾರ್ಥಿವೇತನ ಮತ್ತು ಬುಕ್ ಬ್ಯಾಂಕ್


ಸೌಕರ್ಯಗಳನ್ನು ಕಲ್ಪಿಸಲಾಗಿದೆ.


8] ಕೋಮುವಾದವೆಂದರೆ ಅನ್ಯ ಧರ್ಮದ ಜನರ ಬಗ್ಗೆ ಸೈರಣೆ(ಸಹನೆ) ಇಲ್ಲದಿರುವದು.


9] ಪ್ರಾಂತಿಯತೆಯೆಂದರೆ ತನ್ನ ಪ್ರದೇಶ ಅಥವಾ ಪ್ರಾಂತದ ಕಾಳಜಿ ಕುರಿತು ವ್ಯಕ್ತಿಗಿರುವ ತಿವ್ರವಾದ ನಿಷ್ಠೆ ಮತ್ತು


ಸಂಕುಚಿತ ಭಾವನೆಯಾಗಿದೆ.




10] ಸ್ತ್ರೀಯರ ಸ್ಥಾನಮಾನ ಉತ್ತಮಪಡಿಸಲು ಸರ್ಕಾರ ಕೈಗೊಂಡ ಕ್ರಮಗಳು


1. ಸಂವಿಧಾನದ 14 ಮತ್ತು 15ನೆಯ ವಿಧಿಗಳು ಸಾರ್ವಜನಿಕ ಹುದ್ದೆಗಳಲ್ಲಿ ಸ್ತ್ರೀ ಹಾಗೂ ಪುರುಷರಿಗೆ ಸಮಾನ


ಅವಕಾಶ ಕಲ್ಪಿಸಿದೆ.


2. ಬಾಲಕಿಯರ ಶಿಕ್ಷಣಕ್ಕೆ ಅಧಿಕ ಒತ್ತು ನೀಡಲಾಗಿದೆ. 3. ಅನೇಕ ಸ್ತ್ರೀ ವಯಸ್ಕ ಶಿಕ್ಞಣ ಕೇಂದ್ರಗಳನ್ನು ರಚಿಸಲಾಗಿದೆ.


4. ಬಹುಪತ್ನಿತ್ವವನ್ನು ನಿಷೇಧಿಸಿದೆ. 5. ಬಾಲ್ಯವಿವಾಹ ಪದ್ಧತಿಯನ್ನು ರದ್ದು ಮಾಡಲಾಗಿದೆ.


6. ವಿಧವಾ ವಿವಾಹಕ್ಕೆ ಅನುಮತಿ ನೀಡಲಾಗಿದೆ. 7. ವರದಕ್ಷಣೆ ನಿಷೇದಿಸಲಾಗಿದೆ.


8. ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕೆಂದೇ ಮಹಿಳಾ ಆಯೋಗವನ್ನು ರಚಿಸಿದೆ.


9. ಆಸ್ತಿಯಲ್ಲಿ ಸ್ತ್ರೀಯರಿಗೆ ಭಾಗ ನೀಡಬೇಕೆಂಬ ಕಾನೂನನ್ನು ಜಾರಿಗೊಳಿಸಲಾಗಿದೆ.


11] ಕ್ರಿ ಶ 1989ರ ನವಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಗುವಿನ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು


ದಾಖಲೆಯನ್ನು ಸಿದ್ಧಪಡಿಸಿತು.


12] ಸಮಾಜಘಾತಕ ಚಟುವಟಿಕೆಗಳು – ಕಳ್ಳಸಾಗಾಣಿಕೆ, ಬ್ರಷ್ಟಾಚಾರ, ಲಾಭಕೋರತನ & ವರದಕ್ಷಿಣೆ.


13] ಬ್ರಷ್ಟಾಚಾರ – ಲಂಚ ಕೊಡುವುದು ಮತ್ತು ಲಂಚ ಪಡೆಯುವದನ್ನು ಬ್ರಷ್ಟಾಚಾರ ಎಂದು ಕರೆಯುತ್ತಾರೆ. ಬ್ರಷ್ಟಾಚಾರ


ನಿರ್ಮೂಲನೆಗೆಂದೇ ‘ಲೋಕಾಯುಕ್ತ’ ಎಂಬ ಸಂಸ್ಥೆಯನ್ನು ಸರಕಾರ ರಚಿಸಿದೆ.


14] ಲಾಭಕೋರತನ – ಅತಿ ಹೆಚ್ಚಿನ ಲಾಭ ಪಡೆಯಲು ಅನೈತಿಕ ಮಾರ್ಗ ಅನುಸರಿಸುವದು.


ಉದಾ – 1. ತೂಕ ಮತ್ತು ಅಳತೆಗಳಲ್ಲಿ ಮೋಸ. 2. ಕಲಬೆರೆಕೆ ವಸ್ತುಗಳ ಮಾರಾಟ


3. ಪದಾರ್ಥಗಳಿಗೆ ಅಧಿಕ ಬೆಲೆ ವಿಧಿಸುವದು. 4. ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವದು


15] ಲಾಭಕೋರತನ ತಡೆಗಟ್ಟಲು ಕೈಗೊಂಡ ಕ್ರಮಗಳು

1. ಪ್ರತಿ ಉತ್ಪಾದಿತ ವಸ್ತುವಿನ ತೂಕ ಅಥವಾ ಅಳತೆ, ಅದರ ಗರಿಷ್ಟ ಬೆಲೆ, ಉತ್ಪಾದನಾ ತಾರೀಖು ಮತ್ತು ಅದರ


ಬಳಕೆಯ ದಿನಮಿತಿಗಳನ್ನು ಅದರ ಮೇಲೆ ಮುದ್ರಿಸಬೇಕೆಂದು ಕೈಗಾರಿಕೆಗಳ ಮೇಲೆ ಕಾನೂನಿನ ನಿಬಂಧನೆ ಇದೆ.


2. ಪದಾರ್ಥಗಳ ಗುಣಮಟ್ಟ ಕಾಪಾಡಲೆಂದೇ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ(ಐ.ಎಸ್.ಐ) ಸ್ಥಾಪಿಸಿದೆ.


3. ವ್ಯವಸಾಯ ಉತ್ಪನ್ನಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಸ್ತುವಿನ ಮೇಲೆ ಅಗ್‍ಮಾರ್ಕನ್ನು ಕಡ್ಡಾಯಗೊಳಿಸಿದೆ.


4. ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸಲೆಂದೇ 1986 ರಲ್ಲಿ ಗ್ರಾಹಕ ರಕ್ಷಣಾ ಕಾನೂನು ರಚಿಸಿದೆ.


5. ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆಗೆ ಪಡಿತರ ಅಂಗಡಿಗಳನ್ನು ತೆರೆಯಲಾಗಿದೆ.


6. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನತಾ ಬಜಾರ್, ಸೂಪರ್ ಬಜಾರ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದೆ.


16] ವರದಕ್ಷಿಣೆಯೆಂದರೆ ಉಡುಗೊರೆ ರೂಪದಲ್ಲಿ ವರನಿಗೆ ನಗನಾಣ್ಯ, ಆಸ್ತಿ, ನಿವೇಶನ ಮುಂತಾದವುಗಳನ್ನು ನೀಡುವದಾಗಿದೆ.


ಕ್ರಿ ಶ 1961 ರಲ್ಲಿ ವರದಕ್ಷಿಣೆ ವಿರೋದಿ ಕಾನೂನು ಜಾರಿಗೊಳಿಸಿದ್ದು, 1986 ರಲ್ಲಿ ಈ ಕಾನೂನಿಗೆ ತಿದ್ದುಪಡಿಯನ್ನು ಮಾಡಿತು. ಇದರ ಪ್ರಕಾರ ವರದಕ್ಷಿಣೆ ಪಡೆಯುವ ವ್ಯಕ್ತಿಗೆ ಕಾನೂನಿನ ಪ್ರಕಾರ 5 ವರ್ಷಗಳ ಕಾರಾಗೃಹ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಲಾಗುವದು.


17] ಕಳ್ಳ ಸಾಗಾಣಿಕೆ ಎಂದರೆ ತೆರಿಗೆ ಕೊಡದೆ ವಿದೇಶಗಳಿಂದ ವಸ್ತುಗಳನ್ನು ತಂದು ಅಕ್ರಮವಾಗಿ ಮಾರಾಟಮಾಡುವದು.


18] ಕಳ್ಳಸಾಗಾಣಿಕೆ ತಡೆಗಟ್ಟಲು ಕೈಗೊಂಡ ಕ್ರಮಗಳು


1. ಸಮುದ್ರದ ಕರಾವಳಿಯ ಉದ್ದಕ್ಕೂ ಕರಾವಳಿಯ ರಕ್ಷಕ ಪಡೆಯನ್ನು ರಚಿಸಲಾಗಿದೆ.


2. ವಿಮಾನ ನಿಲ್ದಾಣಗಳಲ್ಲಿ ಸುಂಕದ ಅಧಿಕಾರಿಗಳನ್ನು ನೇಮಿಸಲಾಗಿದೆ.


3. ಕಳ್ಳಸಾಗಾಣಿಕೆಯನ್ನು ಹತೋಟಿಯಲ್ಲಿರಿಸುವ ಉದ್ದೇಶಕ್ಕೆಂದೇ ಕೇಂದ್ರ ಸರಕಾರವು ‘ವಿದೇಶಿ ವಿನಿಮಯ ಉಳಿಕೆ ಮತ್ತು


ಕಳ್ಳಸಾಗಾಣಿಕೆಯನ್ನು ತಡೆಗಟ್ಟುವ ಶಾಸನ ರಚಿಸಿದೆ. ಇದನ್ನು ಸಂಕ್ಷಿಪ್ತವಾಗಿ ಕಾಫಿಪೋಸಾ ಎಂದು ಕರೆಯುತ್ತಾರೆ.






ಅಧ್ಯಾಯ 2 - ಭಾರತ ಮತ್ತು ಪ್ರಪಂಚ - ವಿಶ್ವಸಂಸ್ಥೆ

1] ವಿಶ್ವಸಂಸ್ಥೆಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು


ಅಮೇರಿಕಾದ ಅಧ್ಯಕ್ಷ ಎಫ್ ಡಿ ರೂಸವೆಲ್ಟ್, ಇಂಗ್ಲಂಡಿನ ಪ್ರದಾನಿ ಚರ್ಚಿಲ್, ರಷ್ಯಾದ ಅಧ್ಯಕ್ಷ ಸ್ಟಾಲಿನ್.


2] ವಿಶ್ವಸಂಸ್ಥೆಯು ಅಕ್ಟೋಬರ 24 1945 ರಂದು ಅಸ್ಥಿತ್ವಕ್ಕೆ ಬಂದಿತು. ಇಂದು ವಿಶ್ವಸಂಸ್ಥೆಯ 192 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.


3] ವಿಶ್ವಸಂಸ್ಥೆಯ ಉದ್ದೇಶಗಳು


1. ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.


2. ಸಮಾನತೆಯ ಆಧಾರದ ಮೇಲೆ ವಿಶ್ವದಲ್ಲಿನ ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.


3. ವಿಶ್ವದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.


4] ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳು


1. ಸಮಾನ್ಯ ಸಭೆ 2. ಭದ್ರತಾ ಸಮಿತಿ 3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ


4. ಧರ್ಮದರ್ಶಿ ಸಮಿತಿ 5. ಸಚಿವಾಲಯ 6. ಅಂತರಾಷ್ಟ್ರೀಯ ನ್ಯಾಯಾಲಯ


5] ಸಾಮಾನ್ಯ ಸಭೆಯ ಕಾರ್ಯಗಳು


1. ಪ್ರತಿ ವರ್ಷ ಸಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.


2. ಪ್ರಮುಖ ವಿಷಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.


3. ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.


4. ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.


6] ಭದ್ರತಾ ಸಮಿತಿಯ ರಚನೆ


1. ಈ ಸಮಿತಿಯು 25 ಪ್ರತಿನಿಧಿಗಳಿಂದು ಕೂಡಿದ್ದು, ಅದರಲ್ಲಿ 5 ಕಾಯಂ ಸದಸ್ಯರು ಹಾಗೂ 10 ಹಂಗಾಮಿ


ಸದಸ್ಯರನ್ನು ಹೊಂದಿದೆ.


2. ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಕಾಯಂ ಸದಸ್ಯ ರಾಷ್ಟ್ರಗಳು


3. ಕಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.


7] ಭದ್ರತಾ ಸಮಿತಿಯ ಕಾರ್ಯಗಳು


1. ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.


2. ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸು ಮಾಡುವ ಅಥವಾ


ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.


3. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.


4. ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.


8] ಆರ್ಥಿಕ ಮತ್ತು ಸಮಾಜಿಕ ಸಮಿತಿಯ ಗುರಿ – ವಿಶ್ವದ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಪ್ರಗತಿ ಸಾಧಿಸಲು ಸೂಕ್ತವಾದ


ಆರ್ಥಿಕ ಮತ್ತು ಸಮಾಜಿಕ ವಾತಾವರಣವನ್ನು ಕಲ್ಪಿಸುವದು.


9] ವಿಶ್ವಸಂಸ್ಥೆಯ ಸಚಿವಾಲಯದ ಮುಖ್ಯ ಕಛೇರಿ ನ್ಯೂಯಾರ್ಕ ಬಳಿಯ ಲೇಕ್‍ಸಕ್ಸೆಸ್‍ನಲ್ಲಿದೆ.


ವಿಶ್ವಸಂಸ್ಥೆಯ ಪ್ರದಾನಕಾರ್ಯದರ್ಶಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ – ಅಧಿಕಾರವಧಿ 5 ವರ್ಷ


10] ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ಹಾಲೆಂಡನ ‘ದಿ ಹೇಗ್’ ನಗರದಲ್ಲಿದೆ.


11] ಆಹಾರ ಕೃಷಿ ಸಂಸ್ಥೆ ಸ್ಥಾಪನೆ – 1945, ಕೇಂದ್ರ ಕಚೇರಿ – ಇಟಲಿಯ ರಾಜದಾನಿ ರೋಮ್ ನಗರ


12] ಆಹಾರ ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶ – ವಿಶ್ವದ ಜನರ ಜೀವನದ ಸ್ಥಿತಿಗತಿ ಉತ್ತಮಗೊಳಿಸುವದು


13] ವಿಶ್ವ ಆರೋಗ್ಯ ಸಂಸ್ಥೆಯ ಮಹಾನ್ ಸಾಧನೆ - ಸಿಡುಬು ರೋಗದ ನಿವಾರಣೆ


14] ಯುನೆಸ್ಕೋ ಸ್ಥಾಪನೆ – 4 ನವಂಬರ್ 1946, ಕೇಂದ್ರ ಕಛೇರಿ - ಪ್ಯಾರಿಸ್ ನಗರ


15] ಯುನೆಸ್ಕೋ ಇದರ ವಿಸ್ತ್ರುತ ರೂಪ – ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ಸಂಸ್ಥೆ


16] ಯುನೆಸ್ಕೋದ ಗುರಿಗಳು


1. ಶಾಂತಿ ಸ್ಥಾಪನೆ. 2. ಮಾನವನ ಹಕ್ಕುಗಳನ್ನು ರಕ್ಷಿಸುವದು


3. ಶೈಕ್ಷಣಿಕ ಅಭಿವೃದ್ಧಿ ಸಾಧನೆ 4. ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.


5. ಪರಿಸರ ಹಾಗೂ ಮಾನವರ ನಡುವೆ ಸಮತೋಲನ


6. ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.


17] ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಗುರಿ – ವಿಶ್ವಕಾರ್ಮಿಕ ವರ್ಗದ ಸ್ಥಿತಿಗತಿಗಳನ್ನು ಸುಧಾರಿಸುವದು.


18] ಯುನಿಸೆಫ್‍ನ ವಿಸ್ತ್ರುತ ರೂಪ – ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ


19] ಯುನಿಸೆಫ್ ಸ್ಥಾಪನೆಯ ಉದ್ದೇಶ – ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳ ಮತ್ತು ಮಾತೆಯರ ಜೀವನದ


ಗುಣಮಟ್ಟವನ್ನು ಸುಧಾರಿಸುವದು.


ಯುನಿಸೆಪ್ ಕಾರ್ಡುಗಳನ್ನು ಪ್ರತಿಯೊಬ್ಬರೂ ಕೊಳ್ಳಬೇಕು ಯಾಕೆಂದರೆ ಈ ಕಾರ್ಡಿನ ಮಾರಾಟದಿಂದ ಬರುವ


ಹಣವನ್ನು ಮಕ್ಕಳ ಕಲ್ಯಾಣಕ್ಕೆ ಉಪಯೋಗಿಸಲಾಗುತ್ತದೆ.


20] ಅಂತರಾಷ್ಟ್ರೀಯ ಹಣಕಾಸು ನಿಧಿ : ವಾಷಿಂಗ್‍ಟನ್ ಡಿ ಸಿ : : ವಿಶ್ವಬ್ಯಾಂಕ

ವಾಷಿಂಗ್‍ಟನ್


21] ವಿಶ್ವಸಂಸ್ಥೆಯ ಸಾಧನೆಗಳು


1. ಕ್ರಿಶ 1946 ರಲ್ಲಿ ಇರಾನ್ ಮತ್ತು ರಷ್ಯಾ ದೇಶಗಳ ವಿವಾದ ಬಗೆಹರಿಸಿತು.


2. 1947ರ ಇಂಡೋನೇಷಿಯಾ ಸಮಸ್ಯೆ ಮತ್ತು ಗ್ರೀಸ್ ದೇಶದಲ್ಲಿನ ಅಂತರ್ಯುದ್ದ ತಡೆಯಿತು.


3. ಕೊರಿಯಾಬಿಕ್ಕಟ್ಟನ್ನು ಬಗೆಹರಿಸಿ ದಕ್ಷಿಣ ಕೊರಿಯಾದ ಸ್ವಾತಂತ್ರ್ಯವನ್ನು ರಕ್ಷಿಸಿತು.


4. 1956 ರ ಸುಯೇಜ್ ಕಾಲುವೆಯ ಬಿಕ್ಕಟ್ಟನ್ನು ಪರಿಹರಿಸಿತು.


5. ವಿಯೆಟ್ನಾಂ ಸಮಸ್ಯಗೆ ಪರಿಹಾರ ದೊರಕಿಸಿತು.


6. ಕ್ರಿ ಶ 1960 ರಲ್ಲಿ ಕಾಂಗೋ ಬಿಕ್ಕಟ್ಟನ್ನು ಬಗೆಹರಿಸಿತು.


7. ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ ಅದು ಇನ್ನೂ ಜೀವಂತವಾಗಿಯೇ ಇದೆ.


8. ಕ್ರಿ ಶ 1989 ರ ನಮೀಬಿಯಾ ಹಾಗೂ ಅಂಗೋಲಗಳ ಸ್ವಾತಂತ್ರ್ಯ ದೊರಕಿಸಿತು.


9 ಕ್ರಿ ಶ 1991 ರಲ್ಲಿ ಕುವೈತ್‍ನ್ನು ಇರಾಕ್ ಆಕ್ರಮಣದಿಂದ ಮುಕ್ತಗೊಳಿಸಿತು.


22] ಭಾರತದ ವಿದೇಶಾಂಗ ನೀತಿ


1. ದಿವಂಗತ ಜವಾಹರಲಾಲ ನೆಹರುವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ.


2. ಭಾರತದ ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, ಆದರ್ಶವಾದ, ಮಾನವೀಯ ಅನುಕಂಪ, ವ್ಯಾವಹಾರಿಕ


ಕಾಠಿಣತೆಯನ್ನು ಕಾಣಬಹುದು.


3. ಭಾರತದ ವಿದೇಶಾಂಗ ನೀತಿಯು ಶಾಂತಿ ಹಾಗೂ ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.


4. ವಿಶ್ವಶಾಂತಿ ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ ಸಂಬಂಧಗಳನ್ನು


ಮುಂದುವಿರಿಸಿಕೊಂಡು ಹೊಗಲು ನಿರ್ಧರಿಸಿತು.


5. ಅಲಿಪ್ತ ನೀತಿಯು ಪಂಚಶೀಲ ತತ್ವಗಳಿಂದ ಒಳಗೊಂಡಿದೆ.


23] ಪಂಚಶೀಲ ತತ್ವಗಳು : ಕ್ರಿ ಶ 1954 ರಲ್ಲಿ ಚೀನಾದ ಪ್ರದಾನಿ ಚೌ ಎನ್‍ಲಾಯ್ ಮತು ಪಂಡಿತ ನೆಹರುರವರು ಮಾಡಿಕೊಂಡ


ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ. ಅವುಗಳೆಂದರೆ –


1. ಪರಸ್ಪರರ ಪರಮಾಧಿಕಾರ ಮತ್ತು ಪ್ರದೇಶಿಕ ಐಕ್ಯತೆಗಳನ್ನು ಗೌರವಿಸುವದು. 2. ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವದು.


3. ದೇಶಗಳ ಒಳಾಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರುವದು. 4. ಸಮಾನತೆ ಮತ್ತು ಪರಸ್ಪರ ಯಿತಸಾಧನೆಗೆ ಶ್ರಮಿಸುವದು.


5. ಶಾಂತಿಯುತ ಸಹಜೀವನ.


24] ಭಾರತ ಮತ್ತು ರಷ್ಯ ಸಂಬಂಧ


1. ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯ ತನ್ನ ಬೆಂಬಲ ನೀಡಿದೆ. ಉದಾ

1966ರ

ತಾಷ್ಕೆಂಟ್ ಒಪ್ಪಂದ


2. ಕ್ರಿ ಶ 1971 ರಲ್ಲಿ ಭಾರತ – ರಷ್ಯಾ ನಡುವೆ ಪರಸ್ಪರ ಮೈತ್ರಿ, ಶಾಂತಿ ಹಾಗೂ ಸಹಕಾರಗಳ 20 ವರ್ಷದ


ಒಪ್ಪಂದಕ್ಕೆ ಸಹಿ ಹಾಕಲಾಯಿತು.


3. ರಷ್ಯಾದ ಸಹಕಾರದಿಂದ ಬಿಲಾಯ್, ಬೊಕಾರೋಗಳಲ್ಲಿ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು.


4. ಹರಿದ್ವಾರದಲ್ಲಿ ರಷ್ಯಾ ಸಹಕಾರದಿಂದ ಭಾರಿ ವಿದ್ಯುತ್ ಸ್ಥಾವರದ ಘಟಕ ಸ್ಥಾಪಿಸಲಾಯಿತು.


25] ಭಾರತ ಬಾಂಗ್ಲಾ ದೇಶಗಳ ಸಂಬಂಧ ಕೆಡಲು ಕಾರಣ


1. ಚಿತ್ತಗಾಂಗ್ ಪರ್ವತ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುತ್ತಿರುವ ಚಕ್ಮಾ ನಿರಾಶ್ರಿತರ ಸಮಸ್ಯೆ


2. ಮಾದಕವಸ್ತುಗಳ ಅಕ್ರಮ ಕಳ್ಳ ಸಾಗಾಣಿಕೆ


26] ಭಾರತ ಮತು ಪಾಕಿಸ್ತಾನ ಮದ್ಯೆ ಸೌಹಾರ್ದವಾದ ವಾತಾವರಣ ಇಲ್ಲ ಇದಕ್ಕೆ ಕಾರಣ


1. ಕಾಶ್ಮೀರ ಸಮಸ್ಯೆ 2. ಮಿಲಿಟರಿ ಕೂಟಗಳೊಂದಿಗೆ ಪಾಕಿಸ್ತಾನದ ಸಂಬಂಧಗಳು


3. ಚೀನಾ ಮತ್ತು ಪಾಕ್ ಮೈತ್ರಿ 4. ನೀರಿನ ವಿವಾದ


4. ಎರಡು ರಾಷ್ಟ್ರಗಳಲ್ಲಿನ ಅಲ್ಪ ಸಂಖ್ಯಾತರ ನಿರಂತರ ಸಮಸ್ಯೆ 5. ವ್ಯಾಪಾರದ ಸಮಸ್ಯೆ 6. ಭಯೋತ್ಪಾದನೆ.




ಅಧ್ಯಾಯ 3 - ವಿಶ್ವಸಮಸ್ಯೆಗಳು

1] ಕ್ರಿ ಶ 1776 : ಅಮೇರಿಕಾ ಸ್ವಾತಂತ್ರ್ಯ ಘೋಷಣೆ : : ಕ್ರಿ ಶ 1789

ಪ್ರೆಂಚ

ಕ್ರಾಂತಿ


2] ವಿಶ್ವಸಂಸ್ಥೆಯು ಡಿಸೆಂಬರ್ 10, 1948 ರಂದು ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಸಾರಿ ಘೋಷಣೆ – “ಮಾನವರೆಲ್ಲರೂ ಹುಟ್ಟಿನಿಂದ ಸಮಾನರು ಮತ್ತು ಸ್ವತಂತ್ರರು”. ಜಾತಿ, ವರ್ಗ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಹುಟ್ಟಿನಿಂದ ಯಾವ ಭೇದಭಾವನೆಗಳಿಗೆ ಗುರಿಯಾಗದೆ ಸಮಾನ ಹಕ್ಕು ಹಾಗೂ ಗೌರವಗಳಿಗೆ ಪಾತ್ರಗಾಗಿದ್ದಾರೆ. ಎಂದು ಘೋಷಿಸಿತು.


3] ದಕ್ಷಿಣ ಆಪ್ರಿಕಾದಲ್ಲಿ ಅನುಸರಿಸಿದ ವರ್ಣಬೇಧ ನೀತಿ


1. ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತು ದೌರ್ಜನ್ಯದಿಂದ ನಸೆಸಿಕೊಳ್ಳತ್ತಿದ್ದನ್ನು ವರ್ಣಭೇದ ನೀತಿ ಎನ್ನುವರು


2. ದಕ್ಷಿಣ ಆಪ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.


3. ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.


4. ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.


5. ನೆಲ್ಸನ್ ಮಂಡೆಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇದನೀತಿಯನ್ನು ಕೊನೆಗಾಣಿಸಿದರು. ಹಾಗಾಗಿ


ಇವರನ್ನು ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.


4] ಅಮೇರಿಕಾದಲ್ಲಿ ವರ್ಣಭೇದ ನೀತಿ ವಿರುದ್ದವಾಗಿ ಹೋರಾಡಿದವರು ಮಾರ್ಟಿನ್ ಲೂಥರ್ ಕಿಂಗ್. ಇವರುನ್ನು ಅಮೇರಿಕಾದ ಗಾಂಧಿ ಎಂದು ಕರೆಯತ್ತಾರೆ.


5] ಜಗತ್ತಿನಲ್ಲಿ ಮೊದಲ ಬಾರಿಗೆ ವರ್ಣಭೇದ ನೀತಿಯನ್ನು ಪ್ರಭಲವಾಗಿ ಖಂಡಿಸಿದವರೆಂದರೆ ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‍ರವರು. ಇವರು ‘ಜಗತ್ತಿನಲ್ಲಿ ಯಾರೂ ಗುಲಾಮರಲ್ಲ. ಹೀಗಾಗಿ ಯಾರು ಒಡೆಯರಲ್ಲ’. ಎಂದು ಘೋಷಿಸಿದರು.


6] ಕ್ರಿ ಶ 1963 ರಲ್ಲಿ ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದಕ್ಕೆ ಅಮೇರಿಕಾ ಇಂಗ್ಲಂಡ & ರಷ್ಯ ಸಹಿ ಹಾಕಿವೆ.


ಈ ಒಪ್ಪಂದದಂತೆ ವಾತಾವರಣದಲ್ಲಿ, ಬಾಹ್ಯಾಕಾಶದಲ್ಲಿ ಹಾಗೂ ಸಮುದ್ರದ ತಳಗಳಲ್ಲಿ ಅಣ್ವಸ್ತ್ರಗಳ ಸಿಡಿತ ಪರೀಕ್ಷೆಗಳನ್ನು ನಿಷೇದಿಸಲಾಗಿದೆ. ಆದರೆ ಭೂಮಿಯ ತಳಭಾಗದಲ್ಲಿ ಪರೀಕ್ಷೆಯನ್ನು ಇದು ನಿಷೇದಿಸಿಲ್ಲ.


7] ಬಾಹ್ಯಾಕಾಶ ಒಪ್ಪಂದ (1967) ದಂತೆ ಬಾಹ್ಯಾಕಾಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷೇದಿಸಲಾಗಿದೆ.


8] ಭಾರತವು ಅಣ್ವಸ್ತ್ರ ತಗ್ಗಿಸುವ ಒಪ್ಪಂದ(1970)ಕ್ಕೆ ಸಹಿ ಹಾಕದಿರಲು ಕಾರಣಗಳು


1. ಅಣುಶಕ್ತಿಯನ್ನು ಹೊಂದಿದ ರಾಷ್ಟ್ರಗಳಿಗೆ ಅದರ ಬಳಕೆಗೆ ಸಂಬಂಧಿಸಿದಂತೆ ಯಾವ ನಿರ್ಬಂದಗಳೂ ಇಲ್ಲ.


2. ಭಾರತವು ಶಾಂತಿಯುತ ಕಾರ್ಯಗಳಿಗೆ ಅಣುಶಕ್ತಿಯನ್ನು ಬಳಸಿಕೊಳ್ಳಬೇಕೆಂಬ ನಿಲುವನ್ನು ಹೊಂದಿದೆ.


9] ಕ್ರಿ ಶ 1975 ರಲ್ಲಿ ಆದ ಬಯಾಲಾಜಿಕಲ್ ವೆಪನ್ ಕನ್‍ವೆನ್‍ಷನ್ (B.W.A.) ಒಪ್ಪಂದ. ಇದು ಜೈವಿಕ ಅಸ್ತ್ರಗಳ ಉತ್ಪಾದನೆ ಹಾಗೂ ದಾಸ್ತಾನುಗಳನ್ನು ನಿಷೇದಿಸಿದೆ.


10] ಕಾಮನ್‍ವೆಲ್ತ್ ಒಕ್ಕೂಟ 1931 ರಲ್ಲಿ ಅಸ್ಥಿತ್ವಕ್ಕೆ ಬಂದಿತು. ಬ್ರಿಟನ್ ದೇಶ ಇದಕ್ಕೆ ನಾಯಕತ್ವವನ್ನು ವಹಿಸಿಕೊಂಡಿದೆ.


12] ಯುರೋಪಿಯನ್ ಕಮ್ಯೂನಿಟಿಯ ಸಾಧನೆ ಎಂದರೆ ಯುರೋ ನಾಣ್ಯ ಪದ್ಧತಿಯನ್ನು ಜಾರಿಗೆ ತಂದಿರುವದು. ಯುರೋಪಿನಲ್ಲಿ ಸುಂಕಮುಕ್ತ ವ್ಯಾಪಾರ ರೂಡಿಸಿದ್ದು ಇದೊಂದು ಅದ್ಭುತ ಸಾದನೆ ಎಂದೇ ಹೇಳಬಹುದು.


13] ASEAN – ಇದರ ವಿಸ್ತ್ರುತ ರೂಪ ಆಗ್ನೇಯ ಏಷಿಯಾ ರಾಷ್ಟ್ರಗಳ ಒಕ್ಕೂಟ.


14] O A U - ಇದರ ವಿಸ್ತ್ರುತ ರೂಪ ಆಪ್ರಿಕನ್ ಒಕ್ಕೂಟ ಸಂಸ್ಥೆ.


ಇದರ ಗುರಿ ಆಪ್ರಿಕದಲ್ಲಿನ ವಸಾಹತುಗಳ ಸ್ವಾತಂತ್ರ್ಯ ಸಾಧನೆ ಹಾಗೂ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ


ಹಾಗೂ ಆರ್ಥಿಕ ನೀತಿಗಳ ಸಮನಯ ಸಾಧಿಸುವದು.


15] Sಂಂಖಅ - ಇದರ ವಿಸ್ತ್ರುತ ರೂಪ ದಕ್ಷಿಣ ಏಷ್ಯಾ ಪ್ರದೇಶಿಕ ಸಹಕಾರ ಸಂಘ. ಇದರ ಆಡಳಿತ ಕಛೇರಿ ನೇಪಾಳದ ರಾಜದಾನಿ


ಕಾಠ್ಮಂಡುವಿನಲ್ಲಿದೆ.


ಸಾರ್ಕನ ಸದಸ್ಯ ರಾಷ್ಟ್ರಗಳು - ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ದಿವ್ಸ್ ಮತ್ತು ಬೂತಾನ್


ಸಾರ್ಕ ಒಕ್ಕೂಟದ ಗುರಿ - ಪರಸ್ಪರ ಸಮಸ್ಯೆಗಳನ್ನು ಗುರುತಿಸಿ ಸಹಕಾರದಿಂದ ಪರಿಹಾರ ಕಂಡುಕೊಳ್ಳುವದು


ಭಾರತ - ಪಾಕಿಸ್ತಾನಗಳ ಭಿನ್ನಾಭಿಪ್ರಾಯಗಳಿಂದ 2002 ರಲ್ಲಿ ಸಾರ್ಕ ಸಂಸ್ಥೆಗೆ ಸ್ವಲ್ಪ ಹಿನ್ನೆಡೆಯಾಗಿದೆ.


18] ಏಷ್ಯಾ, ಆಪ್ರಿಕ ಹಾಗೂ ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳ ಗುಂಪಿಗೆ ತೃತೀಯ ಜಗತ್ತು ಎಂದು ನಾಮಕರಣ ಮಾಡಿದ ವ್ಯಕ್ತಿ ಎಂದರೆ ಅಲ್ಜೀರಿಯಾದ ಪ್ರಾಂಟ್ಜ ಫ್ಯಾನನ್.


ಶ್ರೀ ಶರಣಬಸಪ್ಪ ಎಲ್ ಗೂಡುರು ಸರಕಾರಿ ಪ್ರೌಢ ಶಾಲೆ ಗುಂಡ ತಾ : ಸಿಂಧನೂರು ಜಿ : ರಾಯಚೂರು

ನೀಲ ನಕ್ಷೆ

As shared by Mallikarjun kawali, Yadgir

blue print-chapter wise

weightage distribution subject wise

marks division

consolidated Marks division topic wise