ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ ನೀಲಸಂದ್ರ ಬೆಂಗಳೂರು

From Karnataka Open Educational Resources
Revision as of 08:21, 23 February 2018 by Anand (talk | contribs) (Created page with "ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ '...")
(diff) ← Older revision | Latest revision (diff) | Newer revision → (diff)
Jump to navigation Jump to search

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಬಿಸಿ ಊಟದ ವ್ಯವಸ್ಥಿತ ಅನುಷ್ಠಾನ'. ಇಲ್ಲಿನ ಶಾಲಾ ಪರಿಸರ ಸಾಮಾನ್ಯ ಶಾಲೆಯಂತಿರದೆ ವಿಭಿನ್ನವಾಗಿರುವುದೇ ಈ ಪ್ರಕಲ್ಪದ ಆಯ್ಕೆಗೆ ಕಾರಣವಾಗಿದೆ. ಅಂದರೆ ಈ ಶಾಲೆಯಲ್ಲಿ ಸ್ಥಳದ ಕೊರತೆಯೇ ಇದರೆ ಮುಖ್ಯ ಕಾರಣ. ಆದರಿಂದ ಅಕ್ಷರ ದಾಸೋಹದಿಂದ ಸರಬರಾಜಾಗುತ್ತಿರುವ ಮದ್ಯಾಹ್ನದ ಬಿಸಿ ಊಟವನ್ನು ಮಕ್ಕಳಿಗೆ ತಲುಪಿಸುವುದೇ ಇಲ್ಲಿನ ಸವಾಲಿನ ಸಂಗತಿಯಾಗಿತ್ತು.

ನಂತರ ಮುಖ್ಯಶಿಕ್ಷಕರು ಎಲ್ಲಾಶಿಕ್ಷಕರೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರು. ಇರುವ ಸ್ಥಳದಲ್ಲಿಯೇ ಮಕ್ಕಳು ಸಾಲಾಗಿ ಮಕ್ಕಳು ಊಟವನ್ನು ಪಡೆಬೇಕು, ಅವರವರ ತರಗತಿಯಲ್ಲಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಊಟವನ್ನು ಚೆಲ್ಲದಂತೆ ತಿನ್ನಬೇಕು. ತರಕಾರಿಯನ್ನು ಮಿಶ್ರಣ ಮಾಡಿಯೇ ನೀಡುವುದರಿಂದ ತಿನ್ನದೆ ತರಕಾರಿಯನ್ನು ಚೆಲ್ಲುವುದು ತಪ್ಪಿತು. ಮತ್ತು ಉಳಿದ ಆಹಾರವನ್ನು ಮತ್ತು ತ್ಯಾಜ್ಯವನ್ನು ನಿರ್ದಿಷ್ಟ ಬುಟ್ಟಿಯಲ್ಲಿಯೇ ಹಾಕುವಂತೆ ಯೋಜನೆ ರೂಪಪಿಸಲಾಗಿ ಈಗ ಮಕ್ಕಳಲ್ಲಿ ಊಟದ ಮಹತ್ವದ ಅರಿವಾಗಿ ಮಕ್ಕಳು ಸ್ವಯಂ ಪ್ರೇರಿತರಾಗಿ ಯಾರು ಮೇಲ್ವಚಾರಕರು ಇಲ್ಲದಿದ್ದರು ಸಹ ಶಿಸ್ತನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ.

ಶಾಲೆಯ ಮೇಲೆ ಛಾವಣಿಯನ್ನು ಕಟ್ಟಿಸಿ ಊಟಕ್ಕೆ ಕುಳಿತುಕೊಳ್ಳುಲು ಸಹಾಯಮಾಡಿಕೊಳ್ಳುವ ಯೋಜನೆಯಲ್ಲಿದ್ದು ಇದನ್ನು ಅಧಿಕಾರಿಗಳ ಜೊತೆ ಮತ್ತು ದಾನಿಗಳ ಜೊತೆ ಚರ್ಚಿಸಿ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯು ಅನುಷ್ಠಾನದ ಹಂತದಲ್ಲಿದೆ. ಈಗಾಗಲೇ ಕುಡಿವ ನೀರು ಮತ್ತು ಇತರೆ ಅವಶ್ಯಕತೆಗಳನ್ನು ಪೂರೈಸಿಕೊಂಡಿದ್ದು ಹೊಂದಿರುವ ಸ್ಥಳದಲ್ಲಿಯೇ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ.

ಈ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿ ಪ್ರಕಲ್ಪ ಪ್ರಸ್ತುತಿಯ ಸಂಪನ್ಮೂಲವನ್ನು ಈ ಕೆಳಗೆ ನೀಡಲಾಗಿದ್ದು ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಅನಿಸಿಕೆ, ಶಿಕ್ಷಕರ ಅನಿಸಿಕೆ, ಶಾಲಾ ಸಿಬ್ಬಂದಿಗಳ ಅನಿಸಿಕೆ ಮತ್ತು ಪೋಷಕರ ಅನಿಸಿಕೆಯನ್ನು ನೀಡಲಾಗಿದೆ. START_WIDGETdb9cafb267dfe0d0-0END_WIDGET Download this slide from here




START_WIDGETa496aa56c42435ae-0END_WIDGET


START_WIDGETf9e851b0376a2b15-0END_WIDGET


START_WIDGET869f78d20428fd24-0END_WIDGET


START_WIDGET6fd8712623f0f402-0END_WIDGET


START_WIDGET325088023981bb40-0END_WIDGET