GHS Motanahalli Veterinary Hospital

From Karnataka Open Educational Resources
Revision as of 12:37, 16 June 2020 by Gurumurthy (talk | contribs) (→‎Videos)
(diff) ← Older revision | Latest revision (diff) | Newer revision → (diff)
Jump to navigation Jump to search

Objective of visit

  1. ಪಶುವೈದ್ಯಕೀಯ ಆಸ್ಪತ್ರೆಯಿಂದ ಜಾನುವಾರುಗಳಿಗಿರುವ ಚಿಕಿತ್ಸೆ ಮತ್ತು ಸೌಲಭ್ಯ ತಿಳಿಯಲು.
  2. ಜಾನುವಾರುಗಳಿಗೆ ಬರುವ ಕಾಯಿಲೆಗಳನ್ನು ತಿಳಿಯಲು.
  3. ಜಾನುವಾರುಗಳ ಆಸ್ಪತ್ರೆಯಲ್ಲಿರುವ ಸಮಸ್ಯೆ ಮತ್ತು ಸೌಲಭ್ಯ ತಿಳಿಯಲು.
  4. ಜಾನುವಾರುಗಳ ಸಮಸ್ಯೆಗಳನ್ನು ನಿವಾರಿಸುವ ಬಗೆಯನ್ನು ತಿಳಿಯಲು.
  5. ಆಸ್ಪತ್ರೆಯಲ್ಲಿರುವ ಹೊಸ ಹೊಸ ಟೆಕ್ನಾಲಜಿಯನ್ನು ತಿಳಿಯಲು.

Discussions with hospital team

ಮೋಟನಳ್ಳಿ ಪಶು ಚಿಕಿತ್ಸಾಲಯಕ್ಕೆ ಬೇಟಿ.

02-01-2014 ರಂದು ಮೋಟನಳ್ಳಿ ಗ್ರಾಮದ ಪಶುಚಿಕಿತ್ಸಾಲಯಕ್ಕೆ ನಾವು ಮತ್ತು ನಮ್ಮ ಶಿಕ್ಷಕರು ಬೇಟಿ ನೀಡಿದ್ದವು.

ಡಾ|| ರಾಜೇಂದ್ರ ಕುಮಾರ್ ಸರ್‌ ರವರಿಂದ ಸಮಗ್ರ ಮಾಹಿತಿ ಪಡೆದೆವು,ಡಾ|| ರಾಜೇಂದ್ರ ಕುಮಾರ್ ಸರ್ ರವರು, ಐದು ವರ್ಷಗಳಿಂದ ಮೋಟನಳ್ಳಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರ ಅನುಭವಗಳನ್ನು ಹಂಚಿಕೊಂಡರು.

  • ಈ ಗ್ರಾಮದಲ್ಲಿ ಕಂಡುಬರುವ ಪಶು ತಳಿಗಳು ಯಾವುವು?

- ದೇಣಿ, ಎಫ್‌.ಎ, ಮುರ್ರಾ

  • ನೀವು ಈ ಆಸ್ಪತ್ರಯಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ?

- 5 ವರ್ಷಗಳಿಂದ.

  • ಈ ಸಂಸ್ಥೆಯ ಉದ್ದೇಶಗಳೇನು?

- ಜಾನುವಾರುಗಳ ರೋಗಗಳನ್ನು ನಿವಾರಿಸುವುದು.

  1. ಕೃತಕ ಗರ್ಭದಾರಣೆಯ ಮೂಲಕ ಬೇರೆ ಬೇರೆ ತಳಿಗಳ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸುವುದು.
  2. ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಚುಚ್ಚುಮದ್ದನ್ನು ನೀಡಿ ರೋಗಮುಕ್ತ ಗ್ರಾಮವನ್ನಾಗಿ ಮಾಡುವುದು.
  • ಸಾಮಾನ್ಯವಾಗಿ ಜಾನುವಾರುಗಳಿಗೆ ಬರುವ ರೋಗಳು ಯಾವುವು?

- ಜ್ವರ, ಬೇದಿ, ಮತ್ತು ಕಾಲುಬೇನೆ.

  • ಜಾನುವಾರುಗಳಿಗೆ ಜ್ವರ ಬಮದಿರುವುದನ್ನು ಹೇಗೆ ತಿಳಿದುಕೊಳ್ಳುವಿರಿ?

- ಬಾಯಿಯಲ್ಲಿ ಬೆರಳುಗಳನ್ನು ಇಡುವ ಮೂಲಕ ಮತ್ತು ಥರ್ಮಾಮೀಟರನ್ನು ಗುದದ್ವಾರದಲ್ಲಿಡುವುದರ ಮೂಲಕ ತಿಳಿದುಕೊಳ್ಳಬಹುದು.

  • ಜಾನುವಾರುಗಳಿಗೆ ಬೇಕಾದ ಔಷಧಿಗಳನ್ನು ಎಲ್ಲಿ ಎಲ್ಲಿ ಪಡೆಯುತ್ತೀರಿ?

- ಪಶು ಸಂಗೋಪನಾ ಇಲಾಖೆಯಲ್ಲಿ.

  • ಪಶುಗಳಲ್ಲಿ ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ?

- ಮನುಷ್ಯರಂತೆ ನಡೆಯುತ್ತದೆ. ಆದರೆ ಜಾನುವಾರುಗಳು ಮೇವನ್ನು ತಿಂದು ಶೇಖರಿಸಿಟ್ಟುಕೊಂಡು ನಂತರ ಅಗಿಯುತ್ತವೆ.

  • ಇತ್ತೀಚೆಗೆ ನಿಮ್ಮ ಸಂಸ್ಥೆಯಲ್ಲಾದ ಬದಲಾವಣೆ ಏನು?

- ಚಿಕಿತ್ಸೆಗೆ ಬರುವ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆ.

  • ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ಯಾವುದಾದರು ಹೊಸ ತಂತ್ರಜ್ಞಾನಗಳಿವೆ?
  • ಜಾನುವಾರುಗಳಿಗೆ ಚಿಕಿತ್ಸೆ ನಿಡಲು ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿದೆಯೇ?

- ಜಾನುವಾರುಗಳಿಗೆ ಚಿಕಿತ್ಸೆಗೆ ಹೊಸ ತಂತ್ರಜ್ಞಾನದ ಬಳಕೆ ಇದೆ. ಕೃತಕ ಗರ್ಭಧಾರಣೆಯ ಮೂಲಕ ಹೊಸ ಆರೋಗ್ಯವಂತ ತಳಿಯ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

  • ನಿಮ್ಮ ಸಂಸ್ಥೆಯಲ್ಲಿ ನಿಮಗೇನಾದರೂ ಸಮಸ್ಯೆಗಳಿವೆಯೇ?

- ಸಿಬ್ಬಂದಿ ಕೊರತೆ ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ.

  • ಜಾನುವಾರುಗಳಿಗಾಗಿ ಯಾವುದಾದರೂ ಹೊಸ ಯೋಜನೆಗಳಿವೆಯೇ?

- ಇತ್ತಿಚೆಗೆ ಬಂದ ಹೊಸ ಯೋಜನೆ ಏನೆಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕುರಿ ಮತ್ತು - ಮೇಕಗಳನ್ನು ಸಾಕಲು ಶೆಡ್ ನಿರ್ಮಾಣಕ್ಕಾಗಿ ಹಣ ಮಂಜೂರು ಮಾಡಿದೆ.

  • ಮಳೆಕಾಲದಲ್ಲಿ ಪಶುಗಳಿಗೆ ಬರುವ ಕಾಯಿಲೆ ಯಾವುದು?

- ಮೂಳೆ ಅಥವಾ ಕಾಲು ಮುರಿಯುತ್ತದೆ.

  • ನಿಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಇದೆಯೇ?

- ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಇಲ್ಲ.

  • ನಿಮ್ಮ ಆಸ್ಪತ್ರೆಯಲ್ಲಿ ಇನ್ನು ಏನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆನ್ನುಕೊಳ್ಳುತ್ತಿದ್ದೀರಾ? ಯಾವುದು?

- ಹೌದು, ಸಂತಾನೋತ್ಪತ್ತಿಯನ್ನು ಮಾಡಲು ಶಸ್ತ್ರಗಳನ್ನು ಇಲ್ಲಿಯೇ ತರಬೇಕು ಎಂದುಕೊಂಡಿದ್ದೇವೆ.

  • ನಿಮ್ಮ ಸಂಸ್ಥೆಯಲ್ಲಿರುವ ಸಿಬ್ಬಂದಿಗಳ ಸಂಖ್ಯೆ ಎಷ್ಟು?

- ಇಬ್ಬರು.

  • ಆಕಳು, ಎಮ್ಮೆ, ಕುರಿಗಳ ಗರ್ಭಧಾರಣೆ ಅವಧಿ ಎಷ್ಡು?
  1. ಆಕಳು - 9 ತಿಂಗಳು 9 ದಿವಸ .
  2. ಎಮ್ಮೆ - 10 ತಿಂಗಳು 10 ದಿವಸ .
  3. ಕುರಿ - 7 ತಿಂಗಳು .
  • ಪಶುಗಳಿಗೆ ಆಸ್ಪತ್ರೆಯಲ್ಲಿ ಟೆಕ್ನಾಲಜಿಯಲ್ಲಿ ಮುಂದುವರಿದಿರುವ ಜಿಲ್ಲೆ?

-ಬೀದರ್

  • ಪಶುಗಳಿಗೆ FMD ಮತ್ತು ಕಾಲು ಬಾಯಿ ಜ್ವರಕ್ಕೆ ನೀವು ವರ್ಷಕ್ಕೆ ಎಷ್ಡು ಬಾರಿ ಚುಚ್ಚುಮದ್ದು ನೀಡುತ್ತೀರಿ?

- ವರ್ಷಕ್ಕೆ ಎರಡು ಬಾರಿ.

  • ಪಶುಗಳಲ್ಲಿ ಮನುಷ್ಯರ ಹಾಗೆ ರಕ್ತ ಪರೀಕ್ಷೆ ಮಾಡುತ್ತಾರೆಯೇ?

- ಹೌದು.

  • ಪಶುಗಳಲ್ಲಿ ರಕ್ತ ಪರೀಕ್ಷೆ ಎಲ್ಲಿ ಮಾಡಿಸುತ್ತಾರೆ?

- ಗುಲ್ಬರ್ಗಾದಲ್ಲಿ ಮಾಡಿಸುತ್ತಾರೆ.

  • ಪಶುಗಳಲ್ಲಿ ಸಾಮಾನ್ಯವಾಗಿ ತಾಪ ಎಷ್ಟಿರುತ್ತದೆ?

- 101.2

  • ಪಶುಗಳ ಕೋಡಿನಲ್ಲಿ ಉಳ ಬಿದ್ದಾಗ ಬಳಸುವ ಔಷದಿ ಯಾವುದು?

- Oil 07 turpent. (ಎತ್ತಿನ ಹುಳ ಬಿದ್ದಿದೆ ಇದಕ್ಕೆ ಒಂದುವಾರ ಆಯಿತು ಟೆಕಷನ್ ಟೈನ್ ಔಷಧಿಯನ್ರನು ಕೊಟ್ಟಿದ್ದಾರೆ ಈ ಗಾಯ ಮಾಯಬೇಕಾದರೆ 3 ದಿನಗಳು ಬೇಕು. ನೈಟ್ರೋಜನ ಹಾಕಿ ಇದು ಗಾಯಕ್ಕೆ ಯಾವುದೇ ನೋಣ ಸೊಳ್ಳೆಗಳು ಕೂಡುವುದಿಲ್ಲ. ನರಸಪ್ಪ, ಲಚ್ಚಮಣ್ಣ, ನರಸಪ್ಪ, ಈರಪ್ಪ ಇವರು ಎತ್ತಿಗೆ ಔಷಧಿಯನ್ನು ನೀಡಲು ಸಹಾಯ ಮಾಡಿದರು)

  • ಈ ಎತ್ತಿಗೆ ಏನಾಗಿದೆ?

- ಹುಳ ಬಿದ್ದಿದೆ

  • ನೀವು ಆ ಎತ್ತಿಗೆ ಯಾವು ಔಷಧಿ ಕೊಡುತ್ತೀರಿ?

- ಟಕಷನ್ ಟೈನ್

  • ಈ ಗಾಯ ಮಾಯಬೇಕಾದರೆ ಎಷ್ಟು ದಿನಗಳು ಬೇಕು?

- 3 ದಿನಗಳು ಬೇಕು.

  • ಈ ಐದು ವರ್ಷಗಳ ನಿಮ್ಮ ಸೇವೆಯಲ್ಲಿ ನಿಮ್ಮ ಅನುಭವವೇನು? ಮತ್ತು ನಿಮಗೆ ಇರುವ ಸಮಸ್ಯೆಗಳೇನು?

- ಐದು ವರ್ಷಗಳ ಸೇವಾ ಅವಧಿಯಲ್ಲಿ ಹಲವಾರು ರೀತಿಯ ಜಾನುವಾರುಗಳ ರೋಗಗಳನ್ನು ವಾಸಿಮಾಡಿದ್ದೇನೆ. ನಮ್ಮಲ್ಲಿರುವ ಸಮಸ್ಯೆ ಎಂದರೆ ಸಿಬ್ಬಂದಿ ವರ್ಗದವರ ಕೊರತೆ, ಇನ್ನು ಹೆಚ್ಚು ಸಿಬ್ಬಂದಿ ವರ್ಗದವರಿದ್ದರೆ ಹೆಚ್ಚು ಬದಲಾವಣೆ ಮಾಡಲು ಸಾಧ್ಯ.

Learnings

GHS ಮೋಟನಹಳ್ಳಿ, ಪಶು ವೈದ್ಯಕೀಯ ಆಸ್ಪತ್ರೆಗೆ ಸಂದರ್ಶನಕ್ಕೆಂದು ಹೋದಾಗ ಬಹಳಷ್ಟು ವಿಷಯವನ್ನು ಕಲಿತೆವು. ನಾವೆಲ್ಲಾ (ಮಕ್ಕಳೆಲ್ಲಾ)ಸೇರಿ ಕೇಳಿದ ಪ್ರಶ್ನೆಗಳಿಗೆ ವೈದ್ಯರು ಸಮರ್ಪಕವಾಗಿ ಉತ್ತ್ತರ ನೀಡಿದರು. ಅಂದರೆ,ಪಶುವಿನಲ್ಲಿರುವ ತಳಿಗಳ ಸಂಖ್ಯೆ,ಪಶುಗಳಿಗೆ ಬರುವ ಕಾಯಿಲೆಗಳು,ವಿವಿಧ ಪಶುಗಳ ವಿವಿಧ ಗರ್ಭಾವ್ಯವಸ್ಥೆಯ ಅವಧಿ,ಆಸ್ಪತ್ರೆಯ ಟೆಕ್ನಾಲಜಿಯಲ್ಲಿ ಮುಂದುವರೆದಿರುವ ಆಸ್ಪತ್ರೆ,ಪಶುಗಳಿಗೆ ರಕ್ತ ಪರೀಕ್ಷಿಸುವ ಆಸ್ಪತ್ರೆ ಮತ್ತು ಈ ಆಸ್ಪತ್ರೆಯಲ್ಲಿರುವ ಸೌಲಭ್ಯಗಳೇನು ಮತ್ತು ಸಮಸ್ಯೆಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಂಡೆವು.

Album

Videos

Rajani, Science teacher discusses the DST

https://youtube.com/watch?v=F1Pf8mbfxZw