ಅವನಿ ಮತ್ತು ಬಟಾಣಿ ಗಿಡ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಈ ಕೆಲಸ ಮಾಡಿದ್ದು ಯಾರು? ಅವನಿ ಮತ್ತು ಅವಳ ತಾಯಿಗೆ ಗೊತ್ತಿಲ್ಲ. ಬಟಾಣಿ ಗಿಡದ ಕಥೆಯನ್ನು ಓದಿದಾಗ ಈ ಕೆಲಸ ಮಾಡಿದ್ದು ಯಾರೆಂದು ನಿಮಗೆ ತಿಳಿಯುತ್ತದೆ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಕಾಳು ಗಿಡವಾಗುವ ಪ್ರಕ್ರಿಯೆ, ಗಿಡದ ಬೆಳವಣಿಗೆ ಹಾಗೂ ಅದರ ಬೆಳವಣಿಗೆಗೆ ಅವಶ್ಯಕವಿರುವ ಅಂಶಗಳನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

ಕಥಾ ವಸ್ತು :ವಿಜ್ಞಾನ,ಪರಿಸರ ಮತ್ತು ವಾತಾವರಣ,ಶಬ್ದಕೋಶ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Avani%20Mattu%20Batani%20Gida.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಿಗೆ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು.
  2. ಕಥೆಯಲ್ಲಿ ಬಂದಂತಹ ಪಾತ್ರಗಳು ಯಾವುವೂ? ಆ ಪಾತ್ರಗಳಿಗಿದ್ದ ಹೆಸರುಗಳೇನು ಹಾಗೂ ಅದರಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು? ಯಾಕೆ? ಎಂದೆಲ್ಲಾ ಮಕ್ಕಳೊಂದಿಗೆ ಚರ್ಚಿಸುವುದು.
  3. ಬೀಜ ಮೊಳಕೆಯೊಡೆದು ಗಿಡವಾಗುವ ಕುರಿತು ಅಥವಾ ಯಾವುದಾದರೂ ಗಿಡವನ್ನು ಬೆಳೆಸಿರುವ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುವುದು.
  4. ಭೂಮಿಯಲ್ಲಿ ಕಾಣಸಿಗುವ ಎರೆ ಹುಳು, ಅದರ ಕಾರ್ಯದ ಕುರಿತು ಗುಂಪಿನಲ್ಲಿ ಚರ್ಚಿಸಿ ಹೇಳುವಂತೆ ತಿಳಿಸುವುದು.
  5. ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆದು ಗಿಡವಾಗಿ ಮೇಲೆ ಬರಲು ಅದಕ್ಕೆ ಅವಶ್ಯಕತೆಯಿರುವ ಅಂಶಗಳಾವುವು ಎಂಬುದನ್ನ ಗುಂಪಿನಲ್ಲಿ ಚರ್ಚಿಸುವಂತೆ ಮಕ್ಕಳಿಗೆ ತಿಳಿಸುವುದು.
  6. ಬೀಜ ಮೊಳಕೆಯೊಡೆದು ಗಿಡವಾಗುವ ನಡುವಿನ ವಿವಿಧ ಹಂತದ ಚಿತ್ರಗಳನ್ನು ಬರೆಯಿರಿ.

ಸಂಪೂರ್ಣ ದೈಹಿಕ ಚಟುವಟಿಕೆ

  • ಕಲ್ಲು, ಪೆನ್ನು, ಪೇಪರ್ ಚಟುವಟಿಕೆ.

ಆಲಿಸುವ ಪೂರ್ವದ ಚಟುವಟಿಕೆ

  • ಮಕ್ಕಳಿಗೆ ವಿವಿಧ ಧಾನ್ಯಗಳ ಹೆಸರುಗಳನ್ನು ಇಟ್ಟು ಏಕದಳ ಮತ್ತು ದ್ವಿದಳ ಧಾನ್ಯಗಳ ಅರ್ಥವನ್ನು ಆಟದ ಮೂಲಕ ಪರಿಚಯ ಮಾಡಿಸುವುದು - ಒಂದು ವೃತ್ತ ಹಾಕಿ ಶಿಕ್ಷಕರು ಏಕದಳ ಎಂದಾಗ ಏಕದಳದ ಹೆಸರಿನ ಮಕ್ಕಳು ವೃತ್ತದಲ್ಲಿ ದ್ವಿದಳ ಎಂದಾಗ ದ್ವಿದಳದ ಹೆಸರಿನ ಮಕ್ಕಳು ವೃತ್ತದೊಳಕ್ಕೆ ಎಗರುವುದು.
  • ನೀವು ಯಾವೆಲ್ಲಾ ಬೆಳಗಿನ ಉಪಹಾರವನ್ನು ತಿಂದಿದ್ದೀರಿ?
  • ನೀವು ತಿಂದಿರುವ ತಿಂಡಿಯಲ್ಲಿ ಯಾವೆಲ್ಲಾ ತರಕಾರಿಗಳನ್ನು ಬಳಸುವಿರಿ?

ಆಲಿಸುವ ಸಮಯದ ಚಟುವಟಿಕೆ

  • ಅಡುಗೆ ಮಾಡಲು ಹೇಗೆ ಸಿದ್ದತೆ ಅಥವಾ ತಯಾರಿ ಮಾಡಿಕೊಳ್ಳುತ್ತಾರೆ.
  • ಮನೆಯಲ್ಲಿ ಯಾವೆಲ್ಲಾ ಪ್ರಾಣಿಗಳನ್ನು ಸಾಕುತ್ತಾರೆ?
  • ಮಣ್ಣಿನಲ್ಲಿ ಎರೆಹುಳು ಇರುವುದರಿಂದ ಆಗುವ ಪ್ರಯೋಜನಗಳೇನು?
  • ಮಳೆ ಬಾರದೇ ಇದ್ದರೆ ಏನಾಗುತ್ತದೆ?

ಆಲಿಸಿದ ನಂತರದ ಚಟುವಟಿಕೆಗಳು

  • ಸಸ್ಯ ಬೆಳೆಯಲು ಅವಶ್ಯಕವಿರುವ ಅಂಶಗಳಾವುವು?
  • ಮಳೆನೀರು ಕೊಯ್ಲಿನ ಅನುಕೂಲಗಳೇನು?
  • ಎರೆಹುಳುವನ್ನು ರೈತನ ಮಿತ್ರನೆನ್ನಲು ಕಾರಣವೇನು?
  • ಈ ಕಥೆಯಲ್ಲಿ ಬಂದ ಪಾತ್ರಗಳಾವುವು?
  • ಎರೆಹುಳುವಿನ ಗೊಬ್ಬರವನ್ನು ತಯಾರಿಸಲು ಪ್ರಯತ್ನಿಸುವ ಚಟುವಟಿಕೆ ನೀಡುವುದು.

ಪಠ್ಯ ಪುಸ್ತಕಕ್ಕೆ ಸಂಪರ್ಕಿಸಬಹುದು