ಉದ್ಯಾನದ ಪುಷ್ಪ ಬೂಗನ್ ವಿಲ್ಲೆ
ಉದ್ಯಾನಗಳು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ಅಥವಾ ಮನೆ ಅಂಗಳಲ್ಲಿ ಕೂಡ ಸೌಂಧರ್ಯಕ್ಕೆ ‘ಬೂಗನ್ ವಿಲ್ಲೆ’ಯು ಬಹಳವಾಗಿ ಪ್ರಶಂಸಿಸಲ್ಪಡುವದು. ‘ಲೂಯಿಸ್ ಆ್ಯಟ್ವೊನ್ ಬೂಗನ್ ವಿಲ್’ ಎಂಬ ಪ್ರೆಂಚ್ ನಾವಿಕನೊಬ್ಬನ ಹೆಸರನ್ನು ಇದಕ್ಕೆ ಕೊಡಲಾಗಿದೆ. ಇದು ನಮ್ಮ ದೇಶದ ಹವಾಮಾನಕ್ಕೆ ಚೆನ್ನಾಗಿ ಹೊಂದಿದೆ.
‘ಬೂಗನ್ ವಿಲ್ಲೆ’ ಯ ಕುಟುಂಬದ ಹೆಸರು ನಿಕ್ಟಾಜಿನೇಸಿ. ಇದರ ಹುಟ್ಟುಸ್ಥಳ ದಕ್ಷಿಣ ಅಮೇರಿಕಾದ ಉಷ್ಣ ಮತ್ತು ಉಪಉಷ್ಣ ವಲಯದ ಪ್ರದೇಶಗಳು. ಸಂಪೂರ್ಣವಾಗಿ ಹೂಗಳರಳಿದಾಗ ಇದು ಅತ್ಯಂತ ಮನೋಲ್ಲಾಸವನ್ನುಂಟುಮಾಡುವುದು ಹಾಗೂ ಬಹುಕಾಲದವರೆಗೆ ಉಳಿಯುವಂತಹ ಹೂ ಬಿಡುವ ಸಸ್ಯ ಇದಾಗಿದೆ. ಅಕ್ಟೋಬರ್ ಅವಧಿಯಲ್ಲಿ ಚಳಿಗಾಲ ಪ್ರಾರಂಭವಾಗಿ ತಂಪಾದ ಮತ್ತು ಆಹ್ಲಾದಕರವಾದ ಹವೆಯು ಬೀಸುವಾಗ ‘ಬೂಗನ್ ವಿಲ್ಲೆ’ ಹೂ ಬಿಡಲು ಪ್ರಾರಂಭಿಸುವುದು. ಬೇಸಿಗೆಯ ಅವಧಿಯಲ್ಲಿ ಎರಡನೆಯ ಬಾರಿ ಹೂ ಬಿಡುವುದು.
ಇದನ್ನು ಬಳ್ಳಿಯಂತೆ ಅಥವಾ ಕಂಟಿಯಂತೆ ಎರಡೂ ರೀತಿಯಲ್ಲಿ ಬೆಳೆಸಬಹುದು. ವಿವಿಧ ವರ್ಗಗಳ ಪರಿಣಾಮ ಬೀರಲು ವಿವಿಧ ವರ್ಗಗಳ ಪುಷ್ಪಗಳಿರುವ ಎರಡು ಆಥವಾ ಮೂರು ನಮೂನೆಗಳನ್ನು ಒಂದೇ ಕಾಂಡದ ಮೇಲೆ ಕಣ್ಣು ಹಾಕಬಹುದು(ಬಡ್ಡಿಂಗ್). ಕಾಂಡಗಳ ತುಂಡುಗಳಿಂದ ಅಥವಾ ಕಣ್ಣು ಹಾಕುವುದರಿಂದ (ಬಡ್ಡಿಂಗ್) ಬಗೂನ್ ವಿಲ್ಲೆ ಬೆಳೆಸಬಹುದು. ಬಗೂನ್ ವಿಲ್ಲೆ ಬೇಲಿಯು ಉದ್ಯಾನದಲ್ಲಿ ಅತಿ ಸಾಮಾನ್ಯವಾದುದು ಮತ್ತು ವರ್ಣಮಯವಾದುದಾಗಿದೆ. ಇದನ್ನು ಎತ್ತರವಾದ ವೃಕ್ಷಕ್ಕೆ ಹಬ್ಬಿಸಿ ಬೆಳಸಬಹುದಾಗಿದೆ. ಬಕೆಟ್ಟು ಅಥವಾ ಕುಂಡಗಳಲ್ಲಿಯೂ ಸಹ ಇದನ್ನು ಬೆಳೆಸಬಹುದು.
ಫೆಬ್ರುವರಿಯಿಂದ ಏಪ್ರಿಲ್‍ವರೆಗೆ ಕಣ್ಣುಹಾಕುವುದನ್ನು ಮತ್ತು ಲೇಯರ್ ಮಾಡಬಹುದು. ಆದರೆ ಜೂನ್-ಜುಲೈನಲ್ಲಿ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿದ ಮೇಲೆ ಕಾಂಡಗಳ ತುಂಡುಗಳನ್ನು ಉತ್ತಮವಾಗಿ ನಾಟಿಮಾಡಬಹುದು ನಾಟಿಮಾಡಲು ಉತ್ತಮವಾದ ಸಮಯ ಎಂದರೆ ಜುಲೈನಿಂದ ಸೆಪ್ಟೆಂಬರ್‍ವರೆಗೆ ಮತ್ತು ನಾಟಿಮಾಡುವುದನ್ನು ಚಳಿಗಾಲದ ಅವಧಿಯಲ್ಲಿ ನಿಲ್ಲಿಸಬೇಕು. ಸುಮಾರು 1.5 ರಿಂದ 2.5ಮೀ. ಅಂತರದಲ್ಲಿ ಸಸ್ಯಗಳನ್ನು ನಾಟಿಮಾಡಬೇಕು. ಆದರೆ ಬೇಲಿಯನ್ನು ಬೆಳೆಸುವಾಗ ಸಮೀಪದಲ್ಲಿ ಬೆಳೆಸಬೇಕು. ನಾಟಿಮಾಡಲು ನೆಲವನ್ನು ಸುಮಾರು 2 ಫೂಟ ಆಳದ ಮಡಿಗಳನ್ನು ತಯಾರಿಸಬೇಕು. ವ್ಯಾಸ ಸುಮಾರು 3 ಫೂಟ ಇದ್ದರೆ ಒಳ್ಳೆಯದು. ನಾಟಿಮಾಡುವಾಗ ಸುಮಾರು ಮೂರರಿಂದ ನಾಲ್ಕು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರಸಿ ಹಾಕಬೇಕು.
ಉತ್ತಮವಾದ ಹೂಗಳನ್ನು ಪಡೆಯಲು ಜೂನನಲ್ಲಿ ಅವುಗಳು ಹೂ ಬಿಡುವುದು ಮುಗಿದನಂತರ ಸಸ್ಯಗಳ ಹೆಚ್ಚಿನ ರೆಂಬೆಗಳನ್ನು ಕತ್ತರಿಸಬೇಕು. ಬಕೆಟ್ಟುಗಳಲ್ಲಿ ಅಥವಾ ಕುಂಡಗಳಲ್ಲಿ ಬೆಳೆದ ಸಸ್ಯಗಳನ್ನು ಬುಡದವರೆಗೂ ಕತ್ತರಿಸಬೆಕು. ಆದರೆ ನೆಲದಲ್ಲಿ ಬೆಳದ ಸಸ್ಯಗಳ ತುದಿ, ರೆಂಬೆಗಳನ್ನು ಮಾತ್ರ ಕತ್ತರಿಸಬೇಕು. ಹೀಗೆ ಕತ್ತರಿಸುವುದರಿಂದ ಸಸ್ಯಗಳಿಗೆ ಆಕಾರ ಕೊಡಲು ಮತ್ತು ವಿಪರೀತ ಬೆಳೆಯುವುದನ್ನು ತಡೆಹಿಡಿಯಲು ಉಪಯುಕ್ತವಾಗುವುದು. ಕತ್ತರಿಸಿದ ನಂತರ ಸುಮಾರು ಎರಡರಿಂದ ಮೂರು ಬುಟ್ಟಿ ಕೊಟ್ಟಿಗೆ ಗೊಬ್ಬರ ಕೊಡಬೇಕು. ಬೇಸಿಗೆಯ ಅವಧಿಯಲ್ಲಿ, ಚಳಿಗಾಲದ ಅವಧಿ ಗಿಂತ ಸಸ್ಯಯಗಳಿಗೆ ಮೇಲಿಂದ ಮೇಲೆ ನೀರು ಹಾಕುವುದು ಅವಶ್ಯಕವಾಗಿದೆ. ಬೂಗನ್ ವಿಲ್ಲೆ ರೋಗಗಳಿಂದ ಹಾಗೂ ಕೀಟಗಳಿಂದ ಮುಕ್ತವಾಗಿದೆ.
‘ಬೂಗನ್ ವಿಲ್ಲೆ’ಯಲ್ಲಿ ಸಾಮಾನ್ಯವಾಗಿ ಆಕರ್ಶಕವಾದ ಹಾಗೂ ವಿವಿಧ ಬಣ್ಣಗಳನ್ನು ಹೊಂದಿದೆ ಮತ್ತು ನಕ್ಷತ್ರದಂತಹ ಆಕಾರದ ತುದಿಯೊಂದಿಗೆ ಹೊಳೆಯುತ್ತಿರುತ್ತವೆ ಮತ್ತು ಪುಷ್ಪಪಾತ್ರವು ಪುಚ್ಚಗಳ ಮಧ್ಯದಲ್ಲಿ ಹುಟ್ಟಿರುತ್ತವೆ. ಬಿಳಿ, ಉಜ್ವಲಕೆಂಪು, ತಿಳಿಗೆಂಪು, ಇಟ್ಟಿಗೆಕೆಂಪು, ಕಿತ್ತಳೆ, ಹಳದಿ, ಬಿಳಿಬಣ್ಣಗಳ ಮಚ್ಚೆಗಳು ಇರುವ ನಮೂನೆಗಳು ಜನಪ್ರೀಯವಾಗಿವೆ.
ಉದ್ಯಾನಗಳಲ್ಲಿ ಬೂಗನ್ ವಿಲ್ಲೆ ಅಲ್ಲದೆ ಕಾರ್ನೇಷನ್, ಸ್ವೀಟ್ ವಿಲಿಯಮ್, ನಸ್ಟರ್ ಷಮ್ ವರ್ಬೆನಾ, ಜಿರಾನಿಯುಮ್, ಪ್ಯಾನ್ಸಿ ಹೀಗೆ ಹಲವಾರು ನಮೂನೆಯ ಹೂ ಬಿಡುವ ಸಸ್ಯಗಳಿವೆ.
ಆಧಾರ : ಉದ್ಯಾನ ಪುಷ್ಪಗಳು
ವಿಷ್ಣು ಸ್ವರೂಪ್
ಅನುವಾದ ಡಾ|| ಪಿ. ಎಸ್. ಚಿಕ್ಕಣ್ಣಯ್ಯ.
ಲೇಖಕರು :
ಶ್ರೀ ಎಸ್.ವ್ಹಿ. ಬುರ್ಲಿ
(ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)
‘ಚೈತನ್ಯ’ ಮನೆ ಸಂಖ್ಯೆ 12 ಐಶ್ವರ್ಯ ನಗರ,
ಆಶ್ರಮ ರಸ್ತೆ ವಿಜಯಪುರ – 586103
ಮೊ: 9060060300, 08352263852
Email : svb1966bjp@gmail.com