ಒಂದು ಬಾಹು, ಕೋನ ಮತ್ತು ಎರಡು ಬಾಹುಗಳಲ್ಲಿನ ವ್ಯತ್ಯಾಸದೊಂದಿಗೆ ತ್ರಿಭುಜದ ರಚನೆ.
Jump to navigation
Jump to search
ಎರಡು ಬಾಹುಗಳ ವ್ಯತ್ಯಾಸ ಮತ್ತು ಕೋನವು ತ್ರಿಭುಜದ ರಚನೆಗೆ ಸಾಧ್ಯವಿರುವ ನಿಯತಾಂಕಗಳಾಗಿವೆ, ತ್ರಿಭುಜದ ರಚನೆಯು ಬಾ.ಕೋ.ಬಾ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.
ಉದ್ದೇಶಗಳು:
ಕೋನ,ಬಾಹು ಮತ್ತು ಇತರ ಎರಡು ಬಾಹುಗಳ ವ್ಯತ್ಯಾಸದೊಂದಿಗೆ ತ್ರಿಭುಜವನ್ನು ರಚಿಸಲು.
ಅಂದಾಜು ಸಮಯ:
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ತ್ರಿಭುಜದ ಅಂಶಗಳು ಮತ್ತು ತ್ರಿಭುಜದ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪಾದ ಮತ್ತು ಕೊಟ್ಟಿರುವ ಕೋನವನ್ನು ಹೊಂದಿಸಲು ಜಾರುಕ ಬಳಸಿ
- ಇತರ ಎರಡು ಬಾಹುಗಳ ವ್ಯತ್ಯಾಸವನ್ನು ಜಾರುಕ ಬಳಸಿ ಗುರುತಿಸಲಾಗಿದೆ
- ರಚಿಸುವುದಕ್ಕಾಗಿ ಹಂತಗಳನ್ನು ಅನುಸರಿಸಿ - ಹಂತ 1, ಹಂತ 2
- ತ್ರಿಭುಜದಲ್ಲಿ ಪ್ರತಿಫಲಿಸುವ ಬದಲಾವಣೆಗಳನ್ನು ಗಮನಿಸಲು ವಿದ್ಯಾರ್ಥಿಗಳು ಜಾರುಕಗಳನ್ನು ಬದಲಾಯಿಸಬಹುದು
ಮೌಲ್ಯ ನಿರ್ಣಯ ಪ್ರಶ್ನೆಗಳು:
- ತ್ರಿಭುಜ ಯಾವಾಗ ರೂಪುಗೊಳ್ಳುವುದಿಲ್ಲ?