ಒಂದು ಮೂರು ಐದು ಎಣಿಸು ಜೀರುಂಡೆ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಒಂದು ಜೀರುಂಡೆ ಇತ್ತು. ಅದಕ್ಕೆ ಎಣಿಸುವುದು ಎಂದರೆ ಬಹಳ ಇಷ್ಟ. ಅದಕ್ಕೆ ಸಮಸಂಖ್ಯೆ ಬೆಸಸಂಖ್ಯೆಗಳನ್ನು ಗುರುತಿಸುವುದು ಎಂದರೆ ಬಹಳ ಖುಷಿ. ಒಂದು ದಿನ ಜೀರುಂಡೆ ಬೆನ್ನ ಮೇಲೆ ಅಂಗಾತ ಉರುಳಿಕೊಂಡು ಬಿಟ್ಟಿತು. ಎಷ್ಟು ಜನ ಗೆಳೆಯರು ಜೀರುಂಡೆಗೆ ಸಹಾಯ ಮಾಡಲು ಬಂದರು? ಸಮಸಂಖ್ಯೆಯ ಗೆಳೆಯರಾ ಅಥವಾ ಬೆಸಸಂಖ್ಯೆಯ ಗೆಳೆಯರಾ?

ಉದ್ದೇಶಗಳು :

ಮಕ್ಕಳಿಗೆ ಸರಿ ಸಂಖ್ಯೆಗಳು ಮತ್ತು ಬೆಸ ಸಂಖ್ಯೆಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿಕೊಡುವುದರ ಜೊತೆಗೆ ಸರಳ ಅಂಕಿಗಳ ಸಂಕಲನವನ್ನು ಹೇಳಿಕೊಡಬಹುದು. ಕಥೆಗೆ ಸಂಭಂದಿಸಿದಂತೆ ಕೆಲವು ತರಗತಿ ಚಟಿವಟಿಕೆಗಳು.

ಕಥಾ ವಸ್ತು : ಗಣಿತ,ಸಹಾಯ - ಸಹಕಾರ,

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Ondu%20Muru%20Eidu.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು

1. ಮಕ್ಕಳು ಕಥೆಯನ್ನು ತಮ್ಮ ಸ್ವಂತ ವಾಕ್ಯದಲ್ಲಿ ಹೇಳುವಂತೆ ತಿಳಿಸುವುದು.

2. ಹಲವಾರು ಸಂಖ್ಯೆಗಳ ಸಮೂಹಗಳನ್ನು ನೀಡಿ ಸರಿ ಸಂಖ್ಯೆ ಮತ್ತು ಬೆಸ ಸಂಖ್ಯೆಗಳಾಗಿ ವಿಭಾಗಿಸುವಂತೆ ತಿಳಿಸುವುದು.

3. ಸರಿ+ಸರಿ=? ಸರಿ+ಬೆಸ=? ಬೆಸ+ಬೆಸ=? ಇಂತಹ ಸಂಖ್ಯೆಗಳನ್ನು ಕೂಡುವಂತೆ ತಿಳಿಸಿ ಬಂದಂತಹ ಉತ್ತರ ಸರಿ ಸಂಖ್ಯೆಯೋ ಅಥವಾ ಬೆಸ ಸಂಖ್ಯೆಯೋ ಎಂದು ತಿಳಿಸುವ ಚಟುವಟಿಕೆ ನೀಡುವುದು.

ಸಂಪೂರ್ಣ ದೈಹಿಕ ಚಟುವಟಿಕೆ

  • ಒಂದು ಎರಡು ಬಾಳೆಲೆ ಹರಡು - ಹಾಡು ಹಾಡಿಸುವುದು.
  • TEN Little Monkeys – ಹಾಡು.

ಆಲಿಸುವ ಪೂರ್ವದ ಚಟುವಟಿಕೆ

  • ನಿಮ್ಮ ಮನೆಯ ಕುಟುಂಬ ಸದಸ್ಯರ ಸಂಖ್ಯೆ ಎಷ್ಟು?
  • ನಿಮ್ಮ ತರಗತಿಯಲ್ಲಿರುವ ಹುಡುಗ ಮತ್ತು ಹುಡುಗಿಯರ ಸಂಖ್ಯೆ ಎಷ್ಟು?

ಆಲಿಸುವ ಸಮಯದ ಚಟುವಟಿಕೆ

  • ಹೂವಿನ ದಳದ ಸಂಖ್ಯೆ ------------
  • ಕೀಟಗಳ ಸಂಖ್ಯೆ --------------
  • ಜೇಡಗಳ ಸಂಖ್ಯೆ--------------

ಆಲಿಸಿದ ನಂತರದ ಚಟುವಟಿಕೆಗಳು

  • ಕಲ್ಲು/ಹುಣಸೆ ಬೀಜಗಳನ್ನು ನೀಡಿ ಸರಿ ಮತ್ತು ಬೆಸ ಸಂಖ್ಯೆಗಳನ್ನು ವಿಭಾಗಿಸಲು ತಿಳಿಸುವುದು.
  • ಸಂಖ್ಯೆಗಳು ಬರೆದ ಮಿಂಚುಪಟ್ಟಿಗಳನ್ನು ಹಿಡಿದುಕೊಂಡ ವಿದ್ಯಾರ್ಥಿಗಳಿಂದ ಹುಲಿ-ಜಿಂಕೆ ಆಟ ಆಡಿಸುವುದು.
  • ಸಮ ಸಂಖ್ಯೆಗಳ ಸೊಡುಕು ರಚಿಸಿ ಆಡಿಸುವುದು.
  • ಡೈಸ್ ಮೂಲಕ ಹಾವು ಏಣಿ ಆಟ ಆಡಿಸುವುದು.
  • ಎಷ್ಟಪ್ಪ ಎಷ್ಟು ನೀವು ಹೇಳಿದಷ್ಟು ಆಟವನ್ನು ಆಡಿಸುವುದು.

ಪಠ್ಯ ಪುಸ್ತಕಕ್ಕೆ ಸಂಪರ್ಕಿಸಬಹುದು

6 ತರಗತಿ

  • ಸಂಖ್ಯೆಗಳನ್ನು ತಿಳಿಯುವುದು.
  • ಪೂರ್ಣ ಸಂಖ್ಯೆಗಳು.

7 ತರಗತಿ

  • ಭಾಗಲಬ್ದ ಸಂಖ್ಯೆಗಳು.

8 ತರಗತಿ

  • ಸಂಖ್ಯೆಯೊಂದಿಗೆ ಆಟ.