ಕಂಸದಿಂದ ರೂಪುಗೊಂಡ ಕೋನಗಳು
Jump to navigation
Jump to search
ಕಲಿಕೆಯ ಉದ್ದೇಶಗಳು :
ಒಂದು ಕಂಸದಿಂದಾಗಿ ವೃತ್ತಕೇಂದ್ರದಲ್ಲಿ ಏರ್ಪಟ್ಟ ಕೋನವು ಅದೇ ಕಂಸದಿಂದಾಗಿ ವೃತ್ತದ ಇತರ ಯಾವುದೇ ಬಿಂದುವಿನಲ್ಲಿ ಏರ್ಪಟ್ಟ ಕೋನದ ಎರಡರಷ್ಟಿರುತ್ತದೆ.
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ಅಳತೆಪಟ್ಟಿ, ಕೈವಾರ, ಕೋನಮಾಪಕ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವೃತ್ತದ ಪರಿಧಿ, ವೃತ್ತದ ಜ್ಯಾ, ವೃತ್ತದ ಕೋನ, ವೃತ್ತದ ಕೇಂದ್ರ ಕೋನಗಳ ಬಗ್ಗೆ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- 'A' ಕೇಂದ್ರದಿಂದ, ಯಾವುದೇ ತ್ರಿಜ್ಯದಲ್ಲಿ ವೃತ್ತವನ್ನು ಎಳೆಯಿರಿ.
- ಈ ವೃತ್ತದಲ್ಲಿ B ಮತ್ತು B' ಎರಡು ಬಿಂದುಗಳನ್ನು ಗುರುತಿಸಿ. ನಂತರ, BB' ಎಂಬುದು ವೃತ್ತದ ಒಂದು ಕಂಸವಾಗಿದೆ.
- ವೃತ್ತದ ಪರಿಧಿಯ ಯಾವುದೇ ಬಿಂದುವಿನ್ನು 'C' ಬಿಂದು ಎಂದು ಗುರುತಿಸಿ.
- ವೃತ್ತದ ಕೇಂದ್ರದಲ್ಲಿ BB' ಮೂಲಕ ಕೋನವನ್ನು ಗುರುತಿಸಿ
- ∠BAB ' ಕೋನವನ್ನು ಅಳೆಯಿರಿ.
- ವೃತ್ತದ ಉಳಿದ ಭಾಗದ ಯಾವುದೇ ಬಿಂದು 'C' ನಲ್ಲಿ BB' ಯಿಂದ ಉಂಟಾಗಿರುವ ಕೋನವನ್ನು ಗುರುತಿಸಿ.
- ∠BCB' ಕೋನವನ್ನು ಅಳೆಯಿರಿ.
- ವೃತ್ತದ ಕೇಂದ್ರದಲ್ಲಿ ಕಂಸದಿಂದ ಏರ್ಪಟ್ಟ ∠BAB' ಕೋನವು ಅದೇ ಕಂಸದಿಂದಾಗಿ ವೃತ್ತದ ಇತರ ಯಾವುದೇ ಬಿಂದುವಿನಲ್ಲಿ ಏರ್ಪಟ್ಟ ∠BCB' ಕೋನದ ಎರಡರಷ್ಟಿರುತ್ತದೆ ಎಂದು ಪರಿಶೀಲಿಸಲಾಗಿದೆ.
i.e. ∠BAB '= 2∠BCB'
ಮೌಲ್ಯ ನಿರ್ಣಯ ಪ್ರಶ್ನೆಗಳು
- ಜ್ಯಾವನ್ನು ವ್ಯಾಸವಾಗಿ ತೆಗೆದುಕೊಂಡರೆ ನೀವು ಏನು ಗಮನಿಸುತ್ತೀರಿ?
- ವೃತ್ತದಕೇಂದ್ರ ಕೋನವು 60° ಆಗಿದ್ದರೆ, ವೃತ್ತದ ಉಳಿದ ಭಾಗದ ಮೇಲೆ ಕಂಸದಿಂದ ಉಂಟಾದ ಕೋನ ಏಷ್ಟಿರುತ್ತದೆ?