ಕನ್ನಡಿಗರ ತಾಯಿ ಚಟುವಟಿಕೆ ೧ ಪದ್ಯವಾಚನದ ಧ್ವನಿಮುದ್ರಣ ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಪದ್ಯವಾಚನದ ಧ್ವನಿಮುದ್ರಣ ಆಲಿಸಿ ಪ್ರಶ್ನೆಗಳಿಗೆ ಉತ್ತರಿಸಿ

ಈ ಚಟುವಟಿಕೆಯನ್ನು ಪದ್ಯವಾಚನದ ಧ್ವನಿ ಮುದ್ರಣವನ್ನು ಆಲಿಸಿ ಜೊತೆ ಜೊತೆಗೆ ಹಾಡಿ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವುದು

ಕಲಿಕೋದ್ದೇಶಗಳು

ವಿಷಯ ಉದ್ದೇಶಗಳು

 1. ಪದ್ಯವನ್ನು ಅರ್ಥೈಸಲು ಮತ್ತು ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಧ್ವನಿ ಮುದ್ರಣದ ಬಳಕೆ
 2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಧ್ವನಿ ಮುದ್ರಣದ ಬಳಕೆ
 3. ನಾಡು ನುಡಿ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸುವುದು
 4. ಕನ್ನಡ ಮತ್ತು ಕರ್ನಾಟಕದ ವೈವಿಧ್ಯತೆಯನ್ನು ಮೆಚ್ಚುವರು
 5. ಕರ್ನಾಟಕದ ಇತಿಹಾಸವನ್ನು ತಿಳಿಯುವರು

ಕೌಶಲ್ಯ ಉದ್ದೇಶಗಳು

 1. ಧ್ವನಿಯನ್ನು ಕೇಳಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 2. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
 3. ಪದ್ಯದ ಧ್ವನಿಯಲ್ಲಿರುವ ನಿರ್ದಿಷ್ಟ ಅಂಶಗಳನ್ನು ಅಂದರೆ ಉಚ್ಚಾರಣೆ ಕಠಿಣ ಪದಗಳನ್ನು ಗುರುತಿಸುವುದು
 4. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

 1. ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು.
 2. ಆಲಿಸುವುದು ,ಸಾಮಾಜಿಕ ಹೊಂದಾಣಿಕೆ,
 3. ಇತಿಹಾಸವನ್ನು ಅರ್ಥೈಸುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.

ಉದ್ದೇಶಿತ ಸಮಯ

15 ನಿಮಿಷಗಳು

ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ

ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು. ತರಗತಿಯ ಆರಂಭಕ್ಕೂ ಮೊದಲು ದೇವಾಲಯಗಳ ಮಾಹಿತಿ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ.

ಅಗತ್ಯ ಸಂಪನ್ಮೂಲಗಳು

ಪ್ರೊಜೆಕ್ಟರ್‌, ತಾಯೆಬಾರ ಮೊಗವತೋರ ಕನ್ನಡಿಗರ ಮಾತೆಯೆ ಪದ್ಯದ ಧ್ವನಿ ಮತ್ತು ವೀಡಿಯೋ

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಮೊದಲು ಮಕ್ಕಳು ಧ್ವನಿಯನ್ನು ಆಲಿಸುವರು

ನಂತರ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದು

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

 1. ಇದರ ಮೊದಲ ಸಾಲುಗಳನ್ನು ಹಾಡಿ?
 2. ನೀವು ಆಲಿಸಿದ ಪ್ರಾಸಪದಗಳನ್ನು (ನೆನಪಿಗೆ ಬಂದವುಗಳು) ಹೇಳಿ?

ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?

 1. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಇರುವ ಪದ್ಯವನ್ನು ಸಂಗ್ರಹಿಸಿ ಮುಂದಿನ ತರಗತಿಯಲ್ಲಿ ತರಗತಿಯಲ್ಲಿ ವಾಚಿಸಿ