ಕನ್ನಡಿಗರ ತಾಯಿ ಚಟುವಟಿಕೆ ೩ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯಗಳ ಬಗ್ಗೆ ಚರ್ಚೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ವಿವಿಧ ಚಿತ್ರಗಳನ್ನು ನೋಡಿ ಹಬ್ಬಗಳು ಮತ್ತು ವಿಶೇಷ ಸಂಪ್ರದಾಯದ ಬಗ್ಗೆ ಮಾತನಾಡುವುದು ಮತ್ತು ಬರೆಯುವುದು

ಈ ಚಟುವಟಿಕೆಯಲ್ಲಿ ಮಕ್ಕಳು ವಿವಿಧ ಹಬ್ಬಗಳ ಚಿತ್ರವನ್ನು ನೋಡಿ (H5P ಸಂಪನ್ಮೂಲ) ಅವರವರ ಕಲ್ಪನೆಗೆ ತಕ್ಕಂತೆ ವಿವರಿಸುವರು ಮತ್ತು ಉತ್ತರಿಸುವರು .

ಕಲಿಕೋದ್ದೇಶಗಳು

ವಿಷಯ ಉದ್ದೇಶಗಳು

  1. ಹಬ್ಬಗಳ ಮಹತ್ವವನ್ನು ತಿಳಿಯುವರು
  2. ಹಬ್ಬಗಳ ಸಂಬ್ಯಮವನ್ನು ಮೆಚ್ಚುವರು
  3. ವಿವಿಧ ಹಬ್ಬಗಳ ಆಚರಣೆಗೆ ಕಾರಣವನ್ನು ತಿಳಿಯುವರು

ಕೌಶಲ್ಯ ಉದ್ದೇಶಗಳು

  1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
  2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
  3. ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  4. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
  5. ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು

ತರಗತಿ ಉದ್ದೇಶಗಳು

  1. ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು.
  2. ಚಿತ್ರದ ಅವಲೋಕನ,ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
  3. ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.

ಉದ್ದೇಶಿತ ಸಮಯ

15 ನಿಮಿಷಗಳು

ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು,

ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ತಂತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು

ಅಗತ್ಯ ಸಂಪನ್ಮೂಲಗಳು

ಪ್ರೊಜೆಕ್ಟರ್‌, ಚಿತ್ರಗಳ ಲಿಂಕ್‌ ಮತ್ತು .ಭಾರತೀಯ ಹಬ್ಬಗಳ ಮಾಹಿತಿ

ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)

ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು. ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ , ಮೊದಲು ಅವರವರ ಮನೆಯಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಚರ್ಚೆ ಮಾಡಲು ತಿಳಸುವುದು. ನಂತರ ಮೂರನೇ ಗುಂಪಿನ ಮಕ್ಕಳು ಅವರು ಗುಂಪಿನಲ್ಲಿ ಹಬ್ಬಗಳ ಚರ್ಚೆಯನ್ನು ಅಭಿನಯ ಮಾಡುವ ಮೂಲಕ ತೋರಿಸುವುದು ಉಳಿದ ಮಕ್ಕಳು ಅದನ್ನು ಹೇಳುವುದು.

H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು.

ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,

ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಮಕ್ಕಳು ಮತ್ತು ಶಿಕ್ಷಕರು ತಿಳಿಸುತ್ತಾರೆ.

ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

  1. ನೀವು ಬೇಟಿ ನೀಡುವ ದೇವಾಲಯಗಳು ಯಾವುವು?
  2. ನಿಮಗೆ ಇಷ್ಟವಾದ ದೇವಾಲಯ ಯಾವುದು ಮತ್ತು ಏಕೆ?
  3. ಪ್ರೇಕ್ಷಣಿಯ ಸ್ಥಳಗಳು ನಿಮಗೆ ಯಾಕೆ ಇಷ್ಟ?

ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?

  1. ನಿಮ್ಮ ಮನೆಗೆ ಹತ್ತಿರದ ದೇವಾಲಯವನ್ನು ಕುರಿತು ವರದಿ ತಯಾರಿಸಿ ಬರೆಯಿರಿ?
  2. ಕರ್ನಾಟಕದ ಪ್ರೇಕ್ಷಣಿಯ ಸ್ಥಳಗಳನ್ನು ಪಟ್ಟಿಮಾಡಿ?