ಕೊಯರ್ ಕಾರ್ಯಗಾರ ಗಣಿತ-III
ಕೊಯರ್ ೩ ನೇ ಕಾರ್ಯಾಗಾರದ ಹಿನ್ನೆಲೆ- ಗಣಿತ 13-15
ಅಜೆಂಡಾ
- ಕೊಯರ್-III ಅಜೆಂಡಾ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
- Pdf ಅಜೆಂಡಾ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
- ಪ್ರಶ್ನಾವಳಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
- ಕಾರ್ಯಾಗಾರ ಬಗೆಗಿನ ಅಬಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
STF ಕಾರ್ಯಗಾರಗಳ ಪ್ರಕಿಯೆ ಮತ್ತು ಫಲಿತಾಂಶ
ಶಿಕ್ಷಕರು ಮತ್ತು ಭೋದಕ ಶಿಕ್ಷಕರ ಮೂಲಕ 2013-14 ನೇ ಸಾಲಿನ ಹೊಸ 9ನೇ ತರಗತಿಯ ಪಠ್ಯಪುಸ್ತಕಕ್ಕೆ ವಿದ್ಯನ್ಮಾನ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವ ಉದ್ದೇಶದಿಂದ ಜುಲೈ-ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ವಿಷಯ ಶಿಕ್ಷಕರ ವೇದಿಕೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಗಾರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು 9 ನೇ ತರಗತಿಯ ಪಠ್ಯಪುಸ್ತಕಗಳ ವಿಷಯಗಳಿಗೆ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿ ವಿಕೀ ವೆಬ್ ಪುಟದಲ್ಲಿ ಸೇರಿಸಿರುತ್ತಾರೆ. ಹಾಗು ಇದೇ ಸಂಪನ್ಮೂಲ ವ್ಯೆಕ್ತಿಗಳು ತಮ್ಮ ಜಿಲ್ಲಾ ಹಂತದಲ್ಲಿನನ ಶಿಕ್ಷಕರಿಗೆ ವಿಷಯ ಶಿಕ್ಷಕರ ವೇದಿಕೆ ಕಾರ್ಯಗಾರಗಳನ್ನು ನಡೆಸಿದ್ದಾರೆ. ಈ ಪ್ರಕ್ರಿಯೆಗಾಗಿ ಪ್ರತೀ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಗಳ 2 ತಂಡಗಳಿಗೆ ತರಬೇತಿ ನೀಡಲಾಗಿತ್ತು . ಅವರ ಕಾರ್ಯಗಳೆಂದರೆ :-
- ರಾಜ್ಯ ಮಟ್ಟದ ಕಾರ್ಯಗಾರದಲ್ಲಿ (5+3 ದಿನ) ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸುವುದು ಮತ್ತು ಕೊಯರ್ ವಿಕೀ ಪುಟಕ್ಕೆ ಅಪ್ಲೋಡ್ ಮಾಡುವುದು .
- ಸಂಪನ್ಮೂಲ ಅಭಿವೃದ್ದಿ ಮತ್ತು ಬಳಕೆಯ ಜ್ಞಾನ ಹೆಚ್ಚಿಸಲು ಜಿಲ್ಲಾ ಹಂತದ ಶಿಕ್ಷಕರಿಗೆ ತರಬೇತಿ ನೀಡುವುದು (5 ದಿನ).
STF ಕಾರ್ಯಾಗಾರಗಳ ಫಲಿತಾಂಶಗಳು
- 9ನೇ ತರಗತಿಯ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ಪಠ್ಯ ವಿಷಯಗಳ ಸುಮಾರು 20ಕ್ಕೂ ಹೆಚ್ಚು ಅದ್ಯಾಯಗಳಿಗೆ ಹಲವಾರು ಚಟುವಟಿಕೆಗಳನ್ನೊಳಗೊಂಡ ಸಂಪನ್ಮೂಲ ಅಭಿವೃದ್ದಿಪಡಿಸಲಾಗಿದೆ.
- ವೆಬ್ ಆಧಾರಿತ ಸಂಪನ್ಮೂಲ ಅಭಿವೃದ್ದಿಪಡಿಸುವುದಕ್ಕಾಗಿಯೇ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರು ಹಾಗು ಡಯಟ್ ಉಪನ್ಯಾಸಕರನ್ನೊಳಗೊಂಡ ಸುಮಾರು 90 ಜನರಿಗೆ ತರಭೇತಿ ನೀಡಲಾಗಿದೆ.
- ರಾಜ್ಯ ಮಟ್ಟದಲ್ಲಿನ ತರಭೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾ ಹಂತದಲ್ಲಿ ಕೊಯರ್ ಬಳಕೆ ಮತ್ತು ಕೊಯರ್ ಗೆ ಸಂಪನ್ಮೂಲ ನೆರವು ನೀಡುವ ಬಗ್ಗೆ ಆಯಾ ಜಿಲ್ಲೆಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮುಖ್ಯಶಿಕ್ಷಕರುಗಳಿಗೆ ತರಭೇತಿ ನೀಡಿದ್ದಾರೆ.
- ವಿವಿಧ ಜಿಲ್ಲೆಗಳ ಬಹಳಷ್ಟು ಶಿಕ್ಷಕರು ಕೊಯರ್ ಪುಟಕ್ಕೆ ಸಂಪನ್ಮೂಲಗಳ ನೆರವು ನೀಡುತ್ತಿದ್ದಾರೆ.
ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ಮುಂದಿನ ಯೋಜನೆಗಳು
- ವಿವಿಧ ಜಿಲ್ಲೆಗಳ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು ವಿಶ್ಲೇಷಣೆ ಮಾಡುವುದ
- ಜಿಲ್ಲಾಹಂತದ ತರಭೇತಿಯಲ್ಲಿ ಕಲಿಕಾರ್ಥಿಗಳ ಮೂಲಕ ವ್ಯಕ್ತವಾದ ಅಭಿಪ್ರಾಯಗಳ ಆಧಾರದ ಮೇಲೆ ಕೊಯರ್ ಪುಟಗಳನ್ನು ವಿಶ್ಲೇಷಣೆ ಮತ್ತು ಪರಿಷ್ಕರಣೆ ಮಾಡುವುದು .
- ಕೊಯರ್ ಗೆ ಸಂಪನ್ಮೂಲಗಳ ನೆರವು ನೀಡಲು, ವಿಶ್ಲೇಷಿಸಲು ಮತ್ತು ಅಪ್ಲೋಡ್ ಮಾಡಲು ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಮತ್ತು ಮಾನದಂಡಗಳನ್ನು ನಿಗದಿಪಡಿಸುವುದು.
- ಶಿಕ್ಷಕರ ತರಭೇತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿಸಲು ಸಹಕಾರವಾಗುವಂತೆ ಜಿಲ್ಲಾ ಹಂತದ ಕೊಯರ್ ಕಾರ್ಯಗಾರಗಳ ಅನುಭವ ಹಂಚಿಕೊಳ್ಳುವುದು.
- Ideate on the training needs and processes for the 2014-15 academic year
ಕಾರ್ಯಾಗಾರದ ಅವಧಿ ಮತ್ತು ರಚನೆ
ಈ ಮೂರನೇ ಕೊಯರ್ ಕಾರ್ಯಗಾಗರವು ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದ ಶಿಕ್ಷಕರನ್ನೋಳಗೊಂಡ ವಿಶೇಷ ತಂಡವನ್ನು ಹೊಂದಿದ್ದು, ಸಂಪನ್ಮೂಲ ರಚನೆ, ಅಪ್ಲೋಡ್ ಮತ್ತು ಹೊಸ ಹೊಸ ಚಟುವಟಿಕೆಗಳ ಕುರಿತು ಕಾರ್ಯ ನಿರ್ವಹಿಸಲು ಈ ಶಿಕ್ಷಕರು ಸಜ್ಜುಗೊಳಿಸುವುದಾಗಿದೆ. ಇಲ್ಲಿಯವರೆಗಿನ ಕೊಯರ್ ಫಲಿತಾಂಶದ ಬಗ್ಗೆ ಚಿಂತನೆ ನಡೆಸಲು ಹಾಗು ಮುಂದಿನ ಯೋಜನೆಗಳನ್ನು ಯೋಚಿಸಲು ಪೂರಕವಾಗುವಂತೆ ಈ ಕಾರ್ಯಗಾರವನ್ನು 3 ದಿನ ನಡೆಸಲು ಯೋಜಿಸಲಾಗಿದೆ, ಈ ತಂಡವು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೊಯರ್ ಸಂಮನ್ಮೂಲ ಅಭಿವೃದ್ದಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲಿದೆ.
ಕಾರ್ಯಗಾರದಲ್ಲಿ ನಮ್ಮನ್ನು ವಿಕ್ಷಿಸಿ