ಕೋಳಿ ಸಾಕಾಣೆ, ದನಕರು ಸಾಕಾಣೆ ಮನೆಗಳಿಗೆ ಭೇಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಹೊರ ಸಂಚಾರ- ಮನೆ ಭೇಟಿ

ಅಂದಾಜು ಸಮಯ

ಒಂದು ದಿನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಪೆನ್
  2. ಪೇಪರ್
  3. ಮೊಬೈಲ್
  4. ಹೊರ ಸಂಚಾರಕ್ಕೆ ಹೋಗುವಾಗ ಇರಬೇಕಾದ ಮುಖ್ಯ ವಸ್ತುಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಹೊರ ಸಂಚಾರಕ್ಕೆ ಹೋಗುವಾಗ ಮುಖ್ಯವಾಗಿ ಇರಲೇ ಬೇಕಾದ ವಸ್ತುಗಳನ್ನು ಇಟ್ಟುಕೊಂಡಿರುವುದು.
  2. ಮನೆಗಳಲ್ಲಿ ಕೇಳಲೇ ಬೇಕಾದ ಪ್ರಮುಖ ವಿಷಯಗಳ ಪ್ರಶ್ನಾವಳಿಯನ್ನು ಸಿಧ್ಧ ಮಾಡಿ ಇಟ್ಟು ಕೊಳ್ಳುವುದು.
  3. ಯಾವ ಮಾಹಿತಿಯನ್ನು ಪಡೆಯಬೇಕು ಎಂದು ಮೋದಲೇ ಸೂಚನೆ ಕೊಡುವುದು.
  4. ವೇಳಾ ಪಟ್ಟಿಯನ್ನು ಸಿಧ್ಧ ಮಾಡಿಇಟ್ಟುಕೊಳ್ಳುವುದು.
  5. ಹೊರಸಂಚಾರ ಹೋಗುವ ಮೊದಲು ವಿಷಯಕ್ಕೆ ಸಂಬಂದಿಸಿದಂತೆ ಸಂಕ್ಷಿಪ್ತ ಮಾಹಿತಿ ಕೊಡುವುದು ಅನುಕೂಲವಾದಿತು.

ಬಹುಮಾಧ್ಯಮ ಸಂಪನ್ಮೂಲಗಳ

  1. ಹಳೆಯ ಪೇಪರ್ ಲೇಖನಗಳು
  2. ಇಂಟರ್ ನೆಟ್ ಮಾಹಿತಿಗಳು
  3. ಟಿ ವಿ ಕಾರ್ಯಕ್ರಮಗಳು

ಪ್ರಸಕ್ತ ಸ್ಥಳೀಯ ಸಂಪರ್ಕಗಳು

  1. ಕೋಳಿ ಕೃಷಿಕರು
  2. ಹೈನುಗಾರಿಕೆ ಮಾಡುವ ಮನೆಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಬದುಕು ಕಲಿಸಿದ ಕೋಳಿ ಸಾಕಾಣೆ - ಕೋಳಿ ಸಾಕಾಣೆಯಲ್ಲಿ ಯಶಸ್ಸು ಪಡೆದವನ ಮಾಹಿತಿ
  2. ಕೋಳಿ, ಮೊಲ, ಹಂದಿ, ಇತ್ಯಾದಿ ಸಾಕಾಣೆ ಬಗ್ಗೆ ಮಾಹಿತಿ ಇರುವ ಚಿತ್ರಗಳು
  3. ಕೋಳಿ ಬಗ್ಗೆ ಸಮಗ್ರ ಮಾಹಿತಿಗೆ ಕ್ಲಿಕ್ ಮಾಡಿ
  4. ದನಕರುಗಳು , ಜಾನುವಾರುಗಳ ಮಾಹಿತಿ, ಅವುಗಳಿಗೆ ಬರುವ ರೋಗಗಳು, ಸಾಕುವ ವಿಧಾನದ ಬಗ್ಗೆ ಮಾಹಿತಿ ಇದೆ
  5. ದನಕರುಗಳ ಚಿತ್ರವಿದೆ, ಸಾಕುವ ಚಿತ್ರವಿದೆ
  6. ದನದ ಬಗ್ಗೆ ಮಾಹಿತಿ ಇದೆ, ಬೇರೆ ಬೇರೆ ದೇಶದಲ್ಲಿ ಸಾಕುವ ರೀತಿಯನ್ನು ತಿಳಿಸಿದ್ದಾರೆ
  7. ದನದ ಚಿತ್ರವಿದೆ
  8. cows
  9. hens

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಹೊರಸಂಚಾರಕ್ಕೆ ದಿನವನ್ನು ನಿಗದಿ ಮಾಡಿ ಯಾವ ಮನೆಗೆ ಹೋಗುತ್ತಿದ್ದಿರಿ ಎಂದು ಆ ಮನೆಯವರಿಗೆ ತಿಳಿಸುವುದು.
  2. ಕೇಳಬೇಕಾದ ಮಾಹಿತಿ, ಪಡೆಯಬೇಕಾದ ಮಾಹಿತಿ ಬಗ್ಗೆ ಪ್ರಶ್ನಾವಳಿಯನ್ನು ಸಿದ್ದ ಮಾಡಿಇಟ್ಟುಕೊಳ್ಳುವುದು.
  3. ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಟ್ಟು ತೆರಳುವುದು.
  4. ಕೋಳಿಸಾಕುವ ವಿಧಾನ , ದನ ಸಾಕುವ ವಿಧಾನದ ಬಗ್ಗೆ ವಿವರ ಕೇಳುವುದು.
  5. ಅದರಿಂದ ಆಗುವ ಲಾಭವನ್ನು ತಿಳಿಯುವುದು.
  6. ಅವುಗಳಿಗೆ ಹಾಕುವ ಆಹಾರದ ಬಗ್ಗೆ ತಿಳಿಯುವುದು.
  7. ತರಗತಿಗೆ ಬಂದ ಮೇಲೆ ವರದಿ ಸಿಧ್ಧಪಡಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಇತ್ತೀಚೆಗೆ ದನಕರುಗಳಿಗೆ ರೋಗಗಳು ಜಾಸ್ತಿಯಾಗಲು ಕಾರಣವೇನಿರಬಹುದು?
  2. ಹಕ್ಕಿ ಜ್ವರ ಎಂದು ಕರೆಯುವ ರೋಗವು ಆಹಾರದಿಂದ ಬರುವುದು ಇರಬಹುದೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಕೋಳಿ ಸಾಕಾಣೆ ಯಾವುದಕ್ಕೆ ಮಾಡುವರು?
  2. ಹೈನುಗಾರಿಕೆಯಿಂದ ಲಾಭಗಳಿಸಬಹುದೇ?ಹೇಗೆ?
  3. ಮಿಶ್ರ ಬೇಸಾಯದಲ್ಲಿ ಇನ್ನಿತರ ಯಾವ ಬೇಸಾಯಗಳಿವೆ?
  4. ನಿಮ್ಮ ಊರಿನಲ್ಲಿ ಮಿಶ್ರ ಬೇಸಾಯ ಯಾವ ರೀತಿ ಇದೆ?

ಪ್ರಶ್ನೆಗಳು

ಅಭ್ಯಾಸದ ಪ್ರಶ್ನೆಗಳನ್ನು ಬರೆಯುವುದು.

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ