ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search
ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ

ಈ ಚಟುವಟಿಕೆಯನ್ನು ಯೂಟೂಬ್‌ನಲ್ಲಿರುವ ಕಣವಿಯವರ ಕಿರುಪರಿಚಯದ ವೀಡಿಯೋ ಸಂಪನ್ಮೂಲ ಬಳಸಿ ಮಾಡಲಾಗುವುದು. ಇಲ್ಲಿ ಮುಶೈಸಂ ಅಲ್ಲದ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಇದರ ಲಿಂಕ್‌ ಅನ್ನು ಮಾತ್ರ ಹಂಚಿಕೆಮಾಡಬಹುದು.

ಕಲಿಕೋದ್ದೇಶಗಳು

 1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಮತ್ತು ಕವಿಯನ್ನು ಪರಿಚಯಿಸಲು ವೀಡಿಯೋ ಸಂಪನ್ಮೂಲದ ಬಳಕೆ
 2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ವೀಡಿಯೋ ಸಂಪನ್ಮೂಲದ ಬಳಕೆ

ವಿಷಯ ಉದ್ದೇಶಗಳು

 1. ಕವಿಯ ವ್ಯಕ್ತಿತ್ವವನ್ನು ತಿಳಿಯುವರು
 2. ಕವಿಯ ಸಾಧನೆಯನ್ನು ಮೆಚ್ಚುವರು
 3. ಕವಿಯ ಸಾಹಿತ್ಯ ಕೊಡುಗೆಗಳನ್ನು ತಿಳಿಯುವರು

ಕೌಶಲ್ಯ ಉದ್ದೇಶಗಳು

 1. ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 2. ವೀಡಿಯೋ ವೀಕ್ಷಣೆಯ ನಂತರ ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
 3. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು

 1. ವೀಡಿಯೋ ವೀಕ್ಷಣೆ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
 2. ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು

ಉದ್ದೇಶಿತ ಸಮಯ

೨೦ ನಿಮಿಷಗಳು ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ

ಶಿಕ್ಷಕರು ಮಕ್ಕಳಿಗೆ ವೀಡಿಯೋ ವೀಕ್ಷಣೆಯನ್ನು ಗಮನಹರಿಸಿ ನೋಡಲು ತಿಳಿಸುವುದು. ವೀಕ್ಷಣೆ ಮತ್ತು ಆಲಿಸುವಿಕೆಯತ್ತ ಗಮನಹರಿಸುವಂತೆ ಮಕ್ಕಳಿಗೆ ತಿಳಿಸುವುದು. ಅಗತ್ಯ ಸಂಪನ್ಮೂಲಗಳು Materials/ Resources needed

ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ

ವೀಡಿಯೋ ಲಿಂಕ್‌, ಪ್ರೊಜೆಕ್ಟರ್‌ ಮತ್ತು ಕಂವಪ್ಯೂಟರ್‌

ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)

ಮೊದಲು ಮಕ್ಕಳಿಗೆ ಗಮನವಿಟ್ಟು ವೀಕ್ಷಿಸಲು ತಿಳಿಸಿ ನಂತರ ಮಕ್ಕಳಿಗೆ ಮನನ ಮಾಡಿಕೊಳ್ಳಲು ಸಮಯನೀಡಿ ನಂತರ ಪ್ರಶ್ನೆಗಳನ್ನು ಕೇಳುವುದು

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

 1. ವಿಶ್ವವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ - ಕವನವನ್ನು ರಚಿಸಿದವರು ಯಾರು ?
 2. ಕಣವಿಯವರ ತಂದೆ ತಾಯಿಯ ಹೆಸರನ್ನು ತಿಳಿಸಿ?
 3. ಕಣವಿಯವರ ಹುಟ್ಟೂರು ಯಾವುದು?