ಚತುರ್ಭುಜಗಳ ಪರಿಚಯ
Jump to navigation
Jump to search
ಈ ಚಟುವಟಿಕೆಯು ಚತುರ್ಭುಜ ಮತ್ತು ಆ ಆಕಾರಕ್ಕೆ ಸಂಬಂಧಿಸಿದ ಅಂಶಗಳ ರಚನೆಯನ್ನು ಅನ್ವೇಷಿಸುತ್ತದೆ.
ಅಂದಾಜು ಸಮಯ
೩೦ ನಿಮಿಷಗಳು
ಕಲಿಕೆಯ ಉದ್ದೇಶಗಳು:
- ಚತುರ್ಭುಜ ಮಾಡಲು
- ಬಾಹುಗಳನ್ನು ಅಳೆಯಿರಿ - ರೇಖಾಖಂಡಗಳ ಉದ್ದಗಳು
- ಆಂತರಿಕ ಕೋನಗಳನ್ನು ಅಳೆಯಿರಿ ಮತ್ತು ಅವುಗಳ ಮೊತ್ತವನ್ನು ಹುಡುಕಿ
- ಕರ್ಣಗಳ ಉದ್ದ ಮತ್ತು ಕರ್ಣಗಳ ನಡುವಿನ ಕೋನವನ್ನು ಅಳೆಯಿರಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು ಮತ್ತು ಶೃಂಗಾಭಿಮುಖ ಕೋನಗಳ ಪೂರ್ವ ಜ್ಞಾನ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಚತುರ್ಭುಜ ಎಂದರೇನು? ಚತುರ್ಭುಜಕ್ಕೆ ಎಷ್ಟು ರೇಖಾಖಂಡಗಳು ಬೇಕಾಗುತ್ತವೆ. ಈ ರೇಖಾಖಂಡಗಳನ್ನು ಏನೆಂದು ಕರೆಯಲಾಗುತ್ತದೆ?
- ಚತುರ್ಭುಜದಲ್ಲಿ ಎಷ್ಟು ಶೃಂಗಗಳು ಮತ್ತು ಎಷ್ಟು ಆಂತರಿಕ ಕೋನಗಳು ಇವೆ?
- ಚತುರ್ಭುಜದಲ್ಲಿ ಅಭಿಮುಖ ಕೋನಗಳನ್ನು ಸೇರುವ ಎಷ್ಟು ರೇಖೆಗಳನ್ನು ಎಳೆಯಬಹುದು? ಈ ರೇಖೆಗಳನ್ನು ಏನೆಂದು ಕರೆಯಲಾಗುತ್ತದೆ?
- ಎರಡು ರೇಖೆಗಳು ಒಂದಕ್ಕೊಂದು ಛೇದಿಸುತ್ತವೆಯೇ? ಛೇದಕ ಬಿಂದುವಿನಲ್ಲಿ ಎಷ್ಟು ಕೋನಗಳು ರೂಪುಗೊಳ್ಳುತ್ತವೆ? ಯಾವುದೇ ಸಮ ಕೋನಗಳನ್ನು ನೀವು ಗಮನಿಸುತ್ತೀರಾ? ಛೇದಕ ಬಿಂದುವಿನಲ್ಲಿ ಯಾವ ರೀತಿಯ ಜೋಡಿ ಕೋನಗಳು ರೂಪುಗೊಳ್ಳುತ್ತವೆ?
- ಕರ್ಣಗಳ ಛೇದಕ ಬಿಂದುವಿನಲ್ಲಿ ಒಟ್ಟು ಕೋನಗಳ ಅಳತೆ ಏಷ್ಟಿರುತ್ತದೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಚತುರ್ಭುಜದ ಶೃಂಗಗಳು ಸಮತಲದಲ್ಲಿ ಎಲ್ಲಿಯಾದರೂ ಇರಬಹುದೇ?
- ಚತುರ್ಭುಜದ ಶೃಂಗಗಳು ಸರಳ ರೇಖೆಯ ಮೇಲೆ ಇರಬಹುದೇ?