ಚತುರ್ಭುಜದ ಪಾರ್ಶ್ವಬಾಹುಗಳ ಮಧ್ಯ ಬಿಂದುಗಳನ್ನು ಸೇರಿಸಿದಾಗ ಸಮಾಂತರ ಚತುರ್ಭುಜವು ಉಂಟಾಗುತ್ತದೆ.
Jump to navigation
Jump to search
ಕಲಿಕೆಯ ಉದ್ದೇಶಗಳು
ಚತುರ್ಭುಜದ ಪಾರ್ಶ್ವಬಾಹುಗಳ ಮಧ್ಯ ಬಿಂದುಗಳನ್ನು ಸೇರಿಸಿದಾಗ ಸಮಾಂತರ ಚತುರ್ಭುಜವು ಉಂಟಾಗುತ್ತದೆ ಎಂದು ಪರಿಶೀಲಿಸುವುದು.
ಅಂದಾಜು ಸಮಯ
4೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪಾರ್ಶ್ವ ಕೋನಗಳು, ಚತುರ್ಭುಜಗಳು, ಸಮಾಂತರ ಚತುರ್ಭುಜದ ಬಗ್ಗೆ ಪೂರ್ವ ಜ್ಞಾನ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಚತುರ್ಭುಜ ABCD ಎಳೆಯಿರಿ
- ಚತುರ್ಭುಜದ ಬಾಹುಗಳಲ್ಲಿ ಮಧ್ಯದ ಬಿಂದುಗಳನ್ನು ಗುರುತಿಸಿ
- P ಎಂಬುದು ಚತುರ್ಭುಜದ AB ಬಾಹುವಿನ ಮಧ್ಯಬಿಂದು, ಅದೇ ರೀತಿ BC, CD ಮತ್ತು DA ಬಾಹುಗಳಿಗೆ Q, R ಮತ್ತು S ಕ್ರಮವಾಗಿ ಮಧ್ಯದ ಬಿಂದುಗಳು
- P, Q, R ಮತ್ತು S ಬಿಂದುಗಳನ್ನು ಸೇರಿಸಿ ಚತುರ್ಭುಜ PQRS ರಚಿಸಿ.
- ನೀವು ಚತುರ್ಭುಜದ ಸತತ ಬಾಹುಗಳ ಮಧ್ಯ-ಬಿಂದುಗಳನ್ನು ಸೇರಿದರೆ, ನೀವು ಯಾವ ಆಕಾರವನ್ನು ಪಡೆಯುತ್ತೀರಿ?
- ಚತುರ್ಭುಜ PQRS ಬಾಹುಗಳನ್ನು ಅಳೆಯಿರಿ? ನಿಮ್ಮ ತೀರ್ಮಾನವೇನು?
- ಚತುರ್ಭುಜಗಳ PQRS ನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ? ನಿಮ್ಮ ತೀರ್ಮಾನವೇನು?
- ಜೋಡಿ ಪಾರ್ಶ್ವ ಕೋನಗಳನ್ನು ಗುರುತಿಸಿ? ನಿಮ್ಮ ತೀರ್ಮಾನವೇನು?
- ಚತುರ್ಭುಜ PQRS ನ ಮಧ್ಯಬಿಂದುಗಳನ್ನು ಸೇರಿಸಿದರೆ, ಯಾವ ರೀತಿಯ ಅಕೃತಿಯು ರೂಪುಗೊಳ್ಳುತ್ತದೆ?
- ಸಮಾಂತರ ಚತುರ್ಭುಜದ ಮುಖ್ಯ ಗುಣಲಕ್ಷಣಗಳು ಯಾವುವು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಸಮಾಂತರ ಚತುರ್ಭುಜದ ಮಧ್ಯಬಿಂದುಗಳನ್ನು ಸೇರಿಸಿದರೆ, ಯಾವ ರೀತಿಯ ಆಕೃತಿ ರೂಪುಗೊಳ್ಳುತ್ತದೆ?