ಚಿಗುರು-೧೪-ಪುರುಷ ಪ್ರಧಾನತೆ, ನನ್ನ ಕಣ್ಣಲ್ಲಿ
ಸಾರಾಂಶ
ಕಿಶೋರಿಯರ ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಕಿಶೊರಿಯರ ಕಲಿಕೆಯನ್ನು ಪ್ರತಿಬಿಂಬಿಸುವಂತೆ world cafe ಮಾದರಿಯ ಚಟುವಟಿಕೆಯ ಮೂಲಕ ಕಿಶೊರಿಯರು ಅವರ ವಯಸ್ಸಿನ ಕಿಶೊರಿಯರು ಎದುರಿಸಬಹುದಾದಂತಹ ಸಮಸ್ಯೆಗಳು ಹಾಗು ಅವರಿಗೆ ಸಿಗಬಹುದಾದಂತಹ ಅವಕಾಶಗಳನ್ನು ಗುಂಪಿನಲ್ಲಿ ಚರ್ಚಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಕಡಮೆ ಮಾಡಲು ಹಾಗು ಅಚಿಗುರುವಕಾಶಗಳನ್ನು ಹೆಚ್ಚಿಸಲು ಇರುವ ದಾರಿಗಳನ್ನು ಚರ್ಚಿಸುತ್ತಾರೆ. ಹಾವು-ಏಣಿ ಆಟದ ಪಟವನ್ನು ಮಾದರಿಯಾಗಿರಿಸಿಕೊಂಡು ಪ್ರತಿ ಪ್ರಶ್ನೆಗೂ ರೂಪಿಸಿದ ಚಾರ್ಟ್‌ಗಳ ಮೂಲಕ ಗುಂಪಿನ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರಿಗೆ ತಮ್ಮ ಯೋಚನಾ ಸರಣಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.
ಊಹೆಗಳು
- ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
- ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ.
- ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
- ಗುಂಪುಗಳನ್ನು ನಿಯಂತ್ರಿಸುವ ಕಿಶೋರಿಯರಿದ್ದಾರೆ, ಅವರು ಬೇರೆ ಕಿಶೋರಿಯನ್ನು ಭಾಗವಹಿಸಲು ಬಿಡುತ್ತಿಲ್ಲ. ಅವರನ್ನು ಗಮನಿಸಬೇಕಿದೆ.
- ನಮ್ಮ ತರಗತಿಯ ಮುಂಚೆ ಇಂಗ್ಲಿಷ್ ತರಗತಿ ಇರುವುದರಿಂದ ಪ್ರತಿಸಲವೂ ೧೦ರಿಂದ ೨೦ ನಿಮಿಷಗಳು ತಡವಾಗುತ್ತದೆ.
- ಹಿಂದಿನ ತರಗತಿಯಲ್ಲಿ ಮಾಡಿದ ಆಡಿಯೋ ಸಂದರ್ಶನಗಳನ್ನು ನಾವು ಅವರಿಗೆ ಕೇಳಿಸದೆ ಇರುವುದರಿಂದ ಅದರ ಬಗ್ಗೆ ಮಾತನಾಡಬೇಕಿದೆ.
ಉದ್ದೇಶ
ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಅವರೇ ಅಭಿವ್ಯಕ್ತ ಪಡಿಸುವಂತೆ ಮಾಡುವುದು. (ಪುರುಷಪ್ರಧಾನತೆ)
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (೧೦ ನಿಮಿಷ)
ಹಿಂದಿನ ವಾರಗಳಲ್ಲಿ ಮಾಡಿರುವ ಆಡಿಯೋ ರೆಕಾರ್ಡಿಂಗ್‌ಗಳನ್ನು ಯಾಕೆ ಕೇಳಿಸುವುದಿಲ್ಲ ಎಂದು ಹೇಳುವುದು. "ನಾವು ಬಿಜಿ ಇದ್ದೆವು, ರೆಕಾರ್ಡ್ ಮಾಡಿದ ಆಡಿಯೋ ತುಂಬಾ ಹೆಚ್ಚಿರುವುದರಿಂದ ಅದನ್ನು ಸಂಕಲನ ಮಾಡಲು ಆಗಿಲ್ಲ" ಎಂದು ಹೇಳುವುದು.
ಕಿಶೋರಿಯರನ್ನು ನಾಲ್ಕು ಗುಂಪುಗಳಾಗಿ ಮಾಡಿಕೊಳ್ಳುವುದು. ಪ್ರತಿ ಗುಂಪಿನಲ್ಲೂ ೬-೭ ಕಿಶೋರಿಯರಿರುತ್ತಾರೆ. (೧೦ ನಿಮಿಷ)
ಒಂದೊಂದು ಗುಂಪುಗಳನ್ನು ಇನ್ನೊಂದು ತರಗತಿಗೆ ಕರೆದುಕೊಂಡು ಹೋಗುತ್ತೇವೆ. ಇಲ್ಲಿ ನಾಲ್ಕು ಕೌಂಟರ್‌ಗಳನ್ನು ಮೊದಲೇ ಜೋಡಿಸಿರುತ್ತೇವೆ. ಈ ಕೌಂಟರ್‌ಗಳಲ್ಲಿ ಹದಿಹರೆಯದ ವಯಸ್ಸಿನ ಹುಡುಗಿಯರ ಜೀವನವನ್ನು ಹಾವು-ಏಣಿ ಆಟ ಎಂದು ಅಂದುಕೊಂಡರೆ, ಅವುಗಳಲ್ಲಿ ಯಾವ ಯಾವ ಥರಹದ ಹವುಗಳು, ಏಣಿಗಳು ಬರಬಹುದು ಹಾಗು ಹಾವುಗಳ ಸಂಖ್ಯೆಯನ್ನು ಕಡಿಮೆ ಹೇಗೆ ಮಾಡಬಹುದು ಮತ್ತು ಏಣಿಯನ್ನು ಜಾಸ್ತಿ ಹೇಗೆ ಮಾಡಬಹುದು ಎಂದು ಕೀಶೊರಿಯರು ಚರ್ಚಿಸುತ್ತಾರೆ. ಪ್ರತಿ ಗುಂಪು ಒದೊಂದಾಗಿ ಎಲ್ಲ ಕೌಂಟರ್‌ಗಳಿಗೂ ಹೋಗಿ ಅಲ್ಲಿ ಪ್ರಸ್ತುತ ಪಡಿಸುವ ಪ್ರಶ್ನೆಯನ್ನು ಚರ್ಚಿಸುತ್ತಾರೆ. ಹಾವು-ಏಣಿಯ ಪಟಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು.
ಹಾವು-ಏಣಿ ಪಟಗಳು ವರ್ಲ್ಡ್ ಕೆಫೆ ಚಟುವಟಿಕೆ
ಕೌಂಟರ್ ೧ರ ಪ್ರಶ್ನೆ - ನಿಮ್ಮ ವಯಸ್ಸಿನ ಹುಡುಗಿಯರ ಜೀವನ ಹಾವು ಏಣಿ ಆಟ ಅಂತ ಅಂದುಕೊಂಡರೆ, ಅದರಲ್ಲಿ ಯಾವ್ಯಾವ ಥರದ ಹಾವುಗಳು ಇವೆ? (ಪ್ರೋಬ್ - ಆಮೇಲೆ, ಹಾವು ಚಿಕ್ಕದಿರಬಹುದು ಅಥವಾ ದೊಡ್ಡದಿರಬಹುದು, ಬೇರೆ ಇನ್ನೇನು ಇಲ್ಲವ? ನಿಮ್ಮ ಜೀವನದ್ದೇ ಅಂತ ಅಲ್ಲ ನೀವು ನೋಡಿರೊ ಯಾವುದಾದ್ರು ಬೇರೆ ಇದ್ರು ಹೇಳಿ)
ಕೌಂಟರ್ ೨ರ ಪ್ರಶ್ನೆ - ನಿಮ್ಮ ವಯಸ್ಸಿನ ಹುಡುಗಿಯರ ಜೀವನ ಹಾವು ಏಣಿ ಆಟ ಅಂತ ಅಂದುಕೊಂಡರೆ, ಅದರಲ್ಲಿ ಯಾವ್ಯಾವ ಥರದ ಏಣಿಗಳು ಇವೆ? (ಪ್ರೋಬ್ - ಆಮೇಲೆ, ಏಣಿ ಚಿಕ್ಕದಿರಬಹುದು ಅಥವಾ ದೊಡ್ಡದಿರಬಹುದು, ಬೇರೆ ಇನ್ನೇನು ಇಲ್ಲವ? ನಿಮ್ಮ ಜೀವನದ್ದೇ ಅಂತ ಅಲ್ಲ ನೀವು ನೋಡಿರೊ ಯಾವುದಾದ್ರು ಬೇರೆ ಇದ್ರು ಹೇಳಿ)
ಕೌಂಟರ್ ೩ರ ಪ್ರಶ್ನೆ - ನಿಮ್ಮ ವಯಸ್ಸಿನ ಹುಡುಗಿಯರ ಜೀವನ ಹಾವು ಏಣಿ ಆಟ ಅಂತ ಅಂದುಕೊಂಡರೆ, ಅದರಲ್ಲಿ ಹಾವುಗಳ ಸಂಖ್ಯೆಯನ್ನು ಕಡಿಮೆ ಹೇಗೆ ಮಾಡಬಹುದು ಅನಿಸುತ್ತೆ? (ಪ್ರೋಬ್ - ಆಮೇಲೆ, ಇನ್ನೇನಾದ್ರು ಮಾಡಬಹುದಾ? ಮನೆಯ ಒಳಗೆ, ಮನೆಯ ಹೊರಗಡೆ, ನಿಮ್ಮ ಜೀವನಕ್ಕೆ ಅಂತ ನೋಡುವುದಾದರೆ ನೀವು ಹೇಗೆ ಹಾವುಗಳನ್ನು ಕಡಿಮೆ ಮಾಡಬಹುದು?)
ಕೌಂಟರ್ ೪ರ ಪ್ರಶ್ನೆ - ನಿಮ್ಮ ವಯಸ್ಸಿನ ಹುಡುಗಿಯರ ಜೀವನ ಹಾವು ಏಣಿ ಆಟ ಅಂತ ಅಂದುಕೊಂಡರೆ, ಅದರಲ್ಲಿ ಏಣಿಗಳ ಸಂಖ್ಯೆಯನ್ನು ಹೇಗೆ ಹೆಚ್ಚು ಮಾಡಬಹುದು ಅನಿಸುತ್ತೆ? (ಪ್ರೋಬ್ - ಆಮೇಲೆ, ಇನ್ನೇನಾದ್ರು ಮಾಡಬಹುದಾ? ಮನೆಯ ಒಳಗೆ, ಮನೆಯ ಹೊರಗಡೆ, ನಿಮ್ಮ ಜೀವನಕ್ಕೆ ಅಂತ ನೋಡುವುದಾದರೆ ನೀವು ಹೇಗೆ ಏಣಿಗಳನ್ನು ಜಾಸ್ತಿ ಮಾಡಬಹುದು? ಸರ್ಕಾರ ಹಾಗು ಬೇರೆ ಬೇರೆ ಸಂಸ್ಥೆಗಳಿಂದ ಸಿಗುವ ಏಣಿಗಳು ಯಾವುದಾದ್ರು ಇದಾವ?) (೪೦ ನಿಮಿಷ)
ಇದಾದ ನಂತರ ಸಮಯಾವಕಾಶವಿದ್ದರೆ, ಕಿಶೋರಿಯರನ್ನು ಅವರ ತರಗತಿಯಲ್ಲಿ ಸೇರಿಸುವುದು. ಎರಡು ಬಣ್ಣದ ಚಾರ್ಟ್‌ಗಳನ್ನು ತೋರಿಸುವುದು. ಒಂದು ಪಿತೃಪ್ರಧಾನ ಸಮಾಜ (ಕಪ್ಪು) ಹಾಗು ಇನ್ನೊಂದು ಪಿತೃಪ್ರಧಾನವಲ್ಲದ ಸಮಾಜವೆಂದು (ಹಸಿರು) ಅವುಗಳನ್ನು ಹೆಸರಿಸಿರುವುದು. ಎರಡು ಬಣ್ಣದ ಸ್ಕೆಚ್‌ಪೆನ್‌ಗಳನ್ನು ನೀಡುತ್ತೇವೆ.
ಈ ಚಾರ್ಟ್‌ಗಳನ್ನು ನೋಡಿ ನಿಮಗೆ ಯಾವ ರೀತಿಯ ಸಮಾಜದಲ್ಲಿ ಇರಬೇಕು ಅನಿಸುತ್ತೆ ಎಂದು ಟಿಕ್/ಗುರುತು ಮಾಡಿ ಎಂದು ಹೇಳುವುದು. ಕಿಶೋರಿಯರುರು ಒಬ್ಬೊಬ್ಬರಾಗಿ ನಿಂತು ಟಿಕ್ ಮಾಡುತ್ತಾರೆ.
ಅವರು ಟಿಕ್ ಮಾಡಿರುವ ಸಮಾಜದ ಚಾರ್ಟ್ ಅನ್ನು ಬಳಸಿಕೊಂಡು ಮಾತುಕಥೆಯನ್ನು ಮುಂದುವರೆಸುವುದು. ಉದಾಹರಣೆಗೆ ಅವರು ಮೊದಲು ಪಿತೃಪ್ರಧಾನವಲ್ಲದ ಸಮಾಜವನ್ನು ಟಿಕ್ ಮಾಡಿದರೆ, ಅದು ಹೇಗಿರಬಹುದು ಎಂದು ಅವರೊಂದಿಗೆ ಮಾತನಾಡುವುದು.
ಪಿತೃಪ್ರಧಾನತೆಯ ಸಮಾಜಕ್ಕೆ ಅವರು ಟಿಕ್ ಮಾಡಿದರೆ, ನೀವು ಈಗಿರುವ ಸಮಾಜದಲ್ಲಿ ಇದ್ದರೆ ಇಲ್ಲಿ ಹಾವುಗಳು ಹೆಚ್ಚಿರುತ್ತವೆ ಹಾಗು ಏಣಿಗಳು ಕಡಿಮೆಯಿರುತ್ತವೆ. ನೀವು ಅಂದುಕೊಂಡಿರುವುದನ್ನು ಸಾಧಿಸಲು ಸಾಧ್ಯವಿಲ್ಲ. ನಿಮಗೆ ಬೇರೆಯ ರೀತಿಯ ಕಲ್ಪನೆಗೆ ಅವಕಾಶವಿದೆಯಾದರೂ ನೀವು ಅದನ್ನು ಕಾಣಲು ಸಾಧ್ಯವಿಲ್ಲ ಎಂದರೆ ಪುರುಷಪ್ರಧಾನತೆ ನಮ್ಮ ಭಾಗವಾಗಿ ಎಷ್ಟರ ಮಟ್ಟಿಗೆ ಇದೆ ಅಂತ ನಾವೇ ಯೋಚನೆ ಮಾಡಬಹುದು. ಎಂದು ಹೇಳುವುದು.
ಗುಂಪಿನ ಚಟುವಟಿಕೆಯ ನಂತರ ಸಮಯಾವಕಾಶ ಇಲ್ಲದಿದ್ದರೆ ಮುಂದಿನ ವಾರಗಳಲ್ಲಿ ಮಾತನಾಡೋಣ ಎಂದು ಹೇಳು ನಮ್ಮ ಮಾತುಕಥೆಯನ್ನು ಮುಗಿಸುವುದು.
ಇಲ್ಲವಾದರೆ ಎರಡೂ ಚಟುವಟಿಕೆಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು. (೨೦ ನಿಮಿಷ)
ಬೇಕಾದ ಸಂಪನ್ಮೂಲಗಳು
• ಕ್ಯಾಮೆರಾ ಹಾಗು ಟ್ರೈಪಾಡ್ - ೧
• ಚಾರ್ಟ್ - ೭
• ಸ್ಕೆಚ್ ಪೆನ್ನುಗಳು - ೨ ಸೆಟ್
• Double sided tape
• A4 ಹಾಳೆಗಳು – ೨೪
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷ
ಇನ್‌ಪುಟ್‌ಗಳು
• ಕಿಶೋರಿಯರಿಗೆ ಹಾವು ಏಣಿ ಆಟದ ಚಾರ್ಟ್‌ಗಳು
• ಪಿತೃಪ್ರಧಾನತೆಯ ಚಾರ್ಟ್‌ಗಳು
ಔಟ್‌ಪುಟ್‌ಗಳು
ಕಿಶೋರಿಯರ ಮಾತುಕಥೆಯ ಟಿಪ್ಪಣಿಗಳು