ಚಿಗುರು ೭ -ಪಿತೃಪ್ರಧಾನ ಸಂದೇಶಗಳು - ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.

ಊಹೆಗಳು

  1. ಹಿಂದಿನ ವಾರ ಆಶುಭಾಷಣ ಸ್ಪರ್ಧೆ ಇದ್ದಿದ್ದರಿಂದ ನಮ್ಮ ಮಾಡ್ಯೂಲ್‌ ಅನ್ನು ಮುಂದೂಡಿದ್ದೆವು.
  2. ಹಿಂದಿನ ದಿನ ಕ್ರೀಡೋತ್ಸವ ಇರುವುದರಿಂದ ಕಿಶೋರಿಯರು ಸುಸ್ತಾಗಿರುವ ಸಂಭವವಿದೆ.
  3. ನಮ್ಮ ಮಾಡ್ಯೂಲಿನಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಅವರ ಶಿಕ್ಷಕರು ಪ್ರಶ್ನಿಸಿದರೆ ಉತ್ತರಿಸಬೇಕಾಗುತ್ತದೆಂದು, ಕಿಶೋರಿಯರು ಮಾತುಕತೆಗಳಲ್ಲಿ ಭಾಗವಹಿಸಲು ಹಿಂಜರಿಯಬಹುದು. ನಮ್ಮ ಚಟುವಟಿಕೆಗಳು ಭಾಗೀದಾರಿ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುವುದರಿಂದ, ಈ ಹಿಂಜರಿಕೆಯು ನಮ್ಮ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು.
  4. ಸೋಮವಾರ ಗೈರು ಹಾಜರಾಗಿದ್ದ ಕಿಶೋರಿಯರಿಗೆ ಬ್ರಿಟಿಷ್‌ ಏಷಿಯನ್‌ ಟ್ರಸ್ಟ್‌ನ ಬಗ್ಗೆ ಮಾತನಾಡುವಾಗ ಏನೂ ಗೊತ್ತಾಗದೆ ಇರಬಹುದು.
  5. ಇದು ಹೆಚ್ಚು ಉತ್ಸಾಹಕಾರಿ ಚಟುವಟಿಕೆಯಾದ್ದರಿಂದ ಗಲಾಟೆ ಹೆಚ್ಚಿರಬಹುದು.
  6. ಮನೆಯಲ್ಲಿ ಟಿ.ವಿ ಇಲ್ಲದೆ ಇರುವುದರಿಂದ ಕೆಲವರು ಜಾಹೀರಾತುಗಳನ್ನು ನೋಡಿರದೆ ಇರಬಹುದು.
  7. ಮುಂಚೆಯೇ ಗುಂಪುಗಳನ್ನು ಮಾಡಿಕೊಂಡು ಹೋಗುವುದು ಉತ್ತಮ. ಇದರಿಂದ ಭಾಷಾವಾರು ಅಥವಾ ಇನ್ನಾವುದೋ ಅಂಶದ ಗುಂಪುಗಳನ್ನು ಒಂದೆಡೆ ಸೇರಿಸಬಹುದು.
  8. ಗಲಾಟೆ ಜಾಸ್ತಿ ಇದ್ದರೆ ಪಕ್ಕದ ತರಗತಿಗಳಿಗೆ ತೊಂದರೆಯಾಗಬಹುದು.
  9. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ.
  10. ಸೂಕ್ಷ್ಮ ವಿಚಾರಗಳನ್ನೂ ಸಹ ಅವರೊಡನೆ ಮಾತನಾಡಬಹುದು.

ಉದ್ದೇಶ

  1. ಪಿತೃಪ್ರಧಾನತೆಯ ಕುರಿತ ಮಾತುಕತೆಯನ್ನು - ದೇಹದ ಚಿತ್ರಣದ ಬಗೆಗಿನ ಸರಳ ಚಟುವಟಿಕೆಗಳ ಮೂಲಕ ಪ್ರಾರಂಭಿಸುವುದು.
  2. ದೇಹದ ಚಿತ್ರಣ (ಬಾಡಿ ಇಮೇಜ್‌), ಸಂಸ್ಕೃತಿಯ ಪ್ರಭಾವ ಹಾಗೂ ಮಾರುಕಟ್ಟೆಯ ಶಕ್ತಿಗಳು, ಮಾಧ್ಯಮಗಳ ಬಗ್ಗೆ ವಿಚಾರ ಮಾಡುವುದು.

ಪ್ರಕ್ರಿಯೆ

  • ಕಟ್ಟುಪಾಡುಗಳನ್ನು ನೆನಪಿಸಿವುದು. ೧೦ ನಿಮಿಷಗಳು
  • ಎರಡು ಗುಂಪುಗಳನ್ನು ಮಾಡಿಕೊಳ್ಳುವುದು. ಈ ಗುಂಪುಗಳಲ್ಲಿ ಈ ಕೆಳಗಿನ ಪ್ರಶ್ನೆಯ ಮೂಲಕ ಬಾಡಿ ಇಮೇಜ್‌ನ ಬಗೆಗಿನ ಚರ್ಚೆಯನ್ನು ಪ್ರಾರಂಭಿಸುವುದು - “ ನಿಮಗೆ ದೇವರು ವರ ಕೊಟ್ಟು, ನಿಮ್ಮ ದೇಹದಲ್ಲಿನ ಯಾವುದಾದರೂ ಮೂರು ಅಂಶ/ಅಂಗಗಳನ್ನು ಬದಲಾಯಿಸಿಕೊಳ್ಳಬಹುದು ಅಂದರೆ, ಏನೇನನ್ನು ಬದಲಾಯಿಸಿಕೊಳ್ಳುತ್ತೀರ?”

ಕಿಶೋರಿಯರು ಹೇಳಿದ್ದನ್ನು ಬರೆದುಕೊಳ್ಳುವುದು. ಈ ಚಟುವಟಿಕೆಗೆ ಮಹಿಳಾ ಫೆಸಿಲಿಟೇಟರ್‌ಗಳಿರುವುದು ಅವಶ್ಯಕ.

  • ಈ ಚಟುವಟಿಕೆಯ ಸಮಯದಲ್ಲಿಯೇ ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌, ಸ್ಪೀಕರ್‌ಗಳನ್ನು ಜೋಡಿಸಿಟ್ಟುಕೊಂಡಿರುವುದು. ೨೫ ನಿಮಿಷಗಳು
  • ಗುಂಪಿನ ಚಟುವಟಿಕೆಯ ನಂತರ ತರಗತಿಯಲ್ಲಿ ಮಾತುಕತೆಯು ಮುಂದುವರೆಯುತ್ತದೆ.
  • ಬೇರೆ ಬೇರೆ ಕಾಲದ ನಟಿಯರ ಚಿತ್ರಗಳ ಗುಂಪುಗಳನ್ನು ಕಿಶೋರಿಯರ ಮುಂದೆ ಪ್ರಸ್ತುತ ಪಡಿಸುತ್ತೇವೆ.
  • ಕಿಶೋರಿಯರಿಗೆ ನಟಿಯರ ಬಣ್ಣ, ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಸಾಮ್ಯತೆಯ ಬಗ್ಗೆ ಮಾತನಾಡಲು ಹೇಳುವುದು.
  • ಇದಾದ ನಂತರ ಇವುಗಳ ಬಗ್ಗೆ ಏನನ್ನಿಸಿತು ಎಂದು ಕೇಳುವುದು. ೧೦ ನಿಮಿಷಗಳು
  • ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ
    • ಶ್ಯಾಂಪೂ
      • ಕೂದಲಿನ ಸ್ಟ್ರೇಟನರ್‌
      • ಮುಖದ ಕ್ರೀಮ್‌
      • ಕಾಜಲ್‌
      • ಲಿಪ್‌ ಸ್ಟಿಕ್‌
      • ಲಿಪ್‌ ಬಾಮ್‌
      • ಮೊಯಶ್ಚರೈಜರ್‌
      • ಪರ್‌ಫ್ಯೂಮ್‌ ಪೌಡರ್‌
      • ನೇಲ್‌ ಪೇಂಟ್‌
      • ಸ್ಯಾಂಡಲ್ಸ್‌
      • ತೂಕ ಕಮ್ಮಿ ಮಾಡಿಕೊಳ್ಳಲು ಬಳಸುವ ಮಾತ್ರೆ
      • ಹೇರ್ ರಿಮೂವಲ್‌ ರೇಜರ್‌
  • ಪ್ರತಿ ಜಾಹೀರಾತನ್ನು ತೋರಿಸಿದ ನಂತರ ಆ ಜಾಹೀರಾತನ ವಿಷಯದ ಬಗ್ಗೆ, ಅದರಲ್ಲಿರುವ ವ್ಯಕ್ತಿಗಳ ಬಣ್ಣ, ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಬಗ್ಗೆ ಕೇಳುವುದು.
  • ಕೊನೆಯ ಜಾಹೀರಾತನ್ನು ತೋರಿಸುವಷ್ಟೊತ್ತಿಗೆ ಕಿಶೋರಿಯರೇ ಎಲ್ಲವನ್ನು ಗುರುತಿಸುವಂತರಬೇಕು.
  • ಅವರು ಹೇಳುವ ಅಂಶಗಳನ್ನು ಬರೆದುಕೊಳ್ಳುವುದು. ೨೫ ನಿಮಿಷಗಳು
  • ಈ ಜಾಹೀರಾತುಗಳು ಪುರುಷರಿಗಾಗಿ ಇದ್ದರೆ ಯಾವ ಥರ ಇರುತ್ತಿದ್ದವು ಎಂದು ಕೇಳುವುದು.
  • ಕೊನೆಯಲ್ಲಿ, ಈ ಜಾಹೀರಾತುಗಳು ಏನು ಹೇಳುತ್ತಿವೆ ಹಾಗು ಚಿತ್ರನಟಿಯರು ಏನು ಹೇಳತ್ತಿದ್ದಾರೆ? ಎನ್ನುವುದನ್ನು ಮುಂದಿನ ವಾರಗಳಲ್ಲಿ ಚರ್ಚಿಸೋಣ. ಮನೆಯಲ್ಲಿ ಟ.ವಿ. ನೋಡುವಾಗ ಬರುವ ಜಾಹೀರಾತುಗಳು, ಧಾರಾವಾಹಿಗಳು ಮತ್ತು ಟಿಕ್‌-ಟಾಕ್‌ ವೀಡಿಯೋಗಳನ್ನು ಗಮನಿಸಿ, ಅವುಗಳಲ್ಲಿ ಯಾವ ಥರಹದ ವ್ಯಕ್ತಿಗಳು ಇರತ್ತಾರೆಂದು ಗಮನಿಸಲು ಹೇಳುವುದು. ೧೦ ನಿಮಿಷಗಳು

ಬೇಕಾದ ಸಂಪನ್ಮೂಲಗಳು

  • ಆಫೀಸ್‌ ಸೂಟ್‌ ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌ ೧
  • ಪ್ರೊಜೆಕ್ಟರ್‌- ೧
  • ಸ್ಪೀಕರ್‌ -೧
  • ಮುಂಚೆಯೇ ಗುರುತಿಸಿಕೊಂಡ ಜಾಹೀರಾತುಗಳ ತುಣುಕುಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೮೦ ನಿಮಿಷಗಳು

ಇನ್‌ಪುಟ್‌ಗಳು

  • ನಟಿಯರ ಚಿತ್ರಗಳಿರುವ ಪ್ರಸ್ತುತಿ.
  • ಜಾಹೀರಾತುಗಳ ವಿಡಿಯೋ ತುಣುಕುಗಳು

ಔಟ್‌ಪುಟ್‌ಗಳು

  • ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ