ಚಿಗುರು -೭-ನನ್ನ ಸವಾಲು, ನಮ್ಮ ಸವಾಲೇ ಭಾಗ -೪

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search

ಸಾರಾಂಶ

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು.  ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರಿಗೆ ಇರುವ ಸಮಸ್ಯೆ/ಕಾಳಜಿಗಳನ್ನು ಪಟ್ಟಿ ಮಾಡಿದ್ದಾರೆ,  ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡಿವೆ. ಈ ವಾರ ಅವರು ಈ ಕಾಳಜಿಗಳು ಕೇವಲ ತಮ್ಮದೊಂದೇ ಅಲ್ಲ ಆದರೆ ಎಲ್ಲರೂ ಅದೇ ತರಹದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ.

ಊಹೆಗಳು

• ಕಿಶೋರಿಯರಲ್ಲಿ ತುಂಬಾ ಜನ (ಸುಮಾರು೨೦) ಗೈರು ಹಾಜರಿಯಾಗಿರುತ್ತಾರೆ.

• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ

• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ

• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ

• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ

• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆ ಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ

• ಇಲ್ಲಿ ಹೆಚ್ಚಿನ ಸೆಷನ್ ಗಳನ್ನು ಒಬ್ಬ ಫೆಸಿಲಿಟೇಟರ್‌ ಮಾತ್ರ ಫೆಸಿಲಿಟೇಟ್ ಮಾಡಿದ್ದಾರೆ, ಮುಂದಿನ ವಾರಗಳಲ್ಲಿ ಇದನ್ನು ಬದಲಾಯಿಸಬೇಕಿದೆ.

• ಹಿಂದಿನ ಸೆಷನ್ನಲ್ಲಿ ಅವರು ಹೇಳಿರುವ ಅಂಶಗಳಲ್ಲಿ ಹಲವಾರು ಸಾಮಾನ್ಯ ಅಂಶಗಳಿವೆ

• ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ

ಉದ್ದೇಶ

ಮನೆ, ಮನೆಯಿಂದ ಶಾಲೆಗೆ ಹೋಗುವ ದಾರಿ ಮತ್ತು ಶಾಲೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಮತ್ತು ಕಾಳಜಿಗಳು ನನ್ನೊಬ್ಬಳದೇ ಅಲ್ಲ, ನಮ್ಮೆಲ್ಲರದ್ದೂ ಎಂದು ಅರಿವು ಮೂಡಿಸುವುದು .

ಪ್ರಕ್ರಿಯೆ

ಕಿಶೋರಿಯರಿಗೆ ಶುಭ ಮಧ್ಯಾಹ್ನ ಎನ್ನುವ ಮೂಲಕ ನಮ್ಮ ಮಾತುಕಥೆಯನ್ನು ಆರಂಭಿಸುತ್ತೇವೆ.

ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುತ್ತೇವೆ.

ಕಿಶೋರಿಯರು ಹೆಚ್ಚು ಗಲಾಟೆ ಮಾಡುವುದರಿಂದ ಅವರನ್ನು ಹದ್ದುಬಸ್ತಿನಲ್ಲಿ ಇಡಬೇಕಿದೆ.

ಕಳೆದ ಭೇಟಿಯಲ್ಲಿ ನಾವು ಚರ್ಚಿಸಿದ ವಿಷಯದ ಮರುಕಳಿಕೆ (ನಾವೇ ಹೇಳುತ್ತಾ ಆರಂಭಿಸುವುದು). (೧೫ ನಿಮಿಷ)

ಕಳೆದ ವಾರದಲ್ಲಿ ನಾವು ತಯಾರಿಸಿದ ಚಾರ್ಟ್‌ಶೀಟ್‌ಗಳನ್ನು ಕಪ್ಪು ಹಲಗೆಯ ಮೇಲೆ ಅಂಟಿಸುವುದು ಹಾಗು ಆಯಾ ಗುಂಪಿಗೆ ಸಂಬಂಧಿಸಿದ ಉತ್ತರಗಳನ್ನು ಅದಲು ಬದಲಾಗಿ ಅಂಟಿಸುವುದು (A4 ಹಾಳೆ).  

ಪ್ರತಿ ಹಾಳೆಯಲ್ಲಿರುವ ಸಾಮಾನ್ಯ ಅಂಶಗಳ ಕೆಳಗೆ ಗುರುತು ಹಾಕುವುದರ ಮೂಲಕ ಇಬ್ಬರು ಫೆಸಿಲಿಟೇಟರ್‌ಗಳು (ಅಪರ್ಣ ಹಾಗು ಅನುಷಾ) ಅವುಗಳನ್ನು ಗುರುತಿಸುತ್ತಾರೆ ಹಾಗೂ ಅವುಗಳನ್ನು ಓದಿ ಹೇಳುತ್ತಾರೆ.

"ಈ ನಾಲ್ಕು ಚಾರ್ಟ್‌ಗಳನ್ನು ನೋಡಿದ್ರೆ ನಿಮಗೆ ಏನು ಅನ್ನಿಸುತ್ತೆ?” (ಸುರುಳಿಯನ್ನು ಕುರಿತು - ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೀರ, ಸುರುಳಿಗಳು ಬೇರೆ ಬೇರೆ ಆಕಾರಗಳಲ್ಲಿ ಇವೆ) ಎಂದು ಕಿಶೋರಿಯರನ್ನು ಕೇಳುವುದು.

ಕೆಲವು ಸಂದರ್ಭಗಳಲ್ಲಿ ಸುರುಳಿಯಲ್ಲಿ ಒಂದು ಬಣ್ಣದ ಹಣೆಬೊಟ್ಟುಗಳು ಜಾಸ್ತಿ ಇರಬಹುದು

"ನಿಮ್ಮ ಗೆಳತಿಯೊಂದಿಗೆ ನೀವು ಮಾತಾಡಿದ, ಹಣೆಬೊಟ್ಟು ಇಟ್ಟ, ಇಲ್ಲಿರುವ ಸುರುಳಿಗಳನ್ನು ನೋಡಿರುವ ಆಧಾರದ ಮೇಲೆ ನಿಮಗೆ ಏನು ಅನಿಸುತ್ತಿದೆ ? “ ಎಂದು ಕೇಳಬಹುದು.

ಅವರು ಏನೂ ಹೇಳದಿದ್ದರೆ ನಾವು ಮುಂದುವರಿದು -”ಎಲ್ಲರಿಗೂ ಒಂದೇ ಥರದ ಸಮಸ್ಯೆಗಳು ಇರುತ್ತೆ ಅಂತ ಅನಿಸುತ್ತಿದೆ, ಅದರ ಪ್ರಮಾಣ/ಡಿಗ್ರಿ ಬೇರೆ ಬೇರೆ ಇರಬಹುದು. ಅವುಗಳ ರೀತಿ ಬೇರೆ ಬೇರೆ ಇರಬಹುದು. ಎಲ್ಲರಿಗೂ ಒಂದೇ ಥರದ ಸಮಸ್ಯೆ ಇರುತ್ತೆ ಅಂತ ನಮಗೆ ಅನಿಸುತ್ತಿದೆ, ನಿಮಗೂ ಅನಿಸುತ್ತಿದೆಯೇ? “ಎಂದು ಕಿಶೋರಿಯರನ್ನು ಕೇಳುವುದು. (೨೫ ನಿಮಿಷ)

"ಸಮಸ್ಯೆ ನಮ್ಮೊಬ್ಬರಿಗೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸಮಸ್ಯೆಗಳು ಇರುತ್ತವೆ. “ ಎಂದು ಕಿಶೋರಿಯರು ಹೇಳಬಹುದು.

"ಇವುಗಳ ಬಗ್ಗೆ ನಾವೆಲ್ಲ ಏನು ಮಾಡಬಹುದು ಎಂದು ಮುಂದಿನ ವಾರದಿಂದ ಮಾತಾಡಿಕೊಂಡು ಹೋಗೋಣ" ಎಂದು ಮಾತುಕತೆಯನ್ನು ಮುಗಿಸುವುದು. (೧೦ ನಿಮಿಷ)

ಬೇಕಾಗಿರುವ ಸಂಪನ್ಮೂಲಗಳು

• ಕಿಶೋರಿಯರು ಮಾಡಿರುವ ಸುರುಳಿಗಳ ಚಾರ್ಟ್‌

• ಗುಂಪು ಚರ್ಚೆಯಲ್ಲಿ ಬರೆದಿರುವ ಹಾಳೆಗಳು

• double sided tape

• ಸ್ಕೆಚ್‌ ಪೆನ್‌

• ಕತ್ತರಿ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು -  ೩

ಒಟ್ಟು ಸಮಯ

೫೦ ನುಮಿಷಗಳು

ಇನ್‌ಪುಟ್‌ಗಳು

• ಸುರುಳಿ ಬರೆದ ಚಾರ್ಟ್‌ಗಳು

ಔಟ್‌ಪುಟ್‌ಗಳು