ಚುಲುಬುಲುವಿನ ಬಾಲ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ತುಂಟ ಅಳಿಲಿಗೆ ತನ್ನ ಬಾಲ ಇಷ್ಟವಾಗುವುದಿಲ್ಲ. ಹಾಗಾದರೆ, ಇತರರ ಬಾಲ ಅಂಟಿಸಿಕೊಂಡರೆ ಸಮಸ್ಯೆ ಬಗೆಹರಿಯುವುದೆ? ಈ ತುಂಟ ಚುಲುಬುಲುವಿನ ಮುದ್ದಾದ ಕಥೆಯನ್ನು ಓದಿರಿ.
ಉದ್ದೇಶಗಳು :
ಕಥೆಯ ಮೂಲಕ ಹೊಸ ಪದಗಳ ಪರಿಚಯ, ಸರಳ ವಾಕ್ಯಗಳ ರಚನೆ ಮತ್ತು ಪರಸ್ಪರ ಸಹಾಯ ಮಾಡಬೇಕೆಂಬ ನೀತಿಯನ್ನ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು :ದುರಾಸೆ,ಶಬ್ದಕೋಶ,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Aame%20Mattu%20Mola.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ (TPR Activity)
• ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ "ಲಡ್ಡು ಲಡ್ಡು ತಿಮ್ಮಣ್ಣ' ಎಂದು ಒಂದು ಮಗು ಸುತ್ತುವುದು. ನಂತರ ಒಂದು ಮಗುವಿನ ಹಿಂದೆ ಹಾಕಿ ಓಡುವುದು. ಹೀಗೆ ಮುಂದುವರಿಸುವುದು….
• ವಿವಿಧ ಪ್ರಾಣಿಗಳ ಹೆಸರಿನಿಂದ ಕರೆಯುವುದು.
ಆಲಿಸುವ ಪೂರ್ವ ಚಟುವಟಿಕೆ
• ನಮ್ಮ ಶಾಲಾ ಆವರಣದಲ್ಲಿ ಏನೇನಿದೆ?
• ಮರದಲ್ಲಿ ವಾಸಿಸುವ ಪಕ್ಷಿ/ಪ್ರಾಣಿಗಳು ಯಾವುವು?
• ಮರ ಹತ್ತುವ ಪ್ರಾಣಿಗಳು ಯಾವುವು?
• ನಾವು ಹೇಗೆಲ್ಲಾ ಅಲಂಕಾರ ಮಾಡಿಕೊಳ್ಳಬೇಕೆಂದು ಬಯಸುತ್ತೇವೆ?
ಆಲಿಸುವ ಸಮಯದ ಚಟುವಟಿಕೆ
• ಅಯ್ಯೋ! ಇದೂ ಒಂದು ಬಾಲಾನಾ? ಎನಿಸಲು ಕಾರಣವೇನು.
• ಅಳಿಲು ಆಸ್ಪತ್ರೆಗೆ ಬೇಟಿ ನೀಡಲು ಕಾರಣವೇನು?
• ಅಳಿಲು ಮರ ಏರಲು ಪುನಃ ಪುನಃ ಪ್ರಯತ್ನಿಸುತ್ತಲೇ ಇದ್ದಿದ್ದರೆ ಏನಾಗುತ್ತಿತ್ತು.
• ನಾಯಿ ಬೆನ್ನಟ್ಟಿದಾಗ ಅಳಿಲು ಮರವೇರದೇ ಡಾಕ್ಟರ್ ಬಳಿಗೆ ಹೋಗಲು ಕಾರಣವೇನು?
ಆಲಿಸಿದ ನಂತರದ ಚಟುವಟಿಕೆ
• ಕಥೆಯಲ್ಲಿ ಬಂದಂತಹ ಪಾತ್ರಗಳನ್ನು ಪಟ್ಟಿಮಾಡಿ.
• ಈ ಕಥೆಯಿಂದ ತಿಳಿದುಕೊಳ್ಳಬಹುದಾದ ಅಂಶಗಳೇನು?
• ಇನ್ನೊಬ್ಬರನ್ನು ಅನುಕರಣೆ ಮಾಡುವುದರಿಂದ ಆಗುವ ಅನಾನುಕೂಲ ಅಥವಾ ದುಷ್ಪರಿಣಾಮಗಳೇನು?
• ನೀನೂ ಅಳಿಲಾಗಿದಿದ್ದರೆ ಏನು ಮಾಡುತ್ತಿದ್ದೆ?
• ವಿವಿಧ ರೀತಿಯ ಪ್ರಾಣಿಗಳೂ ಹಾಗೂ ಅದರ ಬಾಲಗಳನ್ನು ಜೋಡಿಸುವ ಚಟುವಟಿಕೆ ನೀಡುವುದು.