ಜ್ಯಾದಿಂದ ರೂಪುಗೊಂಡಿರುವ ವೃತ್ತದಲ್ಲಿನ ಕೋನಗಳು
Jump to navigation
Jump to search
ಜ್ಯಾ ದ ಕೊನೆಯ ಬಿಂದುಗಳಲ್ಲಿ ತ್ರಿಜ್ಯದಿಂದ ವೃತ್ತದ ಕೇಂದ್ರದಲ್ಲಿ ಉಂಟಾದ ಕೋನವನ್ನು ಕೇಂದ್ರ ಕೋನ ಅಥವಾ ಜ್ಯಾದಿಂದ ರೂಪುಗೊಂಡಿರುವ ವೃತ್ತದಲ್ಲಿನ ಕೋನಗಳು ಎಂದು ಕರೆಯಲಾಗುತ್ತದೆ.
ಕಲಿಕೆಯ ಉದ್ದೇಶಗಳು :
ವೃತ್ತದಲ್ಲಿನ ಜ್ಯಾದಿಂದ ಉಂಟಾಗಿರುವ ವಿವಿಧ ಕೋನಗಳನ್ನು ಅರ್ಥಮಾಡಿಕೊಳ್ಳಿವುದು.
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ(ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರ/ತಂತಿಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ಕೋನಗಳು, ಬಹುಭುಜಾಕೃತಿಗಳ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಎರಡು ಸಮಾನ ಜ್ಯಾಗಳನ್ನು ಎಳೆಯಲಾಗಿದೆ, ತ್ರಿಭುಜಗಳನ್ನು ರೂಪಿಸಲು ಅಂತ್ಯದ ಬಿಂದುಗಳನ್ನು ವೃತ್ತಕೇಂದ್ರಬಿಂದುವಿಗೆ ಸೇರಿಸಲಾಗುತ್ತದೆ.
- ಎರಡು ಜ್ಯಾಗಳಿಂದ ಉಂಟಾದ ಕೋನಗಳ ಬಗ್ಗೆ ನೀವು ಏನು ಹೇಳಬಹುದು? ಎರಡು ಉಂಟಾದ ಕೋನಗಳು ಹೇಗೆ ಸಮಾನವಾಗಿವೆ. ರೂಪುಗೊಂಡ ತ್ರಿಭುಜಗಳನ್ನು ಹೋಲಿಕೆ ಮಾಡಿ.
- ಉಂಟಾದ ಕೋನವು ಯಾವಾಗ ದೊಡ್ಡದಾಗಿರುತ್ತದೆ?
- ಕೋನಗಳು ಸಮವಾಗಿದ್ದರೆ ಜ್ಯಾಗಳ ಅಳತೆ ಸಮಾನವಾಗಿರುತ್ತವೆಯೇ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ವೃತ್ತವನ್ನು ಎಳೆಯಿರಿ, ವೃತ್ತಕೇಂದ್ರದಲ್ಲಿ ಸಮಾನ ಅಳತೆಯ ಎರಡು ಕೋನಗಳನ್ನು ಎಳೆಯಿರಿ. ಕೋನಗಳಿಂದ ರೂಪುಗೊಂಡ ಜ್ಯಾಗಳನ್ನು ಗುರುತಿಸಿ. ಎರಡು ಜ್ಯಾಗಳ ಉದ್ದವನ್ನು ಅಳೆಯಿರಿ. ನಿಮ್ಮ ಅವಲೋಕನಗಳನ್ನು ಬರೆಯಿರಿ.