ಜ್ಯಾ ಗಳ ಪರಿಚಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಜ್ಯಾ ವು ವೃತ್ತದಲ್ಲಿ ಎರಡು ವಿಭಿನ್ನ ಬಿಂದುಗಳನ್ನು ಸೇರುವ ಮಧ್ಯಂತರವಾಗಿದೆ. ಈ ಚಟುವಟಿಕೆಯು ಜ್ಯಾದ ರಚನೆಯನ್ನು ತನಿಖೆ ಮಾಡುತ್ತದೆ ಮತ್ತು ವೃತ್ತದ ವ್ಯಾಸದೊಂದಿಗೆ ಹೋಲಿಸುತ್ತದೆ.

ಕಲಿಕೆಯ ಉದ್ದೇಶಗಳು :

ಜ್ಯಾಗಳನ್ನು ವೃತ್ತದ ಅಂಶಗಳಾಗಿ ಅರ್ಥಮಾಡಿಕೊಳ್ಳಿ

ಅಂದಾಜು ಸಮಯ:

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ಕಾರ್ಯಪ್ರತಿ(ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ಬಿಂದುಗಳು, ರೇಖೆಗಳು, ಕೋನಗಳು, ಬಹುಭುಜಾಕೃತಿಗಳ ಪೂರ್ವ ಜ್ಞಾನ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಕರತ-ನಿರತ ಕೆಲಸ:

  1. ದಾರ / ತಂತಿಯೊದಿಗೆ ವೃತ್ತವನ್ನು ಮಾಡಲು ವಿದ್ಯಾರ್ಥಿಗಳನ್ನು ಕೇಳಿ. ಕಾಗದದ ಮೇಲೆ ಅಂಟಿಸಿ. ಕೇಂದ್ರವನ್ನು ಗುರುತಿಸಬೇಕು.
  2. ವೃತ್ತದ ಪರಿಧಿಯ ಮೇಲೆ ಬಿಂದುಗಳನ್ನು ಗುರುತಿಸಿ ಮತ್ತು ಜ್ಯಾ ದ ಉದ್ದವನ್ನು ಅಳೆಯಿರಿ.
  3. ಉದ್ದವಾದ ಜ್ಯಾದ ಉದ್ದವನ್ನು ಅಳೆಯಿರಿ. ಉದ್ದವಾದ ಜ್ಯಾದ ವಿಶೇಷತೆ ಏನು? (ಇದು ಕೇಂದ್ರದ ಮೂಲಕ ಹಾದುಹೋಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಲು ಸಾಧ್ಯವಾಗುತ್ತದೆಯೇ?)

ಜಿಯೋಜಿಬ್ರಾ ಕಡತ ಬಳಸಿ: ಜ್ಯಾಗಳ ಪರಿಚಯ

  1. ವೃತ್ತದ ಪರಿಧಿಯ ಮೇಲೆ ಯಾವುದೇ ಎರಡು ಬಿಂದುಗಳನ್ನು ಗುರುತಿಸಿ, ಎರಡು ಬಿಂದುಗಳನ್ನು ಸೇರಿಸಿ. ಈ ರೇಖೆ ಏನು?
  2. ಜ್ಯಾವನ್ನು ಸ್ಥಾಪಿಸಿ.
  3. ಜ್ಯಾದ ಉದ್ದವು ಹೇಗೆ ಬದಲಾಗುತ್ತದೆ ಎಂಬುದನ್ನು ತೋರಿಸಲು ಜಾರುಕವನ್ನು ಸರಿಸಿ. ಬದಲಾಗುತ್ತಿರುವ ಜ್ಯಾದ ಉದ್ದಗಳನ್ನು ಮತ್ತು ಜ್ಯಾದ ಉದ್ದವು ಗರಿಷ್ಠವಾಗಿದ್ದಾಗ ವಿದ್ಯಾರ್ಥಿಗಳನ್ನು ವೀಕ್ಷಿಸಲು ಕೇಳಿ. ಜ್ಯಾದ ಉದ್ದವನ್ನು ವ್ಯಾಸದೊಂದಿಗೆ ಹೋಲಿಕೆ ಮಾಡಿ.
  4. ಜ್ಯಾದಿಂದ ವೃತ್ತವನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ? ಈ ಎರಡು ಭಾಗಗಳ ಬಗ್ಗೆ ನೀವು ಏನು ಗಮನಿಸುತ್ತೀರಿ?
  5. ವೃತ್ತಖಂಡಗಳನ್ನು ಸ್ಥಾಪಿಸಿ. ವೃತ್ತದಲ್ಲಿನ ಎರಡು ವೃತ್ತಖಂಡಗಳು ಯಾವಾಗ ಸಮಾನವಾಗಿರುತ್ತದೆ?
  6. ವಿಭಿನ್ನ ತ್ರಿಜ್ಯ ಹೊಂದಿರುವ ವೃತ್ತಗಳಿಗೆ ಜ್ಯಾದ ಉದ್ದವನ್ನು ಗಮನಿಸಿ
ವೃತ್ತ ವ್ಯಾಸ ಜ್ಯಾ ಜ್ಯಾದ ಅಳತೆ
1 1
2
3
4