ಜ್ಯಾ ದ ಲಂಬಾರ್ಧಕವು ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ
Jump to navigation
Jump to search
ಪ್ರತಿಯೊಂದು ಲಂಬಾರ್ಧಕವು ಕೇಂದ್ರದ ಮೂಲಕ ಹಾದುಹೋಗುವುದರಿಂದ, ಕೇಂದ್ರವು ಪ್ರತಿಯೊಂದರ ಮೇಲೆಯೂ ಇರಬೇಕು, ಆದ್ದರಿಂದ ಕೇಂದ್ರವು ಅವುಗಳ ಏಕೈಕ ಸಾಮಾನ್ಯ ಬಿಂದುವಾಗಿರಬೇಕು.
ಕಲಿಕೆಯ ಉದ್ದೇಶಗಳು :
- ವೃತ್ತ ಮತ್ತು ಜ್ಯಾ ದ ಅರ್ಥ.
- ಜ್ಯಾ ಗೆ ವೃತ್ತದ ಕೇಂದ್ರದಿಂದ ಲಂಬ ದೂರವನ್ನು ಅಳೆಯುವ ವಿಧಾನ.
- ಜ್ಯಾದ ಗುಣಲಕ್ಷಣಗಳು.
- ವೃತ್ತದಲ್ಲಿ ಗೊತ್ತಿಲ್ಲದ ಅಳತೆಗಳನ್ನು ಕಂಡುಹಿಡಿಯಲು ಜ್ಯಾ ದ ಗುಣಲಕ್ಷಣಗಳೊಂದಿಗೆ ಸಂಭಂದಿಸಿವುದಲ್ಲಿ ಸಾಧ್ಯವಾಗುತ್ತದೆ.
- ವೃತ್ತಗಳಲ್ಲಿನ ಮತ್ತಷ್ಟು ಪ್ರಮೇಯಗಳ ಪುರಾವೆಗಾಗಿ ಜ್ಯಾದ ಗುಣಲಕ್ಷಣಗಳನ್ನು ಅನ್ವಯಿಸಿ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಲ್ಯಾಪ್ ಟಾಪ್, ಜಿಯೋಜಿಬ್ರಾ ಕಡತಗಳು, ಪ್ರೊಜೆಕ್ಟರ್ ಮತ್ತು ಪಾಯಿಂಟರ್
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವೃತ್ತದ ಮೂಲ ಪರಿಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳನ್ನು ಚರ್ಚಿಸಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಜಿಯೋಜಿಬ್ರಾ ಕಡತವನ್ನು ಮಕ್ಕಳಿಗೆ ತೋರಿಸಿ ಮತ್ತು ಕೆಳಗೆ ಪಟ್ಟಿ ಮಾಡಲಾದ ಪ್ರಶ್ನೆಗಳನ್ನು ಕೇಳಿ.
- ಜ್ಯಾ ಎಂದರೇನು?
- ಪರಿಧಿಯಲ್ಲಿ ಎಷ್ಟು ಬಿಂದುಗಳಲ್ಲಿ ಜ್ಯಾವು ವೃತ್ತವನ್ನು ಮುಟ್ಟುತ್ತದೆ.
- ವಿಭಜಕ ಎಂದರೇನು?
- ಲಂಬಾರ್ಧಕ ಎಂದರೇನು?
- ಪ್ರತಿಯೊಂದು ಸಂದರ್ಭದಲ್ಲೂ ಲಂಬಾರ್ಧಕವೂ ಯಾವ ಬಿಂದುವಿನ ಮೂಲಕ ಹಾದುಹೋಗುತ್ತದೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಜ್ಯಾ ಮತ್ತು ತ್ರಿಜ್ಯದ ಛೇದಕ ಬಿಂದುವಿನಲ್ಲಿ ರೂಪುಗೊಂಡ ಕೋನ ಯಾವುದು?
- ವಿದ್ಯಾರ್ಥಿಗಳು ಲಂಬಾರ್ಧಕ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?
- ಯಾವುದೇ ವೃತ್ತದಲ್ಲಿ ಯಾವುದೇ ಉದ್ದದ ಜ್ಯಾಗಳಿಗೆ ಲಂಬಾರ್ಧಕವನ್ನು ಎಳೆದಾಗ ಅದು ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆಯೆಂದು ವಿದ್ಯಾರ್ಥಿಗಳು ಅರಿತುಕೊಳ್ಳುತ್ತಾರೆಯೇ?.
- ನೀವು ಏನು ಊಹಿಸುತ್ತೀರಿ?
- ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು.